ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಒಂದು ಕೆಲಸವನ್ನು ಹೇಗೆ ಪಡೆದುಕೊಳ್ಳಬಲ್ಲೆ (ಮತ್ತು ಇಟ್ಟುಕೊಳ್ಳಬಲ್ಲೆ!)?

ನಾನು ಒಂದು ಕೆಲಸವನ್ನು ಹೇಗೆ ಪಡೆದುಕೊಳ್ಳಬಲ್ಲೆ (ಮತ್ತು ಇಟ್ಟುಕೊಳ್ಳಬಲ್ಲೆ!)?

ಅಧ್ಯಾಯ 21

ನಾನು ಒಂದು ಕೆಲಸವನ್ನು ಹೇಗೆ ಪಡೆದುಕೊಳ್ಳಬಲ್ಲೆ (ಮತ್ತು ಇಟ್ಟುಕೊಳ್ಳಬಲ್ಲೆ!)?

ಸೀನ್ಯರ್‌ ಸ್ಕೊಲ್ಯಾಸ್ಟಿಕ್‌ ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ಒಂದು ಸಮೀಕ್ಷೆಯು, ಕೆಲವು ಅಮೆರಿಕನ್‌ ಪ್ರೌಢ ಶಾಲೆಯ ಸೀನಿಯರ್‌ ವಿದ್ಯಾರ್ಥಿಗಳನ್ನು, ಅವರು ಯಾವ ಜೀವಿತ ಗುರಿಗಳನ್ನು “ಅತ್ಯಂತ ಪ್ರಾಮುಖ್ಯ”ವೆಂದು ಪರಿಗಣಿಸುತ್ತಾರೆಂಬುದನ್ನು ಲೆಕ್ಕಹಾಕುವಂತೆ ಕೇಳಿಕೊಂಡಿತು. ಎಂಬತ್ತನಾಲ್ಕು ಪ್ರತಿಶತ ಮಂದಿ ಹೀಗೆ ಪ್ರತ್ಯುತ್ತರಿಸಿದರು: “ಸ್ಥಿರವಾದ ಕೆಲಸವನ್ನು ಕಂಡುಕೊಳ್ಳಲು ಶಕ್ತರಾಗಿರುವುದು.”

ಬಹುಶಃ ನಿಮ್ಮ ವೈಯಕ್ತಿಕ ಅಥವಾ ಮನೆವಾರ್ತೆಯ ವೆಚ್ಚಗಳನ್ನು ದೊರಕಿಸಿಕೊಳ್ಳಲಿಕ್ಕಾಗಿ ನೀವು, ಶಾಲಾನಂತರದ ಒಂದು ಕೆಲಸವನ್ನು ಮಾಡಲು ಆಸಕ್ತರಿದ್ದೀರಿ. ಅಥವಾ ಒಬ್ಬ ಪೂರ್ಣ ಸಮಯದ ಸೌವಾರ್ತಿಕರೋಪಾದಿ ನಿಮ್ಮನ್ನು ಬೆಂಬಲಿಸಿಕೊಳ್ಳಲಿಕ್ಕಾಗಿ ನೀವು ಅಂಶಕಾಲಿಕ ಉದ್ಯೋಗವೊಂದನ್ನು ಹುಡುಕುತ್ತಿರಬಹುದು. (22ನೆಯ ಅಧ್ಯಾಯವನ್ನು ನೋಡಿರಿ.) ಯಾವುದೇ ಸಂದರ್ಭದಲ್ಲಿ, ನೀವು ಯುವಪ್ರಾಯದವರಾಗಿರುವಲ್ಲಿ, ಲೋಕವ್ಯಾಪಕವಾದ ಹಣದುಬ್ಬರ ಮತ್ತು ಕೌಶಲವಿಲ್ಲದ ಕೆಲಸಗಾರರಿಗೆ ಪರಿಮಿತ ಬೇಡಿಕೆಯಿರುವುದು, ಕೆಲಸಗಳನ್ನು ಕಂಡುಕೊಳ್ಳುವುದನ್ನು ಕಷ್ಟಕರವನ್ನಾಗಿ ಮಾಡಿದೆ. ಹಾಗಾದರೆ, ನೀವು ಉದ್ಯೋಗ ಮಾರುಕಟ್ಟೆಯೊಳಗೆ ಹೇಗೆ ಸುಗಮವಾಗಿ ಪ್ರವೇಶಿಸಬಲ್ಲಿರಿ?

ಶಾಲೆ—ಕೆಲಸದ ತರಬೇತಿನ ನಿವೇಶನ

ಅನೇಕ ವರ್ಷಗಳ ಅನುಭವವಿರುವ, ಉದ್ಯೋಗ ಸೇರ್ಪಡೆ ಮಾಡುವವರಾದ ಕ್ಲೀವ್ಲೆಂಡ್‌ ಜೋನ್ಸ್‌, ಈ ಸಲಹೆಯನ್ನು ನೀಡುತ್ತಾರೆ: “ಒಳ್ಳೆಯ ಪ್ರೌಢ ಶಾಲಾ ಶಿಕ್ಷಣವನ್ನು ಪಡೆದುಕೊಳ್ಳಿರಿ. ಓದುವುದು, ಬರೆಯುವುದು, ಮತ್ತು ಸರಿಯಾಗಿ ಮಾತಾಡುವುದನ್ನು ಕಲಿಯುವುದರ ಪ್ರಮುಖತೆಯನ್ನು ನಾನು ಸಾಕಷ್ಟು ಒತ್ತಿಹೇಳಲಾರೆ. ಸರಿಯಾದ ಸಭ್ಯಾಚಾರವನ್ನೂ ಕಲಿಯಿರಿ. ಇದರಿಂದ ನೀವು ಕೆಲಸಮಾಡುವ ಪ್ರಪಂಚದಲ್ಲಿರುವ ಜನರೊಂದಿಗೆ ವ್ಯವಹರಿಸಬಲ್ಲಿರಿ.”

ಒಬ್ಬ ಬಸ್‌ ಚಾಲಕನು, ಬಸ್ಸು ಆಗಮಿಸುವ ಮತ್ತು ನಿರ್ಗಮಿಸುವ ಕಾಲತಖ್ತೆಗಳನ್ನು ಓದಲು ಶಕ್ತನಾಗಿರಬೇಕು. ಕಾರ್ಖಾನೆಯ ಕೆಲಸಗಾರರು, ಕೆಲಸ ಮುಕ್ತಾಯದ ಟಿಕೆಟ್‌ಗಳು ಅಥವಾ ತದ್ರೀತಿಯ ವರದಿಗಳನ್ನು ಭರ್ತಿಮಾಡುವ ವಿಧಾನವನ್ನು ತಿಳಿದಿರುವ ಅಗತ್ಯವಿದೆ. ಸೇಲ್ಸ್‌ಕ್ಲರ್ಕ್‌ಗಳಿಂದ ಲೆಕ್ಕಮಾಡುವುದನ್ನು ನಿರೀಕ್ಷಿಸಲಾಗುತ್ತದೆ. ಬಹುಮಟ್ಟಿಗೆ ಪ್ರತಿಯೊಂದು ರೀತಿಯ ನೌಕರಿಯಲ್ಲಿ, ಸಂಪರ್ಕ ಕೌಶಲಗಳು ಅಗತ್ಯವಾಗಿವೆ. ಇವು, ಶಾಲೆಯಲ್ಲಿ ನೀವು ನಿಪುಣತೆ ಪಡೆಯಸಾಧ್ಯವಿರುವ ಕೌಶಲಗಳಾಗಿವೆ.

ಪಟ್ಟುಹಿಡಿಯುವಿಕೆಯು ಪ್ರತಿಫಲನೀಡುತ್ತದೆ

“ನೀವು ಶಾಲೆಯಿಂದ ಹೊರಬಂದವರಾಗಿದ್ದು, ಒಂದು ಕೆಲಸಕ್ಕಾಗಿ ಎದುರುನೋಡುತ್ತಿರುವಲ್ಲಿ, ಎಂದೂ ಪ್ರಯತ್ನವನ್ನು ಬಿಡಬೇಡಿರಿ” ಎಂದು ಜೋನ್ಸ್‌ ಹೇಳುತ್ತಾರೆ. “ಎರಡು ಅಥವಾ ಮೂರು ಇಂಟರ್‌ವ್ಯೂಗಳಿಗೆ ಹೋಗಿ, ತದನಂತರ ಮನೆಗೆ ಹೋಗಿ, ಕುಳಿತುಕೊಂಡು ಕಾಯಬೇಡಿರಿ. ಆ ರೀತಿಯಲ್ಲಿ ನೀವು ಎಂದಿಗೂ ಒಂದು ಕೆಲಸಕ್ಕೆ ಕರೆಯಲ್ಪಡಲಾರಿರಿ.” ಯುವ ಸ್ಯಾಲ್‌ ಒಂದು ಕೆಲಸವನ್ನು ಕಂಡುಕೊಳ್ಳುವುದಕ್ಕೆ ಮೊದಲು, ಏಳು ತಿಂಗಳುಗಳ ವರೆಗೆ ಅದಕ್ಕಾಗಿ ಎದುರುನೋಡಿದನು. “ನಾನು ನನ್ನಷ್ಟಕ್ಕೇ ಹೀಗೆ ಹೇಳಿಕೊಳ್ಳುತ್ತಿದ್ದೆ: ‘ಕೆಲಸವೊಂದನ್ನು ಕಂಡುಕೊಳ್ಳುವುದೇ ನನ್ನ ಕೆಲಸವಾಗಿದೆ’” ಎಂದು ಸ್ಯಾಲ್‌ ವಿವರಿಸುತ್ತಾನೆ. “ಏಳು ತಿಂಗಳುಗಳ ವರೆಗೆ, ವಾರದ ಪ್ರತಿಯೊಂದು ದಿನ, ದಿನವೊಂದಕ್ಕೆ ಎಂಟು ತಾಸುಗಳನ್ನು ನಾನು ಕೆಲಸವನ್ನು ಹುಡುಕುವುದರಲ್ಲಿ ವ್ಯಯಿಸುತ್ತಿದ್ದೆ. ನಾನು ಬೆಳಗ್ಗೆ ಬಹಳ ಬೇಗನೆ ಆರಂಭಿಸಿ, ಮಧ್ಯಾಹ್ನ ನಾಲ್ಕು ಗಂಟೆಯ ವರೆಗೆ ‘ಕೆಲಸ’ ಮಾಡುತ್ತಿದ್ದೆ. ಅನೇಕ ರಾತ್ರಿಗಳಲ್ಲಿ, ನನ್ನ ಪಾದಗಳು ನೋಯುತ್ತಿದ್ದವು. ಮರುದಿನ ಬೆಳಗ್ಗೆ ನಾನು ಪುನಃ ಹುಡುಕಾಟ ನಡೆಸಲಿಕ್ಕಾಗಿ ‘ನನ್ನನ್ನು ಭಾವನಾತ್ಮಕವಾಗಿ ಸಿದ್ಧಮಾಡಿಕೊಳ್ಳ’ಬೇಕಿತ್ತು.”

ಪ್ರಯತ್ನವನ್ನು ಬಿಟ್ಟುಬಿಡುವುದರಿಂದ ಸ್ಯಾಲ್‌ನನ್ನು ತಡೆದದ್ದು ಯಾವುದು? “ಪ್ರತಿಯೊಂದು ಬಾರಿ ನಾನು ಸಿಬ್ಬಂದಿ ಕಛೇರಿಯಲ್ಲಿದ್ದಾಗ, ‘ನಿಮ್ಮನ್ನು ಹುರುಪಿನಿಂದ ಪ್ರಯಾಸಪಡಿಸಿಕೊಳ್ಳಿರಿ’ (NW) ಎಂದು ಯೇಸು ಹೇಳಿದ ವಿಷಯವನ್ನು ನಾನು ಜ್ಞಾಪಿಸಿಕೊಳ್ಳುತ್ತಿದ್ದೆ” ಎಂದು ಅವನು ಉತ್ತರಿಸುತ್ತಾನೆ. “ಒಂದು ದಿನ ನನಗೆ ಕೆಲಸ ಸಿಗುವುದು ಮತ್ತು ಈ ಕಷ್ಟಕರ ಸಮಯವು ದಾಟಿ ಹೋಗಲಿದೆ ಎಂದು ನಾನು ಆಲೋಚಿಸುತ್ತಿದ್ದೆ.”—ಲೂಕ 13:24.

ಕೆಲಸಗಳನ್ನು ಕಂಡುಕೊಳ್ಳುವ ಸ್ಥಳಗಳು

ನೀವು ಗ್ರಾಮೀಣ ಕ್ಷೇತ್ರದಲ್ಲಿ ವಾಸಿಸುತ್ತಿರುವಲ್ಲಿ, ಸ್ಥಳಿಕ ಹೊಲಗಳಲ್ಲಿ ಅಥವಾ ಹಣ್ಣುತೋಟಗಳಲ್ಲಿ ನಿಮ್ಮ ಕೆಲಸದ ಅನ್ವೇಷಣೆಯನ್ನು ಆರಂಭಿಸಬಹುದು. ಅಥವಾ ಕೆಲವು ರೀತಿಯ ಹಿತ್ತಲಿನ ಕೆಲಸವನ್ನು ನೀವು ಹುಡುಕಸಾಧ್ಯವಿದೆ. ನೀವು ಒಂದು ದೊಡ್ಡ ಪಟ್ಟಣದಲ್ಲಿ ಅಥವಾ ನಗರದಲ್ಲಿ ವಾಸಿಸುತ್ತಿರುವಲ್ಲಿ, ವಾರ್ತಾಪತ್ರಿಕೆಯಲ್ಲಿ ಬರುವ ಕೆಲಸದ ಜಾಹೀರಾತುಗಳಲ್ಲಿ ಕೆಲಸವನ್ನು ಹುಡುಕಲು ಪ್ರಯತ್ನಿಸಿರಿ. ಈ ಜಾಹೀರಾತುಗಳು, ನಿರ್ದಿಷ್ಟವಾದ ಒಂದು ಕೆಲಸಕ್ಕಾಗಿ ಯಾವ ಅರ್ಹತೆಗಳು ಅಗತ್ಯವಾಗಿವೆ ಎಂಬುದರ ಸುಳಿವನ್ನು ಕೊಡುತ್ತವೆ. ಮತ್ತು ನೀವು ಈ ಆವಶ್ಯಕತೆಗಳನ್ನು ಏಕೆ ಪೂರೈಸಬಲ್ಲಿರೆಂಬುದನ್ನು ಆ ಯಜಮಾನನಿಗೆ ವಿವರಿಸಲು ಅವು ನಿಮಗೆ ಸಹಾಯ ಮಾಡಬಲ್ಲವು. ಹೆತ್ತವರು, ಅಧ್ಯಾಪಕರು, ಉದ್ಯೋಗ ಏಜೆನ್ಸಿಗಳು, ಸಿಬ್ಬಂದಿ ಕಛೇರಿಗಳು, ಸ್ನೇಹಿತರು, ಮತ್ತು ನೆರೆಹೊರೆಯವರು—ನೀವು ಸಹಾಯ ಕೋರಬಲ್ಲ ಇತರ ಮೂಲಗಳಾಗಿದ್ದಾರೆ.

ನಿಮ್ಮ ಕೆಲಸವನ್ನು ಇಟ್ಟುಕೊಳ್ಳುವ ವಿಧ

ಅಸಂತೋಷಕರವಾಗಿ, ಆರ್ಥಿಕ ಒತ್ತಡಗಳು ನಿರುದ್ಯೋಗವನ್ನು ಉಂಟುಮಾಡುವಾಗ, ಉದ್ಯೋಗಸ್ಥ ಯುವ ಜನರು ಸಾಮಾನ್ಯವಾಗಿ ಕೆಲಸದಿಂದ ತೆಗೆದುಹಾಕಲ್ಪಡುವವರಲ್ಲಿ ಮೊದಲಿಗರಾಗಿರುತ್ತಾರೆ. ಆದರೆ ಇದು ನಿಮಗೆ ಸಂಭವಿಸಬೇಕೆಂದಿಲ್ಲ. “ಕೆಲಸಗಳನ್ನು ಕಾಪಾಡಿಕೊಳ್ಳುವ ಜನರು, ಕೆಲಸಮಾಡಲು ಸಿದ್ಧಮನಸ್ಕರಾಗಿರುವ, ಯಜಮಾನನು ಕೇಳಿಕೊಳ್ಳುವ ಯಾವುದೇ ಕೆಲಸವನ್ನು ಮಾಡಲು ಸಿದ್ಧ ಮನೋಭಾವವನ್ನು ತೋರಿಸುವ ಜನರಾಗಿದ್ದಾರೆ” ಎಂದು ಶ್ರೀ. ಜೋನ್ಸ್‌ ಹೇಳುತ್ತಾರೆ.

ನಿಮ್ಮ ಮನೋಭಾವವು ನಿಮ್ಮ ಮನಸ್ಥಿತಿಯಾಗಿದೆ—ನಿಮ್ಮ ಕೆಲಸದ ಕುರಿತು ಹಾಗೂ ನೀವು ಯಾರಿಗಾಗಿ ಕೆಲಸ ಮಾಡುತ್ತೀರೋ ಮತ್ತು ಯಾರೊಂದಿಗೆ ಕೆಲಸ ಮಾಡುತ್ತೀರೋ ಅವರ ಕುರಿತಾದ ನಿಮ್ಮ ಅನಿಸಿಕೆಯೇ ಆಗಿದೆ. ನೀವು ಮಾಡುವ ಕೆಲಸದ ಗುಣಮಟ್ಟದಲ್ಲಿ, ನಿಮ್ಮ ಮನೋಭಾವವು ಪ್ರತಿಫಲಿಸುತ್ತದೆ. ನಿಮ್ಮ ಧಣಿಯು, ನಿಮ್ಮ ಕೆಲಸದ ಉತ್ಪಾದನೆಯ ಆಧಾರದ ಮೇಲೆ ಮಾತ್ರವಲ್ಲ, ನಿಮ್ಮ ಮನೋಭಾವದ ಆಧಾರದ ಮೇಲೆಯೂ ನಿಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತಾನೆ.

“ನೀವು ಸೂಚನೆಗಳನ್ನು ಅನುಸರಿಸುತ್ತೀರೆಂಬುದು ಮಾತ್ರವಲ್ಲ, ಸತತವಾದ ಉಸ್ತುವಾರಿಯಿಲ್ಲದೆ, ಅಗತ್ಯವಾದುದಕ್ಕಿಂತಲೂ ಹೆಚ್ಚಿನ ಕೆಲಸಗಳನ್ನು ನೀವು ಮಾಡಬಲ್ಲಿರೆಂಬುದನ್ನು ನಿಮ್ಮ ಯಜಮಾನನು ಅವಲೋಕಿಸಲಿ” ಎಂದು ಜೋನ್ಸ್‌ ಮುಂದುವರಿಸುತ್ತಾರೆ. “ಏಕೆಂದರೆ ಬಿಗಿಯಾದ ಕೆಲಸ ಮಾರುಕಟ್ಟೆಯಲ್ಲಿ, ಉಳಿಯುವ ಕೆಲಸಗಾರರು ನಿಜವಾಗಿಯೂ ಅಲ್ಲಿ ಬಹಳ ದೀರ್ಘ ಸಮಯದಿಂದ ಇದ್ದಂತಹವರಾಗಿರುವ ಅಗತ್ಯವಿಲ್ಲ, ಬದಲಿಗೆ ಯಾರು ಕಷ್ಟಪಟ್ಟು ಉತ್ಪಾದನೆ ಮಾಡುತ್ತಾರೋ ಅವರಾಗಿದ್ದಾರೆ.”

ಸ್ಯಾಲ್‌ ಇದನ್ನು ಸತ್ಯವಾದದ್ದಾಗಿ ಕಂಡುಕೊಂಡನು. ಅವನನ್ನುವುದು: “ನಾನು ಯಾವಾಗಲೂ ನನ್ನ ಯಜಮಾನನಿಗೆ ಅನುಕೂಲವಾಗುವಂತೆ ಸರಿಹೊಂದಿಸಿಕೊಂಡೆ. ಸೂಚನೆಗಳನ್ನು ಅನುಸರಿಸುತ್ತಾ, ನನ್ನ ಮೇಲ್ವಿಚಾರಕರಿಗೆ ಗೌರವಕೊಡುವವನಾಗಿದ್ದು, ಅಗತ್ಯವಿರುವಾಗ ನನ್ನ ಕಾರ್ಯತಖ್ತೆಯನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧಮನಸ್ಕನಾಗಿದ್ದೆ.” “ಈ ಲೋಕದಲ್ಲಿನ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕರ್ತನಿಗೆ ಭಯಪಡುವವರಾಗಿ ಸರಳಮನಸ್ಸಿನಿಂದ ಕೆಲಸಮಾಡಿರಿ” ಎಂಬ ಬೈಬಲಿನ ಪ್ರಬೋಧನೆಯನ್ನು ಇದು ನೆನಪಿಗೆ ತರುತ್ತದೆ.—ಕೊಲೊಸ್ಸೆ 3:22.

ಭಯವನ್ನು ಜಯಿಸುವುದು

ನೀವು ಕೆಲಸದಲ್ಲಿ ಹೊಸಬರಾಗಿರುವಲ್ಲಿ, ಮೊದಲ ಕೆಲವು ದಿನಗಳಲ್ಲಿ ಭಯವು ಸಾಮಾನ್ಯವಾದ ಭಾವನೆಯಾಗಿರುತ್ತದೆ. ನೀವು ಹೀಗೆ ಯೋಚಿಸಬಹುದು: ‘ಅವರು ನನ್ನನ್ನು ಇಷ್ಟಪಡುವರೊ? ನಾನು ಈ ಕೆಲಸವನ್ನು ಮಾಡಬಲ್ಲೆನೊ? ಅವರು ನನ್ನ ಕೆಲಸವನ್ನು ಇಷ್ಟಪಡುವರೊ? ನಾನು ಮೂರ್ಖನಾಗಿ ಕಾಣುವುದಿಲ್ಲವೆಂದು ಭಾವಿಸುತ್ತೇನೆ.’ ಇಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ. ಇಲ್ಲವಾದರೆ ನಿಮ್ಮ ಭಯಗಳು ನಿಮ್ಮ ಸಕಾರಾತ್ಮಕ ಹೊರನೋಟವನ್ನು ತಿಂದುಹಾಕುವವು.

ನೀವು ನಿಮ್ಮ ಹೊಂದಾಣಿಕೆಯನ್ನು ತ್ವರಿತಗೊಳಿಸಿ, ಆ ಕಂಪೆನಿಯ ಕುರಿತು ಹೆಚ್ಚು ವಿಷಯಗಳನ್ನು ಕಲಿಯುವ ಮೂಲಕ ನಿಮ್ಮ ನರಕ್ಷೋಭೆಯನ್ನು ಶಾಂತಗೊಳಿಸಸಾಧ್ಯವಿದೆ. ನೋಡಿರಿ, ಆಲಿಸಿರಿ, ಮತ್ತು ಓದಿರಿ. ಸೂಕ್ತವಾದ ಸಮಯದಲ್ಲಿ, ನಿಮ್ಮ ಕೆಲಸ ಹಾಗೂ ನಿಮ್ಮ ನಿರ್ವಹಣೆಯ ಕುರಿತಾದ ಸಮಂಜಸವಾದ ಪ್ರಶ್ನೆಗಳನ್ನು ನಿಮ್ಮ ಮೇಲ್ವಿಚಾರಕರಿಗೆ ಕೇಳಿರಿ. ಅದು ನಿಮ್ಮನ್ನು ಬುದ್ಧಿಹೀನರಾಗಿ ತೋರುವಂತೆ ಮಾಡುವುದಿಲ್ಲ. ‘ಇಡೀ ಕಂಪೆನಿಗೆ ಸಂಬಂಧಿಸಿ, ನನ್ನ ಕೆಲಸವು ನನ್ನ ಇಲಾಖೆಯೊಂದಿಗೆ ಹೇಗೆ ಸರಿಹೊಂದುತ್ತದೆ?’ ಎಂದು ನಿಮ್ಮನ್ನು ಕೇಳಿಕೊಳ್ಳಿರಿ. ಉತ್ತರಗಳು, ಒಳ್ಳೆಯ ಕೆಲಸದ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಹಾಗೂ ಕೆಲಸದ ಸಂತೃಪ್ತಿಯನ್ನು ಪಡೆದುಕೊಳ್ಳುವಂತೆ ನಿಮಗೆ ಸಹಾಯ ಮಾಡಬಲ್ಲವು.

ಜೊತೆಕೆಲಸಗಾರರೊಂದಿಗೆ ಹೊಂದಿಕೊಂಡುಹೋಗುವುದು

ಎಲ್ಲಾ ಕೆಲಸಗಳು ಅಂತಿಮವಾಗಿ ಬೇರೆ ಜನರೊಂದಿಗೆ ವ್ಯವಹರಿಸುವುದನ್ನು ಒಳಗೊಳ್ಳುತ್ತವೆ. ಇತರರೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳುವ ವಿಧವನ್ನು ತಿಳಿದಿರುವುದು, ಒಂದು ಉದ್ಯೋಗವನ್ನು ಇಟ್ಟುಕೊಳ್ಳುವುದಕ್ಕೆ ಅಗತ್ಯವಾಗಿದೆ. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) ಹಾಗೆ ಮಾಡುವುದು, ಕೆಲಸದ ಸ್ಥಳದಲ್ಲಿನ ಅನಗತ್ಯವಾದ ಜಗಳವನ್ನು ಅಥವಾ ಕೋಪದ ಎದುರಿಸುವಿಕೆಗಳನ್ನು ದೂರಮಾಡುವಂತೆ ನಿಮಗೆ ಸಹಾಯ ಮಾಡಬಲ್ಲದು.

ಕೆಲವೊಮ್ಮೆ ನೀವು ಯಾರೊಂದಿಗೆ ಕೆಲಸ ಮಾಡುತ್ತೀರೋ ಆ ಜನರಿಗೆ, ನಿಮಗಿಂತಲೂ ತೀರ ಭಿನ್ನವಾದ ಹಿನ್ನೆಲೆಗಳು ಹಾಗೂ ವ್ಯಕ್ತಿತ್ವಗಳು ಇರುತ್ತವೆ. ಆದರೆ ಯಾರಾದರೊಬ್ಬರು ಭಿನ್ನರಾಗಿರುವುದರಿಂದ, ಅವನು ನಿಕೃಷ್ಟನೆಂದು ಭಾವಿಸಬೇಡಿರಿ. ಭಿನ್ನನಾಗಿರುವ ಅವನ ಹಕ್ಕನ್ನು ಗೌರವಿಸಿರಿ. ಯಾವ ವ್ಯಕ್ತಿಯೂ ಅಗೌರವದಿಂದ ಉಪಚರಿಸಲ್ಪಡುವುದನ್ನು ಮೆಚ್ಚುವುದಿಲ್ಲ; ಅದು ಅವನನ್ನು ತಾನು ಏನೂ ಅಲ್ಲ ಎಂದು ಭಾವಿಸುವಂತೆ ಮಾಡುತ್ತದೆ. ತಾನು ಬೇಕಾದವನು ಮತ್ತು ಆವಶ್ಯಕನು—ಒಬ್ಬ ಗಣ್ಯವ್ಯಕ್ತಿ—ಎಂದು ಭಾವಿಸಿಕೊಳ್ಳುವುದನ್ನು ಪ್ರತಿಯೊಬ್ಬನೂ ಇಷ್ಟಪಡುತ್ತಾನೆ. ನಿಮ್ಮ ಜೊತೆ ಕೆಲಸಗಾರರನ್ನು ಹಾಗೂ ಯಜಮಾನನನ್ನು ಗೌರವದಿಂದ ಉಪಚರಿಸುವ ಮೂಲಕ, ಗೌರವವನ್ನು ಸಂಪಾದಿಸಿರಿ.

ಹರಟೆಯನ್ನು ತೊರೆಯುವುದು

“ಹರಟೆಯು ಮಹಾ ಹಾನಿಕಾರಕವಾಗಿದೆ, ಏಕೆಂದರೆ ಅದು ಧಣಿಯ ಕುರಿತು ಅಥವಾ ಇತರರ ಕುರಿತು ನಿಮಗೆ ಕೆಟ್ಟ ಪ್ರಭಾವವನ್ನು ಮೂಡಿಸಸಾಧ್ಯವಿದೆ” ಎಂದು ಸ್ಯಾಲ್‌ ಹೇಳುತ್ತಾನೆ. ಸುಳ್ಳು ವದಂತಿಯು ಸಮಾಚಾರದ ಅತ್ಯುತ್ತಮ ಮೂಲವಾಗಿರುವುದಿಲ್ಲ, ಮತ್ತು ಅದು ನಿಮಗೆ ಹುಳಿ ದ್ರಾಕ್ಷಿಯಾಗಿ ಫಲಿಸಬಹುದು. ಸುಳ್ಳು ವದಂತಿಯ ಮೇಲೆ ಬೆಳೆಯುತ್ತಿರುವ ಗಾಳಿಮಾತುಗಳು, ಸಾಮಾನ್ಯವಾಗಿ ತೀರ ಅತಿಶಯೋಕ್ತಿಗಳಾಗಿರುತ್ತವೆ. ಇವು ಇತರರ ಹಾಗೂ ನಿಮ್ಮ ಸ್ವಂತ ಸತ್ಕೀರ್ತಿಗೆ ಹಾನಿಯನ್ನು ಉಂಟುಮಾಡಬಲ್ಲವು. ಆದುದರಿಂದ, ಹರಟೆಯ ಪ್ರಚೋದನೆಯನ್ನು ಸ್ಥಗಿತಗೊಳಿಸಿರಿ.

ದೂರುವವನನ್ನು ಯಾರೊಬ್ಬರೂ ಇಷ್ಟಪಡುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿರಿ. ಕೆಲಸದ ವಿಷಯ ನಿಮಗೇನಾದರೂ ತೊಂದರೆಯಿರುವಲ್ಲಿ, ಅದನ್ನು ಸುಳ್ಳು ವದಂತಿಯ ಮೂಲಕ ಪ್ರಚಾರ ಮಾಡಬೇಡಿರಿ. ಹೋಗಿ ನಿಮ್ಮ ಮೇಲ್ವಿಚಾರಕನೊಂದಿಗೆ ಮಾತಾಡಿರಿ. ಆದರೂ ಅವನ ಕಛೇರಿಯೊಳಗೆ ನುಗ್ಗಿ, ಕೋಪಾವೇಶದಿಂದ ಕೂಗಾಡಿ, ತದನಂತರ ದುಡುಕಿ ಹೇಳಿದ ಮಾತುಗಳಿಗಾಗಿ ವಿಷಾದಿಸಬೇಡಿರಿ. ಹಾಗೂ ವೈಯಕ್ತಿಕ ಆಕ್ರಮಣಗಳ ಪಾಶವನ್ನು ದೂರಮಾಡಿರಿ. ವಾಸ್ತವಾಂಶಗಳಿಗೆ ಅಂಟಿಕೊಳ್ಳಿರಿ. ಸಮಸ್ಯೆಯನ್ನು ವಿವರಿಸುವುದರಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ನಿಷ್ಕಪಟಿಗಳೂ ಪ್ರಾಮಾಣಿಕರೂ ಆಗಿರಿ. ‘ನನಗೆ ನಿಮ್ಮ ಸಹಾಯ ಬೇಕಾಗಿದೆ . . . ’ ಅಥವಾ, ‘ನನ್ನದು ತಪ್ಪಾಗಿರಬಹುದು, . . .  ಆದರೆ ಅದರ ಕುರಿತು ನನಗೆ ಈ ರೀತಿ ಅನಿಸುತ್ತದೆ’ ಎಂಬಂತಹ ಆರಂಭದ ಹೇಳಿಕೆಯೊಂದಿಗೆ ನೀವು ಆರಂಭಿಸಬಹುದು.

ಕಾಲನಿಷ್ಠೆಯ ಪ್ರಾಮುಖ್ಯ

ಜನರು ಒಂದು ಕೆಲಸವನ್ನು ಇಟ್ಟುಕೊಳ್ಳಲು ಏಕೆ ತಪ್ಪಿಹೋಗುತ್ತಾರೆ ಎಂಬುದಕ್ಕಿರುವ ಎರಡು ದೊಡ್ಡ ಕಾರಣಗಳು ಯಾವುವೆಂದರೆ, ಕೆಲಸಕ್ಕೆ ತಡವಾಗಿ ಬರುವುದು ಮತ್ತು ಕೆಲವು ದಿನ ಕೆಲಸಕ್ಕೆ ತಪ್ಪಿಸಿಕೊಳ್ಳುವುದು. ದೊಡ್ಡ ಕೈಗಾರಿಕಾ ನಗರದ ಉದ್ಯೋಗ ಹಾಗೂ ತರಬೇತಿಯ ನಿರ್ದೇಶಕರೊಬ್ಬರು, ಯುವ ಕೆಲಸಗಾರರ ಕುರಿತು ಹೀಗೆ ಹೇಳಿದರು: “ಅವರು ಬೆಳಗ್ಗೆ ಎದ್ದೇಳಲು ಕಲಿಯುವ, ಆಜ್ಞೆಗಳನ್ನು ಹೇಗೆ ಪಾಲಿಸಬೇಕೆಂಬುದನ್ನು ಕಲಿಯುವ ಅಗತ್ಯವಿದೆ. ಅವರು ಈ ವಿಷಯಗಳನ್ನು ಎಂದೂ ಕಲಿಯದಿದ್ದರೆ, ನಿರುದ್ಯೋಗ ಲಕ್ಷಣವು ಸದಾ ಇರುತ್ತದೆ.”

ಸ್ಯಾಲ್‌ ಬಹಳ ಕಷ್ಟದಿಂದ ಕಾಲನಿಷ್ಠೆಯ ಪಾಠವನ್ನು ಕಲಿತುಕೊಂಡನು. “ಮಂದಗತಿಯ ಕಾರಣದಿಂದ ನಾನು ಮೂರು ತಿಂಗಳುಗಳೊಳಗೆ ನನ್ನ ಮೊದಲ ಕೆಲಸವನ್ನು ಕಳೆದುಕೊಂಡೆ. ಇದು ಬೇರೆ ಕೆಲಸಗಳನ್ನು ಕಂಡುಕೊಳ್ಳುವುದನ್ನು ಹೆಚ್ಚು ಕಷ್ಟಕರವಾಗಿ ಮಾಡಿತು” ಎಂದು ಅವನು ನಿಟ್ಟುಸಿರುಬಿಡುತ್ತಾನೆ.

ಪ್ರಾಮಾಣಿಕತೆಯ ಮೌಲ್ಯ

ಉದ್ಯೋಗ ಸೇರ್ಪಡೆಗಾರರಾದ ಜೋನ್ಸ್‌ ಹೇಳುವುದು: “ಪ್ರಾಮಾಣಿಕತೆಯು ಒಬ್ಬ ವ್ಯಕ್ತಿಗೆ ಕೆಲಸವನ್ನು ಇಟ್ಟುಕೊಳ್ಳಲು ಸಹಾಯ ಮಾಡುವುದು.” ಪ್ರಾಮಾಣಿಕರಾಗಿರುವುದರಲ್ಲಿ, ಪ್ರಾಪಂಚಿಕ ವಸ್ತುಗಳನ್ನು ಕದಿಯುವುದನ್ನು ವರ್ಜಿಸುವುದು ಮಾತ್ರವಲ್ಲ, ವಿಪರೀತ ವಿರಾಮಗಳನ್ನು ತೆಗೆದುಕೊಳ್ಳುತ್ತಾ ಸಮಯವನ್ನು ಕದಿಯುವುದೂ ಸೇರಿದೆ. ಪ್ರಾಮಾಣಿಕನಾದ ಉದ್ಯೋಗಿಯನ್ನು ಅಮೂಲ್ಯವಾಗಿಯೂ ಭರವಸಾರ್ಹನಾಗಿಯೂ ವೀಕ್ಷಿಸಲಾಗುತ್ತದೆ. ಉದಾಹರಣೆಗಾಗಿ, ವಿಶಿಷ್ಟ ರೀತಿಯ ಬಟ್ಟೆಯ ಅಂಗಡಿಯೊಂದರಲ್ಲಿ ಕೆಲಸ ಮಾಡಿದ ಯೆಹೋವನ ಒಬ್ಬ ಯುವ ಸಾಕ್ಷಿಯು, ಪ್ರಾಮಾಣಿಕತೆಗಾಗಿ ಪ್ರಖ್ಯಾತನಾಗಿದ್ದನು.

“ಒಂದು ದಿನ, ಮ್ಯಾನೆಜರನು ಸ್ಟಾಕ್‌ರೂಮಿನಲ್ಲಿ, ಬೇರೆ ಯಾವುದೋ ಬಟ್ಟೆಯ ಒಳಗೆ ಅಡಗಿಸಿಟ್ಟಿದ್ದ ಒಂದು ವಸ್ತುವನ್ನು ನೋಡಿದನು. ಕೆಲಸಗಾರರಲ್ಲಿ ಒಬ್ಬನು ಅಂಗಡಿಯಿಂದ ಕದಿಯುತ್ತಿದ್ದನು. ಅಂಗಡಿಯನ್ನು ಮುಚ್ಚುವ ಸಮಯದಲ್ಲಿ, ನಾನು ಮಹಡಿಯ ಮೇಲಿದ್ದ ಮ್ಯಾನೆಜರನ ಕಛೇರಿಗೆ ಹೋದಾಗ, ನನ್ನ ಆಶ್ಚರ್ಯಕ್ಕೆ ಅಲ್ಲಿ ಎಲ್ಲಾ ಉದ್ಯೋಗಸ್ಥರು ಉಪಸ್ಥಿತರಿದ್ದರು. ಎಲ್ಲಾ ಉದ್ಯೋಗಸ್ಥರ ಬಳಿ ಹುಡುಕಲಿಕ್ಕಾಗಿ ಅವರನ್ನು ಅಲ್ಲಿ ಒಟ್ಟುಗೂಡಿಸಲಾಗಿತ್ತು. ಆ ಅನ್ವೇಷಣೆಯಿಂದ ವಿನಾಯಿತಿ ದೊರೆತ ಏಕಮಾತ್ರ ಉದ್ಯೋಗಸ್ಥನು ನಾನಾಗಿದ್ದೆ” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ.

ಅನೇಕ ಕ್ರೈಸ್ತ ಯುವ ಜನರಿಗೆ ತದ್ರೀತಿಯ ಅನುಭವಗಳಾಗಿವೆ. ಮತ್ತು ಅವರು ಉತ್ಕೃಷ್ಟ ಉದ್ಯೋಗಸ್ಥರಾಗಿ ಪರಿಣಮಿಸಿದ್ದಾರೆ. ಆದುದರಿಂದ ಕೆಲಸವನ್ನು ಕಂಡುಕೊಳ್ಳುವುದರಲ್ಲಿ ಕಷ್ಟಪಟ್ಟು ಕಾರ್ಯನಡಿಸಿರಿ. ಪಟ್ಟುಹಿಡಿಯುವವರಾಗಿರಿ. ಪ್ರಯತ್ನವನ್ನು ಬಿಟ್ಟುಬಿಡದಿರಿ. ಮತ್ತು ನೀವು ಅಷ್ಟೊಂದು ಕಷ್ಟಪಟ್ಟು ಹುಡುಕಿದ ಆ ಕೆಲಸವನ್ನು ಕಂಡುಕೊಂಡಾಗ, ಅದನ್ನು ಇಟ್ಟುಕೊಳ್ಳಲು ಕಷ್ಟಪಟ್ಟು ಕಾರ್ಯನಡಿಸಿರಿ!

ಚರ್ಚೆಗಾಗಿ ಪ್ರಶ್ನೆಗಳು

◻ ನಿಮ್ಮ ಶಾಲಾಕೆಲಸವು, ಕೆಲಸವೊಂದನ್ನು ಕಂಡುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಹೇಗೆ ಬಾಧಿಸಬಲ್ಲದು?

◻ ಕೆಲಸ ಹುಡುಕುವಾಗ ನೀವು ಪಟ್ಟುಹಿಡಿದಿರುವವರಾಗಿರುವುದು ಏಕೆ ಪ್ರಾಮುಖ್ಯವಾಗಿದೆ?

◻ ಉದ್ಯೋಗವನ್ನು ಹುಡುಕುತ್ತಿರುವಾಗ, ಹುಡುಕಿನೋಡಬೇಕಾದ ಕೆಲವು ಸ್ಥಳಗಳು ಮತ್ತು ಸಂಪರ್ಕಿಸಬೇಕಾದ ಜನರು ಯಾರಾಗಿದ್ದಾರೆ?

◻ ಒಂದು ಕೆಲಸದ ಇಂಟರ್‌ವ್ಯೂ ಅನ್ನು ನಿರ್ವಹಿಸುವುದಕ್ಕಾಗಿರುವ ಕೆಲವು ಸಲಹೆಗಳು ಯಾವುವು?

◻ ಕೆಲಸದಿಂದ ತೆಗೆದುಹಾಕಲ್ಪಡುವುದರಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಲು ನೀವೇನು ಮಾಡಬಲ್ಲಿರಿ?

[Picture on page 164]

“ಓದುವುದು, ಬರೆಯುವುದು, ಮತ್ತು ಸರಿಯಾಗಿ ಮಾತಾಡುವುದನ್ನು ಕಲಿಯುವುದರ ಪ್ರಮುಖತೆಯನ್ನು ನಾನು ಸಾಕಷ್ಟು ಒತ್ತಿಹೇಳಲಾರೆ”

[ಪುಟ 281 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು ನನ್ನಷ್ಟಕ್ಕೇ ಹೀಗೆ ಹೇಳಿಕೊಳ್ಳುತ್ತಿದ್ದೆ: ‘ಕೆಲಸವೊಂದನ್ನು ಕಂಡುಕೊಳ್ಳುವುದೇ ನನ್ನ ಕೆಲಸವಾಗಿದೆ’”

[Box/Picture on page 168, 169]

ಕೆಲಸದ ಇಂಟರ್‌ವ್ಯೂಗಳನ್ನು ನಿರ್ವಹಿಸುವುದು

“ಒಂದು ಕೆಲಸದ ಇಂಟರ್‌ವ್ಯೂಗೆ ಹೋಗುವ ಮೊದಲು, ಪ್ರಥಮ ಅಚ್ಚೊತ್ತುವಿಕೆಯೇ ಖಾಯಂ ಅಚ್ಚೊತ್ತುವಿಕೆಯಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿ” ಎಂದು ಕೆಲಸದ ಸಲಹೆಗಾರರಾದ ಕ್ಲೀವ್ಲೆಂಡ್‌ ಜೋನ್ಸ್‌ ಸಲಹೆ ನೀಡುತ್ತಾರೆ. ಒಂದು ಇಂಟರ್‌ವ್ಯೂಗೆ ಹೋಗುವಾಗ, ಜೀನ್ಸ್‌ ಹಾಗೂ ಸ್ಪೋರ್ಟ್ಸ್‌ ಷೂಗಳನ್ನು ಧರಿಸುವುದರ ವಿರುದ್ಧ ಅವರು ಎಚ್ಚರಿಕೆ ನೀಡುತ್ತಾರೆ. ಮತ್ತು ಸಭ್ಯವಾಗಿಯೂ ನೀಟಾಗಿಯೂ ಇರುವ ಅಗತ್ಯವನ್ನು ಒತ್ತಿಹೇಳುತ್ತಾರೆ. ಅನೇಕವೇಳೆ ಧಣಿಗಳು, ವ್ಯಕ್ತಿಯೊಬ್ಬನು ಉಡುಪು ಧರಿಸುವ ರೀತಿಯೇ, ಆ ವ್ಯಕ್ತಿಯು ಕೆಲಸಮಾಡುವ ರೀತಿಯಾಗಿದೆ ಎಂದು ನಿರ್ಧರಿಸುತ್ತಾರೆ.

ಒಂದು ಆಫೀಸ್‌ ಕೆಲಸಕ್ಕಾಗಿ ಅರ್ಜಿಯನ್ನು ಹಾಕುವಾಗ, ವ್ಯವಹಾರಸ್ಥನು ಉಡುಪು ಧರಿಸುವಂತೆ ನೀವು ಉಡುಪು ಧರಿಸಿ. ಕಾರ್ಖಾನೆಯ ಉದ್ಯೋಗಕ್ಕಾಗಿ ಅರ್ಜಿಯನ್ನು ಹಾಕುವಾಗ, ಶುಭ್ರವಾಗಿರುವ ಮತ್ತು ಇಸ್ತ್ರಿಮಾಡಲ್ಪಟ್ಟ ಪ್ಯಾಂಟ್‌ ಮತ್ತು ಷರ್ಟನ್ನು ಧರಿಸಿ, ಇದರೊಂದಿಗೆ ನೀಟಾಗಿರುವ ಷೂಗಳನ್ನು ಹಾಕಿಕೊಳ್ಳಿರಿ. ನೀವು ಒಬ್ಬ ಮಹಿಳೆಯಾಗಿರುವಲ್ಲಿ, ಸಭ್ಯವಾಗಿ ವಸ್ತ್ರಧರಿಸಿ, ಕಾಂತಿವರ್ಧಕಗಳನ್ನು ಮಿತವಾಗಿ ಉಪಯೋಗಿಸಿ. ಮತ್ತು ಒಂದು ಆಫೀಸ್‌ ಕೆಲಸಕ್ಕೆ ಅರ್ಜಿಯನ್ನು ಹಾಕುತ್ತಿರುವುದಾದರೆ, ಸಂಪ್ರದಾಯಬದ್ಧ ಉಡುಗೆಗೆ ಅನುಪೂರಕವಾಗಿ ಕಾಲುಚೀಲ ಹಾಗೂ ಡ್ರೆಸ್‌ ಷೂಗಳನ್ನು ಧರಿಸಿರಿ.

ಯಾವಾಗಲೂ ಕೆಲಸದ ಇಂಟರ್‌ವ್ಯೂಗೆ ಒಬ್ಬೊಂಟಿಗರಾಗಿಯೇ ಹೋಗಿರಿ ಎಂದು ಜೋನ್ಸ್‌ ಎಚ್ಚರಿಕೆ ನೀಡುತ್ತಾರೆ. ನೀವು ಇಂಟರ್‌ವ್ಯೂಗೆ ನಿಮ್ಮ ತಾಯಿ ಅಥವಾ ಸ್ನೇಹಿತರನ್ನು ಕರೆತರುವಲ್ಲಿ, ನಿಮ್ಮ ಧಣಿಯು ನೀವು ಅಪ್ರೌಢರೆಂಬ ನಿರ್ಣಯಕ್ಕೆ ಬರಬಹುದು.

‘ಒಂದುವೇಳೆ ಧಣಿಯು, ನನಗೆ ಈ ಮುಂಚೆ ಕೆಲಸದ ಅನುಭವವಿದೆಯೋ ಎಂದು ನನ್ನನ್ನು ಪ್ರಶ್ನಿಸುವಲ್ಲಿ, ನಾನು ಏನೆಂದು ಉತ್ತರಿಸಬೇಕು?’ ಎಂದು ನೀವು ಚಿಂತಿಸಬಹುದು. ಸುಳ್ಳುಹೇಳಬೇಡಿ. ಅನೇಕವೇಳೆ ಧಣಿಗಳು ಅತಿಶಯೋಕ್ತಿಯ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತಾರೆ. ಪ್ರಾಮಾಣಿಕರಾಗಿರಿ.

ನೀವು ಅದನ್ನು ಗ್ರಹಿಸದಿರಬಹುದು, ಆದರೂ ನೀವು ನಿಮ್ಮ ಪ್ರಪ್ರಥಮ “ನಿಜ” ಕೆಲಸಕ್ಕಾಗಿ ಹುಡುಕಾಡುತ್ತಿರುವಲ್ಲಿಯೂ, ನಿಮಗೆ ಈ ಮುಂಚೆ ಕೆಲಸದ ಅನುಭವವಿರುವುದು ಸಂಭವನೀಯ. ನೀವೆಂದಾದರೂ ಬೇಸಗೆ ರಜೆಯ ಕೆಲಸವನ್ನು ಮಾಡಿದ್ದೀರೊ? ಅಥವಾ ನೀವೆಂದಾದರೂ ಬೇಬಿಸಿಟ್‌ (ಮಗುವನ್ನು ನೋಡಿಕೊಳ್ಳುವುದು) ಕೆಲಸ ಮಾಡಿದ್ದೀರೊ? ನಿಮ್ಮ ಮನೆಯಲ್ಲಿ ಕುಟುಂಬದ ಸಣ್ಣಪುಟ್ಟ ಕೆಲಸಗಳನ್ನು ನೋಡಿಕೊಳ್ಳುವ ಕ್ರಮವಾದ ಕೆಲಸದ ನೇಮಕವು ನಿಮಗಿತ್ತೊ? ನಿಮ್ಮ ಆರಾಧನೆಯ ಸ್ಥಳದಲ್ಲಿ, ಕೆಲವೊಂದು ಕರ್ತವ್ಯಗಳ ಪರಿಪಾಲನೆಮಾಡುವ ಜವಾಬ್ದಾರಿಯನ್ನು ನಿಮಗೆ ಕೊಡಲಾಗಿತ್ತೊ? ನೀವೆಂದಾದರೂ ಸಾರ್ವಜನಿಕ ಭಾಷಣಕೊಡುವುದರಲ್ಲಿ ತರಬೇತನ್ನು ಪಡೆದುಕೊಂಡಿದ್ದೀರೊ? ಹಾಗಿರುವಲ್ಲಿ, ನೀವು ಜವಾಬ್ದಾರಿಯನ್ನು ನಿರ್ವಹಿಸಬಲ್ಲಿರಿ ಎಂಬುದನ್ನು ತೋರಿಸಲಿಕ್ಕಾಗಿ, ಈ ಎಲ್ಲಾ ವಿಷಯಗಳನ್ನು ಇಂಟರ್‌ವ್ಯೂನಲ್ಲಿ ಪ್ರಸ್ತಾಪಿಸಸಾಧ್ಯವಿದೆ ಅಥವಾ ನಿಮ್ಮ ರೆಸ್ಯೂಮೇ (ಯೋಗ್ಯತಾ ಸಾರಾಂಶ)ನಲ್ಲಿ ಪಟ್ಟಿಮಾಡಸಾಧ್ಯವಿದೆ.

ಧಣಿಗಳ ಇನ್ನೊಂದು ಪ್ರಮುಖ ಹಿತಾಸಕ್ತಿಯು ಯಾವುದೆಂದರೆ, ನೀವು ಅವರ ಕಂಪೆನಿಯಲ್ಲಿ ಹಾಗೂ ಕೊಡಲ್ಪಡುವ ಕೆಲಸದಲ್ಲಿ ಎಷ್ಟರ ಮಟ್ಟಿಗೆ ಆಸಕ್ತರಾಗಿದ್ದೀರಿ ಎಂಬುದೇ. ನೀವು ಆ ಕೆಲಸವನ್ನು ಮಾಡಲು ಬಯಸುತ್ತೀರಿ ಹಾಗೂ ಮಾಡಬಲ್ಲಿರಿ ಎಂಬುದನ್ನು ನೀವು ಅವರಿಗೆ ಮನಗಾಣಿಸಬೇಕು. “ಅದರಿಂದ ನನಗೇನು ಪ್ರಯೋಜನ” ಎಂಬ ಮನೋಭಾವವು, ಆ ಕೂಡಲೆ ಇಂಟರ್‌ವ್ಯೂ ಮಾಡುತ್ತಿರುವವನು ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುವುದು.

ಪೂರ್ಣಕಾಲಿಕ ಅಥವಾ ಅಂಶಕಾಲಿಕ ಕೆಲಸಕ್ಕಾಗಿ ಅರ್ಜಿಯನ್ನು ಹಾಕುವುದು ಮತ್ತು ಕೆಲಸವನ್ನು ಪಡೆದುಕೊಳ್ಳುವುದು, ನೀವು ಯಶಸ್ವಿಕರವಾಗಿ ಎದುರಿಸಸಾಧ್ಯವಿರುವ ಒಂದು ಪಂಥಾಹ್ವಾನವಾಗಿದೆ. ಮತ್ತು ಸ್ವತಃ ನಿಮಗೆ ಮಾತ್ರವಲ್ಲ, ಇತರರಿಗೂ ಸಹಾಯ ಮಾಡುವ ಒಂದು ಉಪಕರಣದೋಪಾದಿ ಆ ಕೆಲಸವನ್ನು ಉಪಯೋಗಿಸುವಾಗ, ಅದರಿಂದ ಉಂಟಾಗುವ ಸಂತೃಪ್ತಿಯು ಹೆಚ್ಚಿನ ಪ್ರಯೋಜನವಾಗಿ ಪರಿಣಮಿಸುತ್ತದೆ.

[ಪುಟ 171 ರಲ್ಲಿರುವ ಚೌಕ]

ಕೆಲಸದ ಇಂಟರ್‌ವ್ಯೂ ಸಮಯದಲ್ಲಿ ಮಾಡಬೇಕಾದ ವಿಷಯಗಳು

ಪ್ರೌಢರಾಗಿರಿ, ವ್ಯವಹಾರೋಚಿತರಾಗಿರಿ. ಧಣಿಯನ್ನು ಉಚಿತ ಗೌರವದಿಂದ ಅಭಿವಂದಿಸಿರಿ. ಅವನನ್ನು, “ಜ್ಯಾಕ್‌,” “ಗೆಳೆಯ,” ಅಥವಾ “ಮಿತ್ರ” ಎಂದು ಕರೆಯಬೇಡಿರಿ, ಬದಲಾಗಿ “ಶ್ರೀಮಾನ್‌” ಎಂದು ಕರೆಯಿರಿ.

ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಳ್ಳಿರಿ, ನೆಲದ ಮೇಲೆ ಸರಿಯಾಗಿ ಪಾದಗಳನ್ನೂರಿರಿ; ಚುರುಕಾಗಿರಿ. ಮುಂಚಿತವಾಗಿ ಯೋಜನೆಯನ್ನು ಮಾಡುವುದು, ಪ್ರಶಾಂತರೂ, ಸಮಾಧಾನಚಿತ್ತರೂ, ನಿಶ್ಚಿಂತರೂ ಆಗಿರಲು ನಿಮಗೆ ಸಹಾಯ ಮಾಡುವುದು.

ಪ್ರಶ್ನೆಯೊಂದನ್ನು ಉತ್ತರಿಸುವ ಮೊದಲು ಯೋಚಿಸಿರಿ. ಸಭ್ಯರಾಗಿರಿ, ನಿಷ್ಕೃಷ್ಟರಾಗಿರಿ, ಪ್ರಾಮಾಣಿಕರಾಗಿರಿ, ಮತ್ತು ಬಿಚ್ಚುಮನಸ್ಸಿನವರಾಗಿರಿ. ಸಂಪೂರ್ಣ ಮಾಹಿತಿಯನ್ನು ಕೊಡಿರಿ. ಜಂಬಕೊಚ್ಚಬೇಡಿರಿ.

ನಿಮ್ಮೊಂದಿಗೆ ಒಂದು ಗೈಡ್‌ ಷೀಟ್‌ ಇರಲಿ. ಅದರಲ್ಲಿ ನಿಮ್ಮ ಎಲ್ಲಾ ಕೆಲಸಗಳು, ಕೆಲಸದ ತಾರೀಖುಗಳು, ಸಂಬಳ, ನೀವು ಮಾಡಿರುವ ವಿವಿಧ ಕೆಲಸಗಳು, ನೀವು ಆ ಕೆಲಸಗಳನ್ನು ಬಿಟ್ಟದ್ದರ ಕಾರಣಗಳನ್ನು ಪಟ್ಟಿಮಾಡಿರಿ.

ನಿಮ್ಮ ತರಬೇತಿ ಹಾಗೂ ಕೆಲಸದ ಅನುಭವವು, ನೀವು ಕೇಳಿಕೊಳ್ಳುತ್ತಿರುವ ಕೆಲಸದಲ್ಲಿ ಮುಂದುವರಿಯಲು ನಿಮಗೆ ಹೇಗೆ ಸಹಾಯ ಮಾಡುವುದೆಂಬುದನ್ನು ರುಜುಪಡಿಸಲು ಸಿದ್ಧರಾಗಿರಿ.

ಸಂಪರ್ಕಗಳಿಗಾಗಿ, ನಿಮ್ಮನ್ನು ಹಾಗೂ ನಿಮ್ಮ ಕೆಲಸವನ್ನು ತಿಳಿದಿರುವ, ಮೂವರು ವಿಶ್ವಾಸಾರ್ಹ ವ್ಯಕ್ತಿಗಳ ಹೆಸರುಗಳನ್ನು (ಮತ್ತು ಅವರ ಸಂಪೂರ್ಣ ವಿಳಾಸಗಳನ್ನು) ಕೊಡಿರಿ.

ದೃಢಭರವಸೆಯುಳ್ಳವರಾಗಿರಿ, ಹುರುಪುಳ್ಳವರಾಗಿರಿ, ಆದರೆ ಸುಳ್ಳಾಡಬೇಡಿರಿ. ಒಳ್ಳೆಯ ಇಂಗ್ಲಿಷನ್ನು ಉಪಯೋಗಿಸಿರಿ. ಸ್ಪಷ್ಟವಾಗಿ ಮಾತಾಡಿರಿ. ತುಂಬ ಮಾತಾಡಬೇಡಿ.

ಜಾಗರೂಕವಾಗಿ ಕಿವಿಗೊಡಿರಿ; ಸಭ್ಯರೂ ಚಾತುರ್ಯವುಳ್ಳವರೂ ಆಗಿರಿ. ಎಲ್ಲಕ್ಕಿಂತಲೂ ಹೆಚ್ಚಾಗಿ, ನಿಮ್ಮ ಭಾವಿ ಧಣಿಯೊಂದಿಗೆ ಯಾವದೇ ವಾಗ್ವಾದಗಳಲ್ಲಿ ಸಿಲುಕಿಕೊಳ್ಳಬೇಡಿರಿ.

ಧಣಿಯು ನೀವು ಎಷ್ಟು ಉತ್ತಮವಾಗಿ ಕೆಲಸಕ್ಕೆ ಹೊಂದಿಕೊಳ್ಳುತ್ತೀರಿ ಎಂಬುದರಲ್ಲಿ ಮಾತ್ರವೇ ಆಸಕ್ತನಾಗಿರುತ್ತಾನೆ. ವೈಯಕ್ತಿಕ, ಮನೆಯ, ಅಥವಾ ಹಣದ ಸಮಸ್ಯೆಗಳನ್ನು ಉಲ್ಲೇಖಿಸಬೇಡಿರಿ.

ನಿಮಗೆ ಆ ಕೆಲಸವು ದೊರಕುವುದಿಲ್ಲವೆಂದು ತೋರಿಬರುವುದಾದರೆ, ಆ ಸಂಸ್ಥೆಯೊಂದಿಗೆ ಜೊತೆಗೂಡಿರುವ ಇನ್ನಿತರ ಕೆಲಸಗಳ ಕುರಿತು ಧಣಿಯ ಸಲಹೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.

ಸಂದರ್ಶನದ ಬಳಿಕ, ಕೂಡಲೆ ಧಣಿಗೆ ಸಂಕ್ಷಿಪ್ತ ಥ್ಯಾಂಕ್‌-ಯೂ ಪತ್ರವನ್ನು ಕಳುಹಿಸಿರಿ. *

[ಅಧ್ಯಯನ ಪ್ರಶ್ನೆಗಳು]

^ ಮೂಲ: ನ್ಯೂ ಯಾರ್ಕ್‌ ಸ್ಟೇಟ್‌ ಎಂಪ್ಲಾಯ್‌ಮೆಂಟ್‌ ಸರ್ವಿಸ್‌ ಆಫೀಸ್‌ನ ಬ್ರೋಷರ್‌ ಧಣಿಯೊಬ್ಬನಿಗೆ “ಸ್ವತಃ ನಿಮ್ಮನ್ನು ನೀಡಿ”ಕೊಳ್ಳುವ ವಿಧ (ಇಂಗ್ಲಿಷ್‌).

[ಪುಟ 167 ರಲ್ಲಿರುವ ಚಿತ್ರಗಳು]

ನೀವು ಶಾಲೆಯಲ್ಲಿ ಕಲಿಯುವ ಕೌಶಲಗಳು, ಒಂದು ದಿನ ಕೆಲಸದಲ್ಲಿ ಪ್ರಯೋಜನಕರವಾಗಿ ಪರಿಣಮಿಸಬಹುದು