ಶಾಲೆ ಮತ್ತು ಕೆಲಸ
ವಿಭಾಗ 5
ಶಾಲೆ ಮತ್ತು ಕೆಲಸ
ಶಾಲೆ, ಅದನ್ನು ಪ್ರೀತಿಸಿರಿ ಅಥವಾ ದ್ವೇಷಿಸಿರಿ, ನೀವು ಬಹುಶಃ ನಿಮ್ಮ ಜೀವಿತದ ಸುಮಾರು 12 ವರ್ಷಗಳನ್ನು ಕಳೆಯುವುದು ಅಲ್ಲಿಯೇ. ಇವು ಗುಲಾಮಚಾಕರಿಯ ಅಥವಾ ಅನ್ವೇಷಣೆಯ ವರ್ಷಗಳಾಗಿರಸಾಧ್ಯವಿದೆ. ಆ ಶಾಲಾ ವರ್ಷಗಳನ್ನು ನೀವು ಹೇಗೆ ಉಪಯೋಗಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ವಿಷಯವು ಅವಲಂಬಿಸಿರುತ್ತದೆ. ಆದುದರಿಂದ ಈ ವಿಭಾಗದಲ್ಲಿ ನಾವು, ಶಾಲೆ, ಶಾಲಾ ಮನೆಕೆಲಸ, ದರ್ಜೆಗಳು, ಮತ್ತು ಅಧ್ಯಾಪಕರ ಕಡೆಗೆ ಹೆಚ್ಚು ವ್ಯಾಪ್ತಿಯುಳ್ಳ ನೋಟವನ್ನು ಹರಿಸಲಿರುವೆವು. ಮತ್ತು ಈಗಾಗಲೇ ಶಾಲೆಯಿಂದ ಹೊರಬಂದಿರುವವರಿಗಾಗಿ, ಉದ್ಯೋಗ ಮಾರುಕಟ್ಟೆಯಲ್ಲಿ ಬದುಕಿ ಉಳಿಯಲಿಕ್ಕಾಗಿ ನಮ್ಮಲ್ಲಿ ಕೆಲವು ಸಾಧಾರವಾದ ಸಲಹೆಗಳಿವೆ.