ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯರಿಗಿಂತ ಹೆಚ್ಚು ದೇವರಿಗೆ ವಿಧೇಯರಾಗುವುದು

ಮನುಷ್ಯರಿಗಿಂತ ಹೆಚ್ಚು ದೇವರಿಗೆ ವಿಧೇಯರಾಗುವುದು

ಗೀತೆ 2

ಮನುಷ್ಯರಿಗಿಂತ ಹೆಚ್ಚು ದೇವರಿಗೆ ವಿಧೇಯರಾಗುವುದು

(ಅ. ಕೃತ್ಯಗಳು 5:29)

1. ದೇ-ವ-ರ ಮೆ-ಚ್ಚಿ-ಸ-ಲಿ-ಕೆ

ಲೋ-ಕ-ವ ತ್ಯ-ಜಿ-ಸು.

ವಿ-ಚಿ-ತ್ರ-ವೆಂ-ದು ಕಾ-ಣು-ತೆ

ಜ-ನ-ರಿ-ಗೆ ಇ-ದು.

ದೇ-ವ-ರಿ-ಗೆ ವಿ-ಧೇ-ಯ-ತೆ

ಇ-ದೆ-ಮ್ಮ ನಿ-ಷ್ಕ-ರ್ಷೆ.

ನ-ಮ್ಮ ಬ-ದು-ಕು ಸ-ಫ-ಲ

ದೇ-ವ-ರ-ಲ್ಲಿ-ದ್ದ-ರೆ.

2. ‘ಕೈ-ಸ-ರ-ಗೆ’ ಆ-ತ-ನ-ದು

ಕೊ-ಡು-ವೆ-ವು ನಾ-ವು.

ತ-ರು-ತೆ ಗೌ-ರ-ವ ಇ-ದು

ದೇ-ವ ಸ-ತ್ಯ-ನೆಂ-ದು.

ತೆ-ತ್ತಿ-ದ್ದಾ-ನೆ ಆ-ತ ಬೆ-ಲೆ,

ನ-ಮ-ಗಿ-ಲ್ಲ ಹ-ಕ್ಕು.

ಯಾ-ಹು-ವ ಸೇ-ವಿ-ಸಿ-ರೆಂ-ದು

ನು-ಡಿ-ದ ಕ-ರ್ತ-ನು.

3. ಯೆ-ಹೋ-ವ-ನ ಸ್ತು-ತಿ-ಸ-ಲು

ಶಾಂ-ತಿ-ಲಿ ಜೀ-ವಿ-ಸು.

ಅ-ಧ-ರ್ಮ-ದಿ ನ-ಡೆ-ಯ-ದೆ

ಕ-ಲ-ಹ ಮಾ-ಡ-ದೆ,

ದೇ-ವ-ಪ್ರ-ಭು-ತ್ವ-ದ ಸೇ-ವೆ

ಸ-ಲ್ಲಿ-ಸಿ ದೇ-ವ-ಗೆ.

ಸಾ-ಕ್ಷಿ-ಯ ಭ-ಯ-ವಿ-ಲ್ಲ-ದೆ

ಕೊ-ಡು-ವೆ-ವಾ-ತ-ಗೆ.

4. ಪ-ವಿ-ತ್ರ ಸೇ-ವೆ ಪ್ರ-ಥ-ಮ

ಹೆ-ದ-ರೆ-ವಿ-ದ-ಕೆ.

ತೃ-ಷಾ-ರ್ಥ-ರಿ-ಗೆ ವಾ-ಕ್ಯ-ವ

ಕೊ-ಡು-ವೆ-ವು ಹಾ-ಗೆ.

ಜ-ನ-ರು ತಂ-ದ-ರೂ ತ-ಡೆ,

ಮಾ-ಡು-ವೆ-ವಿ-ದ-ನ್ನು:

ವಿ-ಧೇ-ಯ-ರಾ-ಗಿ ದೇ-ವ-ಗೆ

ಅಂ-ಟು-ವೆ-ವಾ-ತ-ಗೆ.