“ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿರಿ”
ಗೀತೆ 115
“ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿರಿ”
(1 ಪೇತ್ರ 4:8, NW)
1. ಗಾ-ಢ, ಶು-ದ್ಧ ಪ್ರೀ-ತಿ-ಯು,
ತಾ-ಳ-ಲು ಶ-ಕ್ತಿ-ಯ-ನ್ನು,
ದೇ-ವಾ-ನು-ಗ್ರ-ಹ-ವ-ನ್ನು
ದೊ-ರ-ಕಿ-ಸೋ-ದು.
ಇ-ದೇ ಪ್ರೀ-ತಿ ದೇ-ವ-ರು,
ಕ್ರಿ-ಸ್ತ-ನ ಕ-ಳು-ಹ-ಲು,
ಸಂ-ಬಂ-ಧ-ವ ಕ-ಟ್ಟ-ಲು,
ನೆ-ರ-ವಾ-ಯಿ-ತು.
ಯೆ-ಹೋ-ವ-ನ ಭ-ಯ-ವು
ಇ-ರ-ಲಿ ಯಾ-ವಾ-ಗ-ಲೂ,
ನ-ಡೆ-ಸ-ಲಿ ನ-ಮ್ಮ-ನ್ನು
ಯೇ-ಸು ಪ್ರೀ-ತಿ-ಯು.
ಈ ದು-ಷ್ಟ ಲೋ-ಕ-ದ-ಲ್ಲಿ,
ನ-ಡೆ-ಯೋ-ಣ ಪ್ರೀ-ತೀ-ಲಿ,
ಈ ಉ-ತ್ಕೃ-ಷ್ಟ ಮಾ-ರ್ಗ-ದಿ,
ದೇ-ವ ಮಾ-ರ್ಗ-ದಿ, ಹೌ-ದೀ ಮಾ-ರ್ಗ-ದಿ.
2. ಹೃ-ತ್ಪೂ-ರ್ವ-ಕ ಪ್ರೀ-ತಿ-ಯು,
ಅ-ಶಾಂ-ತಿ-ಯ ತ-ರ-ದು.
ಭೇ-ದ-ವ ತೋ-ರಿ-ಸ-ದು
ಮ-ಧ್ಯ-ದಿ ನ-ಮ್ಮ.
ದ-ಯೆ, ತಾ-ಳ್ಮೆ-ಯು-ಳ್ಳ-ದ್ದು,
ಬಾ-ಹ್ಯ ವ್ಯಾ-ಪಿ-ಸು-ವು-ದು,
ಮ-ನ-ಸ್ತಾ-ಪ ತೆ-ಗೆ-ದು,
ಐ-ಕ್ಯ ಮಾ-ಡೋ-ದು.
ಅಂ-ತ್ಯ-ವಿ-ದೆ ಸ-ಮೀ-ಪ,
ಇ-ದು ಪ್ರೀ-ತಿ-ಸೋ ಕಾ-ಲ.
ಆ-ವ-ರಿ-ಸ-ಲಿ ಸ-ದಾ,
ಸ-ಕ-ಲ-ರ-ನ್ನು.
ಪ-ರ-ಸ್ಪ-ರ ಪ್ರೀ-ತಿ-ಸಿ,
ವಿ-ವೇ-ಕ-ದಿ ವ-ರ್ತಿ-ಸಿ,
ದೇ-ವ-ಪ್ರೀ-ತಿ ಮಾ-ದ-ರಿ,
ಸ-ದಾ ತೋ-ರಿ-ಸಿ, ತೋ-ರಿ-ಸಿ ಸ-ದಾ.