ಸುವಾರ್ತೆಯನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ!
ಗೀತೆ 71
ಸುವಾರ್ತೆಯನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ!
1. ಸೇ-ವೇ-ಲಿ ಸ್ಥಿ-ರ-ವಾ-ಗಿ-ದ್ದು
ಕೊ-ನೇ ಗ-ಳಿ-ಗೇ-ಲಿ,
ಸೋ-ದ-ರ-ರಾ-ಗಿ ದು-ಡಿ-ದು
ದೇ-ವ ಬ-ಲ-ದ-ಲ್ಲಿ.
ಸ-ತ್ಯ ದೀ-ಪ ಉ-ರಿ-ಯು-ತೆ,
ಕೊ-ಡ-ಲಿ-ದೆ ಸಾ-ಕ್ಷಿ.
ವ್ಯ-ರ್ಥ-ವ-ಲ್ಲ ಈ ಕೆ-ಲ-ಸ,
ಕೊ-ಡು-ತ್ತ-ದೆ ತೃ-ಪ್ತಿ.
2. ಪು-ನ-ರು-ತ್ಥಾ-ನ ನಿ-ರೀ-ಕ್ಷೆ,
ಹೃ-ದ ಹ-ರ್ಷಿ-ಸು-ತೆ.
ಸ್ಥಿ-ರ-ವಿ-ರು-ವ ನಂ-ಬಿ-ಕೆ,
ಉ-ಲ್ಲಾ-ಸ ನೀ-ಡು-ತೆ.
ವಾ-ಗ್ದಾ-ನ-ದ-ಲ್ಲಿ ನಂ-ಬಿ-ಕೆ,
ಸ-ದಾ ನ-ಮ-ಗಿ-ದೆ.
ಇ-ರ-ಲೆ-ಮ-ಗೆ ದೃ-ಢ-ತೆ,
ವಿ-ಜ-ಯ ಮುಂ-ದ-ಕ್ಕೆ.
3. ಪ್ರ-ಯಾ-ಸ-ದ ಕೆ-ಲ-ಸ-ವು
ಗು-ರಿ ಮು-ಟ್ಟಿ-ಸೋ-ದು.
ಸು-ಸ-ಹ-ವಾ-ಸ ನ-ಮ್ಮ-ನ್ನು
ಬ-ಲ-ವಾ-ಗಿ-ಡೋ-ದು.
“ಸು-ವಾ-ರ್ತೆ-ಯು” ನಿ-ರೀ-ಕ್ಷೆ-ಯ
ಸ್ಥಿ-ರ-ಪ-ಡಿ-ಸೋ-ದು.
ಆ-ಗ-ಲಿ ಕ್ರಿ-ಸ್ತ ಮು-ಖೇ-ನ
ದೇ-ವ-ಗೆ ಸ್ತು-ತಿ-ಯು.