ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೈಂಗಿಕತೆ ಮತ್ತು ನೈತಿಕತೆಗಳು

ಲೈಂಗಿಕತೆ ಮತ್ತು ನೈತಿಕತೆಗಳು

ವಿಭಾಗ 6

ಲೈಂಗಿಕತೆ ಮತ್ತು ನೈತಿಕತೆಗಳು

ಅನೇಕ ಯುವ ಜನರು, ಮೊದಲಾಗಿ ಪುಸ್ತಕದ ಈ ವಿಭಾಗವನ್ನು ತೆರೆದುನೋಡುತ್ತಾರೆಂಬುದು ನಿಸ್ಸಂಶಯ. ಏಕೆ? ಏಕೆಂದರೆ ಬೇರೆ ಯಾವುದೇ ವಿಷಯವು, ಲೈಂಗಿಕತೆ ಮತ್ತು ನೈತಿಕತೆಗಳು ಎಬ್ಬಿಸುವಷ್ಟು ಹೆಚ್ಚು ಪ್ರಶ್ನೆಗಳನ್ನು ಹಾಗೂ ಅದರಷ್ಟು ಅಧಿಕ ವಾಗ್ವಾದವನ್ನು ಮತ್ತು ಗೊಂದಲವನ್ನು ಉಂಟುಮಾಡುವುದಿಲ್ಲ. ಹಾಗಿದ್ದರೂ, ನೀತಿಶಾಸ್ತ್ರವು ಲೈಂಗಿಕ ನಡವಳಿಕೆಗಿಂತಲೂ ಹೆಚ್ಚಾದುದನ್ನು ಒಳಗೊಳ್ಳುತ್ತದೆ. ಉದಾಹರಣೆಗಾಗಿ, ಸುಳ್ಳುಹೇಳುವ ಮತ್ತು ವಂಚಿಸುವ ಯುವ ಜನರನ್ನು ನೈತಿಕರೆಂದು ನೀವು ಕರೆಯಸಾಧ್ಯವಿದೆಯೊ? ಅಥವಾ ಅಪ್ರಾಮಾಣಿಕತೆಯು ಪರವಾಗಿಲ್ಲ ಎಂಬಂತಹ ಸನ್ನಿವೇಶಗಳು ಇವೆಯೊ? ಸಂತೋಷಕರವಾಗಿ, ನೀತಿಶಾಸ್ತ್ರದ ಈ ವಿಷಯಗಳ ಕುರಿತು ಬೈಬಲು ನಮಗೆ, ಕೆಲವು ನೇರವಾದ ಹಾಗೂ ಪ್ರಾಯೋಗಿಕವಾದ ಮಾರ್ಗದರ್ಶನಗಳನ್ನು ಕೊಡುತ್ತದೆ.