ರಾಜ್ಯ ಬೀಜವನ್ನು ಬಿತ್ತುವುದು
ಗೀತೆ 133
ರಾಜ್ಯ ಬೀಜವನ್ನು ಬಿತ್ತುವುದು
1. ಓ ಬ-ನ್ನಿ-ರಿ, ಯೆ-ಹೋ-ವ-ನ ದಾ-ಸ-ರೇ,
ಸ-ಮ-ರ್ಪಿ-ತ-ರೇ ಬ-ನ್ನಿ-ರಿ.
ದೇ-ವ ಕೆ-ಲ-ಸ-ವ ಮಾ-ಡ-ಲು ಬ-ನ್ನಿ,
ಕ್ರಿ-ಸ್ತ-ನ ಅ-ನು-ಸ-ರಿ-ಸಿ.
ಸ-ತ್ಯ ಬೀ-ಜ-ವ ಒ-ಳ್ಳೆ-ಯ ಮ-ಣ್ಣ-ಲಿ,
ವಿ-ಶ್ವಾ-ಸ-ದಿಂ-ದ ಬಿ-ತ್ತಿ-ರಿ.
ನಂ-ಬಿ-ಕೆ-ಯ ಕೆ-ಲ-ಸ ಮಾ-ಡಿ-ದ-ರೆ,
ಶ್ರೇ-ಷ್ಠ ಫ-ಲ-ವ ಕೊ-ಯ್ಯು-ವಿ-ರಿ.
2. ದಾ-ರಿ ಪ-ಕ್ಕ-ದಿ ಬೀ-ಳು-ವ ಬೀ-ಜ-ವ,
ಸೈ-ತಾ-ನ “ಹ-ಕ್ಕಿ” ತಿ-ನ್ನೋ-ದು.
ಬಂ-ಡೆ ಮೇ-ಲೆ ಬೀ-ಳು-ವ ಬೀ-ಜ, ವೈ-ರಿ
ಶಾ-ಖ-ದಿಂ-ದ ಬಾ-ಡು-ವು-ದು.
ಚಿಂ-ತೆ, ಆ-ಶೆ-ಗ-ಳೆಂ-ಬ ಮು-ಳ್ಳು-ಗ-ಳು,
ಬೀ-ಜ-ವ ಅ-ದು-ಮು-ವು-ವು.
ಆ-ದ-ರೂ ಕೆ-ಲ-ವು ಒ-ಳ್ಳೇ ನೆ-ಲ-ದ ಮೇ-ಲೆ
ನಿ-ಶ್ಚ-ಯ ಬೀ-ಳು-ವು-ವು.
3. ಒ-ಳ್ಳೇ ಮ-ಣ್ಣ ಮೇ-ಲೆ ಬೀ-ಜ ಬೀ-ಳೋ-ದು,
ನಿ-ಮ್ಮ-ನ್ನು ಹೊಂ-ದ-ಬ-ಹು-ದು.
ತಾ-ಳ್ಮೆ, ಪ್ರೀ-ತಿ-ಯ-ನ್ನು ತೋ-ರಿ-ಸು-ವಾ-ಗ
ಸೈ-ತಾ-ನ “ಹ-ಕ್ಕಿ” ಹಾ-ರೋ-ದು.
ಚಿಂ-ತೆ-ಯೆಂ-ಬ ಮು-ಳ್ಳ-ನ್ನು ಧೈ-ರ್ಯ-ದಿಂ-ದ
ಕಿ-ತ್ತೊ-ಗೆ-ಯಿ-ರಿ ಅ-ದ-ನು.
ಹೀ-ಗೆ ನೂ-ರ-ಲ್ಲ-ದಿ-ರೆ ಮೂ-ವ-ತ್ತ-ನ್ನು
ಕೊ-ಯ್ಯು-ವಿ-ರಿ, ನಿ-ಶ್ಚ-ಯ-ವಿ-ದು.