ಆಡಳಿತ ಮಂಡಲಿಯಿಂದ ಒಂದು ಪತ್ರ
ಸುವಾರ್ತೆ ಸಾರುವುದರಲ್ಲಿ ನಮ್ಮ ಜೊತೆಗಾರರಾಗಿರುವ ಪ್ರಿಯರೇ,
ಒಬ್ಬನೇ ಸತ್ಯ ದೇವರಾದ ಯೆಹೋವನನ್ನು ನಾವೆಲ್ಲರೂ ಜೊತೆಯಾಗಿ ಆರಾಧಿಸುವುದು ನಿಜಕ್ಕೂ ಒಂದು ದೊಡ್ಡ ಸೌಭಾಗ್ಯ! ಯೆಹೋವನ ‘ಜೊತೆಯಲ್ಲಿ ಕೆಲಸಮಾಡುವ’ ಸದವಕಾಶ ಸಹ ನಮಗಿದೆ. ಸ್ವರ್ಗದಲ್ಲಿ ಸ್ಥಾಪನೆಯಾಗಿರುವ ಆತನ ರಾಜ್ಯದ ಕುರಿತು ಸಾರುವ ಮತ್ತು ಬೋಧಿಸುವ ಕೆಲಸವನ್ನು ಆತನು ನಮಗೆ ಕೊಟ್ಟಿದ್ದಾನೆ. ಅದು ಪವಿತ್ರ ಸೇವೆಯಾಗಿದೆ ಮತ್ತು ಜೀವರಕ್ಷಕ ಕೆಲಸವಾಗಿದೆ. (1 ಕೊರಿಂ. 3:9; ಮತ್ತಾ. 28:19, 20) ಈ ಕೆಲಸವನ್ನು ಒಗ್ಗಟ್ಟಿನಿಂದ ಶಾಂತಿಯಿಂದ ಭೂಮಿಯಲ್ಲೆಲ್ಲ ಮಾಡಬೇಕಾದರೆ ನಾವು ಒಳ್ಳೇ ರೀತಿಯಲ್ಲಿ ಸಂಘಟಿತರಾಗಿರಬೇಕು.—1 ಕೊರಿಂ. 14:40.
ಈ ಪುಸ್ತಕವು, ಕ್ರೈಸ್ತ ಸಭೆ ಇಂದು ಹೇಗೆ ಕೆಲಸ ಮಾಡುತ್ತಿದೆಯೆಂದು ವಿವರಿಸುತ್ತದೆ. ಸಭೆಯ ಸದಸ್ಯರಾಗಿರುವ ನಿಮಗೆ ಯಾವೆಲ್ಲ ಸುಯೋಗಗಳಿವೆ ಮತ್ತು ಜವಾಬ್ದಾರಿಗಳಿವೆ ಎಂದು ತಿಳಿಸುತ್ತದೆ. ನಿಮಗಿರುವ ಸುಯೋಗಗಳನ್ನು ನೀವು ಅಮೂಲ್ಯವಾಗಿ ಕಾಣುವಲ್ಲಿ ಮತ್ತು ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸುವಲ್ಲಿ ದೇವರಲ್ಲಿ ನಿಮ್ಮ ನಂಬಿಕೆ ಇನ್ನೂ ಬಲಗೊಳ್ಳುವುದು.—ಅ. ಕಾ. 16:4, 5; ಗಲಾ. 6:5.
ಆದುದರಿಂದ ನೀವು ಈ ಪುಸ್ತಕವನ್ನು ಜಾಗ್ರತೆಯಿಂದ ಅಧ್ಯಯನ ಮಾಡಿರಿ. ಯಾವ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸಬೇಕಿದೆ ಎಂದು ಗಮನಿಸಿರಿ. ನೀವು ಹೊಸದಾಗಿ ಪ್ರಚಾರಕರಾಗಿದ್ದೀರಾ? ಹಾಗಾದರೆ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗಲು ಯಾವ ಹೆಜ್ಜೆಗಳನ್ನು ತಕ್ಕೊಳ್ಳಬೇಕಿದೆ ಎಂದು ಈ ಪುಸ್ತಕದಿಂದ ತಿಳಿಯಿರಿ. ನೀವು ಈಗಾಗಲೇ ದೀಕ್ಷಾಸ್ನಾನ ಪಡೆದಿರುವುದಾದರೆ ಯೆಹೋವನಿಗೆ ಇನ್ನೂ ಆಪ್ತರಾಗಲು 1 ತಿಮೊ. 4:15) ಸಭೆಯಲ್ಲಿ ಶಾಂತಿಯನ್ನು ಕಾಪಾಡಲು ವೈಯಕ್ತಿಕವಾಗಿ ನೀವೇನು ಮಾಡಬಹುದೆಂದು ತಿಳಿದುಕೊಳ್ಳಿ.—2 ಕೊರಿಂ. 13:11.
ಮತ್ತು ಸೇವೆಯನ್ನು ಹೆಚ್ಚಿಸಲು ಏನೆಲ್ಲಾ ಮಾಡಬಹುದೆಂದು ಕಲಿಯಿರಿ. (ದೇವರ ಸಂಘಟನೆಗೆ ಪ್ರತಿ ದಿನವೂ ಸಾವಿರಾರು ಮಂದಿ ಬರುತ್ತಿದ್ದಾರೆ. ಸಭೆಗಳ ಸಂಖ್ಯೆ ಹೆಚ್ಚುತ್ತಿದೆ. ಆದುದರಿಂದ ಮೇಲ್ವಿಚಾರಣೆ ಮಾಡಲು ಅರ್ಹ ಸಹೋದರರು ಅಗತ್ಯವಾಗಿ ಬೇಕಾಗಿದ್ದಾರೆ. ನೀವು ದೀಕ್ಷಾಸ್ನಾನ ಪಡೆದ ಸಹೋದರರಾಗಿದ್ದರೆ ಸಹಾಯಕ ಸೇವಕರಾಗಲು ಮತ್ತು ಮುಂದೆ ಸಭಾ ಹಿರಿಯರಾಗಿ ಅರ್ಹರಾಗಲು ಏನು ಮಾಡಬೇಕೆಂದು ಈ ಪುಸ್ತಕವು ನಿಮಗೆ ತಿಳಿಸುತ್ತದೆ.—1 ತಿಮೊ. 3:1.
ಯೆಹೋವನ ಸಂಘಟನೆಯಲ್ಲಿ ನಿಮಗಿರುವ ಪಾತ್ರವನ್ನು ತಿಳಿದುಕೊಳ್ಳಲು ಮತ್ತು ಅದನ್ನು ಅಮೂಲ್ಯವಾಗಿ ನೋಡಲು ಈ ಪುಸ್ತಕ ನಿಮಗೆ ಸಹಾಯಮಾಡಲಿ ಎನ್ನುವುದು ನಮ್ಮ ಹೃದಯದಾಳದ ಪ್ರಾರ್ಥನೆ. ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ. ತಂದೆಯಾದ ಯೆಹೋವನನ್ನು ನೀವು ನಿತ್ಯನಿರಂತರಕ್ಕೂ ಸಂತೋಷದಿಂದ ಆರಾಧಿಸುವಂತಾಗಲಿ ಎಂದು ನಾವು ಯಾವಾಗಲೂ ಪ್ರಾರ್ಥಿಸುತ್ತೇವೆ.—ಕೀರ್ತ. 37:10, 11; ಯೆಶಾ. 65:21-25.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ