ನಾನು ಒಂದು ಯಶಸ್ವೀ ಪ್ರಣಯಾಚರಣೆಯನ್ನು ಹೇಗೆ ನಡೆಸಬಲ್ಲೆ?
ಅಧ್ಯಾಯ 32
ನಾನು ಒಂದು ಯಶಸ್ವೀ ಪ್ರಣಯಾಚರಣೆಯನ್ನು ಹೇಗೆ ನಡೆಸಬಲ್ಲೆ?
“ಹೆಚ್ಚಿನ ವೈವಾಹಿಕ ವೈಫಲ್ಯಗಳು ಪ್ರಣಯಾಚರಣೆಯ ವೈಫಲ್ಯಗಳಾಗಿವೆ. ಈ ವಿಷಯವನ್ನು ಎಷ್ಟು ಬಾರಿ ಪುನರಾವರ್ತಿಸಿದರೂ ಸಾಲದು.” ಹೀಗೆಂದು, ಕುಟುಂಬ ಜೀವನದ ವಿಷಯದ ಸಂಶೋಧಕರಾದ ಪಾಲ್ ಏಚ್. ಲ್ಯಾಂಡಿಸ್ ಹೇಳಿದರು. ಲುಈಸ್ ಈ ಹೇಳಿಕೆಯ ನಿಷ್ಕೃಷ್ಟತೆಗೆ ರುಜುವಾತನ್ನು ಕೊಡಬಲ್ಲಳು. ಅವಳು ವಿವರಿಸುವುದು: “ಆ್ಯಂಡಿಯು ಸ್ವಭಾವತಃ ಯಾವ ರೀತಿಯ ವ್ಯಕ್ತಿಯಾಗಿದ್ದನು ಎಂಬುದನ್ನು ನಾನಾಗಿಯೇ ಅವಲೋಕಿಸುವುದಕ್ಕೆ ಮುಂಚೆಯೇ, ನಾನು ಅವನೊಂದಿಗೆ ವಾತ್ಸಲ್ಯದಿಂದ ಅಂಟಿಕೊಂಡದ್ದೇ ನಾನು ಮಾಡಿದ ಅತ್ಯಂತ ದೊಡ್ಡ ತಪ್ಪಾಗಿತ್ತು. ನಮ್ಮ ಪ್ರಣಯಾಚರಣೆಯು, ಬಹಳಷ್ಟು ಮಟ್ಟಿಗೆ ನಾವು ಇಬ್ಬರೇ ಇದ್ದ ಸನ್ನಿವೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಈ ‘ಆದರ್ಶಪ್ರಾಯ’ ಸನ್ನಿವೇಶಗಳ ಹೊರಗೆ ಅವನು ಹೇಗೆ ಪ್ರತಿವರ್ತಿಸಿದನೆಂಬುದನ್ನು ನಾನೆಂದೂ ನೋಡಲಿಲ್ಲ.” ಅವರ ವಿವಾಹವು ವಿಚ್ಛೇದದ ಮೂಲಕ ನುಚ್ಚುನೂರಾಯಿತು. ಅಂತಹ ದುರಂತವನ್ನು ತಪ್ಪಿಸಲು ಯಾವುದು ಕೀಲಿ ಕೈಯಾಗಿದೆ? ಯಶಸ್ವೀ ಪ್ರಣಯಾಚರಣೆಯನ್ನು ನಡೆಸುವುದೇ!
ಡೇಟಿಂಗ್‌ಮಾಡುವ ಮೊದಲು
“ಯುಕ್ತಾಯುಕ್ತ ಪರಿಜ್ಞಾನವುಳ್ಳ ಪುರುಷನು [ಅಥವಾ ಸ್ತ್ರೀಯು], ಅವನು [ಅಥವಾ ಅವಳು] ಹೋಗುತ್ತಿರುವ ಮಾರ್ಗವನ್ನು ಗಮನಿಸುತ್ತಾನೆ ಮತ್ತು ಪರಿಗಣಿಸುತ್ತಾನೆ.” (ಜ್ಞಾನೋಕ್ತಿ 14:15, ದಿ ಆ್ಯಂಪ್ಲಿಫೈಡ್ ಬೈಬಲ್) ನಿಮಗೆ ಪರಿಚಯವಿಲ್ಲದ ಯಾರಾದರೊಬ್ಬರಿಗಾಗಿ ಪ್ರಣಯಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವುದು—ಆ ವ್ಯಕ್ತಿಯು ಆಕರ್ಷಕನಾಗಿ ತೋರುವುದಾದರೂ—ಕೇಡನ್ನು ಬರಮಾಡುತ್ತದೆ. ಅದು, ಯಾರ ಭಾವೋದ್ವೇಗಗಳು ಹಾಗೂ ಗುರಿಗಳು ನಿಮ್ಮ ಭಾವೋದ್ವೇಗಗಳು ಹಾಗೂ ಗುರಿಗಳಿಂದ ಅಜಗಜಾಂತರವಾಗಿವೆಯೋ, ಅಂತಹ ಒಬ್ಬ ವ್ಯಕ್ತಿಯೊಂದಿಗಿನ ವಿವಾಹಕ್ಕೆ ಮುನ್ನಡಿಸಬಲ್ಲದು! ಆದುದರಿಂದಲೇ ಆ ವ್ಯಕ್ತಿಯನ್ನು ಒಂದು ಗುಂಪಿನ ಸನ್ನಿವೇಶದಲ್ಲಿ, ಬಹುಶಃ ನೀವು ಯಾವುದೊ ರೀತಿಯ ಮನೋರಂಜನೆಯಲ್ಲಿ ಆನಂದಿಸುತ್ತಿರುವಾಗ, ಮೊದಲಾಗಿ ಗಮನಿಸುವುದು ಯುಕ್ತಾಯುಕ್ತ ಪರಿಜ್ಞಾನವುಳ್ಳದ್ದಾಗಿದೆ.
“ಆರಂಭದಲ್ಲೇ ನಾನು ತೀರ ಆಪ್ತನಾಗುವುದಾದರೆ, ನನ್ನ ಭಾವೋದ್ವೇಗಗಳು ನನ್ನ ನಿರ್ಣಯವನ್ನು ಮಂಕುಗವಿಸುವವು ಎಂಬುದು ನನಗೆ ತಿಳಿದಿತ್ತು” ಎಂದು ಈಗ ಹತ್ತು ವರ್ಷಗಳಿಂದ ಸಂತೋಷವಾಗಿ ವಿವಾಹಿತನಾಗಿರುವ ಡೇವ್ ವಿವರಿಸಿದನು. “ಆದುದರಿಂದ ನಾನು ಅವಳಲ್ಲಿ ಆಸಕ್ತನಾಗಿದ್ದೆನೆಂಬುದನ್ನು ಅವಳಿಗೆ ಅರಿವಾಗದಂತೆಯೇ, ನಾನು ರೋಸಳನ್ನು ದೂರದಿಂದ ಗಮನಿಸಿದೆ. ಜ್ಞಾನೋಕ್ತಿ 31:31ನ್ನು ಹೋಲಿಸಿರಿ.
ಅವಳು ಇತರರನ್ನು ಹೇಗೆ ಉಪಚರಿಸಿದಳು, ಅಥವಾ ಅವಳು ಪ್ರಣಯವಿಲಾಸಿನಿಯಾಗಿದ್ದಳೋ ಎಂಬುದನ್ನು ನಾನು ನೋಡಸಾಧ್ಯವಿತ್ತು. ಸಾಂದರ್ಭಿಕವಾದ ಮಾತುಗಳಲ್ಲಿ, ನಾನು ಅವಳ ಪರಿಸ್ಥಿತಿಗಳನ್ನೂ ಗುರಿಗಳನ್ನೂ ಕಂಡುಕೊಂಡೆ.” ಆ ವ್ಯಕ್ತಿಯನ್ನು ಚೆನ್ನಾಗಿ ಅರಿತಿರುವ ಯಾರೊಂದಿಗಾದರೂ ಮಾತಾಡುವ ಮೂಲಕ, ಅವನಿಗೆ ಅಥವಾ ಅವಳಿಗೆ ಎಂತಹ ರೀತಿಯ ಖ್ಯಾತಿ ಇದೆ ಎಂಬುದನ್ನು ಕಂಡುಕೊಳ್ಳುವುದು ಸಹ ಸಹಾಯಕರವಾಗಿದೆ.—ಮೊದಲ ಡೇಟ್‌ಗಳು
ಯಾರಾದರೊಬ್ಬರು ನಿಮಗೆ ಯೋಗ್ಯ ವಿವಾಹ ಸಂಗಾತಿಯಾಗಿರಬಹುದೆಂದು ಮನಸ್ಸಿನಲ್ಲಿ ನಿರ್ಧರಿಸಿದವರಾಗಿದ್ದು, ನೀವು ಆ ವ್ಯಕ್ತಿಯನ್ನು ಸಮೀಪಿಸಿ, ಆ ವ್ಯಕ್ತಿಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಸಾಧ್ಯವಿದೆ. * ಸಕಾರಾತ್ಮಕವಾದ ಪ್ರತಿಕ್ರಿಯೆ ತೋರಿಸಲ್ಪಟ್ಟಿದೆಯೆಂದು ಭಾವಿಸಿ, ನಿಮ್ಮ ಮೊದಲ ಡೇಟ್, ಯಾವುದೋ ವಿಶದವಾದ ಸಂಗತಿಯಾಗಿರಬೇಕೆಂದಿಲ್ಲ. ಬಹುಶಃ ಒಂದು ಊಟದ ಡೇಟ್ ಅಥವಾ ಒಂದು ಗುಂಪು ಡೇಟ್‌ನ ಭಾಗವಾಗಿರುವುದು ಸಹ, ನೀವು ಚಿರಪರಿಚಿತರಾಗಲು ನಿಮ್ಮನ್ನು ಶಕ್ತರನ್ನಾಗಿ ಮಾಡುವುದು. ಇದರಿಂದ ನೀವು ಆ ಸಂಬಂಧವನ್ನು ಮುಂದುವರಿಸಲು ಬಯಸುತ್ತೀರೋ ಇಲ್ಲವೋ ಎಂಬುದನ್ನು ನಿರ್ಧರಿಸಸಾಧ್ಯವಿದೆ. ವಿಷಯಗಳನ್ನು ಹೆಚ್ಚುಕಡಿಮೆ ಅವಿಧಿಯಾಗಿ ನಡೆಸುವುದು, ಆರಂಭದಲ್ಲಿ ಇಬ್ಬರೂ ಅನುಭವಿಸಬಹುದಾದ ಹಿಂಜರಿಕೆಯಲ್ಲಿ ಸ್ವಲ್ಪಾಂಶವನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಮತ್ತು ಬದ್ಧತೆಯ ಅಪ್ರೌಢ ವ್ಯಕ್ತಪಡಿಸುವಿಕೆಗಳನ್ನು ದೂರಮಾಡುವ ಮೂಲಕ, ನಿಮ್ಮಲ್ಲಿ ಯಾರಾದರೊಬ್ಬರು ಆಸಕ್ತಿಯನ್ನು ಕಳೆದುಕೊಳ್ಳುವುದಾದರೂ, ನೀವು ತಿರಸ್ಕಾರ ಅಥವಾ ಪೇಚಾಟದ ಅನಿಸಿಕೆಗಳನ್ನು ಕಡಿಮೆಮಾಡಸಾಧ್ಯವಿದೆ.
ಯಾಕೋಬ 1:19) ಅಂತಹ ವಿಚಾರಗಳಲ್ಲಿ ಯಾವುದೇ ಕಟ್ಟುನಿಟ್ಟಾದ ನಿಯಮಗಳು ಇಲ್ಲದಿರುವುದಾದರೂ, ಒಬ್ಬ ಯುವ ಪುರುಷನು ಸಭ್ಯಾಚಾರದ ಸ್ಥಳಿಕ ನಿಯಮಗಳನ್ನು ಅನುಸರಿಸಲು ಬಯಸುವನು. ಇವುಗಳಲ್ಲಿ ಯುವ ಸ್ತ್ರೀಯು ಬಂದಾಗ ಬಾಗಿಲನ್ನು ತೆರೆಯುವುದು ಅಥವಾ ಕುಳಿತುಕೊಳ್ಳುವಂತೆ ಅವಳಿಗೆ ಸಹಾಯಮಾಡುವುದು ಒಳಗೂಡಿರಬಹುದು. ಒಬ್ಬ ರಾಜಕುಮಾರಿಯಂತೆ ಉಪಚರಿಸಲ್ಪಡುವುದನ್ನು ನಿರೀಕ್ಷಿಸದಿರುವಾಗಲೂ, ಆ ಯುವ ಸ್ತ್ರೀಯು ತನ್ನ ಡೇಟ್‌ನ ಪ್ರಯತ್ನಗಳೊಂದಿಗೆ ಸಭ್ಯರೀತಿಯಿಂದ ಸಹಕರಿಸಬೇಕು. ಪರಸ್ಪರ ಗೌರವದಿಂದ ಒಬ್ಬರನ್ನೊಬ್ಬರು ಉಪಚರಿಸಿಕೊಳ್ಳುವ ಮೂಲಕ, ಈ ಜೋಡಿಯು ಭವಿಷ್ಯತ್ತಿಗಾಗಿ ಒಂದು ನಮೂನೆಯನ್ನು ಇಡಬಲ್ಲದು. ‘ತನ್ನ ಹೆಂಡತಿಯನ್ನು ಬಲಹೀನಳೆಂದು ತಿಳಿದು ಒಗತನಮಾಡು’ವಂತೆ ಗಂಡನಿಗೆ ಆಜ್ಞೆಯು ಕೊಡಲ್ಪಟ್ಟಿದೆ. ಮತ್ತು ಒಬ್ಬ ಹೆಂಡತಿಯಲ್ಲಿ “ತನ್ನ ಗಂಡನಿಗಾಗಿ ಆಳವಾದ ಗೌರವ” (NW) ಇರಬೇಕು.—1 ಪೇತ್ರ 3:7; ಎಫೆಸ 5:33.
ಯೋಜಿಸಲ್ಪಟ್ಟಿರುವ ಡೇಟ್ ಯಾವುದೇ ರೀತಿಯದ್ದಾಗಿರಲಿ, ನೀಟಾಗಿಯೂ ಸಂದರ್ಭೋಚಿತವಾಗಿಯೂ ಉಡುಪು ಧರಿಸಿದ್ದು, ಸರಿಯಾದ ಸಮಯಕ್ಕೆ ಆಗಮಿಸಿರಿ. ಒಬ್ಬ ಒಳ್ಳೆಯ ಸಂಭಾಷಣೆಗಾರರ ಕೌಶಲಗಳನ್ನು ತೋರಿಸಿರಿ. ಕ್ರಿಯಾಶೀಲ ಕೇಳುಗರಾಗಿರಿ. (ಕೈಗಳನ್ನು ಹಿಡಿದುಕೊಳ್ಳುವುದು, ಮುತ್ತುಕೊಡುವುದು, ತಬ್ಬಿಕೊಳ್ಳುವುದು ಯೋಗ್ಯವಾದದ್ದಾಗಿದೆಯೊ, ಹಾಗಿರುವಲ್ಲಿ, ಯಾವಾಗ? ಮಮತೆಯ ತೋರ್ಪಡಿಸುವಿಕೆಗಳು, ಸ್ವಾರ್ಥದ ಕಾಮೋದ್ರೇಕವಾಗಿ ಅಲ್ಲ, ಬದಲಾಗಿ ಅತ್ಯಂತ ಪ್ರೀತಿಯ ಯಥಾರ್ಥ ವ್ಯಕ್ತಪಡಿಸುವಿಕೆಗಳಾಗಿ ಮಾಡಲ್ಪಡುವಾಗ, ಅವು ನಿಷ್ಕಳಂಕವೂ ಯೋಗ್ಯವಾದವುಗಳೂ ಆಗಿರಬಲ್ಲವು. ಶೂಲೇಮಿನ ಕನ್ಯೆ ಹಾಗೂ ಅವಳು ಪ್ರೀತಿಸಿದ ಮತ್ತು ಬೇಗನೆ ವಿವಾಹವಾಗಲಿದ್ದ ಕುರುಬ ಹುಡುಗನ ನಡುವೆ, ಅತ್ಯಂತ ಪ್ರೀತಿಯ ಸೂಕ್ತವಾದ ವ್ಯಕ್ತಪಡಿಸುವಿಕೆಗಳು ಪರಸ್ಪರ ವಿನಿಮಯಮಾಡಿಕೊಳ್ಳಲ್ಪಟ್ಟಿದ್ದವು ಎಂದು ಬೈಬಲ್ ಪುಸ್ತಕವಾದ ಪರಮಗೀತ ಸೂಚಿಸುತ್ತದೆ. (ಪರಮಗೀತ 1:2; 2:6; 8:5) ಆದರೆ ಆ ಜಿತೇಂದ್ರಿಯ ಜೊತೆಯ ವಿಷಯದಲ್ಲಿದ್ದಂತೆ, ಮಮತೆಯ ತೋರ್ಪಡಿಸುವಿಕೆಗಳು, ಅಶುದ್ಧವಾಗಿ ಪರಿಣಮಿಸದಂತೆ, ಅಥವಾ ಲೈಂಗಿಕ ಅನೈತಿಕತೆಗೆ ಮುನ್ನಡಿಸದಂತೆ, ಒಂದು ಜೋಡಿಯು ಇನ್ನೂ ಹೆಚ್ಚು ಕಾಳಜಿ ವಹಿಸುವುದು. * (ಗಲಾತ್ಯ 5:19, 21) ತರ್ಕಬದ್ಧವಾಗಿ, ಪರಸ್ಪರ ಒಪ್ಪಂದವು ಬೆಳೆದಿರುವ, ಹಾಗೂ ವಿವಾಹವು ಸನ್ನಿಹಿತವಾಗಿದೆ ಎಂದು ಕಂಡುಬರುವ ಹಂತವನ್ನು ಈ ಸಂಬಂಧವು ತಲಪಿರುವಾಗ ಮಾತ್ರವೇ, ಅತ್ಯಂತ ಪ್ರೀತಿಯ ಅಂತಹ ವ್ಯಕ್ತಪಡಿಸುವಿಕೆಗಳನ್ನು ಮಾಡತಕ್ಕದ್ದು. ಆತ್ಮಸಂಯಮವನ್ನು ತೋರಿಸುವ ಮೂಲಕ, ಯಶಸ್ವೀ ಪ್ರಣಯಾಚರಣೆಯ ಪ್ರಮುಖ ಗುರಿಯಿಂದ ಅಪಕರ್ಷಿತರಾಗುವುದನ್ನು ನೀವು ತಪ್ಪಿಸಬಲ್ಲಿರಿ, ಅದೇನಂದರೆ . . .
“ಹೃದಯದ ಆಂತರಿಕ ವ್ಯಕ್ತಿ”ಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು
ವಿವಾಹ ಮತ್ತು ಕುಟುಂಬದ ಪತ್ರಿಕೆ (ಇಂಗ್ಲಿಷ್)ಯ, ಮೇ 1980ರ ಸಂಚಿಕೆಯಲ್ಲಿ, ಸಂಶೋಧನಾ ತಂಡವೊಂದು ವರದಿಸಿದ್ದು: “ಸಂಬಂಧಸೂಚಕವಾಗಿ ಜನರು ಒಬ್ಬರು ಇನ್ನೊಬ್ಬರ ಆಂತರ್ಯದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳುವುದರೊಂದಿಗೆ ವಿವಾಹಗಳಲ್ಲಿ ಪ್ರವೇಶಿಸುವುದಾದರೆ, ಅವು ಬಾಳುವುದು ಹಾಗೂ ಸಮೃದ್ಧಿಗೊಳ್ಳುವುದು ಹೆಚ್ಚು ಸಂಭವನೀಯವೆಂದು ತೋರುತ್ತವೆ.” ಹೌದು, ನಿಮ್ಮ ಸಹಭಾಗಿಯ “ಹೃದಯದ ಆಂತರಿಕ ವ್ಯಕ್ತಿ”ಯನ್ನು (NW) ತಿಳಿದುಕೊಳ್ಳಲು ಪ್ರಯತ್ನಿಸುವುದು ಅಗತ್ಯ.—1 ಪೇತ್ರ 3:4.
ಆದರೂ, ಇನ್ನೊಬ್ಬರ ಹೃದಯದ ಇಂಗಿತಗಳನ್ನು ‘ಸೇದು’ವುದು, ಪ್ರಯತ್ನವನ್ನೂ ವಿವೇಚನಾಶಕ್ತಿಯನ್ನೂ ಕೇಳಿಕೊಳ್ಳುತ್ತದೆ. (ಜ್ಞಾನೋಕ್ತಿ 20:5) ಆದುದರಿಂದ ನಿಮ್ಮ ಸಹಭಾಗಿಯ ಆಂತರ್ಯವನ್ನು ನೋಡುವಂತೆ ನಿಮಗೆ ಹೆಚ್ಚಾಗಿ ಸಹಾಯ ಮಾಡಬಹುದಾದ ಚಟುವಟಿಕೆಗಳನ್ನು ಯೋಜಿಸಿರಿ. ಆರಂಭದಲ್ಲಿ ಒಂದು ಚಲನ ಚಿತ್ರಕ್ಕೊ ಗಾನಗೋಷ್ಠಿಗೊ ಹೋಗುವುದು ಸಾಕಾಗಬಹುದಾದರೂ, (ರೋಲರ್-ಸ್ಕೇಟಿಂಗ್, ಬೋಲಿಂಗ್, ಹಾಗೂ ಪ್ರಾಣಿಸಂಗ್ರಹಾಲಯಗಳು, ವಸ್ತುಸಂಗ್ರಹಾಲಯಗಳು, ಮತ್ತು ಆರ್ಟ್ ಗ್ಯಾಲರಿಗಳಿಗೆ ಭೇಟಿ ನೀಡುವುದರಂತಹ), ಸಂಭಾಷಣೆಗೆ ಹೆಚ್ಚು ಉತ್ತಮವಾಗಿ ಅವಕಾಶಮಾಡಿಕೊಡುವ ಚಟುವಟಿಕೆಗಳಲ್ಲಿ ಭಾಗವಹಿಸುವುದು, ನೀವು ಚಿರಪರಿಚಿತರಾಗಲು ನಿಮಗೆ ಹೆಚ್ಚಿನ ಸಹಾಯ ಮಾಡಬಲ್ಲದು.
ನಿಮ್ಮ ಸಹಭಾಗಿಯ ಭಾವನೆಗಳನ್ನು ತುಸುಮಟ್ಟಿಗೆ ಅರ್ಥಮಾಡಿಕೊಳ್ಳಲು, ‘ನಿನ್ನ ಬಿಡುವಿನ ಸಮಯವನ್ನು ನೀನು ಹೇಗೆ ಕಳೆಯುತ್ತೀ?’ ‘ಹಣವು ಧ್ಯೇಯವಾಗಿರದಿದ್ದಲ್ಲಿ, ನೀನೇನು ಮಾಡಲು ಬಯಸುವಿ?’ ‘ದೇವರಿಗೆ ನಾವು ಸಲ್ಲಿಸುವ ಆರಾಧನೆಯ ಯಾವ ಅಂಶವನ್ನು ನೀನು ತುಂಬಾ ಇಷ್ಟಪಡುತ್ತೀ? ಏಕೆ?’ ಎಂಬಂತಹ ಅನಿರ್ದಿಷ್ಟ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ ಪ್ರಯತ್ನಿಸಿರಿ. ಈ ಪ್ರಶ್ನೆಗಳು, ಯಾವುದನ್ನು ನಿಮ್ಮ ಸಹಭಾಗಿಯು ಬಹುಮೂಲ್ಯವಾಗಿ ಎಣಿಸುತ್ತಾನೆಂಬುದನ್ನು ನೀವು ತಿಳಿದುಕೊಳ್ಳುವಂತೆ, ಆಂತರ್ಯದಿಂದ ಬರುವ ಪ್ರತ್ಯುತ್ತರಗಳನ್ನು ಒದಗಿಸುತ್ತವೆ.
ಈ ಸಂಬಂಧವು ಹೆಚ್ಚು ಗಾಢವಾಗಿ, ನೀವಿಬ್ಬರೂ ವಿವಾಹವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದಂತೆ, ಪ್ರಮುಖವಾದ ವಾದಾಂಶಗಳ ಕುರಿತು ಗಂಭೀರವಾಗಿ ಮಾತಾಡುವ
ಆವಶ್ಯಕತೆಯಿದೆ. ಆ ಪ್ರಮುಖ ವಾದಾಂಶಗಳು ಯಾವುವೆಂದರೆ, ನಿಮ್ಮ ಮೌಲ್ಯಗಳು, ನೀವು ಎಲ್ಲಿ ಮತ್ತು ಹೇಗೆ ಜೀವಿಸುವಿರಿ, ನೀವಿಬ್ಬರೂ ಮನೆಯಿಂದ ಹೊರಗೆ ಕೆಲಸಮಾಡುವಿರೊ ಇಲ್ಲವೋ ಎಂಬುದನ್ನು ಒಳಗೊಂಡು, ಹಣಕಾಸಿನ ವಿಚಾರಗಳು, ಮಕ್ಕಳು, ಜನನ ನಿಯಂತ್ರಣ, ವಿವಾಹದಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತಾದ ವಿಚಾರಗಳು, ಮತ್ತು ತತ್‌ಕ್ಷಣದ ಹಾಗೂ ದೀರ್ಘಾವಧಿಯ ಗುರಿಗಳು ಹಾಗೂ ಇವುಗಳನ್ನು ಸಾಧಿಸಲು ನೀವು ಯೋಜಿಸಿರುವ ವಿಧಗಳೇ. ಯೆಹೋವನ ಯುವ ಸಾಕ್ಷಿಗಳಲ್ಲಿ ಅನೇಕರು, ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ಪೂರ್ಣ ಸಮಯದ ಸೌವಾರ್ತಿಕರಾಗುತ್ತಾರೆ ಮತ್ತು ವಿವಾಹಾನಂತರ ಅದೇ ರೀತಿಯಲ್ಲಿ ಸೇವೆಸಲ್ಲಿಸುವುದನ್ನು ಮುಂದುವರಿಸಲು ಬಯಸುತ್ತಾರೆ. ನಿಮ್ಮ ಆತ್ಮಿಕ ಗುರಿಗಳು ಒಮ್ಮತವಾಗಿವೆ ಎಂಬುದನ್ನು ನೀವಿಬ್ಬರೂ ಖಚಿತಪಡಿಸಿಕೊಳ್ಳಲು, ಇದು ಸೂಕ್ತ ಸಮಯವಾಗಿದೆ. ಗತ ಸಮಯದಲ್ಲಿ ನಡೆದ, ನಿಮ್ಮ ವಿವಾಹದ ಮೇಲೆ ಪ್ರಭಾವಬೀರಬಹುದಾದ ವಿಷಯಗಳನ್ನು ಹೊರಪಡಿಸಲು ಸಹ ಇದೇ ಸಮಯವು ಸೂಕ್ತವಾಗಿದೆ. ಇದರಲ್ಲಿ ಯಾವುದೇ ಪ್ರಮುಖ ಸಾಲಗಳು ಅಥವಾ ಹಂಗುಗಳು ಒಳಗೂಡಿರಬಹುದು. ಯಾವುದೇ ಗಂಭೀರ ರೋಗದಂತಹ ಆರೋಗ್ಯ ವಿಷಯಗಳನ್ನು, ಹಾಗೂ ಅವುಗಳ ಪರಿಣಾಮಗಳನ್ನು ಸಹ ಮುಚ್ಚುಮರೆಯಿಲ್ಲದೆ ಚರ್ಚಿಸಬೇಕಾಗಿದೆ.ಅಂತಹ ಚರ್ಚೆಗಳಲ್ಲಿ, ಎಲೀಹುವಿನ ಮಾದರಿಯನ್ನು ಅನುಸರಿಸಿರಿ. ಅವನು ಹೇಳಿದ್ದು: “ನಾನು ನನ್ನ ಹೃದಯದಿಂದಲೇ ನೇರವಾಗಿ ಮಾತಾಡುತ್ತೇನೆ ಮತ್ತು ಪ್ರಾಮಾಣಿಕವಾಗಿ ನುಡಿಯುತ್ತೇನೆ.” (ಯೋಬ 33:3, ದ ಹೋಲಿ ಬೈಬಲ್ ಇನ್ ದ ಲ್ಯಾಂಗ್ವೇಜ್ ಆಫ್ ಟುಡೇ, ವಿಲಿಯಮ್ ಬೆಕ್‌ರಿಂದ) ಯಾವುದು ಒಂದು ಸಂತೋಷಭರಿತ ವಿವಾಹವಾಗಿ ಪರಿಣಮಿಸಿತೋ ಅಂತಹ ವಿವಾಹಕ್ಕಾಗಿ, ಪ್ರಣಯಾಚರಣೆಯು ತನ್ನನ್ನು ಹೇಗೆ ಸಿದ್ಧಪಡಿಸಿತೆಂಬುದನ್ನು ವಿವರಿಸುತ್ತಾ, ಎಸ್ತರ್ ಹೇಳಿದ್ದು: “ನನಗೆ ಬೇರೆಯೇ ಅನಿಸಿದಾಗ, ನಾನು ಜೇ ಒಡನೆ ‘ಕೃತಕವಾಗಿ ನಟಿಸಲು’ ಪ್ರಯತ್ನಿಸಲಿಲ್ಲ ಅಥವಾ ಅವನೊಂದಿಗೆ ಸಮ್ಮತಿಸುತ್ತೇನೆಂದು ಹೇಳಲಿಲ್ಲ. ನಾನು ಅದನ್ನು ಈಗಲೂ ಮಾಡುವುದಿಲ್ಲ. ನಾನು ಯಾವಾಗಲೂ ಪ್ರಾಮಾಣಿಕಳಾಗಿರಲು ಪ್ರಯತ್ನಿಸುತ್ತೇನೆ.”
ನಿಮ್ಮ ಸಹಭಾಗಿಯನ್ನು ಪೇಚಾಟಕ್ಕೊಳಪಡಿಸುವ ಭಯದಿಂದ, ಸೂಕ್ಷ್ಮವಾದ ವಿಷಯಗಳಿಂದ ಜಾರಿಕೊಳ್ಳಬೇಡಿರಿ ಅಥವಾ ಆ ವಿಷಯಗಳನ್ನು ತೇಲಿಸಿಬಿಡಬೇಡಿರಿ. ಜಾನ್‌ನೊಂದಿಗೆ ಪ್ರಣಯಾಚರಣೆಯನ್ನು ನಡಿಸುತ್ತಿದ್ದಾಗ ಬೆತ್ ಈ ತಪ್ಪನ್ನು ಮಾಡಿದಳು. ತಾನು ಭವಿಷ್ಯತ್ತಿಗಾಗಿ ಹಣವನ್ನು ಉಳಿಸುವುದರಲ್ಲಿ ಹಾಗೂ ಹಣವನ್ನು ಪೋಲುಮಾಡದಿರುವುದರಲ್ಲಿ ನಂಬುತ್ತೇನೆ, ಎಂದು ಬೆತ್ ಹೇಳಿದಳು. ತಾನು ಇದಕ್ಕೆ ಒಪ್ಪುತ್ತೇನೆಂದು ಜಾನ್ ಹೇಳಿದನು. ಹಣಕಾಸಿನ ವಿಚಾರದಲ್ಲಿ ತಾವು ಸಂಪೂರ್ಣವಾಗಿ ಅನುಮೋದಿಸುತ್ತೇವೆಂದು ಭಾವಿಸುತ್ತಾ, ಬೆತ್ ವಿಷಯವನ್ನು ಇನ್ನೂ ಆಳವಾಗಿ ಪರೀಕ್ಷಿಸಲಿಲ್ಲ. ಆದರೆ ವಿಷಯವು ಹೇಗೆ ಪರಿಣಮಿಸಿತೆಂದರೆ, ಭವಿಷ್ಯತ್ತಿಗಾಗಿ ಹಣವನ್ನು ಉಳಿಸುವುದರ ಕುರಿತಾದ ಜಾನ್‌ನ ಕಲ್ಪನೆಯು, ಒಂದು ಹೊಸ ಸ್ಪೋರ್ಟ್ಸ್ ಕಾರನ್ನು ಖರೀದಿಸಲಿಕ್ಕಾಗಿತ್ತು! ಹಣವನ್ನು ಹೇಗೆ ವ್ಯಯಿಸುವುದು ಎಂಬುದರ ಕುರಿತಾದ ಅವರ ಒಪ್ಪಂದದ ಕೊರತೆಯು, ವಿವಾಹದ ಬಳಿಕ ವೇದನಾಭರಿತವಾಗಿ ಸುವ್ಯಕ್ತವಾಯಿತು.
ಅಂತಹ ತಪ್ಪಭಿಪ್ರಾಯಗಳನ್ನು ತಡೆಗಟ್ಟಸಾಧ್ಯವಿದೆ. ಈ ಮುಂಚೆ ಉಲ್ಲೇಖಿಸಲ್ಪಟ್ಟ ಲುಈಸ್, ತನ್ನ ಪ್ರಣಯಾಚರಣೆಯ ಹಿನ್ನೋಟದ ವಿಷಯದಲ್ಲಿ ಹೇಳುವುದು: “‘ನಾನು ಗರ್ಭವತಿಯಾದಲ್ಲಿ,
ಮತ್ತು ಒಂದು ಮಗುವನ್ನು ಪಡೆದುಕೊಳ್ಳುವುದು ನಿನಗೆ ಇಷ್ಟವಿಲ್ಲದಿದ್ದಲ್ಲಿ, ನೀನೇನು ಮಾಡುವಿ?’ ಅಥವಾ, ‘ನಮಗೆ ಸಾಲವಿದ್ದು, ನಾನು ಮನೆಯಲ್ಲಿಯೇ ಇದ್ದುಕೊಂಡು ನಮ್ಮ ಮಗುವನ್ನು ನೋಡಿಕೊಳ್ಳಬಯಸುವಲ್ಲಿ, ನೀನು ವಿಷಯಗಳನ್ನು ಹೇಗೆ ನಿರ್ವಹಿಸುವಿ?’ ಎಂಬಂತಹ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ನಾನು ಕೇಳಿದ್ದಿರಬೇಕಿತ್ತು. ನಾನು ಅವನ ಪ್ರತಿಕ್ರಿಯೆಯನ್ನು ಜಾಗರೂಕತೆಯಿಂದ ಗಮನಿಸಿರುತ್ತಿದ್ದೆ.” ಅಂತಹ ಚರ್ಚೆಗಳು, ವಿವಾಹಕ್ಕೆ ಮೊದಲೇ ಚೆನ್ನಾಗಿ ಅವಲೋಕಿಸಬೇಕಾಗಿರುವ, ಹೃದಯದ ಗುಣಗಳನ್ನು ಹೊರಸೆಳೆಯಬಲ್ಲವು.ಅವನನ್ನು ಅಥವಾ ಅವಳನ್ನು ಕ್ರಿಯೆಯಲ್ಲಿ ಅವಲೋಕಿಸಿರಿ!
“ನೀವಿಬ್ಬರೇ ಇರುವ ಸನ್ನಿವೇಶದಲ್ಲಿ ವ್ಯಕ್ತಿಯೊಬ್ಬನು ನಿಮ್ಮೊಂದಿಗೆ ತುಂಬ ಚೆನ್ನಾಗಿ ವರ್ತಿಸಸಾಧ್ಯವಿದೆ” ಎಂದು ಎಸ್ತರ್ ವಿವರಿಸಿದಳು. “ಆದರೆ ಇತರರು ಸುತ್ತಲೂ ಇರುವಾಗ, ಅನೇಕವೇಳೆ ಅವರು ಅನಿರೀಕ್ಷಿತ ಸನ್ನಿವೇಶಕ್ಕೆ ಒಡ್ಡಲ್ಪಡುತ್ತಾರೆ. ನಿಮ್ಮ ಸ್ನೇಹಿತರಲ್ಲಿ ಒಬ್ಬನು, ನಿಮ್ಮ ಸಹಭಾಗಿಗೆ ಇಷ್ಟವಾಗದಂತಹ ಯಾವುದಾದರೊಂದು ವಿಷಯವನ್ನು ಅವನಿಗೆ ಹೇಳಬಹುದು. ಈಗ ಅವನು ಒತ್ತಡದ ಕೆಳಗೆ ಹೇಗೆ ಪ್ರತಿಕ್ರಿಯಿಸುತ್ತಾನೆಂಬುದನ್ನು ನಿಮಗೆ ನೋಡಲು ಸಿಗುತ್ತದೆ. ಅವನು ಆ ವ್ಯಕ್ತಿಗೆ ಛೀಮಾರಿಹಾಕುವನೋ ಅಥವಾ ಕಟುವಾಗಿ ಮಾತಾಡುವನೊ?” ಅವಳು ಮುಕ್ತಾಯಗೊಳಿಸುವುದು: “ನಮ್ಮ ಪ್ರಣಯಾಚರಣೆಯ ಸಮಯದಲ್ಲಿ, ಪ್ರತಿಯೊಬ್ಬರ ಸ್ನೇಹಿತರು ಹಾಗೂ ಕುಟುಂಬದ ಜೊತೆಗಿರುವುದು, ಮಹತ್ತರವಾಗಿ ಸಹಾಯ ಮಾಡಿತು.”
ಮನೋರಂಜನೆಗೆ ಕೂಡಿಸಿ, ಒಟ್ಟಿಗೆ ಕೆಲಸಮಾಡುವುದರಲ್ಲಿ ಸಮಯವನ್ನು ಕಳೆಯಿರಿ. ದೇವರ ವಾಕ್ಯದ ಅಭ್ಯಾಸ ಹಾಗೂ ಕ್ರೈಸ್ತ ಶುಶ್ರೂಷೆಯನ್ನು ಒಳಗೊಂಡು, ಕ್ರೈಸ್ತ ಕಾರ್ಯಗಳಲ್ಲಿ ಪಾಲ್ಗೊಳ್ಳಿರಿ. ಹಾಗೂ, ವಿವಾಹದ ನಂತರ ಜೀವನ ರೀತಿಯಾಗಿ ಪರಿಣಮಿಸುವ ನಿತ್ಯಗಟ್ಟಳೆಯ ಕೆಲಸಗಳಲ್ಲಿ—ಆಹಾರ ಸಾಮಗ್ರಿಗಳನ್ನು ಖರೀದಿಸುವುದು, ಊಟವನ್ನು ತಯಾರಿಸುವುದು, ಪಾತ್ರೆಗಳನ್ನು ತೊಳೆಯುವುದು, ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು—ಕೆಲವನ್ನು ಕೈಕೊಳ್ಳಿರಿ. ನಿಜ ಜೀವಿತದ ಪರಿಸ್ಥಿತಿಗಳಲ್ಲಿ—ನಿಮ್ಮ ಸಹಭಾಗಿಯು ಅವನ ಅಥವಾ ಅವಳ ಅತಿ ಕನಿಷ್ಠ ರೀತಿಯ ವರ್ತನೆಯನ್ನು ತೋರಿಸುವಾಗಲೂ—ಒಟ್ಟಿಗೆ ಇರುವ ಮೂಲಕ, ನೀವು ಪ್ರದರ್ಶನಾತ್ಮಕ ಮುಸುಕಿನ ಹಿಂದುಗಡೆ ಏನಿದೆಯೆಂದು ನೋಡಬಲ್ಲಿರಿ.
ಪರಮಗೀತ ಪುಸ್ತಕದ ಕುರುಬ ಹುಡುಗನು, ತಾನು ಪ್ರೀತಿಸಿದ ಹುಡುಗಿಯು, ಯೋಬ 31:7ನ್ನು ಹೋಲಿಸಿರಿ.
ನಿರುತ್ಸಾಹಗೊಂಡಿದ್ದಾಗ, ವಿಪರೀತ ಸುಡುತ್ತಿರುವ ಸೂರ್ಯನ ಕೆಳಗೆ, ಬೆವರು ಸುರಿಸುತ್ತಾ, ಆಯಾಸಗೊಂಡವಳಾಗಿ ದುಡಿಯುತ್ತಿರುವಾಗ ಹೇಗೆ ವರ್ತಿಸಿದಳೆಂಬುದನ್ನು ನೋಡಿದನು. (ಪರಮಗೀತ 1:5, 6; 2:15) ಐಶ್ವರ್ಯವಂತ ರಾಜನಾದ ಸೊಲೊಮೋನನ ಆಕರ್ಷಣೆಗಳನ್ನು ಅವಳು ಹೇಗೆ ನಿಷ್ಠೆಯಿಂದ ಪ್ರತಿರೋಧಿಸಿದಳೆಂಬುದನ್ನು ಗಮನಿಸಿದ ನಂತರ, ಅವನು ಉದ್ಗರಿಸಿದ್ದು: “ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ.” (ಪರಮಗೀತ 4:7) ಖಂಡಿತವಾಗಿಯೂ, ಅವಳು ಪರಿಪೂರ್ಣಳಾಗಿದ್ದಳು ಎಂಬುದನ್ನು ಅವನು ಅರ್ಥೈಸಲಿಲ್ಲ. ಬದಲಾಗಿ, ಅವಳಲ್ಲಿ ಮೂಲಭೂತವಾದ ಯಾವುದೇ ನೈತಿಕ ದೋಷವು ಇರಲಿಲ್ಲ ಅಥವಾ ಅವಳು ದೂಷಣಾರ್ಹಳಾಗಿರಲಿಲ್ಲ ಎಂಬುದನ್ನು ಅವನು ಅರ್ಥೈಸಿದನು. ಅವಳ ಶಾರೀರಿಕ ಸೌಂದರ್ಯವು, ಅವಳ ನೈತಿಕ ಬಲದಿಂದ ವರ್ಧಿಸಲ್ಪಟ್ಟಿತು. ಇದು ಅವಳ ಯಾವುದೇ ಬಲಹೀನತೆಗಳನ್ನು ಮೀರಿಸಿತು.—ಅಂತಹ ಗುಣವಿಮರ್ಶೆಯನ್ನು ಮಾಡಲು ಸಮಯ ತಗಲುತ್ತದೆ. ಆದುದರಿಂದ ಮುಂದಾಲೋಚನೆಯಿಲ್ಲದ ಪ್ರಣಯಾಚರಣೆಯಿಂದ ದೂರವಿರಿ. (ಜ್ಞಾನೋಕ್ತಿ 21:5) ಸಾಮಾನ್ಯವಾಗಿ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯು, ಪರಸ್ಪರ ಪ್ರೀತಿಯನ್ನು ಸಂಪಾದಿಸಿಕೊಳ್ಳಲು ಸರ್ವಪ್ರಯತ್ನವನ್ನು ಮಾಡುತ್ತಾರೆ. ಆದರೆ ಸಾಕಷ್ಟು ಸಮಯವನ್ನು ಕೊಡುವಲ್ಲಿ, ಅಹಿತಕರವಾದ ಹವ್ಯಾಸಗಳು ಮತ್ತು ಪ್ರವೃತ್ತಿಗಳು ತಮ್ಮನ್ನು ತೋರ್ಪಡಿಸಿಕೊಳ್ಳುವ ಮಾರ್ಗವಿರುತ್ತದೆ. ಪ್ರಣಯಾಚರಣೆಯ ಸಮಯದಲ್ಲಿ ಸಮಯವನ್ನು ತೆಗೆದುಕೊಳ್ಳುವುದು ಮಾತ್ರವಲ್ಲ, ಆ ಸಮಯದ ಸದುಪಯೋಗವನ್ನೂ ಮಾಡಿಕೊಳ್ಳುವ ಒಂದು ಜೋಡಿಯು, ವಿವಾಹದ ನಂತರ ಹೆಚ್ಚು ಸುಲಭವಾಗಿ ಹೊಂದಿಕೊಳ್ಳುವುದು ಸಂಭವನೀಯ. ಈ ವಿಷಯವನ್ನು ಸ್ಪಷ್ಟವಾಗಿ ತಿಳಿದವರಾಗಿದ್ದು, ಮೇಲೇಳುವಂತಹ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಶಕ್ತರಾಗಿರುವ ವಿಶ್ವಾಸದೊಂದಿಗೆ, ಅವರು ವಿವಾಹವಾಗಬಲ್ಲರು. ಯಶಸ್ವೀ ಪ್ರಣಯಾಚರಣೆಯು ಅವರನ್ನು, ಒಂದು ಯಶಸ್ವಿಯೂ ಸಂತೋಷಭರಿತವೂ ಆದ ವಿವಾಹಕ್ಕಾಗಿ ಸಿದ್ಧಪಡಿಸಿದೆ.
[ಅಧ್ಯಯನ ಪ್ರಶ್ನೆಗಳು]
^ ಡೇಟಿಂಗ್‌ಮಾಡುವುದು ಸಾಂಪ್ರದಾಯಿಕವಾಗಿರುವ, ಹಾಗೂ ಕ್ರೈಸ್ತರಿಗೆ ಸೂಕ್ತವಾದ ನಡತೆಯೆಂದು ವೀಕ್ಷಿಸಲ್ಪಡುವ ದೇಶಗಳಲ್ಲಿ ಇದು ಅನ್ವಯವಾಗುತ್ತದೆ. ಸಾಮಾನ್ಯವಾಗಿ ಪುರುಷನು ಮುಂತೊಡಗುತ್ತಾನೆ. ಒಂದುವೇಳೆ ಯುವ ಪುರುಷನು ನಾಚಿಕೆ ಸ್ವಭಾವದವನು ಅಥವಾ ಹಿಂಜರಿಯುವವನಾಗಿರುವಲ್ಲಿ, ಯುವ ಸ್ತ್ರೀಯು ತನ್ನ ಭಾವನೆಗಳನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಿಕೊಳ್ಳುವುದರಿಂದ ಅವಳನ್ನು ತಡೆಗಟ್ಟುವ ಯಾವ ಶಾಸ್ತ್ರೀಯ ಮೂಲತತ್ವವೂ ಇರುವುದಿಲ್ಲ.—ಪರಮಗೀತ 8:6ನ್ನು ಹೋಲಿಸಿರಿ.
^ “ವಿವಾಹಪೂರ್ವದ ಸಂಭೋಗವನ್ನು ನಾನು ಹೇಗೆ ನಿರಾಕರಿಸಬಲ್ಲೆ?” ಎಂಬ 24ನೆಯ ಅಧ್ಯಾಯವನ್ನು ನೋಡಿರಿ.
ಚರ್ಚೆಗಾಗಿ ಪ್ರಶ್ನೆಗಳು
◻ ಪ್ರಣಯಾಚರಣೆಯ ಪ್ರಾಥಮಿಕ ಗುರಿಯು ಯಾವುದು, ಮತ್ತು ವೈವಾಹಿಕ ಸಂತೋಷಕ್ಕೆ ಇದು ಎಷ್ಟು ಪ್ರಾಮುಖ್ಯವಾದದ್ದಾಗಿದೆ?
◻ ಇನ್ನೊಬ್ಬನ ‘ಆಂತರ್ಯ’ವನ್ನು ಅರ್ಥಮಾಡಿಕೊಳ್ಳಲು, ಯಾವುದು ನಿಮಗೆ ಸಹಾಯ ಮಾಡಬಲ್ಲದು?
◻ ಯಾವ ರೀತಿಯ ಸಂಭಾಷಣೆಗಳು ಯಶಸ್ವೀ ಪ್ರಣಯಾಚರಣೆಗೆ ನೆರವನ್ನು ನೀಡುತ್ತವೆ?
◻ ವಿವಿಧ ಪರಿಸ್ಥಿತಿಗಳಲ್ಲಿ, ಒಟ್ಟಿಗೆ ಸಮಯವನ್ನು ಕಳೆಯುವುದು ಏಕೆ ಸಹಾಯಕರವಾಗಿದೆ?
◻ ಒಂದು ಸಂಬಂಧವು ದೋಷಭರಿತವಾದದ್ದಾಗಿದೆ ಎಂಬುದಕ್ಕಿರುವ ಕೆಲವು ಸೂಚನೆಗಳು ಯಾವುವು?
◻ ಒಂದು ಪ್ರಣಯಾಚರಣೆಯು ಯಾವಾಗ ಕೊನೆಗೊಳಿಸಲ್ಪಡಬೇಕು?
[ಪುಟ 366 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸಂಬಂಧಸೂಚಕವಾಗಿ ಒಬ್ಬರು ಇನ್ನೊಬ್ಬರ ಆಂತರ್ಯದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳುವುದರೊಂದಿಗೆ ಜನರು ವಿವಾಹಗಳಲ್ಲಿ ಪ್ರವೇಶಿಸುವುದಾದರೆ, ಅವು ಬಾಳುವುದು ಹಾಗೂ ಸಮೃದ್ಧಿಗೊಳ್ಳುವುದು ಹೆಚ್ಚು ಸಂಭವನೀಯ.”—ವಿವಾಹ ಮತ್ತು ಕುಟುಂಬದ ಪತ್ರಿಕೆ
[Box/Picture on page 256, 257]
ನಾವು ಸಂಬಂಧವನ್ನು ಮುರಿಯಬೇಕೊ?
ಪ್ರಣಯವೊಂದು ನಿರ್ಣಯದ ಸಂದಿಗ್ಧ ಪರಿಸ್ಥಿತಿಯನ್ನು ಸಮೀಪಿಸಿದಂತೆ, ಸಂಶಯಗಳು ಏಳುವುದು ಅಸಾಮಾನ್ಯವಾದ ವಿಷಯವೇನೂ ಅಲ್ಲ. ಅಂತಹ ಸಂಶಯಗಳು, ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯಲ್ಲಿನ ಗಂಭೀರ ಲೋಪದೋಷಗಳಿಂದ ಅಥವಾ ಆ ಸಂಬಂಧದಲ್ಲೇ ಇರುವ ಲೋಪದೋಷಗಳಿಂದ ಬರುವುದಾದರೆ ಆಗೇನು?
ಉದಾಹರಣೆಗಾಗಿ, ಪರಸ್ಪರ ಪ್ರೀತಿಸುವ ಜನರು ಸಹ, ಆಗಿಂದಾಗ್ಗೆ ಅಸಮ್ಮತಿ ಸೂಚಿಸಬಲ್ಲರೆಂಬುದು ನಿಜ. (ಹೋಲಿಸಿರಿ ಆದಿಕಾಂಡ 30:2; ಅ. ಕೃತ್ಯಗಳು 15:39.) ಆದರೆ ನೀವು ಪ್ರತಿಯೊಂದು ವಿಷಯದಲ್ಲಿಯೂ ಅಸಮ್ಮತಿ ಸೂಚಿಸುತ್ತಾ ಇರುವುದಾದರೆ, ಪ್ರತಿಯೊಂದು ಚರ್ಚೆಯೂ ಕೂಗಾಟದ ಸ್ಪರ್ಧೆಯಾಗಿ ಪರಿಣಮಿಸುವಲ್ಲಿ, ಅಥವಾ ನಿಮ್ಮ ಸಂಬಂಧವು, ಮುರಿಯುವಿಕೆ ಹಾಗೂ ಸರಿಪಡಿಸುವಿಕೆಯ, ಎಂದೂ ಕೊನೆಗೊಳ್ಳದ ಒಂದು ವೃತ್ತವಾಗಿರುವಲ್ಲಿ, ಎಚ್ಚರಿಕೆಯಿಂದಿರಿ! 400 ಮಂದಿ ವೈದ್ಯರ ಒಂದು ಅಭಿಪ್ರಾಯವು ಪ್ರಕಟಿಸಿದ್ದೇನಂದರೆ, ಸತತವಾದ ಜಗಳವು, “ವಿವಾಹಕ್ಕಾಗಿರುವ ಭಾವನಾತ್ಮಕ ಸಿದ್ಧವಾಗಿಲ್ಲದಿರುವಿಕೆ”ಯ ಬಲವಾದ ಸೂಚಕವಾಗಿದ್ದು, “ಆ ಜೋಡಿಯ ನಡುವೆ ರಾಜಿಮಾಡಲಸಾಧ್ಯವಾದ ಘರ್ಷಣೆ”ಯನ್ನು ಹೊರಪಡಿಸಲೂಬಹುದು.
ಚಿಂತೆಗಾಗಿರುವ ಇನ್ನೊಂದು ಕಾರಣವು, ಭಾವಿ ಸಂಗಾತಿಯಲ್ಲಿನ ಕ್ಷೋಭೆದಾಯಕವಾದ ವ್ಯಕ್ತಿತ್ವ ಲೋಪದೋಷಗಳನ್ನು ನೀವು ಕಂಡುಕೊಂಡಿರುವುದಾಗಿರಬಹುದು. ಹಿಂಸಾತ್ಮಕ ಕೋಪದ ತೋರ್ಪಡಿಸುವಿಕೆ, ಅಥವಾ ಸ್ವಾರ್ಥ, ಅಪ್ರೌಢತೆ, ಉತ್ಸಾಹಶೂನ್ಯತೆ, ಅಥವಾ ಹಠಮಾರಿತನದ ಸುಳಿವುಗಳು ಸಹ, ನೀವು ನಿಮ್ಮ ಜೀವಿತದ ಉಳಿದ ಸಮಯವನ್ನು ಈ ವ್ಯಕ್ತಿಯೊಂದಿಗೆ ಕಳೆಯಲು ಬಯಸುತ್ತೀರೊ ಎಂದು ಚಿಂತಿಸುವಂತೆ ಮಾಡಬಹುದು. ಆದರೂ ಅನೇಕರು ಅಂತಹ ಕುಂದುಕೊರತೆಗಳನ್ನು ಅಲಕ್ಷಿಸಲು ಅಥವಾ ಸಮರ್ಥಿಸಲು ಪ್ರಯತ್ನಿಸಿ, ಏನೇ ಆಗಲಿ ಆ ಸಂಬಂಧವನ್ನು ಬೆಳೆಸಲೇಬೇಕೆಂಬ ನಿರ್ಧಾರವನ್ನು ಮಾಡಿರುವಂತೆ ಕಂಡುಬರುತ್ತಾರೆ. ಇದೇಕೆ?
ಸತ್ಯ ಕ್ರೈಸ್ತರ ನಡುವೆ ಪ್ರಣಯಾಚರಣೆಯು ಗಂಭೀರವಾಗಿ ಪರಿಗಣಿಸಲ್ಪಡುವುದರಿಂದ—ಅದು ಗಂಭೀರವಾಗಿಯೇ ಪರಿಗಣಿಸಲ್ಪಡಬೇಕಾಗಿದೆ—ತಾವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯನ್ನೇ ವಿವಾಹವಾಗುವಂತೆ ಕೆಲವರು ಒತ್ತಾಯಕ್ಕೊಳಗಾಗುತ್ತಾರೆ. ಈ ವ್ಯಕ್ತಿಯನ್ನು ಎದುರಿಸುವ, ಬಹುಶಃ ಈ ವ್ಯಕ್ತಿಗೆ ನೋವನ್ನುಂಟುಮಾಡುವ ಭಯವೂ ಅವರಿಗೆ ಇರಬಹುದು. ಇತರರು, ವಿವಾಹವಾಗಲು ಬೇರೆ ಯಾರನ್ನಾದರೂ ಕಂಡುಕೊಳ್ಳಲು ತಾವು ಶಕ್ತರಾಗುವುದಿಲ್ಲವೆಂದು ಭಯಪಡಬಹುದು. ಆದರೂ, ಸಮಸ್ಯೆಯಿಂದ ಬಾಧಿತವಾದ ಒಂದು ಪ್ರಣಯಾಚರಣೆಯನ್ನು ಲಂಬಿಸುವುದಕ್ಕೆ ಇವು ಸಕಾರಣಗಳಾಗಿರುವುದಿಲ್ಲ.
ವಿವಾಹದ ಸಾಧ್ಯತೆಯನ್ನು ಶೋಧಿಸುವುದೇ ಪ್ರಣಯಾಚರಣೆಯ ಉದ್ದೇಶವಾಗಿದೆ. ಮತ್ತು ಕ್ರೈಸ್ತನೊಬ್ಬನು ಸದುದ್ದೇಶದಿಂದ ಪ್ರಣಯಾಚರಣೆಯೊಂದನ್ನು ಆರಂಭಿಸುವುದಾದರೆ, ಒಂದುವೇಳೆ ಅದು ದೋಷಭರಿತವಾಗಿ ಕಂಡುಬರುವಲ್ಲಿ, ಅವನಿಗೆ ಅಥವಾ ಅವಳಿಗೆ ಅದನ್ನು ಮುಂದುವರಿಸುವ ಹಂಗು ಇರುವುದಿಲ್ಲ. ಇದಲ್ಲದೆ, ‘ನಾನು ಬೇರೊಬ್ಬರನ್ನು ಕಂಡುಕೊಳ್ಳಸಾಧ್ಯವಿಲ್ಲದಿರಬಹುದು’ ಎಂಬ ಆಧಾರದ ಮೇಲೆ, ಕ್ಷೀಣಿಸುತ್ತಿರುವ ಸಂಬಂಧವನ್ನು ಲಂಬಿಸುವುದು, ತಪ್ಪಾದದ್ದೂ ಸ್ವಾರ್ಥವೂ ಆಗಿ ಇರುವುದಿಲ್ಲವೊ? (ಫಿಲಿಪ್ಪಿ 2:4ನ್ನು ಹೋಲಿಸಿರಿ.) ಹೀಗೆ ನೀವು ಒಂದು ಜೋಡಿಯೋಪಾದಿ ನಿಮ್ಮ ಸಮಸ್ಯೆಗಳನ್ನು ಎದುರಿಸುವುದು—ಸಮಸ್ಯೆಗಳಿಂದ ಜಾರಿಕೊಳ್ಳುವುದಲ್ಲ—ಪ್ರಾಮುಖ್ಯವಾದದ್ದಾಗಿದೆ. ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯ ಕಡೆಗೆ ಪರಿಶೀಲನ ನೋಟವನ್ನು ಹರಿಸುವ ಮೂಲಕ ಆರಂಭಿಸಿರಿ.
ಉದಾಹರಣೆಗೆ, ಅಧೀನತೆ ತೋರಿಸುವ, ಸಮರ್ಥಳಾದ ಪತ್ನಿಯಾಗುವ ಸ್ತ್ರೀಯು ಇವಳೇ ಆಗಿದ್ದಾಳೆ ಎಂಬುದಕ್ಕೆ ರುಜುವಾತಿದೆಯೊ? (ಜ್ಞಾನೋಕ್ತಿ 31:10-31) ಸ್ವತ್ಯಾಗದ ಪ್ರೀತಿಯನ್ನು ತೋರಿಸುವ, ಹಾಗೂ ಒಬ್ಬ ಸಮರ್ಥ ಒದಗಿಸುವಾತನಾಗುವ ಪುರುಷನು ಇವನೇ ಆಗಿದ್ದಾನೆ ಎಂಬುದಕ್ಕೆ ಪುರಾವೆಯಿದೆಯೊ? (ಎಫೆಸ 5:28, 29; 1 ತಿಮೊಥೆಯ 5:8) ತಾನೊಬ್ಬ ದೇವರ ಹುರುಪಿನ ಸೇವಕನಾಗಿದ್ದೇನೆಂದು ವ್ಯಕ್ತಿಯೊಬ್ಬನು ಪ್ರತಿಪಾದಿಸಬಹುದಾದರೂ, ಅಂತಹ ನಂಬಿಕೆಯ ಪ್ರತಿಪಾದನೆಯನ್ನು ದೃಢಪಡಿಸುವ ಕ್ರಿಯೆಗಳು ಅವನಲ್ಲಿವೆಯೊ?—ಯಾಕೋಬ 2:17, 18.
ನಿಶ್ಚಯವಾಗಿಯೂ, ಒಂದು ಸಂಬಂಧವನ್ನು ಬೆಳೆಸುವುದರಲ್ಲಿ ನೀವು ಹೆಚ್ಚಿನ ಸಮಯವನ್ನೂ ಭಾವನಾತ್ಮಕತೆಯನ್ನೂ ವಿನಿಯೋಗಿಸಿರುವುದಾದರೆ, ಅವನು ಅಥವಾ ಅವಳು ಪರಿಪೂರ್ಣರಲ್ಲ ಎಂಬುದನ್ನು ನೀವು ಕಂಡುಕೊಂಡಿರುವ ಕಾರಣಮಾತ್ರಕ್ಕಾಗಿ ಆ ಸಂಬಂಧವನ್ನು ಕೊನೆಗೊಳಿಸಲು ತ್ವರೆಪಡಬೇಡಿರಿ. (ಯಾಕೋಬ 3:2) ಆ ವ್ಯಕ್ತಿಯ ಲೋಪದೋಷಗಳು, ನೀವು ಸಹಿಸಿಕೊಂಡುಹೋಗಬಹುದಾದ ಲೋಪದೋಷಗಳಾಗಿರಬಲ್ಲವು.
ಅವು ಸಹಿಸಿಕೊಂಡು ಹೋಗಲು ಸಾಧ್ಯವಿಲ್ಲದ ಲೋಪದೋಷಗಳಾಗಿರುವಲ್ಲಿ ಆಗೇನು? ವಿಷಯಗಳನ್ನು ಮನಬಿಚ್ಚಿ ಮಾತಾಡಿರಿ. ಗುರಿಗಳು ಅಥವಾ ದೃಷ್ಟಿಕೋನಗಳಲ್ಲಿ ನಿಮಗೆ ಮೂಲಭೂತವಾದ ಭಿನ್ನತೆಗಳಿವೆಯೊ? ಅಥವಾ ಕೇವಲ ತಪ್ಪಭಿಪ್ರಾಯಗಳಿದ್ದವೊ? ನೀವಿಬ್ಬರೂ, ನಿಮ್ಮ ‘ಆತ್ಮವನ್ನು ಸ್ವಾಧೀನಪಡಿಸಿಕೊ’ಳ್ಳುವ ಹಾಗೂ ವಿಷಯಗಳನ್ನು ಹೆಚ್ಚು ಶಾಂತವಾದ ರೀತಿಯಲ್ಲಿ ಬಗೆಹರಿಸುವ ವಿಧವನ್ನು ಕಲಿಯುವ ಅಗತ್ಯವಿರುವ ಒಂದು ವಿದ್ಯಮಾನವಾಗಿರಸಾಧ್ಯವಿದೆಯೊ? (ಜ್ಞಾನೋಕ್ತಿ 25:28) ಕೋಪವನ್ನು ಕೆರಳಿಸುವ ವ್ಯಕ್ತಿತ್ವ ವೈಖರಿಗಳು ನಿಮ್ಮನ್ನು ಚಿಂತೆಗೊಳಪಡಿಸುವುದಾದರೆ, ಅವನು ಅಥವಾ ಅವಳು ಕುಂದುಕೊರತೆಯನ್ನು ದೀನಭಾವದಿಂದ ಒಪ್ಪಿಕೊಂಡು, ಉತ್ತಮವಾಗಿ ಕಾರ್ಯನಡಿಸುವ ಬಯಕೆಯನ್ನು ತೋರಿಸುತ್ತಾರೊ? ನಿಮ್ಮ ವಿಷಯದಲ್ಲಿ ನೀವು ಕಡಿಮೆ ಸಂವೇದನಾಶೀಲರೂ, ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರುವವರೂ ಆಗಿರುವ ಆವಶ್ಯಕತೆಯಿದೆಯೊ? (ಪ್ರಸಂಗಿ 7:9) ‘ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳುವುದು,’ ಒಂದು ಒಳ್ಳೆಯ ವಿವಾಹದ ಚೈತನ್ಯಪ್ರಭಾವವಾಗಿದೆ.—ಎಫೆಸ 4:2.
ನಿಮ್ಮ ಸಂಬಂಧವನ್ನು ಧ್ವಂಸಗೊಳಿಸುವುದಕ್ಕೆ ಬದಲಾಗಿ, ವಿಷಯಗಳನ್ನು ಮನಬಿಚ್ಚಿ ಮಾತಾಡುವುದು, ಭವಿಷ್ಯತ್ತಿನ ಬೆಳವಣಿಗೆಗಾಗಿ ಅದರಲ್ಲಿರುವ ಸಂಭಾವ್ಯವನ್ನು ಉತ್ತಮವಾಗಿ ಪ್ರಕಟಪಡಿಸಬಹುದು! ಆದರೆ ಆ ಚರ್ಚೆಯು, ಆಶಾಭಂಗಗೊಳಿಸುವ ಇನ್ನೊಂದು ದೂರಸರಿಯುವಿಕೆಯಲ್ಲಿ ಪರಿಣಮಿಸುವುದಾದರೆ, ಸನ್ನಿಹಿತವಾಗಿರುವ ವಿಪತ್ತಿನ ಸ್ಪಷ್ಟವಾದ ಸೂಚನೆಗಳನ್ನು ಅಲಕ್ಷಿಸದಿರಿ. (ಜ್ಞಾನೋಕ್ತಿ 22:3) ವಿವಾಹದ ಬಳಿಕ ವಿಷಯಗಳು ಉತ್ತಮಗೊಳ್ಳುವುದು ಅಸಂಭವನೀಯ. ಆ ಪ್ರಣಯಾಚರಣೆಯನ್ನು ಕೊನೆಗೊಳಿಸುವುದು, ನಿಮ್ಮಿಬ್ಬರ ಹಿತಾಸಕ್ತಿಯಲ್ಲಿ ಅತ್ಯುತ್ತಮವಾದದ್ದಾಗಿರಬಹುದು.
[ಪುಟ 253 ರಲ್ಲಿರುವ ಚಿತ್ರಗಳು]
ಒಂದು ಗುಂಪಿನಲ್ಲಿರುವಾಗ ಒಬ್ಬರನ್ನೊಬ್ಬರು ಗಮನಿಸುವುದು, ಯಾವುದೇ ಪ್ರಣಯಾತ್ಮಕ ಒಳಗೂಡುವಿಕೆಯಿಲ್ಲದೆ ಚಿರಪರಿಚಿತರಾಗುವಂತೆ ನಿಮ್ಮನ್ನು ಅನುಮತಿಸುವುದು
[ಪುಟ 254 ರಲ್ಲಿರುವ ಚಿತ್ರಗಳು]
ಸಭ್ಯಾಚಾರದ ಹಾಗೂ ಒಳ್ಳೆಯ ಶಿಷ್ಟಾಚಾರಗಳ ಕುರಿತಾದ ಸ್ಥಳಿಕ ನಿಯಮಗಳಿಗೆ ವಿಧೇಯರಾಗುವುದು, ವಿವಾಹದಲ್ಲಿ ಮುಂದುವರಿಯಸಾಧ್ಯವಿರುವ ಪರಸ್ಪರ ಗೌರವದ ಮಾದರಿಯನ್ನು ಸ್ಥಾಪಿಸುತ್ತದೆ
[ಪುಟ 259 ರಲ್ಲಿರುವ ಚಿತ್ರಗಳು]
ಪ್ರಣಯಾಚರಣೆಯೊಂದು ಸಫಲದಾಯಕವಾಗುತ್ತಿಲ್ಲ ಎಂಬುದು ಸುವ್ಯಕ್ತವಾಗುವಾಗ, ಈ ಸಂಬಂಧವು ಏಕೆ ಕೊನೆಗೊಳ್ಳಬೇಕು ಎಂಬುದನ್ನು ವಿವರಿಸುತ್ತಾ, ಮುಖಾಮುಖಿಯಾದ ಒಂದು ಚರ್ಚೆಯನ್ನು ನಡೆಸುವುದು, ಮಾಡಬೇಕಾದ ದಯಾಪರ ವಿಷಯವಾಗಿದೆ