ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ದುಃಖಿಸುವಂತಹ ರೀತಿಯಲ್ಲಿ ದುಃಖಿಸುವುದು ಸಾಮಾನ್ಯವಾಗಿದೆಯೊ?

ನಾನು ದುಃಖಿಸುವಂತಹ ರೀತಿಯಲ್ಲಿ ದುಃಖಿಸುವುದು ಸಾಮಾನ್ಯವಾಗಿದೆಯೊ?

ಅಧ್ಯಾಯ 16

ನಾನು ದುಃಖಿಸುವಂತಹ ರೀತಿಯಲ್ಲಿ ದುಃಖಿಸುವುದು ಸಾಮಾನ್ಯವಾಗಿದೆಯೊ?

ಮಿಚೆಲ್‌ ತನ್ನ ತಂದೆ ಮೃತಪಟ್ಟ ದಿನವನ್ನು ಜ್ಞಾಪಿಸಿಕೊಳ್ಳುತ್ತಾನೆ: “ನಾನು ಒಂದು ಆಘಾತಕರ ಸ್ಥಿತಿಯಲ್ಲಿದ್ದೆ. . . . ‘ಅದು ನಿಜವಿರಲಿಕ್ಕಿಲ್ಲ’ ಎಂದು ನಾನು ನನ್ನಷ್ಟಕ್ಕೆ ಹೇಳಿಕೊಳ್ಳುತ್ತಾ ಇದ್ದೆ.”

ಬಹುಶಃ ನೀವು ಪ್ರೀತಿಸುವ—ಒಬ್ಬ ಹೆತ್ತವರು, ಸಹೋದರ, ಸಹೋದರಿ, ಅಥವಾ ಸ್ನೇಹಿತ—ಯಾರಾದರೊಬ್ಬರು ಮೃತಪಟ್ಟಿದ್ದಾರೆ. ಮತ್ತು ಕೇವಲ ವ್ಯಥೆಯ ಅನಿಸಿಕೆಯಾಗುವುದಕ್ಕೆ ಬದಲಾಗಿ ನಿಮಗೆ ಕೋಪ, ಗೊಂದಲ, ಮತ್ತು ಭಯದ ಅನಿಸಿಕೆಯೂ ಆಗುತ್ತದೆ. ನಿಮ್ಮಿಂದಾದಷ್ಟು ನೀವು ಪ್ರಯತ್ನಿಸಬಹುದಾದರೂ, ನಿಮಗೆ ಕಣ್ಣೀರನ್ನು ತಡೆದುಕೊಳ್ಳಲಾಗುವುದಿಲ್ಲ. ಅಥವಾ ನಿಮಗಾಗುವ ನೋವನ್ನು ನೀವು ಮನಸ್ಸಿನೊಳಗೇ ಇಟ್ಟುಕೊಳ್ಳುತ್ತೀರಿ.

ನಿಜವಾಗಿಯೂ, ನಾವು ಪ್ರೀತಿಸುವ ಯಾರಾದರೊಬ್ಬರು ಮೃತಪಡುವಾಗ, ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಸ್ವಾಭಾವಿಕವೇ ಸರಿ. ಯೇಸು ಕ್ರಿಸ್ತನು ಸಹ, ಒಬ್ಬ ಆಪ್ತ ಸ್ನೇಹಿತನ ಸಾವಿನ ಕುರಿತು ಅವನಿಗೆ ತಿಳಿದುಬಂದಾಗ, “ಕಣ್ಣೀರು ಬಿಟ್ಟನು” ಮತ್ತು ಒಳಗೇ “ನೊಂದುಕೊಂಡು ತತ್ತರಿಸಿ”ದನು. (ಯೋಹಾನ 11:33-36; 2 ಸಮುವೇಲ 13:28-39ನ್ನು ಹೋಲಿಸಿರಿ.) ನಿಮಗನಿಸುವಂತೆಯೇ ಇತರರಿಗೂ ಅನಿಸಿದೆ ಎಂಬುದನ್ನು ಗ್ರಹಿಸಿಕೊಳ್ಳುವುದು, ನಿಮ್ಮ ನಷ್ಟದೊಂದಿಗೆ ವ್ಯವಹರಿಸುವಂತೆ ನಿಮಗೆ ಹೆಚ್ಚು ಉತ್ತಮವಾಗಿ ಸಹಾಯ ಮಾಡಬಹುದು.

ಅಲ್ಲಗಳೆಯುವಿಕೆ

ಆರಂಭದಲ್ಲಿ ನಿಮಗೆ ಮಂಕಾದ ಅನಿಸಿಕೆಯಾಗಬಹುದು. ಬಹುಶಃ ಮನಸ್ಸಿನಾಳದಲ್ಲಿ ನೀವು, ಅದೆಲ್ಲವೂ ಒಂದು ಕೆಟ್ಟ ಕನಸಾಗಿದೆ, ಯಾರಾದರೂ ಬಂದು ನಿಮ್ಮನ್ನು ಎಬ್ಬಿಸುತ್ತಾರೆ ಮತ್ತು ವಿಷಯಗಳು ಯಾವಾಗಲೂ ಇದ್ದಂತೆಯೇ ಇರುವವು ಎಂದು ನಿರೀಕ್ಷಿಸುತ್ತೀರಿ. ಉದಾಹರಣೆಗಾಗಿ, ಸಿಂಡಿಯ ತಾಯಿ ಕ್ಯಾನ್ಸರಿನಿಂದ ಮೃತಪಟ್ಟರು. ಸಿಂಡಿ ವಿವರಿಸುವುದು: “ಅವರು ಮೃತಪಟ್ಟಿದ್ದಾರೆಂದು ನಾನು ನಿಜವಾಗಿಯೂ ಅಂಗೀಕರಿಸಿಲ್ಲ. ನಾನು ಗತಸಮಯದಲ್ಲಿ ಅವರೊಂದಿಗೆ ಚರ್ಚಿಸಿದ್ದಿರಬಹುದಾದ ಯಾವುದಾದರೂ ವಿಷಯವು ಸಂಭವಿಸುತ್ತದೆ, ಮತ್ತು ‘ನಾನದನ್ನು ಅಮ್ಮನಿಗೆ ಹೇಳಬೇಕು’ ಎಂದು ನನ್ನಲ್ಲಿ ಹೇಳಿಕೊಳ್ಳುತ್ತೇನೆ.”

ವಿಯೋಗಿಗಳಾದ ಜನರು, ಮರಣವು ಸಂಭವಿಸಿದೆ ಎಂಬುದನ್ನು ಅಲ್ಲಗಳೆಯುವ ಪ್ರವೃತ್ತಿಯವರಾಗಿರುತ್ತಾರೆ. ತಾವು ಮೃತರನ್ನು ಬೀದಿಯಲ್ಲಿ, ಹಾದುಹೋಗುತ್ತಿರುವ ಬಸ್ಸಿನಲ್ಲಿ, ಪಕ್ಕದಾರಿಯಲ್ಲಿ ಅನಿರೀಕ್ಷಿತವಾಗಿ ನೋಡುತ್ತೇವೆಂದು ಅವರು ಭಾವಿಸಲೂಬಹುದು. ಯಾವುದೇ ಕ್ಷಣಿಕ ಹೋಲಿಕೆಯು, ಇದೆಲ್ಲವೂ ಬಹುಶಃ ತಪ್ಪು ಗ್ರಹಿಕೆಯಾಗಿತ್ತು ಎಂಬ ನಿರೀಕ್ಷೆಯನ್ನು ಹೊತ್ತಿಸಸಾಧ್ಯವಿದೆ. ದೇವರು ಮಾನವನನ್ನು ಸಾಯಲಿಕ್ಕಾಗಿ ಅಲ್ಲ, ಬದಲಾಗಿ ಜೀವಿಸಲಿಕ್ಕಾಗಿ ಉಂಟುಮಾಡಿದನು ಎಂಬುದನ್ನು ನೆನಪಿನಲ್ಲಿಡಿ. (ಆದಿಕಾಂಡ 1:28; 2:9) ಆದುದರಿಂದ ಮರಣವನ್ನು ಅಂಗೀಕರಿಸುವುದು ನಮಗೆ ಕಷ್ಟಕರವಾದ ವಿಷಯವಾಗಿದೆ ಎಂಬುದು ಸಾಮಾನ್ಯ ವಿಷಯವೇ ಸರಿ.

“ಅವರದನ್ನು ನನಗೆ ಹೇಗೆ ಮಾಡಸಾಧ್ಯವಿತ್ತು?”

ಮೃತಪಟ್ಟ ವ್ಯಕ್ತಿಯ ಕುರಿತು ನಿಮಗೆ ಸ್ವಲ್ಪ ಕೋಪದ ಅನಿಸಿಕೆಯೂ ಆಗುವಂತಹ ಕ್ಷಣಗಳಿರುವುದಾದರೆ, ಆಶ್ಚರ್ಯಪಡಬೇಡಿರಿ. ಸಿಂಡಿ ಜ್ಞಾಪಿಸಿಕೊಳ್ಳುವುದು: “ಅಮ್ಮ ಸತ್ತಾಗ, ನಾನು ಹೀಗೆ ಆಲೋಚಿಸಿದ ಸಮಯಗಳಿದ್ದವು, ‘ನೀವು ಸಾಯಲಿದ್ದೀರಿ ಎಂಬುದನ್ನು ನೀವು ನಿಜವಾಗಿಯೂ ನಮಗೆ ತಿಳಿಯಪಡಿಸಲಿಲ್ಲ. ನೀವು ಕೇವಲ ಕಣ್ಮರೆಯಾಗಿಬಿಟ್ಟಿರಿ.’ ನನಗೆ ಬರಡಾದ ಅನಿಸಿಕೆಯಾಯಿತು.”

ತದ್ರೀತಿಯಲ್ಲಿ ಒಬ್ಬ ಸಹೋದರನ ಅಥವಾ ಸಹೋದರಿಯ ಮರಣವು ಅಂತಹ ಭಾವನೆಗಳನ್ನು ಕದಡಬಲ್ಲದು. “ಮೃತಪಟ್ಟಿರುವ ಯಾರಾದರೊಬ್ಬರ ಕಡೆಗೆ ಕೋಪದ ಅನಿಸಿಕೆಯಾಗುವುದು ಬಹುಮಟ್ಟಿಗೆ ಹಾಸ್ಯಾಸ್ಪದವಾದದ್ದಾಗಿ ಇರುವುದಾದರೂ, ನನ್ನ ಸಹೋದರಿ ಮೃತಪಟ್ಟಾಗ, ನನಗದನ್ನು ತಡೆದುಕೊಳ್ಳಲಾಗಲಿಲ್ಲ. ‘ಅವಳು ಮೃತಪಟ್ಟು, ನನ್ನನ್ನು ಪೂರ್ತಿ ಒಂಟಿಯಾಗಿ ಹೇಗೆ ಬಿಟ್ಟುಹೋಗಸಾಧ್ಯವಿತ್ತು? ಅವಳದನ್ನು ನನಗೆ ಹೇಗೆ ಮಾಡಸಾಧ್ಯವಿತ್ತು?’ ಎಂಬಂತಹ ಆಲೋಚನೆಗಳು ನನ್ನ ತಲೆಯಲ್ಲಿ ಸುಳಿಯುತ್ತಿದ್ದವು,” ಎಂದು ಕ್ಯಾರನ್‌ ವಿವರಿಸುತ್ತಾಳೆ. ಅವನ ಅಥವಾ ಅವಳ ಮರಣವು ಉಂಟುಮಾಡಿರುವ ಸರ್ವ ವೇದನೆಗಾಗಿ ಕೆಲವರು ಒಡಹುಟ್ಟಿದವರ ಮೇಲೆ ಕೋಪವನ್ನು ತೋರಿಸುತ್ತಾರೆ. ಅಸ್ವಸ್ಥ ಸಹೋದರ ಅಥವಾ ಸಹೋದರಿಗೆ ಮೃತಿಹೊಂದುವ ಮುಂಚೆ ದೊರಕಿದ್ದ ಎಲ್ಲಾ ಸಮಯ ಮತ್ತು ಗಮನದ ಕಾರಣದಿಂದ, ಕೆಲವರಿಗೆ ನಿರ್ಲಕ್ಷಿಸಲ್ಪಟ್ಟ, ಬಹುಶಃ ಅಸಮಾಧಾನದ ಅನಿಸಿಕೆಯಾಗುತ್ತದೆ. ಇನ್ನೊಂದು ಮಗುವನ್ನು ಕಳೆದುಕೊಳ್ಳುತ್ತೇವೆಂಬ ಭಯದಿಂದ, ದುಃಖಾವೃತರಾದ ಹೆತ್ತವರು, ಅನಿರೀಕ್ಷಿತವಾಗಿ ವಿಪರೀತ ಸಂರಕ್ಷಣಾತ್ಮಕರಾಗಿರುವುದು ಸಹ, ಮೃತರಾದವರ ಕಡೆಗೆ ಬದ್ಧದ್ವೇಷವನ್ನು ಕದಡಿಸಬಲ್ಲದು.

“. . .  ಮಾಡಿರುತ್ತಿದ್ದರೆ”

ದೋಷಿಭಾವವು ಸಹ ಆಗಾಗ್ಗೆ ಬರುವಂತಹ ಒಂದು ಪ್ರತಿಕ್ರಿಯೆಯಾಗಿದೆ. ಪ್ರಶ್ನೆಗಳು ಹಾಗೂ ಸಂಶಯಗಳು ಮನಸ್ಸಿನಾದ್ಯಂತ ಪ್ರವಹಿಸುತ್ತವೆ. ‘ನಾವು ಮಾಡಸಾಧ್ಯವಿದ್ದಂತಹ ಇನ್ನಾವುದೇ ಹೆಚ್ಚಿನ ವಿಷಯವು ಇದೆಯೊ? ನಾವು ಇನ್ನೊಬ್ಬ ವೈದ್ಯನನ್ನು ಸಂಪರ್ಕಿಸಿದ್ದಿರಬೇಕಿತ್ತೊ?’ ಮತ್ತು ಆಗ ಮಾಡಿರುತ್ತಿದ್ದರೆಗಳೇ ಇರುತ್ತವೆ. ‘ನಾವು ಅಷ್ಟೊಂದು ಜಗಳವಾಡದೇ ಇರುತ್ತಿದ್ದರೆ.’ ‘ನಾನು ಹೆಚ್ಚು ದಯಾಪರನಾಗಿ ಇರುತ್ತಿದ್ದರೆ.’ ‘ಬದಲಾಗಿ ನಾನು ಅಂಗಡಿಗೆ ಹೋಗಿರುತ್ತಿದ್ದರೆ.’

ಮಿಚೆಲ್‌ ಹೇಳುವುದು: “ನಾನು ನನ್ನ ತಂದೆಯೊಂದಿಗೆ ಹೆಚ್ಚು ಸಹನಶೀಲನೂ ಅರ್ಥಮಾಡಿಕೊಳ್ಳುವವನೂ ಆಗಿರುತ್ತಿದ್ದಿದ್ದರೆ ಒಳ್ಳೇದಿತ್ತು. ಅಥವಾ ಅವರು ಮನೆಗೆ ಬಂದಾಗ, ಅವರಿಗೆ ಹೆಚ್ಚು ಸುಲಭವಾಗುವಂತೆ ಮಾಡಲು ನಾನು ಮನೆಯಲ್ಲಿ ಹೆಚ್ಚು ಕೆಲಸಗಳನ್ನು ಮಾಡಬೇಕಿತ್ತು.” ಮತ್ತು ಎಲೈಸ ಗಮನಿಸಿದ್ದು: “ಅಮ್ಮ ಅಸ್ವಸ್ಥರಾಗಿ, ತುಂಬ ಅನಿರೀಕ್ಷಿತವಾಗಿ ಮೃತಪಟ್ಟಾಗ, ನಮ್ಮಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ಈ ಎಲ್ಲ ಬಗೆಹರಿಸಿಲ್ಲದ ಭಾವನೆಗಳನ್ನು ಹೊಂದಿದ್ದೆವು. ಈಗ ನನಗೆ ತುಂಬ ದೋಷಿಭಾವದ ಅನಿಸಿಕೆಯಾಗುತ್ತದೆ. ನಾನು ಅವರಿಗೆ ಹೇಳಿದ್ದಿರಬೇಕಾದ, ನಾನು ಅವರಿಗೆ ಹೇಳಿದ್ದಿರಬಾರದ ಎಲ್ಲಾ ವಿಷಯಗಳು, ನಾನು ತಪ್ಪಾಗಿ ಮಾಡಿದ ಎಲ್ಲಾ ವಿಷಯಗಳ ಕುರಿತು ನಾನು ಯೋಚಿಸುತ್ತೇನೆ.”

ಏನು ಸಂಭವಿಸಿತೋ ಅದಕ್ಕಾಗಿ ನೀವು ಸ್ವತಃ ನಿಮ್ಮನ್ನೇ ದೂಷಿಸಿಕೊಳ್ಳಬಹುದು. ಸಿಂಡಿ ಜ್ಞಾಪಿಸಿಕೊಳ್ಳುವುದು: “ನಾವು ಮಾಡಿರುವಂತಹ ಪ್ರತಿಯೊಂದು ವಿವಾದಕ್ಕಾಗಿ, ನಾನು ಅಮ್ಮನಿಗೆ ಉಂಟುಮಾಡಿದ ಎಲ್ಲಾ ಒತ್ತಡಕ್ಕಾಗಿ ನನಗೆ ದೋಷಿಭಾವದ ಅನಿಸಿಕೆಯಾಯಿತು. ನಾನು ಅವರಿಗೆ ಉಂಟುಮಾಡಿದ ಎಲ್ಲಾ ಒತ್ತಡವು, ಅವರ ಅನಾರೋಗ್ಯಕ್ಕೆ ಕಾರಣವಾಗಿತ್ತೆಂದು ನನಗನಿಸಿತು.”

“ನಾನು ನನ್ನ ಸ್ನೇಹಿತರಿಗೆ ಏನೆಂದು ಹೇಳಲಿ?”

ತನ್ನ ಮಗನ ಕುರಿತಾಗಿ ಒಬ್ಬ ವಿಧವೆಯು ಗಮನಿಸಿದ್ದು: “ತನ್ನ ತಂದೆ ಮೃತಪಟ್ಟಿದ್ದರು ಎಂಬುದನ್ನು ಬೇರೆ ಮಕ್ಕಳಿಗೆ ಹೇಳುವುದನ್ನು ಜಾನಿ ದ್ವೇಷಿಸಿದನು. ಅದು ಅವನನ್ನು ನಾಚಿಕೆಪಡಿಸಿತು ಮತ್ತು ನಾಚಿಕೆಗೊಳಪಡಿಸಿದ ಕಾರಣ ಅವನನ್ನು ಕೋಪಗೊಳಿಸಿತು ಸಹ.”

ಕುಟುಂಬದಲ್ಲಿ ಮರಣ ಮತ್ತು ಶೋಕ (ಇಂಗ್ಲಿಷ್‌) ಎಂಬ ಪುಸ್ತಕವು ವಿವರಿಸುವುದು: “‘ನಾನು ನನ್ನ ಸ್ನೇಹಿತರಿಗೆ ಏನೆಂದು ಹೇಳಲಿ?’ ಎಂಬುದೇ ಅನೇಕ ಒಡಹುಟ್ಟಿದವರಿಗೆ [ಬದುಕುಳಿದಿರುವ ಸಹೋದರರು ಅಥವಾ ಸಹೋದರಿಯರಿಗೆ] ಅತ್ಯಂತ ಪ್ರಮುಖತೆಯ ಒಂದು ಪ್ರಶ್ನೆಯಾಗಿದೆ. ಆಗಿಂದಾಗ್ಗೆ ಒಡಹುಟ್ಟಿದವರಿಗೆ, ತಾವು ಅನುಭವಿಸುತ್ತಿರುವ ಕಷ್ಟವನ್ನು ತಮ್ಮ ಸ್ನೇಹಿತರು ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಅನಿಸಿಕೆಯಾಗುತ್ತದೆ. ಕಳೆದುಕೊಳ್ಳುವಿಕೆಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಲು ಮಾಡಲ್ಪಡುವ ಪ್ರಯತ್ನಗಳು, ಶೂನ್ಯದೃಷ್ಟಿಗಳು ಮತ್ತು ಕೌತುಕದ ನೋಟಗಳಿಂದ ಎದುರಿಸಲ್ಪಡಬಹುದು. . . . ಪರಿಣಾಮವಾಗಿ, ವಿಯೋಗಹೊಂದಿದ ಒಡಹುಟ್ಟಿದವನಿಗೆ, ತಿರಸ್ಕರಿಸಲ್ಪಟ್ಟ, ಪ್ರತ್ಯೇಕಿತನಾದ, ಮತ್ತು ಕೆಲವೊಮ್ಮೆ ವಿಲಕ್ಷಣವಾದ ಅನಿಸಿಕೆಯೂ ಆಗಬಹುದು.”

ಆದರೂ, ದುಃಖಿಸುತ್ತಿರುವ ಸ್ನೇಹಿತನೊಬ್ಬನಿಗೆ ಏನು ಹೇಳಬೇಕೆಂಬುದು ಕೆಲವೊಮ್ಮೆ ಇತರರಿಗೆ ತಿಳಿದಿರುವುದೇ ಇಲ್ಲ, ಮತ್ತು ಇದರಿಂದಾಗಿ ಅವರು ಏನೂ ಹೇಳುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿರಿ. ನಿಮ್ಮ ಮರಣ ನಷ್ಟವು, ತಾವೂ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳಸಾಧ್ಯವಿದೆ ಎಂಬುದನ್ನು ಅವರಿಗೆ ಜ್ಞಾಪಿಸಬಹುದು. ಅದರ ಕುರಿತು ಜ್ಞಾಪಿಸಲ್ಪಡಲು ಬಯಸದೇ, ಅವರು ನಿಮ್ಮಿಂದ ಹಿಂಜರಿಯಬಹುದು.

ನಿಮ್ಮ ದುಃಖವನ್ನು ನಿಭಾಯಿಸುವುದು

ನಿಮ್ಮ ದುಃಖವು ಸಹಜವಾದದ್ದಾಗಿದೆ ಎಂಬುದನ್ನು ತಿಳಿದುಕೊಳ್ಳುವುದು, ಅದನ್ನು ಹತೋಟಿಗೆ ತರುವುದರಲ್ಲಿ ಒಂದು ದೊಡ್ಡ ಸಹಾಯವಾಗಿದೆ. ಆದರೆ ವಾಸ್ತವಿಕತೆಯನ್ನು ಅಲ್ಲಗಳೆಯುತ್ತಾ ಮುಂದುವರಿಯುವುದು ದುಃಖವನ್ನು ಕೇವಲ ಲಂಬಿಸುತ್ತದೆ, ಅಷ್ಟೆ. ಕೆಲವೊಮ್ಮೆ ಕುಟುಂಬವೊಂದು, ಮೃತನಾದ ವ್ಯಕ್ತಿಯೊಬ್ಬನು ಊಟವೊಂದಕ್ಕೆ ಬರಲಿದ್ದಾನೋ ಎಂಬಂತೆ, ಅವನಿಗಾಗಿ ಊಟದ ಮೇಜಿನಲ್ಲಿ ಒಂದು ಖಾಲಿ ಸ್ಥಳವನ್ನು ಬಿಡುತ್ತದೆ. ಆದರೂ, ಒಂದು ಕುಟುಂಬವು ವಿಷಯಗಳನ್ನು ವಿಭಿನ್ನವಾಗಿ ನಿರ್ವಹಿಸುವ ಆಯ್ಕೆಮಾಡಿತು. ಆ ಕುಟುಂಬದ ತಾಯಿ ಹೇಳುವುದು: “ನಾವು ಅದೇ ಕ್ರಮದಲ್ಲಿ ಅಡುಗೆಮನೆಯ ಮೇಜಿನಲ್ಲಿ ಇನ್ನೆಂದೂ ಕುಳಿತುಕೊಳ್ಳಲಿಲ್ಲ. ನನ್ನ ಗಂಡ ಡೇವಿಡ್‌ನ ಕುರ್ಚಿಯಲ್ಲಿ ಕುಳಿತುಕೊಂಡರು, ಮತ್ತು ಅದು ಆ ಶೂನ್ಯತೆಯನ್ನು ತುಂಬಲು ಸಹಾಯ ಮಾಡಿತು.”

ನೀವು ಹೇಳಬೇಕಾಗಿದ್ದ ಅಥವಾ ಹೇಳಬಾರದಾಗಿದ್ದ ವಿಷಯಗಳು ಇರಬಹುದಾಗಿರುವಾಗ, ಸಾಮಾನ್ಯವಾಗಿ ನಿಮ್ಮ ಪ್ರಿಯ ವ್ಯಕ್ತಿಯು ಮೃತಪಟ್ಟಿರುವುದಕ್ಕೆ ಅವು ಕಾರಣಗಳು ಅಲ್ಲ ಎಂಬುದನ್ನು ಗ್ರಹಿಸಿಕೊಳ್ಳುವುದೂ ಸಹಾಯ ಮಾಡುತ್ತದೆ. ಇದಲ್ಲದೆ, “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.”—ಯಾಕೋಬ 3:2.

ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು

ಡಾ. ಅರ್ಲ್‌ ಗ್ರಾಲ್‌ಮನ್‌ ಸಲಹೆ ನೀಡುವುದು: “ನಿಮ್ಮ ಸಂಘರ್ಷಣಾತ್ಮಕ ಭಾವೋದ್ವೇಗಗಳನ್ನು ಗ್ರಹಿಸಿಕೊಳ್ಳುವುದು ಮಾತ್ರ ಸಾಕಾಗುವುದಿಲ್ಲ; ನೀವು ಅವುಗಳೊಂದಿಗೆ ಮುಚ್ಚುಮರೆಯಿಲ್ಲದೆ ವ್ಯವಹರಿಸಬೇಕು. . . . ಇದು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಸಮಯವಾಗಿದೆ.” ನಿಮ್ಮನ್ನು ಪ್ರತ್ಯೇಕಿಸಿಕೊಳ್ಳುವ ಸಮಯವು ಇದಾಗಿರುವುದಿಲ್ಲ.—ಜ್ಞಾನೋಕ್ತಿ 18:1.

ಡಾ. ಗ್ರಾಲ್‌ಮನ್‌ ಹೇಳುವುದೇನಂದರೆ, ದುಃಖವನ್ನು ಅಲ್ಲಗಳೆಯುವುದರಲ್ಲಿ “ನೀವು ಸಂಕಟವನ್ನು ಲಂಬಿಸುತ್ತೀರಿ ಮತ್ತು ದುಃಖದ ಪ್ರಕ್ರಿಯೆಯನ್ನು ವಿಳಂಬಿಸುತ್ತೀರಿ ಅಷ್ಟೇ.” ಅವರು ಸಲಹೆ ನೀಡುವುದು: “ಒಬ್ಬ ಒಳ್ಳೆಯ ಕೇಳುಗನನ್ನು, ನಿಮ್ಮ ಅನೇಕ ಅನಿಸಿಕೆಗಳು ನಿಮ್ಮ ತೀವ್ರವಾದ ದುಃಖದ ಸಾಮಾನ್ಯ ಪ್ರತಿಕ್ರಿಯೆಗಳಾಗಿವೆ ಎಂಬುದನ್ನು ಅರಿತುಕೊಳ್ಳುವ ಒಬ್ಬ ಸ್ನೇಹಿತನನ್ನು ಕಂಡುಕೊಳ್ಳಿರಿ.” ಹೆತ್ತವರೊಬ್ಬರು, ಸಹೋದರನೂ, ಸಹೋದರಿಯೂ, ಸ್ನೇಹಿತನೂ, ಅಥವಾ ಕ್ರೈಸ್ತ ಸಭೆಯಲ್ಲಿನ ಒಬ್ಬ ಹಿರಿಯನೂ ಅನೇಕವೇಳೆ ಒಂದು ನೈಜ ಆಧಾರವಾಗಿ ಪರಿಣಮಿಸಬಲ್ಲರು.

ಮತ್ತು ನಿಮಗೆ ಶೋಕಿಸುವಂತಹ ಅನಿಸಿಕೆಯಾಗುವುದಾದರೆ ಆಗೇನು? ಡಾ. ಗ್ರಾಲ್‌ಮನ್‌ ಕೂಡಿಸುವುದು: “ಕೆಲವರಿಗಾದರೋ—ಪುರುಷರಿಗೆ ಹಾಗೂ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ—ಭಾವನಾತ್ಮಕ ಒತ್ತಡಕ್ಕೆ ಕಣ್ಣೀರು ಅತ್ಯುತ್ತಮ ಚಿಕಿತ್ಸೆಯಾಗಿದೆ. ಬೇಗುದಿಯನ್ನು ಕಡಿಮೆಮಾಡಲು ಮತ್ತು ವೇದನೆಯನ್ನು ಬಿಡುಗಡೆಮಾಡಲು, ಶೋಕಿಸುವುದು ಸ್ವಾಭಾವಿಕವಾದ ವಿಧವಾಗಿದೆ.”

ಕುಟುಂಬದೋಪಾದಿ ಚೇತರಿಸಿಕೊಳ್ಳುವುದು

ಮರಣ ನಷ್ಟದ ಸಮಯದಲ್ಲಿ ನಿಮ್ಮ ಹೆತ್ತವರೂ ಒಂದು ಮಹತ್ತಾದ ಸಹಾಯವಾಗಿರಸಾಧ್ಯವಿದೆ—ಮತ್ತು ನೀವು ಅವರಿಗೆ ಸಹಾಯವಾಗಿರಸಾಧ್ಯವಿದೆ. ಉದಾಹರಣೆಗಾಗಿ, ಇಂಗ್ಲೆಂಡ್‌ನ ಜೇನ್‌ ಮತ್ತು ಸೇರ, ತಮ್ಮ 23 ವರ್ಷ ಪ್ರಾಯದ ಸಹೋದರನಾದ ಡ್ಯಾರಲ್‌ನನ್ನು ಕಳೆದುಕೊಂಡರು. ಅವರು ತಮ್ಮ ದುಃಖದಿಂದ ಹೇಗೆ ಪಾರಾದರು? ಜೇನ್‌ ಉತ್ತರಿಸುವುದು: “ನಾವು ನಾಲ್ಕು ಜನರಿದ್ದುದರಿಂದ, ನಾನು ಹೋಗಿ ತಂದೆಯೊಂದಿಗೆ ಎಲ್ಲಾ ಕೆಲಸವನ್ನು ಮಾಡಿದೆ, ಅದೇ ಸಮಯದಲ್ಲಿ ಸೇರ ತಾಯಿಯೊಂದಿಗೆ ಎಲ್ಲಾ ಕೆಲಸವನ್ನು ಮಾಡಿದಳು. ಈ ರೀತಿಯಲ್ಲಿ ನಾವು ನಮ್ಮಷ್ಟಕ್ಕೇ ಇರಲಿಲ್ಲ.” ಜೇನ್‌ ಇನ್ನೂ ಜ್ಞಾಪಿಸಿಕೊಳ್ಳುವುದು: “ಅಪ್ಪ ಈ ಹಿಂದೆ ಅತ್ತದ್ದನ್ನು ನಾನೆಂದೂ ನೋಡಿರಲಿಲ್ಲ. ಅವರು ಅನೇಕ ಸಲ ಅತ್ತರು, ಮತ್ತು ಒಂದು ವಿಧದಲ್ಲಿ ಅದು ಒಳ್ಳೆಯದಾಗಿತ್ತು, ಮತ್ತು ಅದನ್ನು ಜ್ಞಾಪಿಸಿಕೊಳ್ಳುವಾಗ, ಅವರಿಗೆ ಸಾಂತ್ವನ ನೀಡಲಿಕ್ಕಾಗಿ ನಾನು ಇರಸಾಧ್ಯವಾದುದಕ್ಕಾಗಿ ಈಗ ನನಗೆ ಒಳ್ಳೆಯ ಅನಿಸಿಕೆಯಾಗುತ್ತದೆ.”

ಪೋಷಿಸುವಂತಹ ಒಂದು ನಿರೀಕ್ಷೆ

ಇಂಗ್ಲೆಂಡ್‌ನ ಯುವ ಡೇವಿಡ್‌, ಹಾಜ್ಕಿನ್ಸ್‌ ರೋಗಕ್ಕೆ ತುತ್ತಾದ ತನ್ನ 13 ವರ್ಷ ಪ್ರಾಯದ ಸಹೋದರಿಯಾದ ಜ್ಯಾನೆಟಳನ್ನು ಕಳೆದುಕೊಂಡನು. ಅವನು ಹೇಳುವುದು: “ನನಗೆ ಮಹತ್ತರವಾಗಿ ಪ್ರಯೋಜನವನ್ನುಂಟುಮಾಡಿದ ವಿಷಯಗಳಲ್ಲಿ ಒಂದು, ಶವಸಂಸ್ಕಾರದ ಭಾಷಣದಲ್ಲಿ ಉದ್ಧರಿಸಲ್ಪಟ್ಟ ಒಂದು ವಚನವೇ ಆಗಿತ್ತು. ಅದು ಹೀಗೆ ಹೇಳುತ್ತದೆ: ‘ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ [“ಖಾತ್ರಿನೀಡಿದ್ದಾನೆ,” NW].’ ಪುನರುತ್ಥಾನದ ಕುರಿತಾಗಿ ಭಾಷಣಕಾರರು ‘ಖಾತ್ರಿನೀಡಿದ್ದಾನೆ’ ಎಂಬ ಅಭಿವ್ಯಕ್ತಿಯನ್ನು ಒತ್ತಿಹೇಳಿದರು. ಶವಸಂಸ್ಕಾರದ ನಂತರ ಅದು ನನಗೆ ಭಾರಿ ಬಲದ ಮೂಲವಾಗಿತ್ತು.”—ಅ ಕೃತ್ಯಗಳು 17:31; ಮಾರ್ಕ 5:35-42; 12:26, 27; ಯೋಹಾನ 5:28, 29; 1 ಕೊರಿಂಥ 15:3-8ನ್ನೂ ನೋಡಿರಿ.

ಪುನರುತ್ಥಾನದ ಕುರಿತಾದ ಬೈಬಲಿನ ನಿರೀಕ್ಷೆಯು, ದುಃಖವನ್ನು ನಿರ್ಮೂಲಮಾಡುವುದಿಲ್ಲ. ನೀವೆಂದಿಗೂ ನಿಮ್ಮ ಪ್ರಿಯನನ್ನು ಮರೆಯುವುದಿಲ್ಲ. ಹಾಗಿದ್ದರೂ, ಅನೇಕರು ಬೈಬಲಿನ ವಾಗ್ದಾನಗಳಲ್ಲಿ ನಿಜ ಸಾಂತ್ವನವನ್ನು ಕಂಡುಕೊಂಡಿದ್ದಾರೆ ಮತ್ತು, ಫಲಿತಾಂಶವಾಗಿ, ತಾವು ಪ್ರೀತಿಸಿದ್ದ ಯಾರಾದರೊಬ್ಬರನ್ನು ಕಳೆದುಕೊಂಡಿರುವ ವೇದನೆಯಿಂದ ಕ್ರಮೇಣವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದಾರೆ.

ಚರ್ಚೆಗಾಗಿ ಪ್ರಶ್ನೆಗಳು

◻ ನೀವು ಪ್ರೀತಿಸುವ ಯಾರಾದರೊಬ್ಬರು ಮೃತಪಟ್ಟಿರುವುದಾದರೆ, ಅವರಿಗಾಗಿ ದುಃಖಿಸುವುದು ಸ್ವಾಭಾವಿಕವಾದದ್ದಾಗಿದೆಯೆಂದು ನೀವು ಭಾವಿಸುತ್ತೀರೊ?

◻ ದುಃಖಿಸುತ್ತಿರುವ ವ್ಯಕ್ತಿಯೊಬ್ಬನು ಯಾವ ಭಾವೋದ್ವೇಗಗಳನ್ನು ಅನುಭವಿಸುತ್ತಾನೆ, ಮತ್ತು ಏಕೆ?

◻ ದುಃಖಿಸುತ್ತಿರುವ ವ್ಯಕ್ತಿಯೊಬ್ಬನು, ಅವನ ಅಥವಾ ಅವಳ ಭಾವನೆಗಳನ್ನು ಹತೋಟಿಗೆ ತರಲು ಆರಂಭಿಸಸಾಧ್ಯವಿರುವ ಕೆಲವು ವಿಧಗಳು ಯಾವುವು?

◻ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡಿರುವ ಒಬ್ಬ ಸ್ನೇಹಿತನನ್ನು ನೀವು ಹೇಗೆ ಸಾಂತ್ವನಪಡಿಸಬಹುದು?

[ಪುಟ 239 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಅವರು ಮೃತಪಟ್ಟಿದ್ದಾರೆಂದು ನಾನು ನಿಜವಾಗಿಯೂ ಅಂಗೀಕರಿಸಿಲ್ಲ. . . . ‘ನಾನದನ್ನು ಅಮ್ಮನಿಗೆ ಹೇಳಬೇಕು’ ಎಂದು ನನ್ನಲ್ಲಿ ಹೇಳಿಕೊಳ್ಳುತ್ತೇನೆ”

[ಪುಟ 242 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಅಮ್ಮ ಸತ್ತಾಗ, ನಾನು ಹೀಗೆ ಆಲೋಚಿಸಿದೆ . . . ‘ನೀವು ಸಾಯಲಿದ್ದೀರಿ ಎಂಬುದನ್ನು ನೀವು ನಿಜವಾಗಿಯೂ ನಮಗೆ ತಿಳಿಯಪಡಿಸಲಿಲ್ಲ. ನೀವು ಕೇವಲ ಕಣ್ಮರೆಯಾಗಿಬಿಟ್ಟಿರಿ.’ ನನಗೆ ಬರಡಾದ ಅನಿಸಿಕೆಯಾಯಿತು”

[ಪುಟ 129 ರಲ್ಲಿರುವ ಚಿತ್ರ]

“ಇದು ನಿಜವಾಗಿಯೂ ನನಗೆ ಸಂಭವಿಸುತ್ತಿಲ್ಲ!”

[ಪುಟ 130 ರಲ್ಲಿರುವ ಚಿತ್ರ]

ನಾವು ಪ್ರೀತಿಸುವ ಯಾರಾದರೊಬ್ಬರನ್ನು ಮರಣದಲ್ಲಿ ಕಳೆದುಕೊಳ್ಳುವಾಗ, ಸಹಾನುಭೂತಿಯುಳ್ಳವರಾಗಿರುವ ಯಾರಾದರೊಬ್ಬರ ಬೆಂಬಲದ ಅಗತ್ಯ ನಮಗಿದೆ