ನನ್ನ ಉಡುಪುಗಳು ನನ್ನ ನಿಜ ಸ್ವರೂಪವನ್ನು ಪ್ರಕಟಪಡಿಸುತ್ತವೊ?
ಅಧ್ಯಾಯ 11
ನನ್ನ ಉಡುಪುಗಳು ನನ್ನ ನಿಜ ಸ್ವರೂಪವನ್ನು ಪ್ರಕಟಪಡಿಸುತ್ತವೊ?
“ಅದು ತೀರ ಗಿಡ್ಡವಾಗಿಲ್ಲ!,” ಎಂದು ಪೆಗಿ ತನ್ನ ಹೆತ್ತವರಿಗೆ ಕೂಗಿಹೇಳಿದಳು. “ನೀವು ಕೇವಲ ಹಳೆಯ ಫ್ಯಾಶನ್‌ನವರಾಗಿದ್ದೀರಿ!” ಅವಳು ತನ್ನ ಕೋಣೆಗೆ ಓಡಿಬಿಟ್ಟಳು—ಅವಳು ಧರಿಸಲು ಬಯಸಿದಂತಹ ಒಂದು ಲಂಗದ ಕುರಿತಾಗಿ ಒಂದು ಜಗಳದ ಭವ್ಯ ಮುಕ್ತಾಯ. ನೀವು ಪ್ರೀತಿಸಿದಂತಹ ಒಂದು ಉಡುಪನ್ನು ಒಬ್ಬ ಹೆತ್ತವನು, ಒಬ್ಬ ಶಿಕ್ಷಕನು, ಅಥವಾ ಒಬ್ಬ ಧಣಿಯು ಟೀಕೆ ಮಾಡಿದಾಗ, ಪ್ರಾಯಶಃ ನೀವೂ ತದ್ರೀತಿಯ ವಾಗ್ವಾದದ ಕೇಂದ್ರಬಿಂದುವಾಗಿದ್ದೀರಿ. ನೀವು ಅದನ್ನು ಮಾಮೂಲೆಂದು ಕರೆದಿರಿ; ಅವರು ಅದನ್ನು ಅಚ್ಚುಕಟ್ಟಾಗಿಲ್ಲವೆಂದು ಕರೆದರು. ನೀವು ಅದನ್ನು ಷೋಕಿಯೆಂದು ಕರೆದಿರಿ; ಅವರು ಅದನ್ನು ಕಣ್ಣುಕೋರೈಸುವಂತಹದ್ದು ಅಥವಾ ಅಶ್ಲೀಲಭಾವ ಸೂಚನೆಯದ್ದೆಂದು ಕರೆದರು.
ಅಭಿರುಚಿಗಳು ಭಿನ್ನವಾಗಿರುತ್ತವೆ, ಮತ್ತು ನಿಮ್ಮ ಅಭಿಪ್ರಾಯಗಳ ವಿಷಯದಲ್ಲಿ ನಿಮಗೊಂದು ಹಕ್ಕು ಇದೆಯೆಂಬುದು ಒಪ್ಪತಕ್ಕದ್ದೇ. ಆದರೆ ನೀವು ಉಡುಪನ್ನು ಧರಿಸುವ ವಿಷಯಕ್ಕೆ ಬರುವಾಗ, ‘ಏನೂ ನಡೆಯುತ್ತದೆ’ ಎಂಬುದನ್ನು ಇದು ಅರ್ಥೈಸತಕ್ಕದ್ದೊ?
ಸರಿಯಾದ ಸಂದೇಶವೊ?
“ನೀವೇನನ್ನು ಧರಿಸುತ್ತೀರೊ ಅದು, ನೀವು ನಿಜವಾಗಿ ಯಾರಾಗಿದ್ದೀರಿ ಮತ್ತು ನಿಮ್ಮ ಕುರಿತಾಗಿ ನಿಮಗೆ ಹೇಗನಿಸುತ್ತದೆ ಎಂಬುದಾಗಿದೆ,” ಎಂದು ಪ್ಯಾಮ್ ಎಂಬ ಹೆಸರಿನ ಒಬ್ಬ ಹುಡುಗಿ ಹೇಳುತ್ತಾಳೆ. ಹೌದು, ಉಡುಪು ಒಂದು ಸಂದೇಶವನ್ನು, ನಿಮ್ಮ ಕುರಿತಾಗಿ ಇತರರಿಗೆ ಒಂದು ಹೇಳಿಕೆಯನ್ನು ವ್ಯಕ್ತಪಡಿಸುತ್ತದೆ. ಉಡುಪು ಆತ್ಮನಿಷ್ಠೆಯನ್ನು, ಸ್ಥಿರತೆಯನ್ನು, ಉಚ್ಚ ನೈತಿಕ ಮಟ್ಟಗಳನ್ನು ಪಿಸುಗುಟ್ಟಬಲ್ಲದು. ಅಥವಾ ಅದು ದಂಗೆ ಮತ್ತು ಅತೃಪ್ತಿಯನ್ನು ಉದ್ಘೋಷಿಸಬಲ್ಲದು. ಅದು ಗುರುತಿಸುವಿಕೆಯ ಒಂದು ರೂಪವಾಗಿಯೂ ಕಾರ್ಯನಡಿಸಬಲ್ಲದು. ಕೆಲವು ಯುವ ಜನರು, ಸೀಳಿರುವ ಉಡುಪುಗಳನ್ನು, ಪಂಕ್ ಶೈಲಿಗಳನ್ನು ಅಥವಾ ದುಬಾರಿ ಡಿಸೈನರ್ ಉಡುಪುಗಳನ್ನು ಒಂದು ರೀತಿಯ ಗುರುತುಚಿಹ್ನೆಯಾಗಿ ಉಪಯೋಗಿಸುತ್ತಾರೆ. ಇತರರು ವಿರುದ್ಧಲಿಂಗದವರನ್ನು ಆಕರ್ಷಿಸಲಿಕ್ಕಾಗಿ ಅಥವಾ ಅವರು ವಾಸ್ತವವಾದ ವಯಸ್ಸಿಗಿಂತ ಹೆಚ್ಚು ಪ್ರೌಢರಾಗಿ ಕಾಣಿಸಿಕೊಳ್ಳುವಂತೆ ಮಾಡಲಿಕ್ಕಾಗಿ ಉಡುಪನ್ನು ಉಪಯೋಗಿಸುತ್ತಾರೆ.
ಹೀಗೆ, ಉಡುಪು ಅನೇಕ ಯುವ ಜನರಿಗೆ ಏಕೆ ಇಷ್ಟು ಪ್ರಾಮುಖ್ಯವಾದದ್ದಾಗಿದೆಯೆಂಬುದನ್ನು ನೋಡುವುದು ಸುಲಭವಾಗಿದೆ. ಆದಾಗಲೂ, ಡ್ರೆಸ್ ಫಾರ್ ಸಕ್ಸೆಸ್ ಎಂಬ ಪುಸ್ತಕದ ಲೇಖಕರಾದ ಜಾನ್ ಟಿ. ಮಲೈ ಎಚ್ಚರಿಸುವುದು: “ನಾವು ಉಡುಪನ್ನು ಧರಿಸುವ ವಿಧವು, ನಾವು ಭೇಟಿಯಾಗುವ ಜನರ ಮೇಲೆ ಒಂದು ಗಮನಾರ್ಹ ಪ್ರಭಾವವನ್ನು ಬೀರುತ್ತದೆ
ಮತ್ತು ಅವರು ನಮ್ಮನ್ನು ಉಪಚರಿಸುವ ವಿಧವನ್ನು ಮಹತ್ತಾಗಿ ಪ್ರಭಾವಿಸುತ್ತದೆ.”ನೀವು ಉಡುಪನ್ನು ಹೇಗೆ ಧರಿಸುತ್ತೀರೆಂಬುದರ ಕುರಿತಾಗಿ ನಿಮ್ಮ ಹೆತ್ತವರು ಇಷ್ಟು ಚಿಂತಿತರಾಗಿರುವುದು ಆಶ್ಚರ್ಯಕರವಲ್ಲ! ಅವರಿಗೆ ಅದು ವೈಯಕ್ತಿಕ ಅಭಿರುಚಿಯ ಒಂದು ವಾದಾಂಶಕ್ಕಿಂತ ಹೆಚ್ಚಿನದ್ದಾಗಿದೆ. ನೀವು ಒಂದು ಸಮತೋಲನದ, ಜವಾಬ್ದಾರಿಯುತ ವ್ಯಕ್ತಿಯಾಗಿದ್ದೀರೆಂಬ ಕಲ್ಪನೆಕೊಡುವ, ಸರಿಯಾದ ಸಂದೇಶವನ್ನು ನೀವು ಮುಟ್ಟಿಸಬೇಕೆಂದು ಅವರು ಬಯಸುತ್ತಾರೆ. ಆದಾಗಲೂ, ನೀವು ಉಡುಪನ್ನು ಧರಿಸುವ ವಿಧವು, ಇದನ್ನು ಪೂರ್ಣಗೊಳಿಸುತ್ತದೊ? ಬಟ್ಟೆಯ ನಿಮ್ಮ ಆಯ್ಕೆಯನ್ನು ಯಾವುದು ಮಾರ್ಗದರ್ಶಿಸುತ್ತದೆ?
“ನನ್ನ ಸ್ನೇಹಿತರು ಏನನ್ನು ಮಾಡಲು ಬಯಸುತ್ತಾರೊ ಅದನ್ನು ನಾನು ಮಾಡುತ್ತೇನೆ”
ಅನೇಕ ಯುವ ಜನರಿಗೆ, ಉಡುಪು ತಮ್ಮ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವದ ಒಂದು ವ್ಯಕ್ತಪಡಿಸುವಿಕೆಯಾಗಿದೆ. ಆದರೆ ಒಬ್ಬ ಯುವ ವ್ಯಕ್ತಿಯೋಪಾದಿ, ನಿಮ್ಮ ವ್ಯಕ್ತಿತ್ವವು ಇನ್ನೂ ಬದಲಾಗುವಂಥ ಸ್ಥಿತಿಯಲ್ಲಿದೆ—ಇನ್ನೂ ಬೆಳೆಯುತ್ತಿದೆ, ಇನ್ನೂ ಬದಲಾಗುತ್ತಿದೆ. ಆದುದರಿಂದ ನಿಮ್ಮ ಕುರಿತಾಗಿ ನೀವು ಒಂದು ವ್ಯಕ್ತಪಡಿಸಿಕೊಳ್ಳುವಿಕೆಯನ್ನು ಮಾಡಲು ಬಯಸುವಾಗ, ಆ ವ್ಯಕ್ತಪಡಿಸುವಿಕೆಯು ಏನನ್ನು ತಿಳಿಯಪಡಿಸಬೇಕು ಅಥವಾ ಅದನ್ನು ಹೇಗೆ ಹೇಳಬೇಕು ಎಂಬುದರ ಕುರಿತಾಗಿ ನೀವು ತೀರ ಖಚಿತರಾಗಿರಲಿಕ್ಕಿಲ್ಲ. ಆದುದರಿಂದ ಕೆಲವು ಯುವ ಜನರು ತಮ್ಮನ್ನು ವಿಲಕ್ಷಣವಾದ, ಹುಚ್ಚುಹುಚ್ಚಾದ ಉಡುಗೆಯಲ್ಲಿ ಅಲಂಕರಿಸಿಕೊಳ್ಳುತ್ತಾರೆ. ತಮ್ಮ ‘ವ್ಯಕ್ತಿತ್ವವನ್ನು’ ಸ್ಥಾಪಿಸಿಕೊಳ್ಳುವ ಬದಲಿಗೆ, ಅವರು ತಮ್ಮ ಅಪ್ರೌಢತೆಗೆ ಗಮನವನ್ನು ಸೆಳೆಯುತ್ತಾರೆ, ಅಷ್ಟೆ—ಅವರ ಹೆತ್ತವರನ್ನು ಪೇಚಿಗೀಡುಮಾಡುವಂತಹದ್ದನ್ನು ಹೇಳುವುದೇ ಬೇಡ.
ಬೇರೆ ಯುವ ಜನರು ತಮ್ಮ ಸಮಾನಸ್ಥರಂತೆ ಬಟ್ಟೆ ಧರಿಸಲು ಆರಿಸಿಕೊಳ್ಳುತ್ತಾರೆ; ಅದು ಅವರಿಗೆ ಒಂದು ರೀತಿಯ ಭದ್ರತೆಯ ಮತ್ತು ಒಂದು ಗುಂಪಿನೊಂದಿಗೆ ಗುರುತಿಸಲ್ಪಡುವ ಪ್ರಜ್ಞೆಯನ್ನು ಕೊಡುವಂತೆ ತೋರುತ್ತದೆ. ಖಂಡಿತವಾಗಿಯೂ, ಜನರೊಂದಿಗೆ ಬೆರೆಯಲು ಬಯಸುವುದು ತಪ್ಪೇನೂ ಆಗಿರುವುದಿಲ್ಲ. (1 ಕೊರಿಂಥ 9:22ನ್ನು ಹೋಲಿಸಿರಿ.) ಆದರೆ ಒಬ್ಬ ಕ್ರೈಸ್ತನು ಅವಿಶ್ವಾಸಿ ಯುವ ವ್ಯಕ್ತಿಯೊಂದಿಗೆ ಗುರುತಿಸಲ್ಪಡಲು ನಿಜವಾಗಿಯೂ ಬಯಸುವನೊ? ಮತ್ತು ಏನೇ ಆದರೂ ಸಮಾನಸ್ಥರ ಮೆಚ್ಚಿಕೆಯನ್ನು ಹುಡುಕುವುದು ವಿವೇಕಯುತವಾಗಿದೆಯೊ? ಒಬ್ಬ ಯುವ ಹುಡುಗಿಯು ನಿವೇದಿಸಿದ್ದು: “ನನ್ನ ಸ್ನೇಹಿತರು ಏನೂ ಹೇಳದಿರುವಂತೆ, ಅವರು ಏನನ್ನು ಮಾಡಲು ಬಯಸುತ್ತಾರೊ ಅದನ್ನು ನಾನು ಮಾಡುತ್ತೇನೆ.” ಆದರೆ ಇನ್ನೊಬ್ಬರ ಸಂಪೂರ್ಣ ಆಜ್ಞಾವರ್ತಿಯಾಗಿರುವ ಒಬ್ಬರನ್ನು, ಇನ್ನೊಬ್ಬರ ವಿಚಿತ್ರ ಕಲ್ಪನೆಯನ್ನು ಪೂರೈಸುವ ಒಬ್ಬರನ್ನು ನೀವು ಏನೆಂದು ಕರೆಯುವಿರಿ? ಬೈಬಲ್ ಉತ್ತರಿಸುವುದು: “ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ?” (ಓರೆಅಕ್ಷರಗಳು ನಮ್ಮವು.)—ರೋಮಾಪುರ 6:16.
ಯುವ ಜನರ ನಡುವೆ “ಹೊಂದಿಕೊಂಡು ಹೋಗುವುದರ ಮೇಲಿನ ಒತ್ತು ಎಷ್ಟು ಬಲವಾಗಬಲ್ಲದೆಂದರೆ, ಬಟ್ಟೆ ಧರಿಸುವ ವಿಧ, ಮಾತಾಡುವ ವಿಧ, ಏನು ಮಾಡಬೇಕು ಮತ್ತು ಏನು ಯೋಚಿಸಬೇಕು ಮತ್ತು ನಂಬಬೇಕು ಎಂಬದರ ಕುರಿತಾಗಿಯೂ ಸಲಹೆಗಾಗಿ ಅವರ [ತಮ್ಮ ಸಮಾನಸ್ಥರ] ಮೇಲೆ ಹೊಂದಿಕೊಳ್ಳುತ್ತಾ, ಗುಂಪು ಸದಸ್ಯರು ಆ ಗುಂಪಿನ ರೂಢಿಗಳಿಗೆ ಹೆಚ್ಚುಕಡಿಮೆ ಬಂದಿಗಳಾಗಿರುವಂತೆ ತೋರುತ್ತಾರೆ.”—ತರುಣಾವಸ್ಥೆ: ಬಾಲ್ಯಾವಸ್ಥೆಯಿಂದ ಪ್ರೌಢತೆಗೆ ಪರಿವರ್ತನೆ (ಇಂಗ್ಲಿಷ್).
ಆದರೆ ಅಂತಹ ಸಲಹೆಯನ್ನು ಕೊಡಲು ನಿಮ್ಮ ಸ್ನೇಹಿತರು ಎಷ್ಟರ ಮಟ್ಟಿಗೆ ಅರ್ಹರಾಗಿದ್ದಾರೆ? (ಮತ್ತಾಯ 15:14ನ್ನು ಹೋಲಿಸಿರಿ.) ನೀವು ಅನುಭವಿಸುತ್ತಿರುವಂತಹ ಅದೇ ಭಾವನಾತ್ಮಕ ಬೆಳೆಯುವಿಕೆಯ ನೋವುಗಳನ್ನು ಅವರು ಅನುಭವಿಸುತ್ತಿಲ್ಲವೊ? ಹಾಗಾದರೆ, ನಿಮ್ಮ ಮಟ್ಟಗಳನ್ನು—ಅವು ನಿಮ್ಮ ಸಾಮಾನ್ಯ ಪ್ರಜ್ಞೆ ಅಥವಾ ನಿಮ್ಮ ಹೆತ್ತವರ ಮೌಲ್ಯಗಳು ಮತ್ತು ಇಚ್ಛೆಗಳ ವಿರುದ್ಧ ಹೋಗುವುದಾದರೂ—ಅವರು ಸ್ಥಾಪಿಸುವಂತೆ ವಿನಮ್ರವಾಗಿ ಬಿಟ್ಟುಬಿಡುವುದು ವಿವೇಕಪ್ರದವೊ?
ಇಂದು “ಬಳಕೆಯಲ್ಲಿ”—ನಾಳೆ “ಬಳಕೆಯಲ್ಲಿಲ್ಲ”
ಇತರ ಯುವ ಜನರು ಫ್ಯಾಶನಿನ ಗೀಳುಗಳಿಂದ ಮಾರ್ಗದರ್ಶಿಸಲ್ಪಡುತ್ತಾರೆ. ಆದರೆ ಆ ಗೀಳುಗಳು ಎಷ್ಟು ಚಂಚಲವಾಗಿವೆ! ಬೈಬಲಿನ ಮಾತುಗಳು ನಮ್ಮ ಜ್ಞಾಪಕಕ್ಕೆ ತರಲ್ಪಡುತ್ತವೆ: “ಈ ಲೋಕದ ದೃಶ್ಯವು ಬದಲಾಗುತ್ತಿದೆ” (NW). (1 ಕೊರಿಂಥ 7:31) ಇಂದು ಯಾವುದು “ಬಳಕೆಯಲ್ಲಿ” ಇದೆಯೊ ಅದು, ಚಕಿತಗೊಳಿಸುವ (ದುಬಾರಿಯೆಂಬುದನ್ನು ಹೇಳುವುದೇ ಬೇಡ) ಅನಿರೀಕ್ಷಿತತೆಯೊಂದಿಗೆ ನಾಳೆ ಬಳಕೆಯಲ್ಲಿಲ್ಲದೆ ಹೋಗಬಲ್ಲದು. ಉಡುಪುಗಳ ಅಂಚುಗಳು ಏರುತ್ತವೆ ಮತ್ತು ತಗ್ಗುತ್ತವೆ, ಷರಾಯಿಗಳ ಕಾಲುಗಳು ಉಬ್ಬುತ್ತವೆ ಮತ್ತು ಕುಗ್ಗುತ್ತವೆ. ಇದೆಲ್ಲವೂ, ಸುಲಭವಾಗಿ ಬಲಿಯಾಗುವ ಸಾರ್ವಜನಿಕರಿಂದ ಸಮೃದ್ಧ ಲಾಭಗಳನ್ನು ಕೊಯ್ಯುವ ಉತ್ಪಾದಕರು ಮತ್ತು ಉಡುಪುಗಳ ಡಿಸೈನರ್‌ಗಳ ಲಾಭಕ್ಕಾಗಿವೆ.
ಉದಾಹರಣೆಗಾಗಿ, ಕೆಲವೇ ವರ್ಷಗಳ ಹಿಂದಿನ ಡಿಸೈನರ್ ಜೀನ್ಸ್ ಗೀಳನ್ನು ಪರಿಗಣಿಸಿರಿ. ಒಮ್ಮೆಲೇ ಜೀನ್ಸ್‌ಗಳು ಉಚ್ಚ ಫ್ಯಾಶನ್ ಆದವು. ಕ್ಯಾಲ್ವಿನ್ ಕ್ಲೈನ್ ಮತ್ತು ಗ್ಲೋರಿಯ ವ್ಯಾಂಡರ್‌ಬಿಲ್ಟ್ ಎಂಬಂತಹ ಹೆಸರುಗಳನ್ನು ಹೊತ್ತ ನಡೆದಾಡುವ ಜಾಹೀರಾತು ಫಲಕಗಳಾಗಲು ಜನರು ವಿಪರೀತ ಬೆಲೆಗಳನ್ನು ತೆತ್ತರು. “ಜನರಿಗೆ ಒಂದು ಹೆಸರು ಬೇಕಾಗಿದೆ,” ಎಂದು “ಸರ್ಜೀಯೊ ವಾಲೆಂಟೇ” ಜೀನ್ಸನ್ನು ಉತ್ಪಾದಿಸುವ ಕಂಪೆನಿಯ ಅಧ್ಯಕ್ಷರಾದ ಈಲೈ ಕ್ಯಾಪ್ಲನ್ ವಿವರಿಸಿದರು. ಆದರೆ ಯಾರ ಹೆಸರು ಇಷ್ಟು ಎದ್ದುಕಾಣುವಂತಹ ರೀತಿಯಲ್ಲಿ ಜೀನ್ಸ್ ಜೇಬುಗಳ ಮೇಲೆ ಹೊಲಿಯಲ್ಪಟ್ಟಿದೆಯೊ, ಈ ಶ್ರೀಮಾನ್ ವಾಲೆಂಟೇ ಯಾರು? “ಅವನು ಅಸ್ತಿತ್ವದಲ್ಲಿಲ್ಲ,” ಎಂದು ನ್ಯೂಸ್‌ವೀಕ್ ವರದಿಸಿತು. ಮತ್ತು ವಿವರಣೆಕೊಡುತ್ತಾ ಸ್ವತಃ ಕ್ಯಾಪ್ಲನ್‌ರು ಕೇಳಿದ್ದು: “ಈಲೈ ಕ್ಯಾಪ್ಲನ್ ಜೀನ್ಸ್‌ಗಳನ್ನು ಯಾರು ತಾನೇ ಖರೀದಿಸುತ್ತಿದ್ದರು?”
‘ಆದರೆ ಸ್ಟೈಲ್ ಮಾಡುವುದು ತಪ್ಪೊ?’ ಎಂದು ನೀವು ಕೇಳಬಹುದು. ತಪ್ಪೇನೂ ಅಲ್ಲ. ಬೈಬಲ್ ಸಮಯಗಳಲ್ಲಿನ ದೇವರ ಸೇವಕರು, ಸ್ಥಳಿಕ ಅಭಿರುಚಿಗಳಿಗನುಸಾರ ತಮ್ಮ ವೇಷಭೂಷಣಗಳನ್ನು ಧರಿಸಿದರು. ಉದಾಹರಣೆಗಾಗಿ, ತಾಮಾರಳು, ಆ ದಿನಗಳಲ್ಲಿ “ಕನ್ಯೆಯರಾದ ರಾಜಪುತ್ರಿಯರು ಹಾಕಿಕೊಳ್ಳುತ್ತಿದ್ದ ರೀತಿಯ ವಸ್ತ್ರಗಳನ್ನು,” ಪಟ್ಟೆಪಟ್ಟೆಯ ಒಂದು ಉಡುಪನ್ನು ಧರಿಸುತ್ತಿದ್ದಳೆಂದು ಬೈಬಲ್ ಹೇಳುತ್ತದೆ.—2 ಸಮುವೇಲ 13:18.
ಆದರೆ ಒಬ್ಬರು ಸ್ಟೈಲ್‌ಗೆ ದಾಸರಾಗಬೇಕೊ? ಒಬ್ಬ ಯುವ ಹುಡುಗಿಯು ಪ್ರಲಾಪಿಸಿದ್ದು: “ಬೇರೆಲ್ಲರೂ
ಪಡೆದಿರುವ ಪ್ಯಾಂಟ್‌ಗಳ ಒಂದು ಅಮೋಘ ಜೋಡಿಯನ್ನು ಅಂಗಡಿಯೊಂದರಲ್ಲಿ ನೋಡಿ, ನೀವು ‘ಅಮ್ಮ ನನಗೆ ಆ ಪ್ಯಾಂಟ್‌ಗಳನ್ನು ಖರೀದಿಸಿ ಕೊಡಿರಿ,’ ಎಂದು ಹೇಳುತ್ತೀರಿ, ಮತ್ತು ಅವರು ‘ಇಲ್ಲ, ನಾನು ಅದನ್ನು ಮನೆಯಲ್ಲೇ ತಯಾರಿಸಬಲ್ಲೆ’ ಎಂದು ಹೇಳುತ್ತಾರೆ. ‘ನಿಮಗೆ ಅರ್ಥವಾಗುವುದಿಲ್ಲ. ನನಗೆ ಈ ಪ್ಯಾಂಟುಗಳೇ ಬೇಕು’ ಎಂದು ನಾನು ಹೇಳುತ್ತೇನೆ.” ಆದರೂ ಫ್ಯಾಶನ್ ಡಿಸೈನರ್‌ಗಳ ಗಿರವಿಯಾಗಿರುವುದು, ನಿಮ್ಮಿಂದ ನಿಮ್ಮ ವ್ಯಕ್ತಿತ್ವವನ್ನು ಕಳಚಿಹಾಕಿ, ನಿಮ್ಮ ನಿಜ ಸ್ವರೂಪವನ್ನು ಮರೆಮಾಡುವುದಿಲ್ಲವೊ? ಉದ್ರೇಕಕಾರಿ ಜಾಹೀರಾತುಗಳು, ಲಾಂಛನಗಳು ಮತ್ತು ಡಿಸೈನರ್ ಹೆಸರುಗಳಿಂದ ನೀವು ಏಕೆ ನಿಯಂತ್ರಿಸಲ್ಪಡಬೇಕು?ರೋಮಾಪುರ 12:2ರಲ್ಲಿ ಬೈಬಲ್ ನಮಗೆ ಹೇಳುವುದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” ನಿಮ್ಮ ಆಯ್ಕೆಯ ಸಂಬಂಧದಲ್ಲಿ ‘ದೇವರ ಸ್ವೀಕಾರಾರ್ಹವಾದ ಚಿತ್ತ’ವು (NW) ಏನಾಗಿದೆ?
‘ಸಭ್ಯ ಮತ್ತು ಸುವ್ಯವಸ್ಥಿತ’
ಒಂದನೆ ತಿಮೊಥೆಯ 2:9 (NW), ಕ್ರೈಸ್ತರಿಗೆ “ಸಭ್ಯತೆ ಮತ್ತು ಸ್ವಸ್ಥಮನಸ್ಸಿನೊಂದಿಗೆ, ತಮ್ಮನ್ನು ಸುವ್ಯವಸ್ಥಿತ ಉಡುಪಿನಲ್ಲಿ ಅಲಂಕರಿಸಿ”ಕೊಳ್ಳುವಂತೆ ಉತ್ತೇಜಿಸುತ್ತದೆ. “ಸುವ್ಯವಸ್ಥಿತ ಉಡುಪು” ಸ್ವಾಭಾವಿಕವಾಗಿ ಅಚ್ಚುಕಟ್ಟಾದದ್ದೂ ಶುದ್ಧವಾದದ್ದೂ ಆಗಿರುವುದು. “ಸಭ್ಯತೆ”ಯು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಚೆನ್ನಾಗಿ ಹೊಲಿದಿರುವ ಒಂದು ಸೂಟು ಉದ್ಯೋಗಕ್ಕೆ ತಕ್ಕದ್ದಾಗಿರಬಹುದು, ಆದರೆ ಸಮುದ್ರ ತೀರಕ್ಕೆ ಹೋಗುವಾಗ ಅದನ್ನು ಧರಿಸುವುದು ಅನುಚಿತವಾಗಿರುತ್ತದೆ! ಇದಕ್ಕೆ ಪ್ರತಿಯಾಗಿ, ಈಜುಡುಗೆಯು ಒಂದು ಆಫೀಸಿನಲ್ಲಿ ಹಾಸ್ಯಾಸ್ಪದವಾಗಿ ಪರಿಗಣಿಸಲ್ಪಡುವುದು.
ಹೀಗೆ, ಯೆಹೋವನ ಯುವ ಸಾಕ್ಷಿಗಳು, ಕ್ರೈಸ್ತ ಕೂಟಗಳಲ್ಲಿ ಅಥವಾ ಇತರರಿಗೆ ಸಾರುವ ಕೆಲಸದಲ್ಲಿರುವಾಗ ಏನನ್ನು ಧರಿಸುತ್ತಾರೊ ಅದು ತೀರ ಮಾಮೂಲಾಗಿರದೆ, ತಮ್ಮನ್ನು ದೇವರ ಯುವ ಶುಶ್ರೂಷಕರನ್ನಾಗಿ ಗುರುತಿಸಿಕೊಳ್ಳುವಂತಹದ್ದಾಗಿರುವ ಕುರಿತಾಗಿ ಚಿಂತಿತರಾಗಿರುವರು. 2 ಕೊರಿಂಥ 6:3, 4 (NW)ರಲ್ಲಿನ ಪೌಲನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ನಮ್ಮ ಶುಶ್ರೂಷೆಯು ದೋಷಭರಿತವಾಗಿ ಕಂಡುಬರದೆ ಇರುವಂತೆ, ಮುಗ್ಗರಿಸಲಿಕ್ಕಾಗಿ ನಾವು ಯಾವುದೇ ಕಾರಣವನ್ನು ಯಾವ ವಿಧದಲ್ಲಿಯೂ ಕೊಡುವುದಿಲ್ಲ; ಬದಲಿಗೆ ಪ್ರತಿಯೊಂದು ವಿಧದಲ್ಲಿಯೂ ನಾವು ದೇವರ ಶುಶ್ರೂಷಕರೆಂದು ಶಿಫಾರಸ್ಸು ಮಾಡಿಕೊಳ್ಳುತ್ತೇವೆ.”
ಸಭ್ಯತೆಯು ಇತರರ ಅನಿಸಿಕೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಅಪೊಸ್ತಲ ಪೌಲನು ಅದನ್ನು ಹೇಳುವಂತೆ, ಒಬ್ಬ ಕ್ರೈಸ್ತನ ಕ್ರಿಯೆಗಳು ತನ್ನ ಸ್ವಂತ ಮನಸ್ಸಾಕ್ಷಿಯನ್ನು ಮಾತ್ರವಲ್ಲ, 1 ಕೊರಿಂಥ 10:29, NW) ನಿಮ್ಮ ಹೆತ್ತವರ ಮನಸ್ಸಾಕ್ಷಿಯ ಕುರಿತಾಗಿ ನೀವು ವಿಶೇಷವಾಗಿ ಚಿಂತಿತರಾಗಿರಬಾರದೊ?
“ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿ”ಯನ್ನು ಕೂಡ ಪರಿಗಣಿಸಬೇಕು. (ಯೋಗ್ಯವಾಗಿ ಬಟ್ಟೆಯನ್ನು ಧರಿಸುವುದರ ಪ್ರಯೋಜನಗಳು
ರಾಣಿ ಎಸ್ತೇರಳು, ತನ್ನ ಗಂಡನಾದ ರಾಜನ ಮುಂದೆ ಪ್ರತ್ಯಕ್ಷಳಾಗಬೇಕಾದ ಒಂದು ಸಮಯದ ಕುರಿತಾಗಿ ಬೈಬಲ್ ತಿಳಿಸುತ್ತದೆ. ಆದಾಗಲೂ, ಅಂತಹ ಒಂದು ಆಹ್ವಾನವಿಲ್ಲದ ಪ್ರತ್ಯಕ್ಷತೆಯು, ಒಂದು ವಧಾರ್ಹವಾದ ಅಪರಾಧವಾಗಸಾಧ್ಯವಿತ್ತು! ಎಸ್ತೇರಳು ದೇವರ ಸಹಾಯಕ್ಕಾಗಿ ತೀವ್ರವಾಗಿ ಪ್ರಾರ್ಥಿಸಿದಳೆಂಬುದರಲ್ಲಿ ಸಂದೇಹವಿಲ್ಲ. ಆದರೆ, “ರಾಜವಸ್ತ್ರಭೂಷಿತಳಾಗಿ”ರುವ—ಸಂದರ್ಭಕ್ಕೆ ಯೋಗ್ಯವಾದ ಒಂದು ರೀತಿಯಲ್ಲಿ—ಮೂಲಕ ಅವಳು ತನ್ನ ತೋರಿಕೆಗೂ ಗಮನವನ್ನು ಕೊಟ್ಟಳು! ಮತ್ತು “ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯೆ”ತೋರಿದನು.—ಎಸ್ತೇರಳು 5:1, 2.
ಆಕರ್ಷಕವಾದರೂ ಸಭ್ಯ ರೀತಿಯಲ್ಲಿ ಉಡುಪನ್ನು ಧರಿಸಿರುವುದು, ಒಂದು ಉದ್ಯೋಗದ ಇಂಟರ್‌ವ್ಯೂನಲ್ಲಿ ಒಂದು ಒಳ್ಳೆಯ ಪ್ರಭಾವವನ್ನು ಬೀರಲು ನಿಮಗೆ ಸಹಾಯ ಮಾಡಬಹುದು. ವೃತ್ತಿ ವಿಕಸನಾ ಕೇಂದ್ರದ ನಿರ್ದೇಶಕರಾದ ವಿಕಿ ಎಲ್. ಬಾಮ್ ಅವಲೋಕಿಸುವುದು: “ಕೆಲವು ಸ್ತ್ರೀಯರು ಒಂದು ಇಂಟರ್‌ವ್ಯೂಗೆ ಹೋಗುವಾಗ ಗಲಿಬಿಲಿಗೊಳ್ಳುತ್ತಾರೆ. ಅದು ಡೇಟಿಂಗ್‌ಗೆ ಹೋದಂತೆ ಇದೆ ಎಂದು ಅವರು ನೆನಸುತ್ತಾರೆ ಮತ್ತು ಅವರು ಮೋಹಕರಾಗಿ ತೋರಿಬರುತ್ತಾರೆ.” ಫಲಿತಾಂಶಗಳೇನು? “ಅದು ನಿಮ್ಮ ವೃತ್ತಿಪರತೆಯನ್ನು ತೆಗೆದುಹಾಕುತ್ತದೆ.” “ಬಿಗಿಯಾಗಿರುವ ಅಥವಾ ಅಶ್ಲೀಲಭಾವಸೂಚಕ ವಸ್ತ್ರಗಳನ್ನು” ಧರಿಸದಂತೆ ಅವರು ಸಲಹೆಕೊಡುತ್ತಾರೆ.
ಉದ್ಯೋಗವನ್ನು ಹುಡುಕುತ್ತಿರುವಾಗ, ಯುವ ಪುರುಷರು ಕೂಡ ಸುವ್ಯವಸ್ಥಿತ ಉಡುಪನ್ನು ಧರಿಸಲು ಪ್ರಯತ್ನಿಸಬೇಕು. ಜಾನ್ ಟಿ. ಮಲೈ ಗಮನಿಸುವುದೇನಂದರೆ, ವಾಣಿಜ್ಯೋದ್ಯಮಿಗಳು “ತಮ್ಮ ಕೂದಲನ್ನು ಬಾಚಿಕೊಂಡು, ತಮ್ಮ ಬೂಟುಗಳನ್ನು ಮಿರುಗುವಂತೆ ಮಾಡುತ್ತಾರೆ. ಮತ್ತು ಬೇರೆ ಪುರುಷರಿಂದಲೂ ಅವರು ಅದನ್ನೇ ನಿರೀಕ್ಷಿಸುತ್ತಾರೆ.”
ಅಸಭ್ಯವಾದ ಉಡುಗೆಯಾದರೊ, ಇತರರೊಂದಿಗಿನ ನಿಮ್ಮ ಸಂಬಂಧಗಳನ್ನು ಹಾನಿಗೊಳಿಸಬಲ್ಲದು. “ಒಂದು ಆಳಕತ್ತಿನ ಮೇಲಂಗಿ, ಗಿಡ್ಡ ಷರಾಯಿಗಳು, ಬಿಗಿಯಾದ ಜೀನ್ಸ್, ಅಥವಾ ಬ್ರಾ ಹಾಕದಿರುವುದು” ಗಂಡಸರಿಂದ ಒಂದು ಲೈಂಗಿಕ ಪ್ರಚೋದಕವಾಗಿ ಅರ್ಥೈಸಲ್ಪಡಬಹುದೆಂದು ತೋರಿಸಿದ, ತರುಣಾವಸ್ಥೆಯಲ್ಲಿರುವವರ ನಡುವೆ ಮಾಡಲ್ಪಟ್ಟ ಒಂದು ಸಮೀಕ್ಷೆಗೆ ಸೈಕೊಲೊಜಿ ಟುಡೇ ಸೂಚಿಸಿತು. ಒಬ್ಬ ಯುವ ಪುರುಷನು ನಿವೇದಿಸಿದ್ದು: “ಯುವ ಸ್ತ್ರೀಯರು ಉಡುಪನ್ನು ಧರಿಸುವ ವಿಧವನ್ನು ನಾನು ನೋಡುವಾಗ, ಅವರ ಕುರಿತಾಗಿ ಕೇವಲ ಶುದ್ಧವಾದ ವಿಚಾರಗಳನ್ನು ಯೋಚಿಸಲು ನನಗೆ ವೈಯಕ್ತಿಕವಾಗಿ ಕಷ್ಟವಾಗುತ್ತದೆ.” ಸಭ್ಯ ಉಡುಗೆಯು, ನಿಮ್ಮ ಆಂತರಿಕ ಗುಣಗಳನ್ನು ಜನರು ಗಣ್ಯಮಾಡುವಂತೆ ಅನುಮತಿಸುತ್ತದೆ. ಒಂದು ನಿರ್ದಿಷ್ಟ ಉಡುಪು ಸಭ್ಯವೊ ಅಲ್ಲವೊ ಎಂಬ ವಿಷಯದಲ್ಲಿ ನೀವು ಅನಿಶ್ಚಿತರಾಗಿರುವಲ್ಲಿ, ಸಲಹೆಗಾಗಿ ನಿಮ್ಮ ಹೆತ್ತವರನ್ನು ಕೇಳಿರಿ.
“ಆಂತರಿಕ ಮನುಷ್ಯ”ನನ್ನು ಉಡಿಸುವುದು
ಕ್ರೈಸ್ತರ ಅಲಂಕಾರವು “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣ”ವಾಗಿರುವಂತೆ ಅಪೊಸ್ತಲ ಪೇತ್ರನು ಅವರಿಗೆ ಉತ್ತೇಜಿಸಿದನು. “ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ”—ಹೌದು, ಮತ್ತು ಇತರರ ದೃಷ್ಟಿಯಲ್ಲೂ ಬೆಲೆಯುಳ್ಳದ್ದಾಗಿದೆ! (1 ಪೇತ್ರ 3:4) ಫ್ಯಾಶನ್‌ದಾಯಕ ಉಡುಪು ನಿಮ್ಮ ಸಮಾನಸ್ಥರಲ್ಲಿ ಕೆಲವರನ್ನು ಬೆರಗುಗೊಳಿಸಬಹುದು. ಆದರೆ ಉಡುಪುಗಳು ಮನಸ್ಸುಗಳನ್ನು ಗೆಲ್ಲುವುದಿಲ್ಲ ಅಥವಾ ನಿಜ ಸ್ನೇಹಿತರನ್ನು ಮಾಡಿಕೊಡುವುದಿಲ್ಲ. ಇದು “ಆಂತರಿಕ ಮನುಷ್ಯ”ನನ್ನು ಉಡಿಸುವುದರಿಂದ—ನೀವು ಅಂತರಂಗದಲ್ಲಿ ಆಗಿರುವ ವ್ಯಕ್ತಿಯ ಮೇಲೆ ಕೆಲಸಮಾಡುವುದು—ಸಾಧಿಸಲ್ಪಡುತ್ತದೆ. (2 ಕೊರಿಂಥ 4:16, ದ ಜೆರೂಸಲೇಮ್ ಬೈಬಲ್) ಆಂತರಿಕವಾಗಿ ಸುಂದರನಾಗಿರುವ ಒಬ್ಬ ವ್ಯಕ್ತಿಯು, ಅವನ ಅಥವಾ ಅವಳ ಉಡುಪುಗಳು ಇತ್ತೀಚಿನ ಶೈಲಿಯದ್ದು ಅಥವಾ ಮೂರ್ಖ ಡಿಸೈನರ್ ಲೇಬಲ್‌ಗಳಿಂದ “ಅಚ್ಚೊತ್ತಲ್ಪ”ಟ್ಟಿರದಿದ್ದರೂ, ಯಾವಾಗಲೂ ಇತರರಿಗೆ ಆಕರ್ಷಕ ವ್ಯಕ್ತಿಯಾಗಿರುವನು.
ಮುಂದೆ ಯಾವ ಗೀಳು ಯುವ ಜನರನ್ನು ಅಂಗಡಿಗಳಿಗೆ ದಾಳಿಯಿಡುವಂತೆ ಮಾಡುವುದೆಂದು ಯಾರಿಗೆ ಗೊತ್ತು. ನೀವಾದರೋ, ಸ್ವತಃ ನಿಮ್ಮ ಕುರಿತಾಗಿ ಯೋಚಿಸಸಾಧ್ಯವಿದೆ. ಉಡುಪಿನ ಉಚ್ಚ ಮಟ್ಟಗಳಿಗೆ ಅಂಟಿಕೊಳ್ಳಿರಿ. ಲೈಂಗಿಕತೆಯನ್ನು ಎತ್ತಿತೋರಿಸುವ ಗೀಳಿನ ಉಡುಗೆ ಮತ್ತು ಉಡುಪುಗಳಿಂದ ದೂರವಿರಿ. ಫ್ಯಾಶನಿನ ಗೆದ್ದೆತ್ತಿನ ಬಾಲವನ್ನು ಹಿಡಿಯುವವರಲ್ಲಿ ಮೊದಲನೆಯವರಾಗಿರದೆ—ಕೊನೆಯವರೂ ಆಗಿರಲೇಬೇಕೆಂದೇನಿಲ್ಲ—ಹಾಳತದ ಪಕ್ಷದಲ್ಲಿರಿ. ಬಾಳುವಂತಹ ಗುಣಮಟ್ಟದ ವಸ್ತ್ರಗಳಿಗಾಗಿ ಹುಡುಕಿರಿ—ಬೇಗನೆ ಹಳೆಯ ಫ್ಯಾಶನ್‌ನದ್ದಾಗಿ ಹೋಗುವಂತಹ ವಸ್ತ್ರಗಳಿಗಾಗಿ ಅಲ್ಲ. ವಾರ್ತಾಮಾಧ್ಯಮದಿಂದ ಅಥವಾ ಸಮಾನಸ್ಥರಿಂದ ಕಲ್ಪಿಸಲ್ಪಟ್ಟ ಯಾವುದೋ ಪ್ರತೀಕವನ್ನಲ್ಲ, ಬದಲಾಗಿ ನಿಮ್ಮ ನಿಜ ಸ್ವರೂಪವನ್ನು ಪ್ರದರ್ಶಿಸುತ್ತಾ, ನಿಮ್ಮ ಉಡುಪುಗಳು ನಿಮ್ಮ ಕುರಿತಾಗಿ ಸರಿಯಾದ ಸಂದೇಶವನ್ನು ವ್ಯಕ್ತಪಡಿಸುತ್ತವೆಂಬುದರ ಕುರಿತಾಗಿ ಖಚಿತರಾಗಿರಿ!
ಚರ್ಚೆಗಾಗಿ ಪ್ರಶ್ನೆಗಳು
◻ ಉಡುಪುಗಳು ಒಂದು ಸಂದೇಶವನ್ನು ವ್ಯಕ್ತಪಡಿಸುತ್ತವೆ ಹೇಗೆ?
◻ ಕೆಲವು ಯುವ ಜನರು ತಮ್ಮ ಉಡುಪಿನ ಆಯ್ಕೆಯಲ್ಲಿ ವಿಲಕ್ಷಣತೆಯ ಕಡೆಗೆ ಓಲುವುದೇಕೆ?
◻ ಉಡುಪು ಆಯ್ಕೆಯ ಸಂಬಂಧದಲ್ಲಿ ನೀವು ನಿಮ್ಮ ಸಮಾನಸ್ಥರಿಂದ ಎಷ್ಟು ಪ್ರಭಾವಿಸಲ್ಪಡುತ್ತೀರಿ?
◻ ಯಾವಾಗಲೂ ಸ್ಟೈಲಿಗನುಸಾರ ಇರಲು ಪ್ರಯತ್ನಿಸುವುದರಿಂದಾಗುವ ಕೆಲವು ನಷ್ಟಗಳು ಯಾವುವು?
◻ ಒಂದು ಸ್ಟೈಲ್ ‘ಸಭ್ಯವೂ ಸುವ್ಯವಸ್ಥಿತವೂ’ ಆಗಿದೆಯೊ ಎಂಬುದನ್ನು ಯಾವುದು ನಿರ್ಧರಿಸುತ್ತದೆ?
[ಪುಟ 05 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನೀವೇನನ್ನು ಧರಿಸುತ್ತೀರೊ ಅದು, ನೀವು ನಿಜವಾಗಿ ಯಾರಾಗಿದ್ದೀರಿ ಮತ್ತು ನಿಮ್ಮ ಕುರಿತಾಗಿ ನಿಮಗೆ ಹೇಗನಿಸುತ್ತದೆ ಎಂಬುದಾಗಿದೆ”
[ಪುಟ 91 ರಲ್ಲಿರುವ ಚಿತ್ರ]
ತಮ್ಮ ಮಕ್ಕಳು ಏನು ಧರಿಸುತ್ತಾರೊ ಅದರ ಕುರಿತಾಗಿ ಹೆತ್ತವರು ಅನೇಕ ವೇಳೆ ಅವರೊಂದಿಗೆ ಘರ್ಷಿಸುತ್ತಾರೆ. ಹೆತ್ತವರು ಕೇವಲ ಹಳೆಯ ಫ್ಯಾಶನಿನವರಾಗಿರುತ್ತಾರೊ?
[ಪುಟ 92 ರಲ್ಲಿರುವ ಚಿತ್ರ]
ಅನೇಕ ಯುವ ಜನರು ವಿಕಾರವಾದ ಉಡುಗೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ದೃಢಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ
[ಪುಟ 93 ರಲ್ಲಿರುವ ಚಿತ್ರಗಳು]
ಪರಿಸ್ಥಿತಿಗೆ ಯೋಗ್ಯವಾದ ರೀತಿಯಲ್ಲಿ ಉಡುಪನ್ನು ಧರಿಸಿರಿ. ಉಡುಪು ನಿಮ್ಮ ಕುರಿತಾಗಿ ಒಂದು ಸಂದೇಶವನ್ನು ವ್ಯಕ್ತಪಡಿಸುತ್ತದೆ!