ಮುಷ್ಟಿಮೈಥುನ—ನಾನು ಆ ಪ್ರಚೋದನೆಯನ್ನು ಹೇಗೆ ಹೊಡೆದೋಡಿಸಬಲ್ಲೆ?
ಅಧ್ಯಾಯ 26
ಮುಷ್ಟಿಮೈಥುನ—ನಾನು ಆ ಪ್ರಚೋದನೆಯನ್ನು ಹೇಗೆ ಹೊಡೆದೋಡಿಸಬಲ್ಲೆ?
“ಅದೊಂದು ಅತ್ಯಂತ ಪ್ರಬಲವಾದ ಚಟವಾಗಿದೆ” ಎಂದು ಯುವ ವ್ಯಕ್ತಿಯೊಬ್ಬನು ಹೇಳಿದನು. ಅವನು 15 ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ಮುಷ್ಟಿಮೈಥುನದೊಂದಿಗೆ ಹೋರಾಟನಡೆಸಿದನು. “ಯಾವುದೇ ಅಮಲೌಷಧ ಅಥವಾ ಮದ್ಯಸಾರ ಪಾನೀಯದಂತೆಯೇ, ಅದು ಅಭ್ಯಾಸವನ್ನು ರೂಪಿಸುವಂಥದ್ದಾಗಿರಬಲ್ಲದು.”
ಆದರೂ, ತನ್ನ ಬಯಕೆಗಳು ಕಟುವಾದ ಮಾಲೀಕನಂತಾಗಲು ಅಪೊಸ್ತಲ ಪೌಲನು ಅನುಮತಿಸಲಿಲ್ಲ. ಅದಕ್ಕೆ ಬದಲಾಗಿ, ಅವನು ಬರೆದುದು: “ನನ್ನ ಮೈಯನ್ನು [ಶಾರೀರಿಕ ಬಯಕೆಗಳನ್ನು] ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ಅವನು ಸ್ವತಃ ಕಟ್ಟುನಿಟ್ಟಾಗಿ ನಡೆದುಕೊಂಡನು! ತದ್ರೀತಿಯ ಒಂದು ಪ್ರಯತ್ನವು, ಮುಷ್ಟಿಮೈಥುನದಿಂದ ಸ್ವತಂತ್ರರಾಗುವಂತೆ ಯಾರನ್ನಾದರೂ ಶಕ್ತರನ್ನಾಗಿ ಮಾಡುವುದು.
“ಕ್ರಿಯೆಗೈಯಲಿಕ್ಕಾಗಿ ನಿಮ್ಮ ಮನಸ್ಸುಗಳನ್ನು ಸಿದ್ಧಪಡಿಸಿಕೊಳ್ಳಿರಿ”
ಉದ್ವೇಗ ಮತ್ತು ವ್ಯಾಕುಲತೆಯಿಂದ ಮುಕ್ತರಾಗಲಿಕ್ಕಾಗಿ ಅನೇಕರು ಮುಷ್ಟಿಮೈಥುನ ಮಾಡುತ್ತಾರೆ. ಮುಷ್ಟಿಮೈಥುನವಾದರೋ, ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಒಂದು ಬಾಲಿಶ ವಿಧವಾಗಿದೆ. (1 ಕೊರಿಂಥ 13:11ನ್ನು ಹೋಲಿಸಿರಿ.) “ಯೋಚಿಸುವ ಸಾಮರ್ಥ್ಯ”ವನ್ನು (NW) ತೋರಿಸಿ, ಸಮಸ್ಯೆಯನ್ನೇ ಆಕ್ರಮಿಸುವುದು ಅತ್ಯುತ್ತಮವಾದದ್ದಾಗಿದೆ. (ಜ್ಞಾನೋಕ್ತಿ 1:4) ಸಮಸ್ಯೆಗಳು ಹಾಗೂ ಆಶಾಭಂಗಗಳು ನಮ್ಮನ್ನು ಪೂರ್ತಿಯಾಗಿ ಮುಳುಗಿಸಿಬಿಡುವಂತೆ ತೋರುವಾಗ, “ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ.”—1 ಪೇತ್ರ 5:6, 7.
ಒಂದುವೇಳೆ ಲೈಂಗಿಕವಾಗಿ ಪ್ರಚೋದನಾತ್ಮಕವಾಗಿರುವ ಯಾವುದಾದರೂ ವಿಷಯವನ್ನು ನೀವು ಆಕಸ್ಮಿಕವಾಗಿ ನೋಡುವುದಾದರೆ ಅಥವಾ ಕೇಳಿಸಿಕೊಳ್ಳುವುದಾದರೆ ಆಗೇನು? ಬೈಬಲು ಹೀಗೆ ಶಿಫಾರಸ್ಸು ಮಾಡುತ್ತದೆ: “ಕ್ರಿಯೆಗೈಯಲಿಕ್ಕಾಗಿ ನಿಮ್ಮ ಮನಸ್ಸುಗಳನ್ನು ಸಿದ್ಧಪಡಿಸಿಕೊಳ್ಳಿರಿ; ಆತ್ಮಸಂಯಮವುಳ್ಳವರಾಗಿರಿ.” (1 ಪೇತ್ರ 1:13, ನ್ಯೂ ಇಂಟರ್‌ನ್ಯಾಷನಲ್ ವರ್ಷನ್) ನಿಮ್ಮ ಮನಸ್ಸನ್ನು ಪ್ರಯೋಗಿಸಿರಿ ಮತ್ತು ಅನೈತಿಕ ಆಲೋಚನೆಯನ್ನು ತಿರಸ್ಕರಿಸಿರಿ. ಆ ಉದ್ರೇಕವು ಬೇಗನೆ ಅಡಗಿಹೋಗುವುದು.
ಆದರೂ, ಒಬ್ಬನು ರಾತ್ರಿಯಲ್ಲಿ ಒಬ್ಬೊಂಟಿಗನಾಗಿರುವಾಗ, ಕೆಟ್ಟ ಆಲೋಚನೆಗಳನ್ನು ತಿರಸ್ಕರಿಸುವುದು ವಿಶೇಷವಾಗಿ ಕಷ್ಟಕರವಾಗಿರುತ್ತದೆ. ಒಬ್ಬ ಯುವತಿಯು ಸಲಹೆ ನೀಡುವುದು: ಫಿಲಿಪ್ಪಿ 4:8.
“ಮಾಡಲಿಕ್ಕಿರುವ ಅತ್ಯುತ್ತಮ ವಿಷಯವು ಏನೆಂದರೆ, ಹಾಸಿಗೆಯಿಂದ ಆ ಕೂಡಲೆ ಎದ್ದುಹೋಗಿ, ಯಾವುದಾದರೊಂದು ರೀತಿಯ ಕೆಲಸದಲ್ಲಿ ಕಾರ್ಯಮಗ್ನರಾಗುವುದು, ಅಥವಾ ಸ್ವಲ್ಪ ತಿಂಡಿಯನ್ನು ತಿನ್ನುವುದೇ ಆಗಿದೆ. ಇದರಿಂದ ನಿಮ್ಮ ಮನಸ್ಸು ಬೇರೆ ವಿಷಯಗಳ ಕಡೆಗೆ ತಿರುಗುತ್ತದೆ.” ಹೌದು, ನಿಮ್ಮನ್ನು ನೀವೇ, ‘ಯಾವ ವಿಷಯಗಳು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿವೆಯೋ . . . ಅವೆಲ್ಲವುಗಳನ್ನು ಪರಿಗಣಿಸಲು’ ಒತ್ತಾಯಿಸಿಕೊಳ್ಳಿರಿ.—ನಿದ್ರಿಸುವ ವಿಷಯದಲ್ಲಿ ನಿಮಗೆ ಕಷ್ಟವಿರುವಾಗ, ನಂಬಿಗಸ್ತ ರಾಜನಾದ ದಾವೀದನನ್ನು ಅನುಕರಿಸಲು ಪ್ರಯತ್ನಿಸಿರಿ. ಅವನು ಬರೆದುದು: “ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು [ದೇವರನ್ನು] ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.” (ಕೀರ್ತನೆ 63:6) ದೇವರ ಹಾಗೂ ಆತನ ಗುಣಗಳ ಕುರಿತಾಗಿ ಪರ್ಯಾಲೋಚಿಸುವಂತೆ ನಿಮ್ಮ ಮನಸ್ಸನ್ನು ಒತ್ತಾಯಿಸಿಕೊಳ್ಳುವುದು, ಅನೇಕವೇಳೆ ಆ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕುತ್ತದೆ. ಈ ಅಶುದ್ಧ ಅಭ್ಯಾಸವನ್ನು ದೇವರು ಹೇಗೆ ವೀಕ್ಷಿಸುತ್ತಾನೆ ಎಂಬುದರ ಕುರಿತು ನೀವು ಆಲೋಚಿಸುತ್ತಾ ಇರುವುದಾದರೆ, ಅದು ಸಹ ಸಹಾಯ ಮಾಡುತ್ತದೆ.—ಕೀರ್ತನೆ 97:10.
ತಡೆಗಟ್ಟುವ ಸೂಕ್ತಕ್ರಮಗಳನ್ನು ಕೈಕೊಳ್ಳಿರಿ
“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎಂಬುದಾಗಿ ಪ್ರೇರಿತನಾದ ಜ್ಞಾನಿಯು ಬರೆದನು. (ಜ್ಞಾನೋಕ್ತಿ 22:3) ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವ ಮೂಲಕ ನೀವು ನಿಮ್ಮನ್ನು ಜಾಣರಾಗಿ ತೋರ್ಪಡಿಸಬಲ್ಲಿರಿ. ಉದಾಹರಣೆಗೆ, ನಿರ್ದಿಷ್ಟ ಚಟುವಟಿಕೆಗಳಲ್ಲಿ ಒಳಗೂಡುವುದು, ಮೈಗಂಟಿಕೊಳ್ಳುವ ಬಿಗಿಯುಡುಪುಗಳನ್ನು ಧರಿಸುವುದು, ಅಥವಾ ನಿರ್ದಿಷ್ಟ ಆಹಾರಗಳನ್ನು ತಿನ್ನವುದು, ನಿಮ್ಮನ್ನು ಲೈಂಗಿಕವಾಗಿ ಪ್ರಚೋದಿತರನ್ನಾಗಿ ಮಾಡಿದೆ ಎಂಬುದನ್ನು ನೀವು ಕಂಡುಕೊಳ್ಳುವಲ್ಲಿ, ಅಂತಹವುಗಳನ್ನು ಖಂಡಿತವಾಗಿಯೂ ತೊರೆಯಿರಿ. ಉದಾಹರಣೆಗೆ, ಮದ್ಯಸಾರ ಪಾನೀಯಗಳು ಒಬ್ಬನ ಸಂಯಮ ಪ್ರವೃತ್ತಿಗಳನ್ನು ಕಡಿಮೆಗೊಳಿಸಿ, ಆತ್ಮಸಂಯಮವನ್ನು ಹೆಚ್ಚು ಕಷ್ಟಕರವಾಗಿ ಮಾಡಸಾಧ್ಯವಿದೆ. ಹಾಗೂ, ವಿಷಯಲಂಪಟ ಮುಖ್ಯವಿಷಯಗಳಿರುವ ಯಾವುದೇ ವಾಚನ ವಿಷಯವನ್ನು, ಟಿವಿ ಕಾರ್ಯಕ್ರಮಗಳನ್ನು, ಅಥವಾ ಚಲನ ಚಿತ್ರಗಳನ್ನು ಮಾರಕವ್ಯಾಧಿಯಂತೆ ದೂರವಿರಿಸಿರಿ. “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು” ಎಂಬುದಾಗಿ ಕೀರ್ತನೆಗಾರನು ಪ್ರಾರ್ಥಿಸಿದನು.—ಕೀರ್ತನೆ 119:37.
ಜ್ಞಾನೋಕ್ತಿ 24:10 ಎಚ್ಚರಿಸುತ್ತದೆ. ಆದುದರಿಂದ ದೀರ್ಘ ಕಾಲಾವಧಿಗಳ ವರೆಗೆ ಒಬ್ಬೊಂಟಿಗರಾಗಿ ಇರುವುದರಿಂದ ದೂರವಿರಿ. ಅನೈತಿಕ ಆಲೋಚನೆಗಳ ಕಡೆಗೆ ಆಕರ್ಷಿತರಾಗಲು ಕಡಿಮೆ ಅವಕಾಶವನ್ನು ಕೊಡುತ್ತಾ, ಪಂಥಾಹ್ವಾನದಾಯಕ ಜವಾಬ್ದಾರಿಗಳಲ್ಲಿ ನಿಮ್ಮ ಮನಸ್ಸುಗಳನ್ನು ಒಳಗೂಡಿಸಿಕೊಳ್ಳುವಂತೆ ಮಾಡುವ, ಭಕ್ತಿವೃದ್ಧಿಮಾಡುವ ಚಟುವಟಿಕೆಗಳನ್ನು ಮಾಡುವ ಯೋಜನೆಮಾಡಿರಿ.
ನೀವು ವಿಶೇಷವಾಗಿ ಸುಲಭಭೇದ್ಯರಾಗಿರುವಂತಹ ಸಮಯಗಳಿಗಾಗಿ, ತಡೆಗಟ್ಟುವ ಸೂಕ್ತಕ್ರಮಗಳನ್ನು ಸಹ ಕೈಕೊಳ್ಳಸಾಧ್ಯವಿದೆ. ತಿಂಗಳಿನ ನಿರ್ದಿಷ್ಟ ಸಮಯಗಳಲ್ಲಿ, ತನ್ನ ಲೈಂಗಿಕ ಬಯಕೆಗಳು ಹೆಚ್ಚು ತೀವ್ರವಾಗಿ ಪರಿಣಮಿಸುತ್ತವೆಂದು ಯುವತಿಯೊಬ್ಬಳು ಕಂಡುಕೊಳ್ಳಬಹುದು. ಅಥವಾ ಒಬ್ಬನು ಭಾವನಾತ್ಮಕವಾಗಿ ಘಾಸಿಗೊಂಡಿರಬಹುದು ಅಥವಾ ಖಿನ್ನನಾಗಿರಬಹುದು. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ” ಎಂದುಒಂದು ಆತ್ಮಿಕ ಆಕ್ರಮಣ
27 ವರ್ಷ ಪ್ರಾಯದ ಒಬ್ಬ ಪುರುಷನು, 11 ವರ್ಷ ಪ್ರಾಯದವನಿದ್ದಾಗಿನಿಂದ ಈ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸಿ, ಕೊನೆಯದಾಗಿ ವಿಜಯವನ್ನು ಪಡೆಯಲು ಶಕ್ತನಾದನು. “ಅದಕ್ಕಿದ್ದ ಮಾರ್ಗವು ಆಕ್ರಮಣವೇ ಆಗಿತ್ತು” ಎಂದು ಅವನು ವಿವರಿಸಿದನು. “ನಾನು ಬೈಬಲನ್ನು ಓದಿದೆ. ಯಾವುದೇ ವಿನಾಯಿತಿಯಿಲ್ಲದೆ ನಾನು ಪ್ರತಿಯೊಂದು ದಿನ ಕಡಿಮೆಪಕ್ಷ ಎರಡು ಅಧ್ಯಾಯಗಳನ್ನು ಓದಿದೆ.” ಅವನು ಇದನ್ನು ಮೂರು ವರ್ಷಗಳಿಂದ, ಎಂದೂ ಬಿಡದೆ ಮುಂದುವರಿಸಿದ್ದಾನೆ. ಇನ್ನೊಬ್ಬ ಕ್ರೈಸ್ತನು ಬುದ್ಧಿವಾದ ನೀಡುವುದು: “ಮಲಗುವ ಮೊದಲು, ಆತ್ಮಿಕ ವಿಷಯಗಳಿಗೆ ಸಂಬಂಧಪಟ್ಟ ಏನನ್ನಾದರೂ ಓದಿರಿ. ಆ ದಿನದ ಅಂತಿಮ ಆಲೋಚನೆಯು, ಒಂದು ಆತ್ಮಿಕ ಆಲೋಚನೆಯಾಗಿರುವುದು ಅತ್ಯಂತ ಪ್ರಾಮುಖ್ಯವಾದದ್ದಾಗಿದೆ. ಈ ಸಮಯದಲ್ಲಿ ಪ್ರಾರ್ಥಿಸುವುದು ಸಹ ಅತ್ಯಂತ ಸಹಾಯಕಾರಿಯಾಗಿದೆ.”
“ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟಿರು”ವುದು (NW)—ಇತರರಿಗೆ ಬೈಬಲನ್ನು ಕಲಿಸುವ ಕೆಲಸ—ಸಹ ಸಹಾಯ ಮಾಡುತ್ತದೆ. (1 ಕೊರಿಂಥ 15:58) ಮುಷ್ಟಿಮೈಥುನವನ್ನು ಜಯಿಸಿದ ಒಬ್ಬ ಸ್ತ್ರೀಯು ಹೇಳಿದ್ದು: “ಈಗ ನನಗೆ ಈ ಅಭ್ಯಾಸವನ್ನು ತೊರೆಯಲು ನಿಜವಾಗಿಯೂ ಸಹಾಯ ಮಾಡುವ ಒಂದು ವಿಷಯವು ಯಾವುದೆಂದರೆ, ಒಬ್ಬ ಪೂರ್ಣ ಸಮಯದ ಸೌವಾರ್ತಿಕಳೋಪಾದಿ ನನ್ನ ಮನಸ್ಸು ಹಾಗೂ ಶಕ್ತಿಗಳೆಲ್ಲವೂ, ದೇವರೊಂದಿಗಿನ ಸಮ್ಮತಿಸೂಚಕ ಸಂಬಂಧವನ್ನು ಪಡೆದುಕೊಳ್ಳಲಿಕ್ಕಾಗಿ ಇತರರಿಗೆ ಸಹಾಯ ಮಾಡುವುದರ ಕಡೆಗೆ ತಿರುಗಿರುವುದೇ.”
ಹೃತ್ಪೂರ್ವಕವಾದ ಪ್ರಾರ್ಥನೆಯ ಮೂಲಕ, ನೀವು ದೇವರ ಬಳಿ “ಸಾಮಾನ್ಯವಾದುದಕ್ಕಿಂತಲೂ ಅತೀತವಾದ ಶಕ್ತಿ”ಗಾಗಿ (NW) ಬೇಡಿಕೊಳ್ಳಸಾಧ್ಯವಿದೆ. (2 ಕೊರಿಂಥ 4:7) “ನಿಮ್ಮ ಹೃದಯವನ್ನು ಆತನ [ದೇವರ] ಮುಂದೆ ಬಿಚ್ಚಿರಿ.” (ಕೀರ್ತನೆ 62:8) ಒಬ್ಬ ಯುವತಿಯು ಹೇಳುವುದು: “ಪ್ರಾರ್ಥನೆಯು ತತ್‌ಕ್ಷಣದ ಬಲದ ಬುರುಜಾಗಿದೆ. ಬಯಕೆಯು ಮೇಲೇಳುವಂತಹ ಸಮಯದಲ್ಲಿ ಪ್ರಾರ್ಥಿಸುವುದು, ನಿಜವಾಗಿಯೂ ಸಹಾಯ ಮಾಡುತ್ತದೆ.” ಹಾಗೂ, ಎದ್ದ ನಂತರ, ಆ ದಿನದಾದ್ಯಂತ, ದೇವರ ಬಳಿ ನಿಮ್ಮ ದೃಢಸಂಕಲ್ಪವನ್ನು ವ್ಯಕ್ತಪಡಿಸಿರಿ. ಮತ್ತು ಆತನ ಬಲದಾಯಕ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳಿರಿ.—ಲೂಕ 11:13.
ಇತರರಿಂದ ಸಹಾಯ
ನಿಮ್ಮ ವೈಯಕ್ತಿಕ ಪ್ರಯತ್ನಗಳು ಯಶಸ್ವಿಯಾಗದಿರುವಲ್ಲಿ, ಒಬ್ಬ ಹೆತ್ತವರು ಅಥವಾ ಕ್ರೈಸ್ತ ಹಿರಿಯರೊಬ್ಬರಂತಹ, ಸಹಾಯ ಮಾಡಬಲ್ಲ ಯಾರಾದರೊಂದಿಗೆ ಮಾತಾಡಿರಿ. ಯುವತಿಯರು, ಒಬ್ಬ ಪ್ರೌಢ ಕ್ರೈಸ್ತ ಸ್ತ್ರೀಯ ಬಳಿ ತಮ್ಮ ಮನಸ್ಸನ್ನು ತೋಡಿಕೊಳ್ಳುವುದನ್ನು ಸಹಾಯಕರವಾದದ್ದಾಗಿ ಕಂಡುಕೊಳ್ಳಬಹುದು. (ತೀತ 2:3-5) ನಿರಾಶೆಯ ಹಂತದಲ್ಲಿದ್ದ ಒಬ್ಬ ಯುವ ವ್ಯಕ್ತಿಯು ಹೇಳಿದ್ದು: “ಒಂದು ಸಂಜೆ ಅದರ ಕುರಿತಾಗಿ ನಾನು ನನ್ನ ತಂದೆಯೊಂದಿಗೆ ಖಾಸಗಿಯಾಗಿ ಮಾತಾಡಿದೆ.” ಅವನು ಪ್ರಕಟಪಡಿಸಿದ್ದು: “ನನಗದನ್ನು ತಿಳಿಸಲು ತುಂಬ ಕಷ್ಟಪಡಬೇಕಾಯಿತು. ಅವರೊಂದಿಗೆ ಹೇಳುತ್ತಿರುವಾಗ ನಾನು ಅತ್ತುಬಿಟ್ಟೆ. ನನಗೆ ತುಂಬ ನಾಚಿಕೆಯಾಗಿತ್ತು. ಆದರೆ ಅವರು ಹೇಳಿದ ವಿಷಯವನ್ನು ನಾನೆಂದಿಗೂ ಮರೆಯಲಾರೆ. ತಮ್ಮ ಮುಖದ ಮೇಲೆ ಪುನರಾಶ್ವಾಸನೆಯ ನಸುನಗುವನ್ನು ಬೀರುತ್ತಾ, ಅವರು ಹೇಳಿದ್ದು: ‘ನಿನ್ನ ಕುರಿತು ನಾನು ಹೆಮ್ಮೆಪಡುವಂತೆ ನೀನು ಮಾಡುತ್ತೀ.’ ಆ ಹಂತಕ್ಕೆ ತಲಪಬೇಕಾದಲ್ಲಿ ನಾನು ಏನನ್ನು ಅನುಭವಿಸಬೇಕಾಗಿತ್ತೆಂಬುದು ಅವರಿಗೆ ತಿಳಿದಿತ್ತು. ಬೇರಾವ ಮಾತುಗಳೂ ನನ್ನ ಮನೋಭಾವಗಳನ್ನು ಮತ್ತು ನಿರ್ಧಾರವನ್ನು ಹೆಚ್ಚು ಹುರಿದುಂಬಿಸಸಾಧ್ಯವಿರುತ್ತಿರಲಿಲ್ಲ.
“ತದನಂತರ ನಾನು ‘ತುಂಬ ವಿಪರೀತಕ್ಕೆ ಹೋಗಿರಲಿಲ್ಲ’ ಎಂಬುದನ್ನು ಗ್ರಹಿಸುವಂತೆ ನನಗೆ ಸಹಾಯ ಮಾಡಲಿಕ್ಕಾಗಿ, ನನ್ನ ತಂದೆಯವರು ನನಗೆ ಕೆಲವೊಂದು ಶಾಸ್ತ್ರವಚನಗಳನ್ನು ತೋರಿಸಿದರು” ಎಂದು ಆ ಯುವಕನು ಮುಂದುವರಿಸಿದನು. “ಮತ್ತು ನನ್ನ ತಪ್ಪು ಮಾರ್ಗದ ಗಂಭೀರತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಇನ್ನೂ ಕೆಲವು ಶಾಸ್ತ್ರವಚನಗಳನ್ನು ಅವರು ತೋರಿಸಿದರು. ನಿರ್ದಿಷ್ಟ ಸಮಯದ ವರೆಗೆ ‘ನಿಷ್ಕಳಂಕವಾಗಿರುವಂತೆಯೂ,’ ಈ ವಿಷಯವನ್ನು ಪುನಃ ಒಮ್ಮೆ ಚರ್ಚಿಸೋಣವೆಂದೂ ಅವರು ಹೇಳಿದರು. ನಾನು ಒಂದು ವೇಳೆ ಹಿಂದಿನ ಸ್ಥಿತಿಗೆ ಮರಳುವುದಾದರೂ, ನಾನು ನನ್ನನ್ನು ಘಾಸಿಗೊಳಿಸಿಕೊಳ್ಳದಿರುವಂತೆಯೂ, ಮುಂದಿನ ಬಾರಿ ಅದಕ್ಕೆ ವಶವಾಗದೆ ಸುದೀರ್ಘ ಕಾಲಾವಧಿಯ ವರೆಗೆ ಮುಂದುವರಿಯುವಂತೆಯೂ ಅವರು ನನಗೆ ಹೇಳಿದರು.” ಈ ಸಮಸ್ಯೆಯನ್ನು ಸಂಪೂರ್ಣವಾಗಿ ಜಯಿಸಿದ ಬಳಿಕ, ಆ ಯುವ ವ್ಯಕ್ತಿಯು ಕೂಡಿಸಿದ್ದು: “ಬೇರೆ ಯಾರೋ ಒಬ್ಬರು ನನ್ನ ಸಮಸ್ಯೆಯ ಕುರಿತು ತಿಳಿದಿದ್ದು, ನನಗೆ ಸಹಾಯ ಮಾಡುತ್ತಿದ್ದದ್ದು, ಅತ್ಯಂತ ದೊಡ್ಡ ಪ್ರಯೋಜನವಾಗಿತ್ತು.”
ಹಿಂದಿನ ಸ್ಥಿತಿಗೆ ಮರಳುವುದರೊಂದಿಗೆ ವ್ಯವಹರಿಸುವುದು
ಈ ಅಭ್ಯಾಸವನ್ನು ಜಯಿಸಲು ಕಠಿನವಾಗಿ ಕಾರ್ಯನಡಿಸಿದ ಬಳಿಕ, ಒಬ್ಬ ಯುವ ವ್ಯಕ್ತಿಯು ಪುನಃ ಹಿಂದಿನ ಸ್ಥಿತಿಗೆ ಮರಳಿದನು. ಅವನು ಒಪ್ಪಿಕೊಂಡದ್ದು: “ಅದು ನನ್ನ ಮೇಲೆ ಜಜ್ಜುವಂತಹ ಭಾರವನ್ನು ಹೇರಿದಂತಿತ್ತು. ನಾನು ಬಹಳ ಅಯೋಗ್ಯನೆಂದು ಭಾವಿಸಿದೆ. ತದನಂತರ ನಾನು ಹೀಗೆ ವಿಚಾರಮಾಡಿದೆ: ‘ನಾನೀಗಾಗಲೇ ವಿಪರೀತಕ್ಕೆ ಹೋಗಿದ್ದೇನೆ. ಹೇಗಾದರೂ ನನಗೆ ಯೆಹೋವನ ಅನುಗ್ರಹ ಇಲ್ಲ, ಆದುದರಿಂದ ನಾನು ಸ್ವತಃ ಏಕೆ ಕಟ್ಟುನಿಟ್ಟಾಗಿ ಇರುವಂತೆ ನೋಡಿಕೊಳ್ಳಬೇಕು?’” ಹಾಗಿದ್ದರೂ, ಪುನಃ ಹಿಂದಿನ ಸ್ಥಿತಿಗೆ ಮರಳುವುದು, ಒಬ್ಬನು ಹೋರಾಟದಲ್ಲಿ ಸೋತಿದ್ದಾನೆ ಎಂಬುದನ್ನು ಅರ್ಥೈಸುವುದಿಲ್ಲ. 19 ವರ್ಷ ಪ್ರಾಯದ ಒಬ್ಬ ಹುಡುಗಿಯು ಜ್ಞಾಪಿಸಿಕೊಳ್ಳುವುದು: “ಆರಂಭದಲ್ಲಿ ಅದು ಪ್ರತಿ ರಾತ್ರಿ ಸಂಭವಿಸಿತು. ತದನಂತರ ನಾನು ಯೆಹೋವನ ಮೇಲೆ ಹೆಚ್ಚಾಗಿ ಆತುಕೊಳ್ಳಲಾರಂಭಿಸಿದೆ.
ಮತ್ತು ಆತನ ಆತ್ಮದ ಸಹಾಯದಿಂದ ಈಗ ನಾನು ವರ್ಷವೊಂದಕ್ಕೆ ಕೇವಲ ಆರು ಬಾರಿ ಸೋತಿರಬಹುದು. ತದನಂತರ ನನಗೆ ತುಂಬ ಕೆಟ್ಟ ಭಾವನೆಯಾಗುತ್ತದೆ. ಆದರೆ ಪ್ರತಿ ಬಾರಿ ನಾನು ಸೋತಾಗಲೂ, ಮುಂದಿನ ಶೋಧನೆಯು ಬರುವಾಗ, ನಾನು ಹೆಚ್ಚು ದೃಢಳಾಗಿರುತ್ತೇನೆ.” ಹೀಗೆ ಕ್ರಮೇಣವಾಗಿ ಅವಳು ತನ್ನ ಹೋರಾಟದಲ್ಲಿ ಜಯಗಳಿಸುತ್ತಿದ್ದಾಳೆ.ಪುನಃ ಹಿಂದಿನ ಸ್ಥಿತಿಗೆ ಮರಳುವಾಗ, ಯಾವ ವಿಷಯವು ಅದಕ್ಕೆ ನಡಿಸಿತೆಂಬುದನ್ನು ವಿಶ್ಲೇಷಿಸಿರಿ. ಒಬ್ಬ ಯುವ ವ್ಯಕ್ತಿಯು ಹೇಳುವುದು: “ನಾನು ಯಾವುದನ್ನು ಓದುತ್ತಿದ್ದೆನೋ ಅಥವಾ ಆಲೋಚಿಸುತ್ತಿದ್ದೆನೋ ಅದನ್ನು ನಾನು ಪುನರ್ವಿಮರ್ಶಿಸುತ್ತೇನೆ. ಬಹುಮಟ್ಟಿಗೆ ಯಾವಾಗಲೂ ನಾನು ಎಡವಿದ್ದರ ಕಾರಣವನ್ನು ಸೂಕ್ಷ್ಮವಾಗಿ ಸೂಚಿಸಬಲ್ಲೆ. ಈ ರೀತಿ ನಾನು ಅದನ್ನು ಮಾಡುವುದನ್ನು ನಿಲ್ಲಿಸಿ, ಅದನ್ನು ಸರಿಪಡಿಸಿಕೊಳ್ಳಬಲ್ಲೆ.”
ಒಳ್ಳೆಯ ಹೋರಾಟದ ಪ್ರತಿಫಲಗಳು
ಮುಷ್ಟಿಮೈಥುನವನ್ನು ಜಯಿಸಿದ ಒಬ್ಬ ಯುವ ವ್ಯಕ್ತಿಯು ಹೇಳಿದ್ದು: “ಈ ಸಮಸ್ಯೆಯನ್ನು ಜಯಿಸಿದಂದಿನಿಂದ, ನಾನು ಯೆಹೋವನ ಮುಂದೆ ಶುದ್ಧವಾದ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಬಲ್ಲೆ. ಇದು ನಾನು ಯಾವುದಕ್ಕೂ ವಿನಿಮಯಮಾಡಿಕೊಳ್ಳಲಾರದ ಒಂದು ವಿಷಯವಾಗಿದೆ!”
ಹೌದು, ಒಂದು ಒಳ್ಳೆಯ ಮನಸ್ಸಾಕ್ಷಿ, ಸ್ವಯೋಗ್ಯತೆಯ ಉತ್ತಮಗೊಂಡ ಪರಿಜ್ಞಾನ, ಹೆಚ್ಚಿನ ನೈತಿಕ ಬಲ, ಹಾಗೂ ದೇವರೊಂದಿಗಿನ ಹೆಚ್ಚು ನಿಕಟ ಸಂಬಂಧಗಳು, ಮುಷ್ಟಿಮೈಥುನದ ವಿರುದ್ಧವಾಗಿ ನಡೆಸಿದ ಒಳ್ಳೆಯ ಹೋರಾಟದ ಪ್ರತಿಫಲಗಳಾಗಿವೆ. ಅಂತಿಮವಾಗಿ ಮುಷ್ಟಿಮೈಥುನವನ್ನು ಜಯಿಸಿದಂತಹ ಒಬ್ಬ ಯುವತಿಯು ಹೇಳುವುದು: “ನನ್ನನ್ನು ನಂಬಿ, ಈ ಅಭ್ಯಾಸವನ್ನು ನಿಲ್ಲಿಸುವುದರಲ್ಲಿ ಪಡೆಯುವ ವಿಜಯವು, ನೀವು ಉಪಯೋಗಿಸುವ ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ.”
ಚರ್ಚೆಗಾಗಿ ಪ್ರಶ್ನೆಗಳು
◻ ಪ್ರಣಯಸಂಬಂಧವಾದ ಆಲೋಚನೆಗಳ ಕುರಿತು ಚಿಂತಿಸುವುದು ಏಕೆ ಅಪಾಯಕರವಾಗಿದೆ? ಅವನ ಅಥವಾ ಅವಳ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಯುವ ವ್ಯಕ್ತಿಗಳು ಏನು ಮಾಡಬಲ್ಲರು?
◻ ಮುಷ್ಟಿಮೈಥುನದಲ್ಲಿ ಒಳಗೂಡಲಿಕ್ಕಾಗಿರುವ ಶೋಧನೆಯನ್ನು ಕಡಿಮೆಮಾಡಲು, ಯುವ ವ್ಯಕ್ತಿಯೊಬ್ಬನು ಯಾವ ತಡೆಗಟ್ಟುವ ಸೂಕ್ತಕ್ರಮಗಳನ್ನು ಕೈಕೊಳ್ಳಬಹುದು?
◻ ಆತ್ಮಿಕ ಆಕ್ರಮಣವು ಏಕೆ ಸಹಾಯಕರವಾಗಿದೆ?
◻ ಈ ಅಭ್ಯಾಸವನ್ನು ಜಯಿಸುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?
◻ ಈ ವಿಷಯದಲ್ಲಿ ಒಂದು ಸಮಸ್ಯೆಯಿರುವಲ್ಲಿ, ಯಾರಾದರೊಬ್ಬರೊಂದಿಗೆ ಮನಸ್ಸನ್ನು ತೋಡಿಕೊಳ್ಳುವುದು ಏಕೆ ಸಹಾಯಕರವಾಗಿದೆ?
[ಪುಟ 208,209ರಲ್ಲಿರುವಚೌಕ]
ಅಶ್ಲೀಲ ಸಾಹಿತ್ಯ—ಚಟಹಿಡಿಸುವಂಥದ್ದು ಹಾಗೂ ಅಪಾಯಕರ!
“ಅಶ್ಲೀಲ ಸಾಹಿತ್ಯವು ಸರ್ವವ್ಯಾಪಕವಾಗಿದೆ: ನೀವು ರಸ್ತೆಯುದ್ದಕ್ಕೂ ನಡೆಯುವುದಾದರೆ, ಅದು ವೃತ್ತಪತ್ರಿಕೆಗಳ ವ್ಯಾಪಾರಕಟ್ಟೆಗಳಲ್ಲಿ ಬಹಿರಂಗವಾಗಿ ಪ್ರದರ್ಶಿಸಲ್ಪಟ್ಟಿರುತ್ತದೆ” ಎಂಬುದಾಗಿ 19 ವರ್ಷ ಪ್ರಾಯದ ರಾನಲ್ಡ್ ಜ್ಞಾಪಿಸಿಕೊಂಡನು. “ನಮ್ಮ ಅಧ್ಯಾಪಕರಲ್ಲಿ ಕೆಲವರು ಅದನ್ನು ಶಾಲೆಗೆ ತರುತ್ತಿದ್ದರು. ಮುಂದಿನ ತರಗತಿಗಾಗಿ ಕಾಯುತ್ತಿರುವಾಗ, ತಮ್ಮ ಡೆಸ್ಕ್‌ಗಳಲ್ಲಿ ಓದುತ್ತಿದ್ದರು.” ಹೌದು, ಬೇರೆ ಬೇರೆ ವಯೋಮಿತಿಗಳು, ಹಿನ್ನೆಲೆಗಳು, ಹಾಗೂ ಶೈಕ್ಷಣಿಕ ಮಟ್ಟಗಳಿಂದ ಬಂದ ಅನೇಕ ಜನರು, ಅಶ್ಲೀಲ ಸಾಹಿತ್ಯದ ಕಟ್ಟಾಸೆಯ ವಾಚಕರಾಗಿದ್ದಾರೆ. ಮಾರ್ಕ್ ಎಂಬ ಹೆಸರಿನ ಒಬ್ಬ ಯೌವನಸ್ಥನು ಹೇಳಿದ್ದು: “ನಾನು ಹುಡುಗಿಯರ ಪತ್ರಿಕೆಗಳನ್ನು ಓದಿ, ಅದರಲ್ಲಿದ್ದ ಛಾಯಾಚಿತ್ರಗಳನ್ನು ನೋಡುವುದು ಭಾವೋದ್ರೇಕಗೊಳಿಸುವಂತಹದ್ದಾಗಿತ್ತು! . . . ನಾನು ಈ ಪತ್ರಿಕೆಗಳ ಹೊಸ ಸಂಚಿಕೆಗಳಿಗಾಗಿ ಮುನ್ನೋಡಿದೆ. ಏಕೆಂದರೆ ನಾನು ಈಗಾಗಲೇ ನೋಡಿ ಮುಗಿಸಿರುವ ಪುಸ್ತಕಗಳನ್ನು ಪುನಃ ನೋಡುವುದು, ಈ ಹಿಂದೆ ನೀಡಿದ್ದಂತಹ ಭಾವೋದ್ರೇಕದ ಪ್ರಚೋದನೆಯನ್ನು ನನಗೆ ನೀಡಲಿಲ್ಲ. ಅದು ಚಟಹಿಡಿಸುವಂಥದ್ದಾಗಿದೆ.” ಆದರೆ ಇದು ಒಂದು ಒಳ್ಳೆಯ ಅಭ್ಯಾಸವೊ?
ಅಶ್ಲೀಲ ಸಾಹಿತ್ಯವು ಭಾವಪರವಶಗೊಳಿಸುವ ಸಂದೇಶವನ್ನು ಹೊಂದಿದೆ: ‘ಲೈಂಗಿಕತೆಯು ಸಂಪೂರ್ಣವಾಗಿ ಸ್ವಸುಖಾನುಭವಕ್ಕಾಗಿದೆ.’ ಅದರಲ್ಲಿ ಹೆಚ್ಚಾಗಿ ಬಲಾತ್ಕಾರಸಂಭೋಗ ಹಾಗೂ ಕ್ರೌರ್ಯ ರತಿಗಳು ತುಂಬಿರುತ್ತವೆ. ಅತಿ ಬೇಗನೆ ಅನೇಕ ವೀಕ್ಷಕರು, “ಹೆಚ್ಚು ಗಡುಸಾಗಿರದ” (soft-core) ರೂಪಗಳ ಸಾಹಿತ್ಯವನ್ನು ಇನ್ನೆಂದಿಗೂ ಪ್ರಚೋದನಾತ್ಮಕವಾಗಿ ಕಂಡುಕೊಳ್ಳುವುದಿಲ್ಲ. ಇದರಿಂದಾಗಿ ಅವರು ಇನ್ನೂ ಹೆಚ್ಚು ಅಶ್ಲೀಲವಾಗಿರುವ ವರ್ಣಚಿತ್ರಗಳನ್ನು ಅಥವಾ ಚಲನ ಚಿತ್ರಗಳನ್ನು ನೋಡಲು ಪ್ರಯತ್ನಿಸುತ್ತಾರೆ! ನ್ಯೂ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರೊಫೆಸರರಾಗಿರುವ ಅರ್ನಸ್ಟ್ ವಾನ್ ಡೆನ್ ಹಾಗ್ ಹೇಳಿದಂತೆ: “ಅಶ್ಲೀಲ ಸಾಹಿತ್ಯವು, ನಾವು ಇತರರನ್ನು ಕೇವಲ ಮಾಂಸದ ಮುದ್ದೆಗಳಾಗಿ, ನಮ್ಮ ಸ್ವಂತ ಸುಖಾನುಭವದ ಸಂವೇದನೆಗಳಿಗಾಗಿರುವ ಸ್ವಪ್ರಯೋಜಕ ವಸ್ತುಗಳಾಗಿ ದೃಷ್ಟಿಸುವಂತೆ ಮಾಡುತ್ತದೆ.”
ಅಶ್ಲೀಲ ಸಾಹಿತ್ಯವು, ಸೆಕ್ಸ್‌ನ ಕುರಿತು ವಕ್ರವಾದ, ಪೂಜ್ಯ ದೃಷ್ಟಿಕೋನವನ್ನು ಸಹ ಪ್ರಸ್ತುತಪಡಿಸುತ್ತದೆ. ಇದು ಅನೇಕವೇಳೆ ವೈವಾಹಿಕ ಸಮಸ್ಯೆಗಳಿಗೆ ನಡಿಸುತ್ತದೆ. ಯುವ ಪ್ರಾಯದ ಪತ್ನಿಯೊಬ್ಬಳು ಹೇಳುವುದು: “ಅಶ್ಲೀಲ ಸಾಹಿತ್ಯವನ್ನು ಓದುವುದು, ಆ ಪುಸ್ತಕಗಳಲ್ಲಿ ವರ್ಣಿಸಿರುವ ಅಸಹಜ ವಿಚಾರಗಳನ್ನು ನನ್ನ ಗಂಡನಲ್ಲಿ ನಾನು ಬಯಸುವಂತೆ ಮಾಡಿತು. ಇದು ಲೈಂಗಿಕವಾಗಿ ಸತತವಾದ ಆಶಾಭಂಗ ಹಾಗೂ ನಿರಾಶೆಗೆ ನಡಿಸಿತು.” ಅಶ್ಲೀಲ ಸಾಹಿತ್ಯವನ್ನೋದುವ ಪುರುಷರೊಂದಿಗಿನ ತಮ್ಮ ಜೀವನ ಸಂಬಂಧದಲ್ಲಿನ ಅಶ್ಲೀಲ ಸಾಹಿತ್ಯದ ಪರಿಣಾಮಗಳ ಕುರಿತು, ನೂರಾರು ಮಂದಿ ಸ್ತ್ರೀಯರ ನಡುವೆ 1981ರ ಸಮೀಕ್ಷೆಯು ನಡೆಸಲ್ಪಟ್ಟಿತ್ತು. ಅದು ಗಂಭೀರವಾದ ಸಮಸ್ಯೆಗಳನ್ನು ಉಂಟುಮಾಡಿತು ಎಂಬುದಾಗಿ ಬಹುಮಟ್ಟಿಗೆ ಅರ್ಧದಷ್ಟು ಮಂದಿ ವರದಿಮಾಡಿದರು. ನಿಜವಾಗಿಯೂ ಅದು ಕೆಲವು ವಿವಾಹಗಳನ್ನು ಅಥವಾ ನಿಶ್ಚಿತಾರ್ಥಗಳನ್ನು ಮುರಿಯಿತು. ಒಬ್ಬ ಪತ್ನಿಯು
ಪ್ರಲಾಪಿಸಿದ್ದು: “ಅಶ್ಲೀಲ ಸಾಹಿತ್ಯದ ಮೂಲಕ ಕಾಮ ತೃಪ್ತಿಯನ್ನು ಪಡೆಯಲು [ನನ್ನ ಗಂಡನಿಗಿರುವ] ಅಗತ್ಯ ಮತ್ತು ಬಯಕೆಯಿಂದ ನಾನು ಏನು ಭಾವಿಸಬಲ್ಲೆನೆಂದರೆ, ನಾನು ಅವರನ್ನು ತೃಪ್ತಿಪಡಿಸಲಾರದವಳಾಗಿದ್ದೇನೆ. . . . ಅವರನ್ನು ತೃಪ್ತಿಪಡಿಸಲು ಸಾಧ್ಯವಿರುವ ಸ್ತ್ರೀಯಾಗಿರಲು ನಾನು ಹಾರೈಸುವೆ, ಆದರೆ ಅವರು ಪ್ಲಾಸ್ಟಿಕ್ ಮತ್ತು ಪೇಪರನ್ನು ಇಷ್ಟಪಡುತ್ತಾರೆ. ಮತ್ತು ಅವರ ಅಗತ್ಯವು ನನ್ನ ಒಂದು ಭಾಗವನ್ನು ನಾಶಗೊಳಿಸಿದೆ. . . . ಅಶ್ಲೀಲ ಸಾಹಿತ್ಯವು . . . ಪ್ರೀತಿ ವಿರೋಧಿ . . . ಅದು ಅಸಹ್ಯಕರ, ಕ್ರೂರವೂ ನಾಶಕರವೂ ಆಗಿದೆ.”ಹಾಗಿದ್ದರೂ, ಕ್ರೈಸ್ತ ಯುವ ಜನರಿಗೆ ಅತ್ಯಂತ ದೊಡ್ಡ ಚಿಂತೆಯ ವಿಷಯವು, ದೇವರ ದೃಷ್ಟಿಯಲ್ಲಿ ಶುದ್ಧನಾಗಿರಲಿಕ್ಕಾಗಿರುವ ಒಬ್ಬನ ಪ್ರಯತ್ನಗಳ ವಿರುದ್ಧ ಅಶ್ಲೀಲ ಸಾಹಿತ್ಯವು ನೇರವಾಗಿ ಕಾರ್ಯನಡಿಸುತ್ತದೆ ಎಂಬ ವಾಸ್ತವಾಂಶವೇ ಆಗಿದೆ. (2 ಕೊರಿಂಥ 6:17–7:1) “ಹೃದಯದ ಕಾಠಿಣ್ಯದ ನಿಮಿತ್ತದಿಂದ” ಪುರಾತನ ಕಾಲಗಳಲ್ಲಿ ಕೆಲವರು “ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವ”ರಾದರು ಎಂದು ಬೈಬಲು ತೋರಿಸುತ್ತದೆ. (ಎಫೆಸ 4:18, 19) ನೀವು ಅಂತಹ ಭ್ರಷ್ಟತೆಯನ್ನು ಅನುಭವಿಸಲು ಅಪೇಕ್ಷಿಸುತ್ತೀರೊ? ಅಶ್ಲೀಲ ಸಾಹಿತ್ಯದಲ್ಲಿ ಸಾಂದರ್ಭಿಕವಾಗಿ ಒಳಗೂಡುವುದು ಸಹ, ಒಬ್ಬನ ಮನಸ್ಸಾಕ್ಷಿಯ ಮೇಲೆ ಸಂವೇದನಾಶೀಲತೆಯನ್ನು ಕುಂದಿಸುವಂತಹ ಪ್ರಭಾವವನ್ನು ಬೀರಸಾಧ್ಯವಿದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಇದು ಕೆಲವು ಯುವ ಕ್ರೈಸ್ತರನ್ನು ಮುಷ್ಟಿಮೈಥುನ ಮಾಡುವ ಮಟ್ಟಕ್ಕೆ ನಡೆಸಿದೆ ಮಾತ್ರವಲ್ಲ, ಇನ್ನೂ ವಿಪರೀತವಾಗಿ ಲೈಂಗಿಕ ಅನೈತಿಕತೆಗೆ ನಡಿಸಿದೆ. ಹಾಗಾದರೆ, ಅಶ್ಲೀಲ ಸಾಹಿತ್ಯದಿಂದ ದೂರವಾಗಿ ಉಳಿಯಲು ಕಷ್ಟಪಟ್ಟು ಪ್ರಯತ್ನಿಸುವುದೇ ವಿವೇಕಯುತವಾದ ವಿಚಾರವಾಗಿದೆ.
“ಅನೇಕ ವೇಳೆ ಅಶ್ಲೀಲ ಸಾಹಿತ್ಯವು ನನ್ನ ನೇರ ದೃಷ್ಟಿರೇಖೆಯಲ್ಲಿರುತ್ತದೆ” ಎಂದು ಡ್ಯಾರಲ್ ಹೇಳುತ್ತಾನೆ. “ಆದುದರಿಂದ ನಾನು ಅದನ್ನು ಪ್ರಥಮವಾಗಿ ದೃಷ್ಟಿಸುವಂತೆ ಒತ್ತಾಯಿಸಲ್ಪಡುತ್ತೇನೆ; ಆದರೆ ನಾನು ಅದನ್ನು ಎರಡನೆಯ ಬಾರಿ ನೋಡಬೇಕಾಗಿಲ್ಲ.” ಹೌದು, ಅದು ಎಲ್ಲಿ ಬಹಿರಂಗವಾಗಿ ಪ್ರದರ್ಶಿಸಲ್ಪಟ್ಟಿದೆಯೋ ಅಲ್ಲಿ ನೋಡಲು ನಿರಾಕರಿಸಿರಿ. ಅದನ್ನು ನೋಡಲು ನಿಮ್ಮನ್ನು ಹುರಿದುಂಬಿಸುವಂತೆ ನಿಮ್ಮ ಸಹಪಾಠಿಗಳಿಗೆ ಅನುಮತಿಯನ್ನು ನೀಡದಿರಿ. 18 ವರ್ಷ ಪ್ರಾಯದ ಕ್ಯಾರೆನ್ ತರ್ಕಿಸಿದಂತೆ: “ಒಬ್ಬ ಅಪರಿಪೂರ್ಣ ವ್ಯಕ್ತಿಯೋಪಾದಿ, ಜಿತೇಂದ್ರಿಯವಾದ ಮತ್ತು ಪ್ರಶಂಸಾರ್ಹವಾಗಿರುವ ವಿಷಯಗಳ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸುವುದು ಸಾಕಷ್ಟು ಕಷ್ಟಕರವಾಗಿದೆ. ಒಂದುವೇಳೆ ನಾನು ಉದ್ದೇಶಪೂರ್ವಕವಾಗಿ ಅಶ್ಲೀಲ ಸಾಹಿತ್ಯವನ್ನು ಓದುವುದಾದರೆ, ಅದು ಇನ್ನಷ್ಟು ಹೆಚ್ಚು ಕಷ್ಟಕರವಾದದ್ದಾಗಿರುವುದಿಲ್ಲವೊ?”
[ಪುಟ 206 ರಲ್ಲಿರುವ ಚಿತ್ರಗಳು]
“ಪ್ರಾರ್ಥನೆಯು ತತ್‌ಕ್ಷಣದ ಬಲದ ಬುರುಜಾಗಿದೆ. ಬಯಕೆಯು ಮೇಲೇಳುವಂತಹ ಆ ಸಮಯದಲ್ಲಿ ಪ್ರಾರ್ಥಿಸುವುದು, ನಿಜವಾಗಿಯೂ ಸಹಾಯ ಮಾಡುತ್ತದೆ”