ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕೆಲಸ

ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕೆಲಸ

ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕೆಲಸ

ಇನ್ನೂರ ಮೂವತ್ತೈದು ದೇಶಗಳಲ್ಲಿ ನಡಿಸಲ್ಪಡುತ್ತಿರುವ ಸಾಕ್ಷಿಕಾರ್ಯದ ಮಾರ್ಗದರ್ಶನಕ್ಕಾಗಿ ಅನೇಕ ಸಂಬಂಧ ಸಾಧನಗಳು ಉಪಯೋಗಿಸಲ್ಪಡುತ್ತವೆ. ಸಂಪೂರ್ಣ ಮಾರ್ಗದರ್ಶನವು, ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯದಲ್ಲಿರುವ ಆಡಳಿತ ಮಂಡಲಿಯಿಂದ ಬರುತ್ತದೆ. ಆಡಳಿತ ಮಂಡಲಿಯು ಪ್ರತಿ ವರ್ಷ ಲೋಕದಾದ್ಯಂತ ವಿವಿಧ ಪ್ರದೇಶಗಳಿಗೆ ಪ್ರತಿನಿಧಿಗಳನ್ನು ಕಳುಹಿಸಿ, ಅವರು ಆ ಪ್ರದೇಶಗಳ ಬ್ರಾಂಚ್‌ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ಏರ್ಪಡಿಸುತ್ತದೆ. ಬ್ರಾಂಚ್‌ ಆಫೀಸುಗಳಲ್ಲಿ ಮೂರರಿಂದ ಏಳು ಮಂದಿ ಸದಸ್ಯರಿರುವ ಬ್ರಾಂಚ್‌ ಕಮಿಟಿಗಳು ಇರುತ್ತವೆ. ಈ ಸದಸ್ಯರು ತಮ್ಮ ಜವಾಬ್ದಾರಿಗೆ ಒಪ್ಪಿಸಲ್ಪಟ್ಟಿರುವ ದೇಶಗಳಲ್ಲಿನ ಕೆಲಸದ ಮೇಲ್ವಿಚಾರಣೆ ನಡೆಸುತ್ತಾರೆ. ಕೆಲವು ಬ್ರಾಂಚ್‌ಗಳಲ್ಲಿ ಪ್ರಿಂಟಿಂಗ್‌ ಸೌಕರ್ಯಗಳಿವೆ, ಮತ್ತು ಇವುಗಳಲ್ಲೂ ಕೆಲವು ತೀವ್ರಗತಿಯ ರೋಟರಿ ಪ್ರೆಸ್‌ಗಳನ್ನು ನಡೆಸುತ್ತವೆ. ಪ್ರತಿ ಬ್ರಾಂಚ್‌ನ ಮೇಲ್ವಿಚಾರಣೆಯ ಕೆಳಗಿರುವ ದೇಶ ಅಥವಾ ಕ್ಷೇತ್ರವು ಜಿಲ್ಲೆಗಳಾಗಿ ವಿಭಾಗಿಸಲ್ಪಡುತ್ತದೆ, ಮತ್ತು ಜಿಲ್ಲೆಗಳು ಸರ್ಕಿಟ್‌ಗಳಾಗಿ ವಿಭಾಗಿಸಲ್ಪಟ್ಟಿವೆ. ಪ್ರತಿಯೊಂದು ಸರ್ಕಿಟ್‌ನಲ್ಲಿ ಸುಮಾರು 20 ಸಭೆಗಳಿರುತ್ತವೆ. ಒಬ್ಬ ಜಿಲ್ಲಾ ಮೇಲ್ವಿಚಾರಕನು ಸರದಿಗನುಸಾರ ತನ್ನ ಜಿಲ್ಲೆಯಲ್ಲಿರುವ ಸರ್ಕಿಟ್‌ಗಳನ್ನು ಸಂದರ್ಶಿಸುತ್ತಾನೆ. ಪ್ರತಿಯೊಂದು ಸರ್ಕಿಟ್‌ಗಾಗಿ ವಾರ್ಷಿಕವಾಗಿ ಎರಡು ಸಮ್ಮೇಳನಗಳು ನಡೆಯುತ್ತವೆ. ಒಬ್ಬ ಸರ್ಕಿಟ್‌ ಮೇಲ್ವಿಚಾರಕನು ಸಹ ಇರುತ್ತಾನೆ, ಮತ್ತು ಅವನು ತನ್ನ ಸರ್ಕಿಟ್‌ನಲ್ಲಿರುವ ಸಭೆಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಸಂದರ್ಶಿಸಿ, ಆ ಸಭೆಗೆ ನೇಮಿಸಲ್ಪಟ್ಟಿರುವ ಕ್ಷೇತ್ರದಲ್ಲಿ ಸಾರುವ ಕಾರ್ಯವನ್ನು ಸಂಘಟಿಸಲು ಮತ್ತು ನಡಿಸಲು ಸಾಕ್ಷಿಗಳಿಗೆ ಸಹಾಯವನ್ನು ನೀಡುತ್ತಾನೆ.

ಸ್ಥಳಿಕ ಸಭೆ ಮತ್ತು ಅದರ ರಾಜ್ಯ ಸಭಾಗೃಹವು ನಿಮ್ಮ ಸಮಾಜದಲ್ಲಿ ಸುವಾರ್ತೆಯನ್ನು ಸಾರುವ ಕೆಲಸದ ಕೇಂದ್ರವಾಗಿದೆ. ಪ್ರತಿಯೊಂದು ಸಭೆಯ ಕೆಳಗಿರುವ ಕ್ಷೇತ್ರವನ್ನು ಚಿಕ್ಕ ಚಿಕ್ಕ ಟೆರಿಟೊರಿಗಳಾಗಿ ರೇಖಿಸಿರುವ ನಕ್ಷೆಗಳಿರುತ್ತವೆ. ಇವುಗಳನ್ನು ವ್ಯಕ್ತಿಪರ ಸಾಕ್ಷಿಗಳಿಗೆ ನೇಮಿಸಲಾಗುತ್ತದೆ. ಅವರು ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಂದು ಮನೆಯ ಜನರನ್ನು ಸಂದರ್ಶಿಸಿ, ಅವರೊಂದಿಗೆ ಮಾತಾಡಲು ಪ್ರಯತ್ನಿಸುತ್ತಾರೆ. ಪ್ರತಿ ಸಭೆಯಲ್ಲಿ ಕೆಲವೇ ವ್ಯಕ್ತಿಗಳಿಂದ ಹಿಡಿದು ಸುಮಾರು 200 ಮಂದಿ ಸಾಕ್ಷಿಗಳಿದ್ದು, ವಿವಿಧ ಕರ್ತವ್ಯಗಳನ್ನು ಪೂರೈಸಲಿಕ್ಕಾಗಿ ಹಿರಿಯರು ನೇಮಿಸಲ್ಪಡುತ್ತಾರೆ. ಯೆಹೋವನ ಸಾಕ್ಷಿಗಳ ಸಂಸ್ಥೆಯಲ್ಲಿ ಸುವಾರ್ತೆಯ ವ್ಯಕ್ತಿಪರ ಘೋಷಕನೇ ಪ್ರಾಮುಖ್ಯನು. ಸಾಕ್ಷಿಗಳಲ್ಲಿ ಪ್ರತಿಯೊಬ್ಬನು, ಅವನು ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರಲಿ, ಇಲ್ಲವೆ ಬ್ರಾಂಚ್‌ಗಳಲ್ಲಿ ಅಥವಾ ಸಭೆಗಳಲ್ಲಿ ಕೆಲಸ ಮಾಡುತ್ತಿರಲಿ, ದೇವರ ರಾಜ್ಯದ ಕುರಿತು ವ್ಯಕ್ತಿಪರವಾಗಿ ಇತರರಿಗೆ ತಿಳಿಸುವ ಈ ಹೊರಾಂಗಣ ಕಾರ್ಯವನ್ನು ಮಾಡುತ್ತಾನೆ.

ಈ ಚಟುವಟಿಕೆಯ ವರದಿಗಳು ಕಟ್ಟಕಡೆಗೆ ಜಾಗತಿಕ ಮುಖ್ಯಕಾರ್ಯಾಲಯವನ್ನು ತಲಪುತ್ತವೆ, ಮತ್ತು ಒಂದು ವಾರ್ಷಿಕ ವರ್ಷಪುಸ್ತಕವು (ಇಂಗ್ಲಿಷ್‌) ಸಂಕಲಿಸಲ್ಪಟ್ಟು ಪ್ರಕಾಶಿಸಲ್ಪಡುತ್ತದೆ. ಅದಲ್ಲದೆ, ಕಾವಲಿನಬುರುಜು ಪತ್ರಿಕೆಯ ಜನವರಿ 1ರ ಸಂಚಿಕೆಯಲ್ಲಿ ಪ್ರತಿವರ್ಷ ಒಂದು ಚಾರ್ಟು ಕೂಡ ಪ್ರಕಟವಾಗುತ್ತದೆ. ಈ ಎರಡು ಪ್ರಕಾಶನಗಳು, ಯೆಹೋವನಿಗೆ ಮತ್ತು ಕ್ರಿಸ್ತ ಯೇಸುವಿನ ಕೆಳಗಿನ ಆತನ ರಾಜ್ಯಕ್ಕೆ ಸಾಕ್ಷಿಕೊಡುವುದರಲ್ಲಿ ಪ್ರತಿ ವರ್ಷ ಪೂರೈಸಲ್ಪಟ್ಟ ಕಾರ್ಯಗಳ ಸವಿವರವಾದ ವರದಿಗಳನ್ನು ನೀಡುತ್ತವೆ. ಇತ್ತೀಚಿನ ವರ್ಷಗಳಲ್ಲಿ, ಯೇಸುವಿನ ಮರಣದ ಜ್ಞಾಪಕಾಚರಣೆಗೆ ಸಾಕ್ಷಿಗಳೂ ಆಸಕ್ತ ಜನರೂ ಕೂಡಿ ವರ್ಷಕ್ಕೆ ಸುಮಾರು 1,50,00,000 ಮಂದಿ ಹಾಜರಾಗುತ್ತಿದ್ದಾರೆ. ಯೆಹೋವನ ಸಾಕ್ಷಿಗಳು ಸುವಾರ್ತೆಯ ಘೋಷಣೆಯಲ್ಲಿ ವರ್ಷಕ್ಕೆ 110,00,00,000ಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಾರೆ, ಮತ್ತು 2,50,000ಕ್ಕಿಂತಲೂ ಹೆಚ್ಚು ಹೊಸಬರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಾರೆ. ಒಟ್ಟಿಗೆ ಸಾಹಿತ್ಯದ ನೂರಾರು ಕೋಟಿ ಪ್ರತಿಗಳೂ ನೀಡಲ್ಪಡುತ್ತವೆ.