ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳಲಾಗುವ ಪ್ರಶ್ನೆಗಳು

ಭಾಗ 1 ಬೈಬಲಿನ ಮುಖ್ಯ ಬೋಧನೆಗಳು

ಭಾಗ 1 ಬೈಬಲಿನ ಮುಖ್ಯ ಬೋಧನೆಗಳು

ಯೆಹೋವನ ಸಾಕ್ಷಿಗಳ ಸಹಾಯದಿಂದ ನೀವು ಬೈಬಲ್‌ ಅಧ್ಯಯನ ಮಾಡಿ ಸತ್ಯವನ್ನು ತಿಳಿದುಕೊಂಡಿರಿ. ಇದು ಯೆಹೋವನೊಂದಿಗೆ ಆಪ್ತ ಸಂಬಂಧಕ್ಕೆ ಬರಲು ನಿಮಗೆ ಸಹಾಯ ಮಾಡಿದೆ. ನಿಮ್ಮ ಜೀವನಕ್ಕೊಂದು ನಿರೀಕ್ಷೆ ಸಿಕ್ಕಿದೆ. ದೇವರ ರಾಜ್ಯದ ಆಳ್ವಿಕೆಯ ಸಮಯದಲ್ಲಿ ಈ ಭೂಮಿ ಸುಂದರ ತೋಟವಾಗುವಾಗ ಅನೇಕ ಆಶೀರ್ವಾದಗಳನ್ನು ಅನುಭವಿಸಲು ನೀವು ಕಾಯುತ್ತಿದ್ದೀರಿ ಎಂಬುದರಲ್ಲಿ ಸಂಶಯವಿಲ್ಲ. ಬೈಬಲಿನಲ್ಲಿ ನಿಮ್ಮ ನಂಬಿಕೆ ಸಹ ಹೆಚ್ಚಾಗಿದೆ. ಸಭೆಯಲ್ಲಿ ಸಹೋದರ ಸಹೋದರಿಯರೊಟ್ಟಿಗೆ ಸಹವಾಸ ಮಾಡುವುದರಿಂದ ಈಗಲೇ ನೀವು ಅನೇಕ ಆಶೀರ್ವಾದಗಳನ್ನು ಪಡೆದಿದ್ದೀರಿ. ಯೆಹೋವನು ತನ್ನ ಜನರನ್ನು ಹೇಗೆ ಮಾರ್ಗದರ್ಶಿಸುತ್ತಾನೆ ಎಂಬುದು ಸಹ ನಿಮಗೀಗ ಅರ್ಥವಾಗಿದೆ.—ಜೆಕ. 8:23.

ದೀಕ್ಷಾಸ್ನಾನ ಪಡೆಯಲು ನೀವು ತಯಾರಾಗುತ್ತಿರುವ ಈ ಸಮಯದಲ್ಲಿ ಬೈಬಲಿನ ಮುಖ್ಯ ಬೋಧನೆಗಳನ್ನು ಒಮ್ಮೆ ಅವಲೋಕಿಸಿದರೆ ನಿಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಆ ಬೋಧನೆಗಳನ್ನು ಸಭಾ ಹಿರಿಯರು ನಿಮ್ಮೊಂದಿಗೆ ಚರ್ಚಿಸುವರು. (ಇಬ್ರಿ. 6:1-3) ಯೆಹೋವನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನೀವು ಪ್ರಯತ್ನ ಮಾಡುತ್ತಾ ಇರುವಾಗ ಆತನು ನಿಮ್ಮನ್ನು ಆಶೀರ್ವದಿಸಲಿ ಮತ್ತು ಭವಿಷ್ಯತ್ತಿನಲ್ಲಿ ನೀವು ನಿತ್ಯಜೀವದ ಬಹುಮಾನವನ್ನು ಪಡೆಯುವಂತಾಗಲಿ.—ಯೋಹಾ. 17:3.

1. ಸತ್ಯ ದೇವರು ಯಾರು?

“ನೀವು ಇದನ್ನೆಲ್ಲಾ ಆಲೋಚಿಸಿ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಯೆಹೋವನೊಬ್ಬನೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿಡಬೇಕು.”—ಧರ್ಮೋ. 4:39.

“ಅನೇಕ ‘ದೇವರುಗಳು’ ಮತ್ತು ಅನೇಕ ‘ಕರ್ತರು’ ಇರುವಂತೆಯೇ ಆಕಾಶದಲ್ಲಿಯಾಗಲಿ ಭೂಮಿಯಲ್ಲಿಯಾಗಲಿ ‘ದೇವರುಗಳು’ ಎಂದು ಕರೆಸಿಕೊಳ್ಳುವವರು ಅನೇಕರಿರುವುದಾದರೂ ನಮಗೆ ವಾಸ್ತವವಾಗಿ ತಂದೆಯಾದ ಒಬ್ಬನೇ ದೇವರಿದ್ದಾನೆ; ಆತನಿಂದಲೇ ಎಲ್ಲ ಸಂಗತಿಗಳು ಅಸ್ತಿತ್ವದಲ್ಲಿವೆ ಮತ್ತು ನಾವು ಆತನಿಗಾಗಿ ಇದ್ದೇವೆ. ಹಾಗೂ ನಮಗೆ ಒಬ್ಬನೇ ಕರ್ತನಿದ್ದಾನೆ; ಅವನು ಯೇಸು ಕ್ರಿಸ್ತನು ಮತ್ತು ಅವನ ಮೂಲಕ ಎಲ್ಲ ಸಂಗತಿಗಳು ಅಸ್ತಿತ್ವದಲ್ಲಿವೆ ಹಾಗೂ ನಾವು ಅವನ ಮೂಲಕ ಇದ್ದೇವೆ.”—1 ಕೊರಿಂ. 8:5,6.

ಇದನ್ನೂ ನೋಡಿ: ಕೀರ್ತ. 83:18; ಯೆಶಾ. 43:10-12.

2. ಯೆಹೋವನಲ್ಲಿರುವ ಮುಖ್ಯ ಗುಣಗಳು ಯಾವುವು?

“ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾ. 4:8.

“ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋ. 32:4.

“ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ!”—ರೋಮ. 11:33.

“ಕರ್ತನಾದ ಯೆಹೋವನೇ! ಆಹಾ, ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದೀ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ.”—ಯೆರೆ. 32:17.

3. ಯೆಹೋವನ ಅಧಿಕಾರದ ಕುರಿತು ತಿಳಿದುಕೊಳ್ಳಲು ಬೈಬಲಿನಲ್ಲಿ ಬಳಸಲಾಗಿರುವ ಯಾವ ಪದಗಳು ನಮಗೆ ಸಹಾಯಮಾಡುತ್ತವೆ?

“ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ [ನಿಯಮದಾತ, NW], ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.”—ಯೆಶಾ. 33:22.

“ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ; ಆತನು ದಣಿದು ಬಳಲುವದಿಲ್ಲ; ಆತನ ವಿವೇಕವು ಪರಿಶೋಧನೆಗೆ ಅಗಮ್ಯ.” —ಯೆಶಾ. 40:28.

4. ಯೆಹೋವ ದೇವರಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸುವುದರ ಅರ್ಥವೇನು? ಅಂತಹ ಭಕ್ತಿಗೆ ಆತನೊಬ್ಬನೇ ಅರ್ಹನು ಏಕೆ?

“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು.”—ಮಾರ್ಕ 12:30.

“ಯೇಸು [ಸೈತಾನನಿಗೆ], ‘“ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು” ಎಂದು ಬರೆದಿದೆ’ ಅಂದನು.”—ಲೂಕ 4:8.

“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.”—ಪ್ರಕ. 4:11.

ಇದನ್ನೂ ನೋಡಿ: ವಿಮೋ. 20:4, 5; ಅ. ಕಾ. 17:28.

5. ದೇವರ ಹೆಸರಿನ ಬಗ್ಗೆ ನಮಗೆ ಹೇಗೆ ಅನಿಸಬೇಕು?

“ನನ್ನ ದೇವರೇ, ಒಡೆಯನೇ, ನಿನ್ನನ್ನು ಘನಪಡಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು. ದಿನಂಪ್ರತಿ ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.”—ಕೀರ್ತ. 145:1, 2.

“ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: ‘ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.’”—ಮತ್ತಾ. 6:9.

ಇದನ್ನೂ ನೋಡಿ: ವಿಮೋ. 20:7.

6. ನಾವು ದೇವರ ಹೆಸರನ್ನು ಉಪಯೋಗಿಸುವುದು ಪ್ರಾಮುಖ್ಯವೇಕೆ?

“ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಹೇಗೆ ಮೊದಲ ಬಾರಿಗೆ ಅವರ ಕಡೆಗೆ ಗಮನಹರಿಸಿದನು ಎಂಬುದನ್ನು ಸಿಮೆಯೋನನು ಸ್ಪಷ್ಟವಾಗಿ ವಿವರಿಸಿದ್ದಾನೆ.”—ಅ. ಕಾ. 15:14.

“ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು.”—ರೋಮ. 10:13.

ಇದನ್ನೂ ನೋಡಿ: ಕೀರ್ತ. 91:14; ಯೋವೇ. 2:32.

7. ಯೆಹೋವನು ತನ್ನ ಹೆಸರನ್ನು ಹೇಗೆ ಪವಿತ್ರಗೊಳಿಸುವನು? ಅದರಲ್ಲಿ ನಮಗೆ ಯಾವ ಪಾಲಿದೆ?

“ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.”—ಯೆಹೆ. 38:23.

“ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ. ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಕೀರ್ತ. 83:17, 18.

“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”—ಜ್ಞಾನೋ. 27:11.

ಇದನ್ನೂ ನೋಡಿ: ಯೆಹೆ. 36:16-18; 1 ಪೇತ್ರ 2:12.

8. ದೇವರ ಮೂರ್ತಿ ಮಾಡುವುದು ತಪ್ಪೇಕೆ? ‘ಮೂರ್ತಿ ಇಟ್ಟು ಪೂಜೆ ಮಾಡಿದರೂ ನಮ್ಮ ಆರಾಧನೆ ದೇವರಿಗೇ ಹೋಗುತ್ತದೆ’ ಎಂದು ಹೇಳುವುದು ತಪ್ಪೇಕೆ?

‘ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು, ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ.’—ಧರ್ಮೋ. 5:8, 9.

“ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.”—ಯೆಶಾ. 42:8.

“ದೇವರು ಆತ್ಮಜೀವಿಯಾಗಿದ್ದಾನೆ ಮತ್ತು ಆತನನ್ನು ಆರಾಧಿಸುವವರು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು.”—ಯೋಹಾ. 4:24.

“ನಾವು ನೋಡುವವರಾಗಿ ನಡೆಯದೆ ನಂಬಿಕೆಯಿಂದಲೇ ನಡೆಯುತ್ತಿದ್ದೇವೆ.”—2 ಕೊರಿಂ. 5:7.

9. ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದು ಅಂದರೇನು? ಪ್ರಾರ್ಥನೆಯಲ್ಲಿ ನೀವು ಯೆಹೋವನಿಗೆ ವೈಯಕ್ತಿಕ ಸಮರ್ಪಣೆಯನ್ನು ಮಾಡಿಕೊಂಡಿದ್ದೀರಾ?

“‘ಇಗೋ ದೇವರೇ, ನಾನು . . . ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ’ . . . ‘ಇಗೋ, ನಾನು ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ.’”—ಇಬ್ರಿ. 10:7, 9.

“ಯೇಸು ತನ್ನ ಶಿಷ್ಯರಿಗೆ, ‘ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ’” ಅಂದನು.—ಮತ್ತಾ. 16:24.

10. ಯೇಸು ಕ್ರಿಸ್ತನು ಯಾರು?

“ಆಗ ಸೀಮೋನ ಪೇತ್ರನು, ‘ನೀನು ಕ್ರಿಸ್ತನು, ಜೀವವುಳ್ಳ ದೇವರ ಮಗನು’ ಎಂದು ಉತ್ತರಕೊಟ್ಟನು.”—ಮತ್ತಾ. 16:16.

“ಅವನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ ಆಗಿದ್ದಾನೆ. ಏಕೆಂದರೆ ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು, ಅವು ಸಿಂಹಾಸನಗಳಾಗಿರಲಿ ಪ್ರಭುತ್ವಗಳಾಗಿರಲಿ ಸರಕಾರಗಳಾಗಿರಲಿ ಅಧಿಕಾರಗಳಾಗಿರಲಿ ಎಲ್ಲವೂ ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು.”—ಕೊಲೊ. 1:15, 16.

ಇದನ್ನೂ ನೋಡಿ: ಯೋಹಾ. 1:1, 2, 14; ಅ. ಕಾ. 2:36.

11. ಯೇಸು ಯೆಹೋವನಿಗೆ ಸಮಾನನೋ? ಯೆಹೋವನು ಯೇಸುವಿಗೆ ಯಾವ ಅಧಿಕಾರವನ್ನು ಕೊಟ್ಟಿದ್ದಾನೆ?

“ನಾನು ತಂದೆಯ ಬಳಿಗೆ ಹೋಗುತ್ತೇನೆ . . . ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು.”—ಯೋಹಾ. 14:28.

“ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ. ಅವನು ದೇವರ ಸ್ವರೂಪದಲ್ಲಿದ್ದರೂ, ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ. ಅದರ ಬದಲಿಗೆ ಅವನು ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿ ಮನುಷ್ಯರಿಗೆ ಸದೃಶನಾದನು. ಅದಕ್ಕಿಂತಲೂ ಹೆಚ್ಚಾಗಿ, ಅವನು ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು. ಇದೇ ಕಾರಣಕ್ಕಾಗಿ ದೇವರು ಸಹ ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು.”—ಫಿಲಿ. 2:5-11.

ಇದನ್ನೂ ನೋಡಿ: ದಾನಿ. 7:13, 14; ಯೋಹಾ. 14:10, 11; 1 ಕೊರಿಂ. 11:3.

12. ಯೇಸು ಭೂಮಿಗೆ ಯಾಕೆ ಬಂದನು?

“ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.”—ಮತ್ತಾ. 20:28.

“ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”—ಯೋಹಾ. 3:16.

“ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಅವನು ಕಂಡು, ‘ನೋಡಿ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ!’” ಎಂದನು.—ಯೋಹಾ. 1:29.

“ನಾನು ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿಯೇ ಹುಟ್ಟಿದ್ದೇನೆ ಮತ್ತು ಅದಕ್ಕಾಗಿಯೇ ಈ ಲೋಕಕ್ಕೆ ಬಂದಿದ್ದೇನೆ.”—ಯೋಹಾ. 18:37.

13. ಯೇಸು ನಮಗಾಗಿ ಯಾಕೆ ಸಾಯಬೇಕಿತ್ತು? ಅದರಿಂದ ನಮಗೇನು ಪ್ರಯೋಜನ?

“ಅವನ ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು . . . ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು.”—ಎಫೆ. 1:7.

“ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಏಕೆಂದರೆ ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ; ಹೀಗೆ ಎಲ್ಲರೂ ಸತ್ತವರಾದರು. ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು.”—2 ಕೊರಿಂ. 5:14, 15.

ಇದನ್ನೂ ನೋಡಿ: ರೋಮ. 3:23; 1 ಯೋಹಾ. 4:11.

14. ಪವಿತ್ರಾತ್ಮ ಅಂದರೇನು? ಪವಿತ್ರಾತ್ಮದ ಮೂಲಕ ಯೆಹೋವನು ಏನೆಲ್ಲ ಮಾಡಿದ್ದಾನೆ?

“ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.”—ಆದಿ. 1:2.

“ಶಾಸ್ತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ಯಾವುದೇ ಖಾಸಗಿ ಅರ್ಥವಿವರಣೆಯಿಂದ ಉಂಟಾಗುವುದಿಲ್ಲ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಿರಿ. ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:20, 21.

“ಅವರೆಲ್ಲರೂ ಪವಿತ್ರಾತ್ಮದಿಂದ ತುಂಬಿದವರಾಗಿ, ಆ ಆತ್ಮವು ತಮಗೆ ಮಾತಾಡಲು ಶಕ್ತಿಯನ್ನು ಕೊಡುತ್ತಿದ್ದ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದರು.”—ಅ. ಕಾ. 2:4.

15. ಪವಿತ್ರಾತ್ಮವು ಇಂದು ನಮಗೆ ಹೇಗೆ ಸಹಾಯಮಾಡುತ್ತಿದೆ?

“ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.”—ಅ. ಕಾ. 1:8.

“ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ.”—ಅ. ಕಾ. 20:28.

“ದೇವರು ಈ ವಿಷಯಗಳನ್ನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಪ್ರಕಟಪಡಿಸಿದ್ದಾನೆ. ಆ ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ.”—1 ಕೊರಿಂ. 2:10.

“ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ, ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ. ಇವುಗಳನ್ನು ಯಾವ ಧರ್ಮಶಾಸ್ತ್ರವೂ ವಿರೋಧಿಸುವುದಿಲ್ಲ.”—ಗಲಾ. 5:22, 23.

ಇದನ್ನೂ ನೋಡಿ: ಮತ್ತಾ. 10:19, 20; ಯೋಹಾ. 14:26.

16. ದೇವರ ರಾಜ್ಯ ಅಂದರೇನು?

“ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿ. 2:44.

“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.”—ಮತ್ತಾ. 6:10.

ಇದನ್ನೂ ನೋಡಿ: ಯೆಶಾ. 9:7; ಯೋಹಾ. 18:36.

17. ದೇವರ ರಾಜ್ಯ ಭೂಮಿಯನ್ನು ಆಳುವಾಗ ಭೂಮಿಯಲ್ಲಿ ಯಾವ ಬದಲಾವಣೆಗಳು ಆಗುತ್ತವೆ? ಮನುಷ್ಯರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

“ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕ. 21:4.

“ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ.”—ಯೆಶಾ. 11:8, 9.

ಇದನ್ನೂ ನೋಡಿ: ಯೆಶಾ. 26:9; 65:21, 22.

18. ಮೊದಲು ದೇವರ ರಾಜ್ಯವನ್ನು ಹುಡುಕುವುದು ಅಂದರೇನು?

“ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ . . . ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ . . . ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು . . . ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ. . . . ಆದುದರಿಂದ ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ.”—ಮತ್ತಾ. 6:19-32.

“ಸ್ವರ್ಗದ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ಕಂಡುಕೊಂಡು ಅಡಗಿಸಿಟ್ಟು ತನಗಾದ ಸಂತೋಷದ ನಿಮಿತ್ತ ಅವನು ಹೋಗಿ ತನ್ನ ಬಳಿಯಿರುವುದನ್ನೆಲ್ಲ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ. ಇದಲ್ಲದೆ ಸ್ವರ್ಗದ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುತ್ತಾ ಹೋಗುವ ಒಬ್ಬ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡಾಗ ಅವನು ಹೋಗಿ ಒಡನೆಯೇ ತನ್ನ ಬಳಿಯಿರುವುದನ್ನೆಲ್ಲ ಮಾರಿ ಅದನ್ನು ಕೊಂಡುಕೊಂಡನು.”—ಮತ್ತಾ. 13:44-46.

ಇದನ್ನೂ ನೋಡಿ: ಮತ್ತಾ. 16:24; 19:27-29.

19. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ದೇವರ ರಾಜ್ಯವು ಈಗ ಸ್ವರ್ಗದಲ್ಲಿ ಆಳುತ್ತಿದೆ ಎಂದು ನಮಗೆ ಹೇಗೆ ಗೊತ್ತು?

“ಅವನು ಆಲೀವ್‌ಮರಗಳ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ ಶಿಷ್ಯರು ಪ್ರತ್ಯೇಕವಾಗಿ ಅವನ ಬಳಿಗೆ ಬಂದು, ‘ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು? ನಮಗೆ ಹೇಳು’ ಎಂದರು.”—ಮತ್ತಾ. 24:3.

“ಆದರೆ ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು ಎಂಬುದನ್ನು ತಿಳಿದುಕೊ. ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವವರೂ ಆಗಿರುವರು; ಇಂಥವರಿಂದ ದೂರವಿರು.”—2 ತಿಮೊ. 3:1-5.

ಇದನ್ನೂ ನೋಡಿ: ಮತ್ತಾ. 24:4-14; ಪ್ರಕ. 6:1-8; 12:1-12.

20. ಪಿಶಾಚ ಅಥವಾ ಸೈತಾನ ಯಾರು? ಅವನು ಸೈತಾನನಾದದ್ದು ಹೇಗೆ? ಕೆಲವು ದೇವದೂತರು ದೆವ್ವಗಳಾದದ್ದು ಹೇಗೆ?

“ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿರುವ ಆ ಮಹಾ ಘಟಸರ್ಪ, ಅಂದರೆ ಪಿಶಾಚನೆಂದೂ ಸೈತಾನನೆಂದೂ ಕರೆಯಲ್ಪಡುವ ಪುರಾತನ ಸರ್ಪ ಭೂಮಿಗೆ ದೊಬ್ಬಲ್ಪಟ್ಟನು.”—ಪ್ರಕ. 12:9.

“ಅವನು ಆರಂಭದಿಂದಲೇ ಒಬ್ಬ ನರಹಂತಕನಾಗಿದ್ದು ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಕ್ಕೆ ಅನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.”—ಯೋಹಾ. 8:44.

“ತಮ್ಮ ಮೂಲಸ್ಥಾನವನ್ನು ಕಾಪಾಡಿಕೊಳ್ಳದೆ ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ ದೇವದೂತರಿಗೆ ಆತನು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಾಗುವ ನ್ಯಾಯತೀರ್ಪಿಗಾಗಿ ದಟ್ಟವಾದ ಕತ್ತಲೆಯಲ್ಲಿ ಇಟ್ಟಿದ್ದಾನೆ.”—ಯೂದ 6.

ಇದನ್ನೂ ನೋಡಿ: ಯೋಬ 1:6; 2:1.

21. ಸೈತಾನನು ಏದೆನ್‌ ತೋಟದಲ್ಲಿ ಯೆಹೋವನ ಬಗ್ಗೆ ಮತ್ತು ಆತನು ಆಳುವ ವಿಧದ ಬಗ್ಗೆ ಯಾವ ಪ್ರಶ್ನೆಗಳನ್ನು ಎಬ್ಬಿಸಿದನು? ನಂಬಿಗಸ್ತನಾದ ಯೋಬನ ಮೇಲೆ ಸೈತಾನನು ಯಾವ ಸುಳ್ಳಾರೋಪ ಹೊರಿಸಿದನು?

“ಸರ್ಪವು . . . ಸ್ತ್ರೀಯ ಬಳಿಗೆ ಬಂದು—ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು ಸ್ತ್ರೀಯು—ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು. ಆಗ ಸರ್ಪವು ಸ್ತ್ರೀಗೆ—ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು ಅಂದಿತು.”—ಆದಿ. 3:1-5.

“ಅದಕ್ಕೆ ಸೈತಾನನು—ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು.”—ಯೋಬ 1:9-11.

“ಯೆಹೋವನ ಆ ಮಾತಿಗೆ ಸೈತಾನನು—ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು.”—ಯೋಬ 2:4, 5.

22. ನಾವು ಯೆಹೋವನ ಮತ್ತು ಆತನ ಆಳ್ವಿಕೆಯ ಪಕ್ಷದಲ್ಲಿದ್ದೇವೆಂದು ಹೇಗೆ ತೋರಿಸಬಹುದು? ಸೈತಾನನು ದೇವಜನರ ಮೇಲೆ ಹಾಕಿದ ಆರೋಪಗಳು ಸುಳ್ಳೆಂದು ನಾವು ಹೇಗೆ ಸಾಬೀತು ಮಾಡಬಹುದು?

“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”—ಜ್ಞಾನೋ. 27:11.

“ನೀವು ನ್ಯಾಯವಂತರೆಂದು ನಾನು ಒಪ್ಪುವದು ದೂರವಾಗಿರಲಿ, ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.”—ಯೋಬ 27:5.

ಇದನ್ನೂ ನೋಡಿ: ಕೀರ್ತ. 26:11; ಯಾಕೋ. 4:7.

23. ಯೆಹೋವನು ಸೈತಾನನಿಗೂ ಅವನ ದೆವ್ವಗಳಿಗೂ ಯಾವ ಶಿಕ್ಷೆ ಕೊಡುವನು?

“ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”—ಆದಿ. 3:15.

“ಶಾಂತಿಯನ್ನು ಒದಗಿಸುವ ದೇವರು ಬೇಗನೆ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸುವಿನ ಅಪಾತ್ರ ದಯೆಯು ನಿಮ್ಮೊಂದಿಗಿರಲಿ.”—ರೋಮ. 16:20.

“ಒಬ್ಬ ದೇವದೂತನು ತನ್ನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈಯನ್ನೂ ಒಂದು ದೊಡ್ಡ ಸರಪಣಿಯನ್ನೂ ಹಿಡಿದುಕೊಂಡು ಸ್ವರ್ಗದಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನ ಸರ್ಪವನ್ನು, ಅಂದರೆ ಘಟಸರ್ಪವನ್ನು ಹಿಡಿದು ಸಾವಿರ ವರ್ಷಗಳ ವರೆಗೆ ಬಂಧನದಲ್ಲಿಟ್ಟನು.”—ಪ್ರಕ. 20:1, 2.

“ಅವರನ್ನು ದಾರಿತಪ್ಪಿಸುತ್ತಿದ್ದ ಪಿಶಾಚನು ಬೆಂಕಿಗಂಧಕಗಳ ಕೆರೆಗೆ ದೊಬ್ಬಲ್ಪಟ್ಟನು; ಅಲ್ಲಿ ಈಗಾಗಲೇ ಕಾಡುಮೃಗವೂ ಸುಳ್ಳು ಪ್ರವಾದಿಯೂ ಇದ್ದರು.”—ಪ್ರಕ. 20:10.

24. ದೆವ್ವಗಳಿಗೆ ಸಂಬಂಧಿಸಿದ ಯಾವ ವಿಷಯಗಳನ್ನು ಕ್ರೈಸ್ತರು ಮಾಡಬಾರದು?

“ಮಕ್ಕಳನ್ನು ಆಹುತಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋ. 18:10, 11.

“ಹೇಡಿಗಳು, ನಂಬಿಕೆಯಿಲ್ಲದವರು, ತಮ್ಮ ಹೊಲಸುತನದಲ್ಲಿ ಅಸಹ್ಯರಾಗಿರುವವರು, ಕೊಲೆಗಾರರು, ಜಾರರು, ಪ್ರೇತವ್ಯವಹಾರವನ್ನು ಆಚರಿಸುತ್ತಿರುವವರು, ವಿಗ್ರಹಾರಾಧಕರು ಮತ್ತು ಎಲ್ಲ ಸುಳ್ಳುಗಾರರು, ಇಂಥವರಿಗೆ ಸಿಗುವ ಪಾಲು ಬೆಂಕಿಗಂಧಕಗಳು ಉರಿಯುವ ಕೆರೆಯೇ ಆಗಿರುವುದು. ಇದು ಎರಡನೆಯ ಮರಣವನ್ನು ಸೂಚಿಸುತ್ತದೆ.”—ಪ್ರಕ. 21:8.

25. ಆತ್ಮ ಅಂದರೇನು? ಆತ್ಮ ಸಾಯುತ್ತದಾ?

“ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು [ಬದುಕುವ ಆತ್ಮವಾದನು, NW].”—ಆದಿ. 2:7.

“ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ [ಆತ್ಮವೇ, NW] ಸಾಯುವನು.”—ಯೆಹೆ. 18:4.

26. ಪಾಪ ಅಂದರೇನು? ನಾವೆಲ್ಲರೂ ಪಾಪಿಗಳಾದದ್ದು ಹೇಗೆ?

“ಪಾಪವನ್ನು ಮಾಡುತ್ತಾ ಇರುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುತ್ತಾ ಇರುವವನಾಗಿದ್ದಾನೆ; ಹಾಗಾದರೆ ಪಾಪವು ಅಧರ್ಮವಾಗಿದೆ.”—1 ಯೋಹಾ. 3:4.

“ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮ. 5:12.

ಇದನ್ನೂ ನೋಡಿ: ಕೀರ್ತ. 51:5.

27. ನೀವು ಗಂಭೀರ ತಪ್ಪು ಮಾಡಿದರೆ ಏನು ಮಾಡಬೇಕು?

“ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು.”—ಕೀರ್ತ. 32:5.

“ನಿಮ್ಮಲ್ಲಿ ಅಸ್ವಸ್ಥನು ಯಾವನಾದರೂ ಇದ್ದಾನೊ? ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು. ಆದುದರಿಂದ ನೀವು ಗುಣಹೊಂದುವಂತೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಮುಕ್ತಮನಸ್ಸಿನಿಂದ ನಿವೇದಿಸಿಕೊಂಡು ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ಒಬ್ಬ ನೀತಿವಂತನು ಮಾಡುವ ಯಾಚನೆಗೆ ಫಲಸಿಗುವಾಗ ಅದಕ್ಕೆ ಬಹಳ ಬಲವಿದೆ.”—ಯಾಕೋ. 5:14-16.

“ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.”—ಜ್ಞಾನೋ. 28:13.

28. ನಾವು ಯೆಹೋವನ ವಿರುದ್ಧ ಪಾಪ ಮಾಡದಂತೆ ಏಕೆ ಜಾಗ್ರತೆ ವಹಿಸಬೇಕು?

“ನೀವು ನಿಮ್ಮ ಮರ್ತ್ಯ ದೇಹಗಳ ಆಶೆಗಳಿಗೆ ವಿಧೇಯರಾಗುವ ಮೂಲಕ ಪಾಪವು ನಿಮ್ಮ ಮೇಲೆ ಅರಸನಂತೆ ಆಳ್ವಿಕೆ ನಡೆಸುವುದನ್ನು ಮುಂದುವರಿಸಲು ಬಿಡಬೇಡಿರಿ. ನೀವು ಧರ್ಮಶಾಸ್ತ್ರದ ಕೆಳಗಿರದೆ ದೇವರ ಅಪಾತ್ರ ದಯೆಯ ಕೆಳಗಿರುವುದರಿಂದ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸಬಾರದು.”—ರೋಮ. 6:12, 14.

29. ಸತ್ತ ಮೇಲೆ ಏನಾಗುತ್ತದೆ?

“ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.”—ಆದಿ. 3:19.

“ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.”—ಪ್ರಸಂ. 9:5.

ಇದನ್ನೂ ನೋಡಿ: ಕೀರ್ತ. 146:4; ಪ್ರಸಂ. 3:19, 20; 9:10; ಯೋಹಾ. 11:11-14.

30. ಜನರು ಯಾಕೆ ಸಾಯುತ್ತಾರೆ?

“ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮ. 5:12.

“ಪಾಪವು ಕೊಡುವ ಸಂಬಳ ಮರಣ.”—ರೋಮ. 6:23.

31. ಸತ್ತವರು ಮತ್ತೆ ಬದುಕಲು ಸಾಧ್ಯವೇ?

“ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ಈ ಜನರು ನಿರೀಕ್ಷೆ ಇಟ್ಟಿರುವಂತೆಯೇ ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ.”—ಅ. ಕಾ. 24:15.

“ಇದಕ್ಕೆ ಆಶ್ಚರ್ಯಪಡಬೇಡಿರಿ, ಏಕೆಂದರೆ ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ; ಒಳ್ಳೇದನ್ನು ಮಾಡಿದವರು ಜೀವಕ್ಕಾಗಿ ಪುನರುತ್ಥಾನವನ್ನು ಹೊಂದುವರು, ದುಷ್ಕೃತ್ಯಗಳನ್ನು ನಡೆಸಿದವರು ನ್ಯಾಯತೀರ್ಪಿಗಾಗಿ ಪುನರುತ್ಥಾನವನ್ನು ಹೊಂದುವರು.”—ಯೋಹಾ. 5:28,29.

32. ಮಾನವರಲ್ಲಿ ಎಷ್ಟು ಮಂದಿ ಸ್ವರ್ಗಕ್ಕೆ ಹೋಗುತ್ತಾರೆ?

“ಇಗೋ, ಕುರಿಮರಿಯು ಚೀಯೋನ್‌ ಪರ್ವತದ ಮೇಲೆ ನಿಂತಿರುವುದನ್ನು ನಾನು ನೋಡಿದೆನು; ಅವನೊಂದಿಗೆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿ ಇದ್ದರು. ಅವರವರ ಹಣೆಗಳ ಮೇಲೆ ಅವನ ಹೆಸರೂ ಅವನ ತಂದೆಯ ಹೆಸರೂ ಬರೆಯಲ್ಪಟ್ಟಿತ್ತು. ಅವರು ಸಿಂಹಾಸನದ ಮುಂದೆಯೂ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಒಂದು ಹೊಸ ಹಾಡನ್ನೋ ಎಂಬಂತೆ ಹಾಡುತ್ತಿದ್ದಾರೆ. ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟಿರುವ ಆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿಯ ಹೊರತು ಬೇರೆ ಯಾರೂ ಆ ಹಾಡನ್ನು ಪೂರ್ಣವಾಗಿ ಕಲಿಯಲು ಶಕ್ತರಾಗಿರಲಿಲ್ಲ.”—ಪ್ರಕ. 14:1, 3.

33. ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವರು ಅಲ್ಲಿ ಏನು ಮಾಡುತ್ತಾರೆ?

“ನೀನು ಅವರನ್ನು ನಮ್ಮ ದೇವರಿಗೆ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ.”—ಪ್ರಕ. 5:10.

“ನಾನು ಸಿಂಹಾಸನಗಳನ್ನು ನೋಡಿದೆನು ಮತ್ತು ಅವುಗಳ ಮೇಲೆ ಕುಳಿತುಕೊಂಡಿದ್ದವರು ಇದ್ದರು. ನ್ಯಾಯತೀರಿಸುವ ಅಧಿಕಾರವು ಅವರಿಗೆ ಕೊಡಲ್ಪಟ್ಟಿತು . . . ಅವರು ಪುನಃ ಜೀವಿತರಾಗಿ ಆ ಸಾವಿರ ವರ್ಷಗಳ ವರೆಗೆ ಕ್ರಿಸ್ತನೊಂದಿಗೆ ರಾಜರಾಗಿ ಆಳಿದರು. ಮೊದಲನೆಯ ಪುನರುತ್ಥಾನದಲ್ಲಿ ಪಾಲಿಗನಾಗಿರುವ ಪ್ರತಿಯೊಬ್ಬನು ಸಂತೋಷಿತನೂ ಪವಿತ್ರನೂ ಆಗಿದ್ದಾನೆ; ಇವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ, ಆದರೆ ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು ಮತ್ತು ಅವನೊಂದಿಗೆ ಆ ಸಾವಿರ ವರ್ಷ ರಾಜರಾಗಿ ಆಳುವರು.”—ಪ್ರಕ. 20:4, 6.

ಇದನ್ನೂ ನೋಡಿ: ಪ್ರಕ. 22:5.

34. ಮಾನವರಿಗೆ ಯಾವ ಪ್ರತೀಕ್ಷೆಯಿದೆ?

“ಅವನು ಮುಂದುವರಿಸಿ, ‘ಯೇಸುವೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ’ ಎಂದು ಹೇಳಿದನು. ಅದಕ್ಕೆ ಯೇಸು ಅವನಿಗೆ, ‘ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ’ ಎಂದನು.”—ಲೂಕ 23:42, 43.

“ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವುದನ್ನು ನಾನು ನೋಡಿದೆನು; ಆಗ ಸುರುಳಿಗಳು ತೆರೆಯಲ್ಪಟ್ಟವು. ಆದರೆ ಇನ್ನೊಂದು ಸುರುಳಿ ತೆರೆಯಲ್ಪಟ್ಟಿತು; ಅದು ಜೀವದ ಸುರುಳಿಯಾಗಿದೆ. ಸುರುಳಿಗಳಲ್ಲಿದ್ದ ವಿಷಯಗಳ ಆಧಾರದ ಮೇಲೆ ಅವರವರ ಕ್ರಿಯೆಗಳಿಗನುಸಾರ ಸತ್ತವರಿಗೆ ನ್ಯಾಯತೀರ್ಪಾಯಿತು. ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯು ಮತ್ತು ಹೇಡೀಸ್‌ ತಮ್ಮೊಳಗಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಕ್ರಿಯೆಗಳಿಗನುಸಾರ ನ್ಯಾಯತೀರ್ಪನ್ನು ಹೊಂದಿದರು.”—ಪ್ರಕ. 20:12, 13.

ಇದನ್ನೂ ನೋಡಿ: ಪ್ರಕ. 21:1-4.

35. ಪುನರುತ್ಥಾನದಲ್ಲಿ ನಾವು ಪೂರ್ಣ ನಂಬಿಕೆಯಿಡಬೇಕು ಏಕೆ?

“ದೇಹವನ್ನು ಕೊಂದು ಪ್ರಾಣವನ್ನು ಕೊಲ್ಲಲಾರದವರಿಗೆ ಭಯಪಡಬೇಡಿರಿ; ಪ್ರಾಣವನ್ನೂ ದೇಹವನ್ನೂ ಗೆಹೆನ್ನದಲ್ಲಿ ನಾಶಮಾಡಬಲ್ಲಾತನಿಗೆ ಭಯಪಡಿರಿ.”—ಮತ್ತಾ. 10:28.