ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹಪೂರ್ವದ ಸಂಭೋಗವನ್ನು ನಾನು ಹೇಗೆ ನಿರಾಕರಿಸಬಲ್ಲೆ?

ವಿವಾಹಪೂರ್ವದ ಸಂಭೋಗವನ್ನು ನಾನು ಹೇಗೆ ನಿರಾಕರಿಸಬಲ್ಲೆ?

ಅಧ್ಯಾಯ 24

ವಿವಾಹಪೂರ್ವದ ಸಂಭೋಗವನ್ನು ನಾನು ಹೇಗೆ ನಿರಾಕರಿಸಬಲ್ಲೆ?

ಹದಿವಯಸ್ಕ (ಇಂಗ್ಲಿಷ್‌) ಎಂಬ ಪತ್ರಿಕೆಯಿಂದ ನಡೆಸಲ್ಪಟ್ಟ ರಾಷ್ಟ್ರವ್ಯಾಪಕ ಸಮೀಕ್ಷೆಯು, ತನ್ನ ಯುವ ವಾಚಕರಲ್ಲಿ ಅನೇಕರು, ಈ ಕೆಳಗಿನ ಪ್ರಶ್ನೆಯ—“ವಿವಾಹಪೂರ್ವದ ಲೈಂಗಿಕ ಒತ್ತಡವನ್ನು ಹೇಗೆ ನಿರಾಕರಿಸುವುದು”—ಕುರಿತಾದ ಮಾಹಿತಿಯನ್ನು ಪಡೆಯಲಪೇಕ್ಷಿಸಿದರು ಎಂದು ಬಯಲುಪಡಿಸಿತು.

ಕೀರ್ತನೆ 119:9ರಲ್ಲಿ, ಕೀರ್ತನೆಗಾರನು ತದ್ರೀತಿಯ ಒಂದು ಪ್ರಶ್ನೆಯನ್ನು ಎಬ್ಬಿಸಿದನು: “ಯೌವನಸ್ಥನು [ಅಥವಾ ಯುವತಿಯು] ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ?” ಉತ್ತರ: “ನಿನ್ನ [ದೇವರ] ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” ಆದರೆ ಕೇವಲ ತಲೆ ಜ್ಞಾನಕ್ಕಿಂತಲೂ ಹೆಚ್ಚಿನದ್ದು ಅಗತ್ಯವಾಗಿದೆ. “ಅನೈತಿಕ ಸಂಭೋಗದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ನಿಮ್ಮ ಮನಸ್ಸಿನಲ್ಲಿ ನೀವು ತಿಳಿದಿದ್ದೀರಿ” ಎಂಬುದಾಗಿ ಯುವತಿಯೊಬ್ಬಳು ಒಪ್ಪಿಕೊಂಡಳು. “ಆದರೆ ನಿಮ್ಮ ಹೃದಯವು ಈ ಕಾರಣಗಳನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕುತ್ತಿರುತ್ತದೆ.” ಸೂಕ್ತವಾಗಿಯೇ, ಕೀರ್ತನೆಗಾರನು ಮುಂದುವರಿಸಿದ್ದು: “ನಿನಗೆ ವಿರೋಧವಾಗಿ ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ.”—ಕೀರ್ತನೆ 119:11.

ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿರಿ

ದೇವರ ಹೇಳಿಕೆಗಳನ್ನು ನಿಮ್ಮ ಹೃದಯದಲ್ಲಿ ನಿಧಿಯಂತೆ ಕಾಪಾಡಿಕೊಳ್ಳಲು, ಮೊದಲಾಗಿ ನೀವು ಶಾಸ್ತ್ರವಚನಗಳನ್ನು ಹಾಗೂ ಬೈಬಲ್‌ ಆಧಾರಿತ ಸಾಹಿತ್ಯವನ್ನು ಓದಿ, ಅಭ್ಯಾಸಿಸುವುದು ಅಗತ್ಯವಾಗಿದೆ. ಇದು ದೇವರ ನಿಯಮಗಳ ಮೌಲ್ಯವನ್ನು ನಿಮಗೆ ಮನಗಾಣಿಸಲು ಸಹಾಯ ಮಾಡಬಲ್ಲದು. ಇನ್ನೊಂದು ಕಡೆಯಲ್ಲಿ, ಲೈಂಗಿಕವಾಗಿ ಪ್ರಚೋದನಾತ್ಮಕವಾಗಿರುವ ವಿಷಯವನ್ನು ಓದುವುದು, ಅದಕ್ಕೆ ಕಿವಿಗೊಡುವುದು, ಅಥವಾ ವೀಕ್ಷಿಸುವುದು, “ಲೈಂಗಿಕ ಹಸಿವ”ನ್ನು (NW) ಉದ್ರೇಕಿಸುತ್ತದೆ. (ಕೊಲೊಸ್ಸೆ 3:5) ಆದುದರಿಂದ ಕಟ್ಟುನಿಟ್ಟಾಗಿ ಅಂತಹ ವಿಷಯಗಳಿಂದ ದೂರವಿರಿ! ಅದಕ್ಕೆ ಬದಲಾಗಿ ಜಿತೇಂದ್ರಿಯವೂ ಶುದ್ಧವೂ ಆಗಿರುವ ವಿಷಯಗಳ ಕುರಿತು ಚಿಂತನೆಮಾಡಿರಿ.

ಇದಲ್ಲದೆ, ಒಬ್ಬನು ಜಿತೇಂದ್ರಿಯನಾಗಿ ಉಳಿಯುವಂತಹ ವಿಷಯದಲ್ಲಿ, ಒಬ್ಬನ ಆಪ್ತ ಸ್ನೇಹಿತರು ಬಲವಾದ ಪ್ರಭಾವವಾಗಿರಸಾಧ್ಯವಿದೆ ಎಂದು ಸಂಶೋಧನೆಯು ತೋರಿಸಿದೆ. ಕೀರ್ತನೆಗಾರನು ಹೇಳಿದ್ದು: “ನಿನ್ನ ನೇಮಗಳನ್ನು ಕೈಕೊಂಡು ನಿನ್ನಲ್ಲಿ [ದೇವರಲ್ಲಿ] ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.”—ಕೀರ್ತನೆ 119:63.

ನಿಮ್ಮ ಸ್ನೇಹಿತರು ‘ದೇವರ ನೇಮಗಳನ್ನು ಕೈಕೊಂಡು’ ನಡೆಯಲು ನಿಜವಾಗಿಯೂ ಶ್ರಮಿಸುವಂತಹವರಾಗಿದ್ದಾರೊ? ಜೊಆ್ಯನ್‌ ಎಂಬ ಹೆಸರಿನ ಒಬ್ಬ ಯುವತಿಯು, ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಈ ಅಭಿಪ್ರಾಯೋಕ್ತಿಯನ್ನು ನುಡಿಯುತ್ತಾಳೆ: “ನೀವು ಯೆಹೋವನನ್ನು ಪ್ರೀತಿಸುವ ಜನರ ನಡುವೆ ಇರುವಲ್ಲಿ, ನೀವು ನೈತಿಕತೆಗಳ ಕುರಿತು ಮಾತಾಡುವಾಗ, ಯೆಹೋವನ ಜನರಿಗೆ ಆಗುವ ಅನಿಸಿಕೆಯೇ ನಿಮಗೂ ಆಗಲಾರಂಭಿಸುತ್ತದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ದೃಷ್ಟಾಂತಕ್ಕಾಗಿ, ಅನೈತಿಕತೆಯು ಅಸಹ್ಯಕರವಾಗಿದೆ ಎಂದು ಅವರು ಹೇಳುವುದನ್ನು ನೀವು ಕೇಳಿಸಿಕೊಳ್ಳುವುದಾದರೆ, ನಿಮಗೂ ತದ್ರೀತಿಯ ಅನಿಸಿಕೆಯಾಗಲಾರಂಭಿಸುತ್ತದೆ. ಇನ್ನೊಂದು ಕಡೆಯಲ್ಲಿ, ಇದನ್ನು ನಿರ್ಲಕ್ಷಿಸುವವನೊಂದಿಗೆ ನೀವಿರುವಲ್ಲಿ, ಬಹಳ ಬೇಗನೆ ನೀವೂ ಅವನಂತೆಯೇ ಆಗುವಿರಿ.”—ಜ್ಞಾನೋಕ್ತಿ 13:20.

ಆದರೂ, ಅನೇಕವೇಳೆ ಜಿತೇಂದ್ರಿಯರಾಗಿ ಉಳಿಯಲು ಅತ್ಯಂತ ದೊಡ್ಡ ಪಂಥಾಹ್ವಾನವನ್ನು ಒಡ್ಡುವಂತಹದ್ದು, ಡೇಟಿಂಗ್‌ ಮತ್ತು ಪ್ರಣಯಾಚರಣೆಯಾಗಿದೆ. ರಾಬರ್ಟ್‌ ಸಾರೆನ್ಸೆನ್‌ರಿಂದ ನಡೆಸಲ್ಪಟ್ಟ ಒಂದು ರಾಷ್ಟ್ರವ್ಯಾಪಕ ಅಧ್ಯಯನವನ್ನು ಪರಿಗಣಿಸಿರಿ. ಅವರು ಕಂಡುಕೊಂಡದ್ದೇನಂದರೆ, ಸಮೀಕ್ಷೆ ನಡೆಸಲ್ಪಟ್ಟ ಯುವ ಪುರುಷರಲ್ಲಿ 56 ಪ್ರತಿಶತ ಹಾಗೂ ಸ್ತ್ರೀಯರಲ್ಲಿ 82 ಪ್ರತಿಶತ ಮಂದಿಗೆ, ಲೈಂಗಿಕ ಸಂಭೋಗಗಳ ಅನುಭವವಿತ್ತು. ಅವರು ಅದನ್ನು ಮೊತ್ತಮೊದಲ ಬಾರಿಗೆ, ಅವರು ಸತತವಾಗಿ ಜೊತೆಗಿದ್ದ ಯಾರೊಂದಿಗಾದರೂ, ಅಥವಾ ಕಡಿಮೆಪಕ್ಷ ಚೆನ್ನಾಗಿ ಪರಿಚಯವಿದ್ದು, ತುಂಬಾ ಇಷ್ಟಪಟ್ಟಂತಹವರೊಂದಿಗೆ ಮಾಡಿದ್ದರು. ಹಾಗಾದರೆ, ವಿವಾಹವಾಗಲು ನಿಮಗೆ ತಕ್ಕ ಪ್ರಾಯವಾಗಿದ್ದು, ನೀವು ಯಾರೊಂದಿಗಾದರೂ ಡೇಟಿಂಗ್‌ ಮಾಡುತ್ತಿರುವಲ್ಲಿ ಆಗೇನು? ನೀವು ಆ ವ್ಯಕ್ತಿಯನ್ನು ಹೇಗೆ ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಬಲ್ಲಿರಿ ಮತ್ತು ಆಗಲೂ ಜಿತೇಂದ್ರಿಯರಾಗಿ ಉಳಿಯಬಲ್ಲಿರಿ?

ಪ್ರಣಯಾಚರಣೆ ಮಾಡುತ್ತಿರುವಾಗ ಪಾಶಗಳಿಂದ ದೂರವಿರುವುದು

ಬೈಬಲು ಎಚ್ಚರಿಸುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ಒಬ್ಬನು ವಿರುದ್ಧಲಿಂಗಜಾತಿಯ ಯಾರೊಬ್ಬರ ಕಡೆಗಾದರೂ ಆಕರ್ಷಿತನಾಗುವುದು, ತೀರ ಸಹಜವಾದ ವಿಷಯವಾಗಿದೆ. ಆದರೆ ನೀವು ಪರಸ್ಪರ ಸಮೀಪವಿದ್ದಷ್ಟು ಹೆಚ್ಚಾಗಿ, ಆಕರ್ಷಣೆಯು ಹೆಚ್ಚು ಪ್ರಬಲವಾಗಿರುತ್ತದೆ. ಮತ್ತು ಈ ಸಹಜ ಅಪೇಕ್ಷೆಯು ನಿಮ್ಮ ಹೃದಯವನ್ನು ಬೇರೆ ಕಡೆಗೆ ತಿರುಗಿಸಬಲ್ಲದು. “ಹೇಗೆಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ . . . ಹಾದರ . . . ಹೊರಟು ಬರುತ್ತವೆ” ಎಂದು ಯೇಸು ಕ್ರಿಸ್ತನು ಹೇಳಿದನು.—ಮತ್ತಾಯ 15:19.

ಅನೇಕವೇಳೆ ಯುವ ಹುಡುಗ ಹುಡುಗಿಯರು ಲೈಂಗಿಕ ಸಂಭೋಗವನ್ನು ನಡಿಸಲು ಯೋಜಿಸಿರುವುದಿಲ್ಲ. * ಹೆಚ್ಚಿನ ಸಂದರ್ಭಗಳಲ್ಲಿ, ಹುಡುಗ ಹುಡುಗಿಯರು ದೇಹದ ಗುಪ್ತಾಂಗಗಳನ್ನು ಮುದ್ದಾಡುವುದರಿಂದ ಅಥವಾ ಉದ್ರೇಕಕರವಾಗಿ ಸ್ಪರ್ಶಿಸುವುದರಲ್ಲಿ ಒಳಗೂಡುವುದರಿಂದ ಇದು ಸಂಭವಿಸಿತು. ಒಬ್ಬ ಅವಿವಾಹಿತ ತಾಯಿ ಒಪ್ಪಿಕೊಂಡದ್ದು: “ನನಗೆ ಮತ್ತು ನನಗೆ ಗೊತ್ತಿರುವ ಅಧಿಕಾಂಶ ಮಕ್ಕಳಿಗೆ, ಅದು ಪ್ರತಿಸಲ ಸ್ವಲ್ಪ ಹೆಚ್ಚು ಮುಂದುವರಿಯುವುದು ಮಾತ್ರವೇ ಆಗಿತ್ತು. ಮತ್ತು ಅಂತಿಮವಾಗಿ ನೀವು ಇನ್ನೆಂದಿಗೂ ಒಬ್ಬ ಕನ್ಯೆಯಾಗಿರುವುದಿಲ್ಲ. ನೀವು ಸ್ವಲ್ಪ ಮುದ್ದಾಡಲು ಆರಂಭಿಸುತ್ತೀರಿ, ಮತ್ತು ಏನು ಸಂಭವಿಸುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವ ಮೊದಲೇ, ನೀವು ಹತೋಟಿಯನ್ನು ಮೀರಿರುತ್ತೀರಿ.”

ಸ್ವತಃ ನೀವು ಲೈಂಗಿಕ ಅನೈತಿಕತೆಗೆ ವಶವಾಗುವುದರಿಂದ ದೂರವಿರಲಿಕ್ಕಾಗಿ, ನಿಮ್ಮ ಹೃದಯವು ನಿಮ್ಮನ್ನು ಮುನ್ನಡಿಸುವುದಕ್ಕೆ ಬದಲಾಗಿ, ನೀವು ನಿಮ್ಮ ಹೃದಯವನ್ನು ಮುನ್ನಡಿಸಬೇಕು. (ಜ್ಞಾನೋಕ್ತಿ 23:19) ನೀವಿದನ್ನು ಹೇಗೆ ಮಾಡಬಲ್ಲಿರಿ?

ಪರಿಮಿತಿಗಳನ್ನಿಡಿರಿ: ತಾನು ಮೊದಲಾಗಿ ಚುಂಬನವನ್ನೂ ಮುದ್ದಾಡುವುದನ್ನೂ ಆರಂಭಿಸುವಂತೆ ತನ್ನ ಗರ್ಲ್‌ಫ್ರೆಂಡ್‌ ನಿರೀಕ್ಷಿಸುತ್ತಾಳೆಂದು ಒಬ್ಬ ಯೌವನಸ್ಥನು ಭಾವಿಸಬಹುದು. ಆದರೆ ವಾಸ್ತವದಲ್ಲಿ ಅವಳು ಹಾಗೆ ನಿರೀಕ್ಷಿಸದಿರಬಹುದು. “ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ [“ಒಟ್ಟಿಗೆ ಸಮಾಲೋಚನೆ ಮಾಡುವವರಲ್ಲಿ,” NW] ಜ್ಞಾನ.” (ಜ್ಞಾನೋಕ್ತಿ 13:10) ಆದುದರಿಂದ ನೀವು ಡೇಟಿಂಗ್‌ ಮಾಡುತ್ತಿರುವಲ್ಲಿ, ‘ಒಟ್ಟಿಗೆ ಸಮಾಲೋಚನೆ ಮಾಡುವ’ ಮೂಲಕ, ಆ ವಿಷಯದ ಕುರಿತು ನಿಮಗೆ ಹೇಗನಿಸುತ್ತದೆ ಎಂಬುದನ್ನು, ಆ ಇನ್ನೊಬ್ಬ ವ್ಯಕ್ತಿಗೆ ಹೇಳಿರಿ. ಮಮತೆಯ ಅಭಿವ್ಯಕ್ತಿಗಳ ಕುರಿತು ವಿವೇಕಯುತವಾಗಿ ಪರಿಮಿತಿಗಳನ್ನಿಡಿರಿ. ಅದೇ ಸಮಯದಲ್ಲಿ, ಮಿಶ್ರ ಸೂಚನೆಗಳನ್ನು ವ್ಯಕ್ತಪಡಿಸಬೇಡಿರಿ. ಮೈಗಂಟಿಕೊಳ್ಳುವ, ಮೈಕಾಣಿಸುವ, ಸೆಕ್ಸಿ ಬಟ್ಟೆಗಳನ್ನು ಧರಿಸುವುದು, ನಿಮ್ಮ ಸಹಭಾಗಿಗೆ ತಪ್ಪಾದ ಸಂದೇಶವನ್ನು ಕೊಡಬಲ್ಲದು.

ಶೋಧನಾಮಯ ಸನ್ನಿವೇಶಗಳಿಂದ ದೂರವಿರಿ: ಪರ್ವತಮಯ ಪ್ರದೇಶದಲ್ಲಿನ ಏಕಾಂತ ಸ್ಥಳವೊಂದರಲ್ಲಿ ತನ್ನೊಂದಿಗೆ ವಿಹರಿಸುವಂತೆ, ತನ್ನ ಬಾಯ್‌ಫ್ರೆಂಡ್‌ನಿಂದ ಆಮಂತ್ರಿಸಲ್ಪಟ್ಟ ಒಬ್ಬ ಯುವ ಕನ್ಯೆಯ ಕುರಿತು ಬೈಬಲು ತಿಳಿಸುತ್ತದೆ. ಅವನ ಹೇತುವೇನಾಗಿತ್ತು? ಅವರು ಆದಿ ವಸಂತಕಾಲದ ಸೌಂದರ್ಯಗಳನ್ನು ಆಸ್ವಾದಿಸುವುದೇ ಆಗಿತ್ತು. ಆದರೂ, ಆ ಹುಡುಗಿಯ ಸಹೋದರರು, ಯೋಜಿತ ವಿಹಾರದ ವಿಷಯವನ್ನು ತಿಳಿದುಕೊಂಡು, ಕೋಪದಿಂದ ಅದನ್ನು ರದ್ದುಮಾಡಿದರು. ಇದು ಅವಳು ಅನೈತಿಕ ಪ್ರವೃತ್ತಿಯುಳ್ಳವಳಾಗಿದ್ದಳೆಂದು ಅವರು ಭಾವಿಸಿದ ಕಾರಣದಿಂದಾಗಿತ್ತೊ? ನಿಶ್ಚಯವಾಗಿಯೂ ಅಲ್ಲ! ಆದರೆ ಅಂತಹ ಸನ್ನಿವೇಶಗಳಲ್ಲಿರುವ ಶೋಧನೆಯ ಪ್ರಭಾವವನ್ನು ಅವರು ಚೆನ್ನಾಗಿ ಅರಿತವರಾಗಿದ್ದರು. (ಪರಮಗೀತ 1:6; 2:8-15) ತದ್ರೀತಿಯಲ್ಲಿ, ನೀವು ಡೇಟಿಂಗ್‌ ಮಾಡುತ್ತಿರುವ ಯಾರೊಂದಿಗಾದರೂ, ಮನೆಯಲ್ಲಿ, ಒಂದು ವಾಸದ ಕಟ್ಟಡದಲ್ಲಿ, ಅಥವಾ ನಿಲ್ಲಿಸಿರುವ ಮೋಟಾರು ವಾಹನದಲ್ಲಿ ಒಬ್ಬೊಂಟಿಗರಾಗಿರುವಂತಹ, ಶೋಧನೆಗೆ ಮುನ್ನಡಿಸಸಾಧ್ಯವಿರುವ ಸನ್ನಿವೇಶಗಳಿಂದ ನೀವು ದೂರವಿರಬೇಕು.

ನಿಮ್ಮ ಪರಿಮಿತಿಗಳನ್ನು ತಿಳಿದುಕೊಳ್ಳುವುದು: ಕೆಲವೊಮ್ಮೆ, ನೀವು ಲೈಂಗಿಕ ಸೆಳೆತಗಳಿಗೆ ಹೆಚ್ಚು ಸುಲಭಭೇದ್ಯರಾಗಿರಬಹುದಾದ ಸಮಯಗಳಿರುತ್ತವೆ. ಉದಾಹರಣೆಗೆ, ಯಾವುದೋ ವೈಯಕ್ತಿಕ ಅಸಫಲತೆ ಅಥವಾ ನಿಮ್ಮ ಹೆತ್ತವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ, ನೀವು ನಿರಾಶೆಗೊಂಡಿರಬಹುದು. ವಿದ್ಯಮಾನವು ಏನೇ ಆಗಿರಲಿ, ಅಂತಹ ಸಮಯಗಳಲ್ಲಿ ನೀವು ವಿಶೇಷವಾಗಿ ಜಾಗರೂಕರಾಗಿರಲೇಬೇಕು. (ಜ್ಞಾನೋಕ್ತಿ 24:10) ಹಾಗೂ, ಮದ್ಯಪಾನೀಯಗಳ ಉಪಯೋಗದ ಕುರಿತು ಸಹ ಜಾಗರೂಕರಾಗಿರಿ. ಇವುಗಳ ಪ್ರಭಾವದಿಂದ ನೀವು, ನಿಮ್ಮ ಸಂಯಮ ಪ್ರವೃತ್ತಿಯನ್ನು ಕಳೆದುಕೊಳ್ಳಸಾಧ್ಯವಿದೆ. “ದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.”—ಹೋಶೇಯ 4:11.

ಅರ್ಥವತ್ತಾಗಿ ನಿರಾಕರಿಸಿರಿ: ಭಾವೋದ್ವೇಗಗಳು ತೀವ್ರವಾಗಿ, ಹುಡುಗ ಹುಡುಗಿಯರು ತಮ್ಮನ್ನು ಅಪಾಯಕರವಾಗಿ ಹತ್ತಿರವಾಗುವ ಸನ್ನಿವೇಶದಲ್ಲಿ ಕಂಡುಕೊಳ್ಳುವಾಗ, ಅವರು ಏನು ಮಾಡಸಾಧ್ಯವಿದೆ? ಅವರಲ್ಲಿ ಒಬ್ಬರು, ಆ ಮನೋವೃತ್ತಿಗೆ ಭಂಗ ತರುವಂತಹ ಯಾವುದಾದರೂ ವಿಷಯವನ್ನು ಹೇಳಬೇಕು ಅಥವಾ ಮಾಡಬೇಕು. “ಮಾತಾಡ”ಲಿಕ್ಕಾಗಿ ನಿರ್ಜನವಾದ ಒಂದು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ, ತಾನು ಡೇಟಿಂಗ್‌ ಮಾಡುತ್ತಿದ್ದ ಹುಡುಗನೊಂದಿಗೆ ತಾನೊಬ್ಬಳೇ ಇರುವುದನ್ನು ಡೆಬ್ರ ಕಂಡುಕೊಂಡಳು. ಭಾವೋದ್ವೇಗಗಳು ತೀವ್ರವಾಗಲು ಆರಂಭವಾದಾಗ, ತಾನು ಡೇಟಿಂಗ್‌ ಮಾಡುತ್ತಿದ್ದ ಹುಡುಗನಿಗೆ ಡೆಬ್ರ ಹೇಳಿದ್ದು: “ಇದು ಪ್ರಣಯಾಲಿಂಗನವಲ್ಲವೊ? ನಾವಿದನ್ನು ನಿಲ್ಲಿಸಬಾರದೊ?” ಅದು ಆ ಮನೋವೃತ್ತಿಗೆ ಭಂಗತಂದಿತು. ಆ ಕೂಡಲೆ ಅವನು ಅವಳನ್ನು ಮನೆಗೆ ಕರೆದೊಯ್ದನು. ಈ ಸನ್ನಿವೇಶಗಳಲ್ಲಿ ನಿರಾಕರಿಸುವುದು, ನೀವೆಂದಾದರೂ ಮಾಡಬೇಕಾಗಿರುವ ಅತ್ಯಂತ ಕಷ್ಟಕರ ಕೆಲಸವಾಗಿರಬಹುದು. ಆದರೆ ಲೈಂಗಿಕ ಸಂಭೋಗಗಳಿಗೆ ವಶವಾದ, 20 ವರ್ಷ ಪ್ರಾಯದ ಒಬ್ಬ ಸ್ತ್ರೀಯು ಹೇಳಿದಂತೆ: “ನೀವು ಅಲ್ಲಿಂದ ಹೊರಟುಹೋಗದಿದ್ದಲ್ಲಿ, ನೀವು ಪಶ್ಚಾತ್ತಾಪಪಡುವಿರಿ!”

ಒಬ್ಬ ಪಾಲಿಕೆಯು ಜೊತೆಗಿರಲಿ: ಹಳೆಯ ಕಾಲದ್ದೆಂದು ಕೆಲವರಿಂದ ವೀಕ್ಷಿಸಲ್ಪಡುವುದಾದರೂ, ಡೇಟಿಂಗ್‌ ಮಾಡುವಾಗ ನಿಮ್ಮ ಜೊತೆಗಿರಲಿಕ್ಕಾಗಿ ಒಬ್ಬ ಪಾಲಿಕೆಯಿರುವುದು ಒಂದು ಒಳ್ಳೆಯ ವಿಷಯವಾಗಿದೆ. “ಅದು ನಮ್ಮ ಮೇಲೆ ಭರವಸೆಯಿಡಲು ಸಾಧ್ಯವಿಲ್ಲ ಎಂಬಂತೆ ತೋರುತ್ತದೆ” ಎಂದು ಕೆಲವು ಹುಡುಗ ಹುಡುಗಿಯರು ದೂರುತ್ತಾರೆ. ಪ್ರಾಯಶಃ ತೋರಬಹುದು. ಆದರೆ ಸ್ವತಃ ನಮ್ಮ ಮೇಲೆ ಭರವಸೆಯಿಡುವುದು ವಿವೇಕಯುತವಾದದ್ದಾಗಿದೆಯೊ? ಜ್ಞಾನೋಕ್ತಿ 28:26 ಖಂಡಿತವಾಗಿ ಹೀಗೆ ಹೇಳುತ್ತದೆ: “ತನ್ನಲ್ಲೇ ಭರವಸವಿಡುವವನು ಮೂಢನು; ಜ್ಞಾನದಿಂದ ನಡೆಯುವವನು ಉದ್ಧಾರವನ್ನು ಪಡೆಯುವನು.” ಡೇಟಿಂಗ್‌ ಮಾಡುವಾಗ ನಿಮ್ಮೊಂದಿಗೆ ಯಾರಾದರೂ ಜೊತೆಗಿರುವಂತೆ ಏರ್ಪಡಿಸುವ ಮೂಲಕ ವಿವೇಕಯುತವಾಗಿ ನಡೆಯಿರಿ. “ತನ್ನ ಸ್ವಂತ ಜೊತೆಗಾರನನ್ನು ಕರೆತರುವ ವ್ಯಕ್ತಿಯನ್ನು ನಾನು ನಿಜವಾಗಿಯೂ ಗೌರವಿಸುತ್ತೇನೆ. ಜಿತೇಂದ್ರಿಯನಾಗಿರುವುದರಲ್ಲಿ ನಾನು ಆಸಕ್ತಳಾಗಿರುವಷ್ಟೇ ಅವನೂ ಆಸಕ್ತನಾಗಿದ್ದಾನೆಂದು ನನಗೆ ಗೊತ್ತು” ಎಂದು ಡೆಬ್ರ ಪ್ರಕಟಪಡಿಸಿದಳು. “ಇದರಿಂದ ಕಷ್ಟವೇನೂ ಆಗುವುದಿಲ್ಲ. ಏಕೆಂದರೆ ನಾವು ಏನನ್ನಾದರೂ ಖಾಸಗಿಯಾಗಿ ಹೇಳಲು ಬಯಸುವಾಗ, ಇತರರಿಗೆ ಕೇಳಿಸದಷ್ಟು ದೂರಕ್ಕೆ ಹೋಗಿ ಮಾತಾಡುತ್ತೇವೆ. ಅದು ಒದಗಿಸುವ ರಕ್ಷಣೆಯು, ಯಾವುದೇ ಅನನುಕೂಲಕ್ಕೆ ಅರ್ಹವಾಗಿದೆ.”

ದೇವರೊಂದಿಗೆ ಗೆಳೆತನ

ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರನ್ನು ಭಾವನೆಗಳಿರುವ ಒಬ್ಬ ನೈಜ ವ್ಯಕ್ತಿಯೋಪಾದಿ ತಿಳಿದುಕೊಳ್ಳುತ್ತಾ, ಆತನೊಂದಿಗೆ ಆಪ್ತ ಗೆಳೆತನವನ್ನು ಬೆಳೆಸುವುದು, ಆತನಿಗೆ ಅಸಮಾಧಾನವನ್ನು ಉಂಟುಮಾಡುವ ನಡತೆಯಿಂದ ನೀವು ದೂರವಿರುವಂತೆ ನಿಮಗೆ ಸಹಾಯ ಮಾಡುವುದು. ನಿರ್ದಿಷ್ಟ ಸಮಸ್ಯೆಗಳ ಕುರಿತಾಗಿ ನಿಮ್ಮ ಹೃದಯವನ್ನು ಆತನ ಮುಂದೆ ತೋಡಿಕೊಳ್ಳುವುದು, ನಿಮ್ಮನ್ನು ಆತನ ಸಮೀಪಕ್ಕೆ ಸೆಳೆಯುತ್ತದೆ. ಅನೇಕ ಹುಡುಗ ಹುಡುಗಿಯರು, ಭಾವಾವೇಶಭರಿತರಾಗಿದ್ದಂತಹ ಸನ್ನಿವೇಶಗಳಲ್ಲಿ ಜಿತೇಂದ್ರಿಯರಾಗಿ ಉಳಿಯಲು ಬಯಸುತ್ತಾ, ಅಗತ್ಯವಾದ ಬಲವನ್ನು ಒದಗಿಸುವಂತೆ ದೇವರನ್ನು ಕೇಳಿಕೊಳ್ಳುತ್ತಾ, ಒಟ್ಟಿಗೆ ಆತನಿಗೆ ಪ್ರಾರ್ಥಿಸಿದ್ದಾರೆ ಸಹ.

ಯೆಹೋವನು ಅಂತಹವರಿಗೆ “ಸಾಮಾನ್ಯವಾಗಿರುವುದಕ್ಕಿಂತಲೂ ಅತೀತವಾದ ಬಲ”ವನ್ನು (NW) ಕೊಡುವ ಮೂಲಕ ಉದಾರವಾಗಿ ಪ್ರತಿಕ್ರಿಯಿಸುತ್ತಾನೆ. (2 ಕೊರಿಂಥ 4:7) ನಿಶ್ಚಯವಾಗಿಯೂ ನೀವು ನಿಮ್ಮ ಪಾಲನ್ನು ನಿರ್ವಹಿಸಬೇಕು. ಆದರೂ, ದೇವರ ಸಹಾಯ ಮತ್ತು ಆಶೀರ್ವಾದದಿಂದ, ಲೈಂಗಿಕ ಅನೈತಿಕತೆಯನ್ನು ನಿರಾಕರಿಸಲು ಸಾಧ್ಯವಿದೆ ಎಂಬ ವಿಷಯದಲ್ಲಿ ನಿಶ್ಚಿತರಾಗಿರಿ.

[ಅಧ್ಯಯನ ಪ್ರಶ್ನೆಗಳು]

^ ಒಂದು ಅಧ್ಯಯನಕ್ಕನುಸಾರ, ಆ ಕೃತ್ಯವು ಅನೈಚ್ಛಿಕವಾದದ್ದೂ ಮುಂದಾಗಿಯೇ ಯೋಜಿಸಲ್ಪಡದ ವಿಷಯವೂ ಆಗಿತ್ತೆಂಬುದಾಗಿ ಸ್ತ್ರೀಯರಲ್ಲಿ 60 ಪ್ರತಿಶತ ಮಂದಿ ಹೇಳಿದರು.

ಚರ್ಚೆಗಾಗಿ ಪ್ರಶ್ನೆಗಳು

◻ ಸಂಭೋಗದ ಕುರಿತಾದ ಯೆಹೋವನ ನಿಯಮಗಳನ್ನು ನಿಧಿಯೋಪಾದಿ ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯ ಮಾಡಲು, ನೀವು ಮಾಡಸಾಧ್ಯವಿರುವ ಕೆಲವು ವಿಷಯಗಳು ಯಾವುವು?

◻ ವಿವಾಹಪೂರ್ವ ಸಂಭೋಗದ ಕುರಿತಾದ ನಿಮ್ಮ ನೋಟವನ್ನು, ನಿಮ್ಮ ಸ್ನೇಹಿತರು ಹೇಗೆ ಪ್ರಭಾವಿಸಬಲ್ಲರು?

◻ ಡೇಟಿಂಗ್‌ ಮಾಡುವಾಗ, ಎಚ್ಚರಿಕೆಯಿಂದಿರುವುದು ಆವಶ್ಯಕವೆಂದು ನಿಮಗೇಕೆ ಅನಿಸುತ್ತದೆ?

◻ ಲೈಂಗಿಕ ಅನೈತಿಕತೆಗೆ ವಶವಾಗುವುದರಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ, ಪ್ರಣಯಾಚರಣೆಮಾಡುತ್ತಿರುವ ಹುಡುಗ ಹುಡುಗಿಯರು ಮಾಡಸಾಧ್ಯವಿರುವ ಕೆಲವು ವಿಷಯಗಳು ಯಾವುವು?

[ಪುಟ 193 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನೀವು ಸ್ವಲ್ಪ ಮುದ್ದಾಡಲು ಆರಂಭಿಸುತ್ತೀರಿ . . . ”

[ಪುಟ 205 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರಣಯಾಚರಣೆಮಾಡುತ್ತಿರುವಾಗ, ನಿಮ್ಮನ್ನು ಪ್ರತ್ಯೇಕಿಸಿಕೊಳ್ಳದಿರುವ ಮೂಲಕ ಅನೈತಿಕತೆಯಿಂದ ದೂರವಿರಿ

[ಪುಟ 195ರಲ್ಲಿರುವಚೌಕ]

ಡೇಟಿಂಗ್‌ ಮಾಡುವಾಗ ಜಿತೇಂದ್ರಿಯರಾಗಿ ಉಳಿಯುವುದು

ಪ್ರಣಯಾಲಿಂಗನ ಮತ್ತು ಮುದ್ದಾಡುವುದಕ್ಕೆ ನಡಿಸಸಾಧ್ಯವಿರುವ ಸನ್ನಿವೇಶಗಳಿಂದ ದೂರವಿರಿ

ಗುಂಪುಗಳಲ್ಲಿ ಡೇಟಿಂಗ್‌ ಮಾಡಿರಿ ಅಥವಾ ಒಬ್ಬ ಪಾಲಿಕೆ ಜೊತೆಗಿರಲಿ

ಸಂಭಾಷಣೆಯನ್ನು ಭಕ್ತಿವೃದ್ಧಿಮಾಡುವ ಮಟ್ಟದಲ್ಲಿಡಿರಿ

ಆರಂಭದಿಂದಲೇ, ಮಮತೆಯ ಅಭಿವ್ಯಕ್ತಿಗಳ ಮೇಲಿನ ಪರಿಮಿತಿಗಳಿಗೆ ಸಂಬಂಧಿಸಿದ ನಿಮ್ಮ ಮನೋಭಾವವು, ನಿಮ್ಮ ಸಹಭಾಗಿಗೆ ತಿಳಿದಿರಲಿ

ಸಭ್ಯರೀತಿಯಲ್ಲಿ ಉಡುಪು ಧರಿಸಿರಿ ಮತ್ತು ಉದ್ರೇಕಕರವಾದ ಸನ್ನೆಗಳನ್ನು ಮಾಡುವುದರಿಂದ ದೂರವಿರಿ

ನಿಮ್ಮ ಜಿತೇಂದ್ರಿಯತೆಯು ಗಂಡಾಂತರದಲ್ಲಿದೆ ಎಂಬ ಅನಿಸಿಕೆ ನಿಮಗಾಗುವುದಾದರೆ, ನಿಮ್ಮನ್ನು ಮನೆಗೆ ಕರೆದುಕೊಂಡುಹೋಗುವಂತೆ ಕೇಳಿಕೊಳ್ಳಿರಿ

ದೀರ್ಘವಾದ “ಶುಭ-ರಾತ್ರಿ”ಗಳಿಂದ ದೂರವಿರಿ

ಹೊತ್ತು ಮುಳುಗುವ ಮೊದಲೇ ಹಿಂದಿರುಗಲಿಕ್ಕಾಗಿ ಒಂದು ಸಮಯವನ್ನು ನಿಗದಿಪಡಿಸಿರಿ

[ಚಿತ್ರಗಳು]

ಪ್ರಣಯಾಚರಣೆಮಾಡುತ್ತಿರುವ ಹುಡುಗ ಹುಡುಗಿಯರು, ತಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸದಿರುವಂತಹ ಚಟುವಟಿಕೆಗಳನ್ನು ಬೆನ್ನಟ್ಟಸಾಧ್ಯವಿದೆ

[ಪುಟ 196 ರಲ್ಲಿರುವ ಚಿತ್ರಗಳು]

ಸನ್ನಿವೇಶವೊಂದು ತೀರ “ಉದ್ರೇಕಿತ”ವಾಗಿ ಪರಿಣಮಿಸುವಾಗ, ನಿರಾಕರಿಸುವ ಪರಿಜ್ಞಾನವಿರಲಿ!—ಮತ್ತು ಅದು ಅರ್ಥವತ್ತಾಗಿರಲಿ!