ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸ್ವಂತ ಗ್ರಂಥ—ಒಂದು ನಿಧಿ

ದೇವರ ಸ್ವಂತ ಗ್ರಂಥ—ಒಂದು ನಿಧಿ

ಗೀತೆ 180

ದೇವರ ಸ್ವಂತ ಗ್ರಂಥ—ಒಂದು ನಿಧಿ

(ಜ್ಞಾನೋಕ್ತಿ 2:⁠1)

1. ನ-ರ-ರಿ-ಗೆ ಶಾಂ-ತ್ಯಾ-ನಂ-ದ ನಿ-ರೀ-ಕ್ಷೆ,

ಕೊ-ಡು-ವ ಗ್ರಂ-ಥ ಇ-ಹ-ದ-ಲ್ಲಿ-ದೆ.

ಅ-ದ-ರ ಯೋ-ಚ-ನೇ-ಲಿ ಬ-ಲ-ವಿ-ದೆ,

“ಮೃ-ತ,” “ಕು-ರು-ಡ” ವಾ-ಸಿ ಮಾ-ಡು-ತೆ.

ಇ-ದೇ ದೇ-ವ-ರ ಸ್ವಂ-ತ ಬೈ-ಬ-ಲ್‌ ಗ್ರಂಥ,

ಪ್ರೇ-ರಿ-ತ ಜ-ನ ಬ-ರೆ-ದ ಗ್ರಂ-ಥ.

ಯೆ-ಹೋ-ವ-ನ-ನ್ನು ಪ್ರೀ-ತಿ-ಸಿ-ದ ಜ-ನ,

ಪ-ವಿ-ತ್ರಾ-ತ್ಮ ಪ್ರೇ-ರಿ-ಸಿ-ದ ಜ-ನ.

2. ಬ-ರೆ-ದ-ರು ದೇ-ವ-ರ ಸೃ-ಷ್ಟಿ ಬ-ಗ್ಗೆ,

ವಿ-ಶ್ವ ಸೃ-ಷ್ಟಿ ವೃ-ತ್ತಾಂ-ತ ಕು-ರಿ-ತು.

ಪ-ರಿ-ಪೂ-ರ್ಣ ಆ-ದಿ ಮಾ-ನ-ವ ಬ-ಗ್ಗೆ,

ಪ-ರ-ದೈಸ್‌ ನ-ಷ್ಟ-ವಾ-ದ ಕು-ರಿ-ತು.

ದೇ-ವ-ದೂ-ತ-ನ ತ-ಪ್ಪು ಹೆ-ಜ್ಜೆ ಬ-ಗ್ಗೆ,

ಅ-ವ ಸ-ವಾ-ಲೊ-ಡ್ಡಿ-ದ ಕು-ರಿ-ತು,

ಅ-ದ-ರಿಂ-ದ ಬಂ-ತು ಪಾ-ಪ ಮ-ರ-ಣ,

ಆ-ದ-ರೆ ಜ-ಯ ಬೇ-ಗ ಬ-ರೋ-ದು.

3. ನ-ಮ್ಮ ಸ-ಮ-ಯ ಅ-ತಿ ಹ-ರ್ಷ-ಕಾ-ಲ,

ದೇ-ವ-ರಾ-ಜ್ಯ ಹು-ಟ್ಟಿ-ರು-ವ ಕಾ-ಲ.

ಯೆ-ಹೋ-ವ-ನ ರ-ಕ್ಷ-ಣಾ ದಿ-ನ-ವಿ-ದು,

ತ-ನ್ನ ಜ-ನ-ರ ರ-ಕ್ಷ-ಣಾ ದಿ-ನ.

ಇ-ದೆ ಈ ಗ್ರಂ-ಥ-ದ-ಲ್ಲಿ ಸು-ವಾ-ರ್ತೆ-ಯು,

ಚಿ-ನ್ನ-ಕ್ಕೂ, ನಿ-ಕ್ಷೇ-ಪ-ಕ್ಕೂ ಮಿ-ಗಿ-ಲು.

ಯೋ-ಚ-ನೆ ಮೀ-ರೋ ನಿ-ರೀ-ಕ್ಷೆ ನೀ-ಡು-ತೆ,

ಅ-ತ್ಯಂ-ತ ಮ-ಹಾ ನಿ-ಜ ಕ-ಥೆ-ಯು.