ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಏನನ್ನು ನಂಬುತ್ತಾರೆ?

ಅವರು ಏನನ್ನು ನಂಬುತ್ತಾರೆ?

ಅವರು ಏನನ್ನು ನಂಬುತ್ತಾರೆ?

ಯೆಹೋವನ ಸಾಕ್ಷಿಗಳು, ಭೂಮ್ಯಾಕಾಶಗಳ ಸೃಷ್ಟಿಕರ್ತನೂ ಸರ್ವಶಕ್ತ ದೇವರೂ ಆಗಿರುವ ಯೆಹೋವನಲ್ಲಿ ನಂಬಿಕೆಯಿಡುತ್ತಾರೆ. ನಮ್ಮ ಸುತ್ತಮುತ್ತಲಿನ ವಿಶ್ವದಲ್ಲಿರುವ ಜಟಿಲವಾಗಿ ವಿನ್ಯಾಸಿಸಲ್ಪಟ್ಟಿರುವ ಅದ್ಭುತಗಳ ಅಸ್ತಿತ್ವವೇ, ಅತ್ಯಧಿಕ ಬುದ್ಧಿಶಕ್ತಿಯುಳ್ಳವನೂ ಅತ್ಯಂತ ಶಕ್ತಿಶಾಲಿಯೂ ಆಗಿರುವ ಸೃಷ್ಟಿಕರ್ತನು ಅದೆಲ್ಲವನ್ನು ಉಂಟುಮಾಡಿದನು ಎಂಬುದನ್ನು ನ್ಯಾಯಸಮ್ಮತವಾಗಿಯೇ ಸೂಚಿಸುತ್ತದೆ. ಸ್ತ್ರೀಪುರುಷರ ಕೈಕೆಲಸಗಳು ಅವರ ಗುಣಗಳನ್ನು ಹೇಗೆ ಪ್ರತಿಬಿಂಬಿಸುತ್ತವೊ ಹಾಗೆಯೇ ಯೆಹೋವ ದೇವರ ಕೈಕೆಲಸಗಳೂ ಆತನ ಗುಣಗಳನ್ನು ಪ್ರತಿಬಿಂಬಿಸುತ್ತವೆ. “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ” ಎಂದು ಬೈಬಲು ನಮಗೆ ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, ಯಾವುದೇ ಸ್ವರ ಇಲ್ಲವೆ ಮಾತುಗಳಿಲ್ಲದೇ “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ.”​—⁠ರೋಮಾಪುರ 1:20; ಕೀರ್ತನೆ 19:​1-4.

ಮನುಷ್ಯರು ಮಣ್ಣಿನ ಪಾತ್ರೆಗಳನ್ನು ಅಥವಾ ಟೆಲಿವಿಷನ್‌ಗಳು ಮತ್ತು ಕಂಪ್ಯೂಟರುಗಳನ್ನು ಯಾವುದೇ ಉದ್ದೇಶವಿಲ್ಲದೆ ತಯಾರಿಸುವುದಿಲ್ಲ. ಭೂಮಿ ಮತ್ತು ಅದರ ಸಸ್ಯ ಹಾಗೂ ಪ್ರಾಣಿ ಜೀವಿಗಳ ಸೃಷ್ಟಿಯು ಅವುಗಳಿಗಿಂತ ಎಷ್ಟೋ ಹೆಚ್ಚು ಅದ್ಭುತಕರವಾಗಿದೆ. ಕೋಟ್ಯಂತರ ಜೀವಕೋಶಗಳಿರುವ ಮಾನವ ಶರೀರದ ರಚನೆಯು ನಮ್ಮ ಗ್ರಹಿಕೆಗೆ ಮೀರಿದ ವಿಷಯವಾಗಿದೆ. ನಾವು ಯಾವುದರ ಸಹಾಯದಿಂದ ಯೋಚಿಸುತ್ತೇವೋ ಆ ಮಿದುಳು ಸಹ ಅರ್ಥಮಾಡಿಕೊಳ್ಳಲಾಗದಷ್ಟರ ಮಟ್ಟಿಗೆ ಆಶ್ಚರ್ಯಕರವಾಗಿದೆ! ತುಲನಾತ್ಮಕವಾಗಿ ಗಮನಾರ್ಹವಲ್ಲದ ಕಂಡುಹಿಡಿತಗಳನ್ನು ಮಾಡುವುದರಲ್ಲಿ ಮನುಷ್ಯರಿಗೆ ಒಂದು ಉದ್ದೇಶವಿರುವುದಾದರೆ, ಭಯಚಕಿತಗೊಳಿಸುವಂಥ ತನ್ನ ಸೃಷ್ಟಿಗಳ ವಿಷಯದಲ್ಲಿ ಯೆಹೋವನಿಗೆ ಖಂಡಿತವಾಗಿಯೂ ಒಂದು ಉದ್ದೇಶವಿರಲೇಬೇಕು! ಆತನು “ಒಂದೊಂದನ್ನೂ ತಕ್ಕ ಗುರಿಯಿಂದ [“ಉದ್ದೇಶದಿಂದ,” NW] ಸೃಷ್ಟಿಸಿದ್ದಾನೆ” ಎಂದು ಜ್ಞಾನೋಕ್ತಿ 16:4 ತಿಳಿಸುತ್ತದೆ.

ಯೆಹೋವನು ಈ ಭೂಮಿಯನ್ನು ಒಂದು ಉದ್ದೇಶಕ್ಕಾಗಿಯೇ ಉಂಟುಮಾಡಿದನು. ಆತನು ಮೊದಲ ಮಾನವ ಜೊತೆಗೆ ತಿಳಿಸಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯನ್ನು ತುಂಬಿಕೊಂಡು . . . ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ.” (ಆದಿಕಾಂಡ 1:28) ಆದರೆ ಈ ಮಾನವ ದಂಪತಿ ಅವಿಧೇಯರಾದ ಕಾರಣ, ಭೂಮಿಯನ್ನೂ ಅದರ ಸಸ್ಯ ಹಾಗೂ ಪ್ರಾಣಿ ಜೀವಿಗಳನ್ನೂ ಪ್ರೀತಿಯಿಂದ ನೋಡಿಕೊಳ್ಳಲಿದ್ದ ನೀತಿವಂತ ಕುಟುಂಬಗಳಿಂದ ಈ ಭೂಮಿಯನ್ನು ತುಂಬಿಸಲಾರದೆ ಹೋದರು. ಆದರೆ ಅವರ ವೈಫಲ್ಯವು ಯೆಹೋವನ ಉದ್ದೇಶವನ್ನು ನಿಷ್ಫಲಗೊಳಿಸದು. ಸಾವಿರಾರು ವರ್ಷಗಳ ತರುವಾಯ ಹೀಗೆ ಬರೆಯಲ್ಪಟ್ಟಿತು: “ದೇವರು ಭೂಲೋಕವನ್ನು ನಿರ್ಮಿಸಿ . . . ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು,” ಅದು ನಾಶವಾಗದು. (ಯೆಶಾಯ 45:18; ಪ್ರಸಂಗಿ 1:⁠4) ಭೂಮಿಗಾಗಿರುವ ಯೆಹೋವನ ಉದ್ದೇಶವು ಈಡೇರುವುದು: “ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು.”​—⁠ಯೆಶಾಯ 46:10.

ಆದುದರಿಂದ ಈ ಭೂಮಿಯು ಶಾಶ್ವತವಾಗಿ ಉಳಿಯುವುದು ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಮತ್ತು ಒಂದು ಸುಂದರಗೊಳಿಸಲ್ಪಟ್ಟ, ಜನನಿವಾಸಿತ ಭೂಮಿಗಾಗಿರುವ ಯೆಹೋವನ ಉದ್ದೇಶದಲ್ಲಿ ಸರಿಹೊಂದುವಂಥ ಜೀವಿತರೂ ಸತ್ತವರೂ ಆದ ಮಾನವರೆಲ್ಲರೂ ಅದರಲ್ಲಿ ಸದಾಕಾಲವೂ ಜೀವಿಸಬಹುದು. ಆದಾಮಹವ್ವರಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದುಕೊಂಡ ಕಾರಣ ಇಡೀ ಮಾನವಕುಲವು ಪಾಪಕ್ಕೆ ವಶವಾಗಿದೆ. (ರೋಮಾಪುರ 5:12) ಬೈಬಲು ನಮಗೆ ಹೇಳುವುದು: “ಪಾಪವು ಕೊಡುವ ಸಂಬಳ ಮರಣ.” “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” “ಪಾಪಮಾಡುವ ಪ್ರಾಣಿಯೇ ಸಾಯುವನು.” (ರೋಮಾಪುರ 6:23; ಪ್ರಸಂಗಿ 9:5; ಯೆಹೆಜ್ಕೇಲ 18:​4, 20) ಹಾಗಾದರೆ ಭೂಮಿಯ ಮೇಲಿನ ಆಶೀರ್ವಾದಗಳಲ್ಲಿ ಪಾಲ್ಗೊಳ್ಳಲು ಅವರು ಹೇಗೆ ಪುನಃ ಬದುಕಸಾಧ್ಯವಿದೆ? ಕೇವಲ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕವೇ. ಏಕೆಂದರೆ ಅವನು ಹೀಗಂದನು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”​—⁠ಯೋಹಾನ 5:28, 29; 11:25; ಮತ್ತಾಯ 20:28.

ಇದೆಲ್ಲವೂ ಹೇಗೆ ನಿಜವಾಗುವುದು? ಯೇಸು ಭೂಮಿಯಲ್ಲಿದ್ದಾಗ ಅವನು ಘೋಷಿಸಲಾರಂಭಿಸಿದಂಥ “ಪರಲೋಕರಾಜ್ಯದ ಸುವಾರ್ತೆ”ಯಲ್ಲಿ ಅದು ವಿವರಿಸಲ್ಪಟ್ಟಿದೆ. (ಮತ್ತಾಯ 4:​17-23) ಇಂದು ಯೆಹೋವನ ಸಾಕ್ಷಿಗಳಾದರೊ ಆ ಸುವಾರ್ತೆಯನ್ನು ಅತಿ ವಿಶೇಷವಾದ ರೀತಿಯಲ್ಲಿ ಸಾರುತ್ತಿದ್ದಾರೆ.

[ಪುಟ 13ರಲ್ಲಿರುವ ಚಾರ್ಟು]

ಯೆಹೋವನ ಸಾಕ್ಷಿಗಳ ನಂಬಿಕೆಗಳೇನು? 

ನಂಬಿಕೆ ಶಾಸ್ತ್ರೀಯ ಸಮರ್ಥನೆ

ಬೈಬಲು ದೇವರ ವಾಕ್ಯವಾಗಿದೆ 2 ತಿಮೊ. 3:​16, 17;

ಮತ್ತು ಸತ್ಯವಾಗಿದೆ 2 ಪೇತ್ರ 1:20, 21; ಯೋಹಾ. 17:17

ಬೈಬಲು ಸಂಪ್ರದಾಯಕ್ಕಿಂತ ಮತ್ತಾ. 15:3; ಕೊಲೊ. 2:8

ಹೆಚ್ಚು ಭರವಸಾರ್ಹ

ದೇವರ ಹೆಸರು ಯೆಹೋವ ಕೀರ್ತ. 83:18; ಯೆಶಾ. 26:4; 42:8;

ವಿಮೋ. 6:3

ಕ್ರಿಸ್ತನು ದೇವರ ಮಗನು ಮತ್ತು ಮತ್ತಾ.3:17;

ಆತನಿಗಿಂತ ಕೆಳಗಿನ ಸ್ಥಾನದಲ್ಲಿರುವವನು ಯೋಹಾ. 8:42; 14:28; 20:17;

1 ಕೊರಿಂ. 11:3; 15:⁠28

ಕ್ರಿಸ್ತನು ದೇವರ ಸೃಷ್ಟಿಯಲ್ಲಿ ಕೊಲೊ. 1:15;

ಮೊದಲಿಗನು  ಪ್ರಕ. 3:⁠14

ಕ್ರಿಸ್ತನು ಕಂಬದ ಮೇಲೆ ಸತ್ತನು, ಗಲಾ. 3:14; ಅ.ಕೃ. 5:⁠30

ಶಿಲುಬೆಯ ಮೇಲಲ್ಲ

ಕ್ರಿಸ್ತನ ಮಾನವ ಜೀವವು ವಿಧೇಯ ಮತ್ತಾ. 20:28;

ಮಾನವರಿಗೋಸ್ಕರ ವಿಮೋಚನಾ 1 ತಿಮೊ. 2:​5, 6;

ಯಜ್ಞವಾಗಿ ನೀಡಲ್ಪಟ್ಟಿತು 1 ಪೇತ್ರ 2:⁠24

ಕ್ರಿಸ್ತನ ಒಂದೇ ಯಜ್ಞವು ಸಾಕಾಗಿತ್ತು ರೋಮಾ. 6:10; ಇಬ್ರಿ. 9:​25-28

ಕ್ರಿಸ್ತನು ಅಮರತ್ವವುಳ್ಳ ಆತ್ಮ ಜೀವಿಯಾಗಿ 1 ಪೇತ್ರ 3:18;

ಸತ್ತವರೊಳಗಿಂದ ಎಬ್ಬಿಸಲ್ಪಟ್ಟನು ರೋಮಾ. 6:9; ಪ್ರಕ. 1:​17, 18

ಕ್ರಿಸ್ತನ ಸಾನ್ನಿಧ್ಯವು ಯೋಹಾ. 14:19; ಮತ್ತಾ. 24:3;

ಆತ್ಮ ರೂಪದಲ್ಲಿದೆ 2 ಕೊರಿಂ. 5:16; ಕೀರ್ತ. 110:​1, 2

ನಾವು ಇಂದು ‘ಅಂತ್ಯ ಮತ್ತಾ. 24:​3-14; 2 ತಿಮೊ. 3:​1-5;

ಕಾಲದಲ್ಲಿ’ ಇದ್ದೇವೆ ಲೂಕ 17:​26-30

ಕ್ರಿಸ್ತನ ಕೈಕೆಳಗಿನ ರಾಜ್ಯವು ಭೂಮಿಯನ್ನು ಯೆಶಾ. 9:​6, 7; 11:​1-5;

ನೀತಿಯಿಂದ ಮತ್ತು ಶಾಂತಿಯಿಂದ ಆಳುವುದು ದಾನಿ. 7:​13, 14; ಮತ್ತಾ. 6:⁠10

ಆ ರಾಜ್ಯವು ಭೂಮಿಗೆ ಅತ್ಯುತ್ತಮ ಕೀರ್ತ. 72:​1-4;

ಜೀವನ ಪರಿಸ್ಥಿತಿಗಳನ್ನು ತರುವುದು ಪ್ರಕ. 7:​9, 10, 13-17;

21:​3, 4

ಭೂಮಿಯು ಎಂದಿಗೂ ನಾಶಗೊಳಿಸಲ್ಪಡದು ಪ್ರಸಂ. 1:4;

ಅಥವಾ ಜನಶೂನ್ಯವಾಗಿ ಮಾಡಲ್ಪಡದು ಯೆಶಾ. 45:18; ಕೀರ್ತ. 78:⁠69

ದೇವರು ಸದ್ಯದ ವಿಷಯಗಳ ವ್ಯವಸ್ಥೆಯನ್ನು ಪ್ರಕ. 16:​14, 16;

ಹರ್ಮಗೆದೋನ್‌ ಯುದ್ಧದಲ್ಲಿ ಚೆಫ. 3:8; ದಾನಿ. 2:44;

ನಾಶಗೊಳಿಸಲಿದ್ದಾನೆ ಯೆಶಾ. 34:2; 55:​10, 11

ದುಷ್ಟರು ಶಾಶ್ವತವಾಗಿ ಮತ್ತಾ. 25:​41-46; 2 ಥೆಸ. 1:​6-9

ನಾಶಮಾಡಲ್ಪಡುವರು

ದೇವರು ಯಾರನ್ನು ಅಂಗೀಕರಿಸುತ್ತಾನೋ ಯೋಹಾ. 3:16;

ಅಂಥ ಜನರು ನಿತ್ಯಜೀವವನ್ನು ಪಡೆಯುವರು 10:​27, 28; 17:3;

ಮಾರ್ಕ 10:​29, 30

ಜೀವಕ್ಕೆ ನಡಿಸುವ ದಾರಿಯು ಒಂದೇ ಆಗಿದೆ ಮತ್ತಾ. 7:​13, 14;

ಎಫೆ. 4:​4, 5

ಮನುಷ್ಯರು ಸಾಯುವುದು ಆದಾಮನ ರೋಮಾ. 5:12; 6:⁠23

ಪಾಪದಿಂದಾಗಿಯೆ

ಮನುಷ್ಯರು ಸತ್ತಾಗ ಏನೂ ಬದುಕಿ ಪ್ರಸಂ. 9:​5, 10; ಕೀರ್ತ.

ಉಳಿಯುವುದಿಲ್ಲ 6:5; 146:4; ಯೋಹಾ. 11:​11-14

ಸತ್ತ ಮೇಲೆ ಯಾತನೆಯೇ ಇರುವುದಿಲ್ಲ ಯೋಬ 14:​13;

ಪ್ರಕ. 20:​13, 14

ಮೃತರಿಗಿರುವ ನಿರೀಕ್ಷೆ 1 ಕೊರಿಂ. 15:​20-22;

ಪುನರುತ್ಥಾನವೇ ಯೋಹಾ. 5:​28, 29; 11:​25, 26

ಆದಾಮನಿಂದ ಬಂದ ಮರಣವು 1 ಕೊರಿಂ. 15:​26, 54;

ಇಲ್ಲದೆ ಹೋಗುವುದು ಪ್ರಕ. 21:4; ಯೆಶಾ. 25:8

1,44,000 ಮಂದಿಯ ಒಂದು ಚಿಕ್ಕ ಹಿಂಡು ಲೂಕ 12:32; ಪ್ರಕ. 14:​1, 3;

ಮಾತ್ರ ಸ್ವರ್ಗಕ್ಕೆ ಹೋಗುತ್ತದೆ ಮತ್ತು 1 ಕೊರಿಂ. 15:40-53;

ಕ್ರಿಸ್ತನೊಂದಿಗೆ ಆಳುತ್ತದೆ ಪ್ರಕ. 5:​9, 10

ಈ 1,44,000 ಮಂದಿ ದೇವರ 1 ಪೇತ್ರ 1:23; ಯೋಹಾ. 3:3;

ಆತ್ಮಿಕ ಪುತ್ರರೋಪಾದಿ ಹೊಸದಾಗಿ ಪ್ರಕ. 7:3, 4

ಹುಟ್ಟುತ್ತಾರೆ

ಹೊಸ ಒಡಂಬಡಿಕೆಯನ್ನು ಆತ್ಮಿಕ ಯೆರೆ. 31:31; ಇಬ್ರಿ. 8:​10-13

ಇಸ್ರಾಯೇಲಿನೊಂದಿಗೆ ಮಾಡಲಾಗುತ್ತದೆ

ಕ್ರಿಸ್ತನ ಸಭೆಯು ಸ್ವತಃ ಅವನ ಎಫೆ. 2:20; ಯೆಶಾ. 28:16;

ಮೇಲೆ ಕಟ್ಟಲ್ಪಡುತ್ತದೆ ಮತ್ತಾ. 21:42

ಪ್ರಾರ್ಥನೆಗಳು ಕ್ರಿಸ್ತನ ಮೂಲಕ ಯೋಹಾ. 14:​6, 13, 14;

ಯೆಹೋವನಿಗೆ ಮಾತ್ರ ಮಾಡಲ್ಪಡಬೇಕು 1 ತಿಮೊ. 2:5

ಆರಾಧನೆಯಲ್ಲಿ ವಿಗ್ರಹಗಳ ವಿಮೋ. 20:​4, 5; ಯಾಜ. 26:1;

ಉಪಯೋಗವನ್ನು ಮಾಡಬಾರದು 1 ಕೊರಿಂ. 10:14; ಕೀರ್ತ. 115:​4-8

ಪ್ರೇತವ್ಯವಹಾರವಾದವನ್ನು ಧರ್ಮೋ. 18:10-12;

ತೊರೆದುಬಿಡಬೇಕು ಗಲಾ. 5:​19-21;  ಯಾಜ. 19:⁠31

ಸೈತಾನನು ಲೋಕದ ಅದೃಶ್ಯ 1 ಯೋಹಾ. 5:19; 2 ಕೊರಿಂ. 4:4;

ಅಧಿಪತಿಯಾಗಿದ್ದಾನೆ ಯೋಹಾ. 12:⁠31

ಮಿಶ್ರನಂಬಿಕೆಯ ಚಟುವಟಿಕೆಗಳಲ್ಲಿ ಒಬ್ಬ 2 ಕೊರಿಂ. 6:​14-17; 11:​13-15;

ಕ್ರೈಸ್ತನಿಗೆ ಯಾವ ಪಾಲೂ ಇರಬಾರದು ಗಲಾ. 5:9; ಧರ್ಮೋ. 7:​1-5

ಒಬ್ಬ ಕ್ರೈಸ್ತನು ತನ್ನನ್ನು ಲೋಕದಿಂದ ಯಾಕೋ. 4:4;

ಪ್ರತ್ಯೇಕವಾಗಿರಿಸಿಕೊಳ್ಳಬೇಕು 1 ಯೋಹಾ. 2:15;

ಯೋಹಾ. 15:19; 17:⁠16

ದೇವರ ನಿಯಮಗಳಿಗೆ ವಿರುದ್ಧವಾಗಿರದಂಥ ಮತ್ತಾ. 22:20, 21;

ಮಾನವ ನಿಯಮಗಳಿಗೆ ವಿಧೇಯರಾಗುತ್ತಾರೆ 1 ಪೇತ್ರ 2:12; 4:⁠15

ಬಾಯಿಯ ಮೂಲಕ ಅಥವಾ ರಕ್ತನಾಳಗಳ ಆದಿ. 9:​3, 4; ಯಾಜ. 17:14;

ಮೂಲಕ ರಕ್ತವನ್ನು ದೇಹದೊಳಗೆ ಅ. ಕೃ. 15:​28, 29

ತೆಗೆದುಕೊಳ್ಳುವುದು ದೇವರ ನಿಯಮಗಳ ಉಲ್ಲಂಘನೆಯಾಗಿದೆ

ನೈತಿಕತೆಗಳ ಕುರಿತಾದ ಬೈಬಲ್‌ 1 ಕೊರಿಂ. 6:​9, 10; ಇಬ್ರಿ. 13:4;

ನಿಯಮಗಳಿಗೆ ವಿಧೇಯರಾಗಲೇಬೇಕು 1 ತಿಮೊ. 3:2; ಜ್ಞಾನೋ. 5:​1-23

ಸಬ್ಬತ್‌ ನಿಯಮದ ಪಾಲನೆಯು ಧರ್ಮೋ. 5:15; ವಿಮೋ. 31:13;

ಇಸ್ರಾಯೇಲ್ಯರಿಗೆ ಮಾತ್ರ ಕೊಡಲ್ಪಟ್ಟಿತು ರೋಮಾ. 10:4;

ಮತ್ತು ಮೋಶೆಯ ಧರ್ಮಶಾಸ್ತ್ರದೊಂದಿಗೆ ಗಲಾ. 4:​9, 10;

ಅದೂ ಕೊನೆಗೊಂಡಿತು ಕೊಲೊ. 2:​16, 17

ಪಾದ್ರಿ ವರ್ಗವಿರುವುದು ಮತ್ತು ವಿಶೇಷ ಮತ್ತಾ. 23:​8-12; 20:​25-27

ಬಿರುದುಗಳನ್ನು ಹೊಂದಿರುವುದು

ಅನುಚಿತವಾದದ್ದಾಗಿದೆ

ಮನುಷ್ಯನು ವಿಕಾಸವಾಗಲಿಲ್ಲ, ಬದಲಾಗಿ ಯೆಶಾ. 45:12; ಆದಿ. 1:27;

ಸೃಷ್ಟಿಸಲ್ಪಟ್ಟನು ಮತ್ತಾ. 19:4

ದೇವರನ್ನು ಸೇವಿಸುವ ವಿಷಯದಲ್ಲಿ ಕ್ರಿಸ್ತನು 1 ಪೇತ್ರ 2:21;

ಅನುಕರಿಸತಕ್ಕ ಮಾದರಿಯನ್ನು ಇಟ್ಟನು ಇಬ್ರಿ. 10:7;

ಯೋಹಾ. 4:34; 6:⁠38

ಸಂಪೂರ್ಣ ಮುಳುಗಿಸುವಿಕೆಯ ಮೂಲಕ ಮಾರ್ಕ 1:​9, 10;

ದೀಕ್ಷಾಸ್ನಾನ ಮಾಡುವುದು ಯೋಹಾ. 3:23; ಅ. ಕೃ. 19:​4, 5

ಸಮರ್ಪಣೆಯನ್ನು ಸಂಕೇತಿಸುತ್ತದೆ

ಕ್ರೈಸ್ತರು ಸಂತೋಷದಿಂದ ಶಾಸ್ತ್ರೀಯ ಸತ್ಯಕ್ಕೆ ರೋಮಾ. 10:10;

ಬಹಿರಂಗ ಸಾಕ್ಷ್ಯವನ್ನು ಕೊಡುತ್ತಾರೆ ಇಬ್ರಿ. 13:15; ಯೆಶಾ. 43:​10-12

[ಪುಟ 12ರಲ್ಲಿರುವ ಚಿತ್ರ]

ಭೂಮಿಯು . . . ಯೆಹೋವನಿಂದ ಸೃಷ್ಟಿಸಲ್ಪಟ್ಟಿತು . . . ಮನುಷ್ಯರು ಅದನ್ನು ನೋಡಿಕೊಳ್ಳುತ್ತಿದ್ದು . . . ಸದಾಕಾಲಕ್ಕೂ ನಿವಾಸಿಸಲ್ಪಡುವುದು