ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೇಳಿಸಿಕೊಳ್ಳಬೇಕೆಂದು ಅವರು ಬಯಸುವ ಸುವಾರ್ತೆ

ನೀವು ಕೇಳಿಸಿಕೊಳ್ಳಬೇಕೆಂದು ಅವರು ಬಯಸುವ ಸುವಾರ್ತೆ

ನೀವು ಕೇಳಿಸಿಕೊಳ್ಳಬೇಕೆಂದು ಅವರು ಬಯಸುವ ಸುವಾರ್ತೆ

ಯೇಸು ಭೂಮಿಯಲ್ಲಿದ್ದಾಗ ಅವನ ಶಿಷ್ಯರು ಅವನ ಬಳಿಗೆ ಬಂದು, “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೂ ಸೂಚನೆಯೇನು?” (NW) ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಅವನು, ಅನೇಕ ರಾಷ್ಟ್ರಗಳು ಒಳಗೂಡಿರುವ ಯುದ್ಧಗಳು, ಬರಗಳು, ಸೋಂಕುರೋಗಗಳು, ಭೂಕಂಪಗಳು, ಅಧರ್ಮದ ವೃದ್ಧಿ, ಸುಳ್ಳು ಧಾರ್ಮಿಕ ಬೋಧಕರು ಅನೇಕರನ್ನು ಮೋಸಗೊಳಿಸುವುದು, ತನ್ನ ನಿಜ ಹಿಂಬಾಲಕರ ಕಡೆಗೆ ದ್ವೇಷ ಮತ್ತು ಹಿಂಸೆ ಹಾಗೂ ಅನೇಕರಲ್ಲಿ ನೀತಿಯ ಕಡೆಗಿನ ಪ್ರೀತಿಯು ತಣ್ಣಗಾಗಿ ಹೋಗುವುದನ್ನು ಮುಂತಿಳಿಸಿದನು. ಈ ವಿಷಯಗಳು ಸಂಭವಿಸಲಾರಂಭಿಸುವಾಗ, ಕ್ರಿಸ್ತನ ಅದೃಶ್ಯ ಸಾನ್ನಿಧ್ಯವನ್ನು ಮತ್ತು ಸ್ವರ್ಗೀಯ ರಾಜ್ಯದ ಸಾಮೀಪ್ಯವನ್ನು ಅದು ಸೂಚಿಸಲಿಕ್ಕಿತ್ತು. ಅದು ಒಂದು ವಾರ್ತೆ, ಸುವಾರ್ತೆಯಾಗಿರಲಿತ್ತು! ಆದುದರಿಂದ ಯೇಸು ಆ ಸೂಚನೆಯ ಒಂದು ಭಾಗವಾಗಿ ಈ ಮಾತುಗಳನ್ನು ಕೂಡಿಸಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”​—⁠ಮತ್ತಾಯ 24:​3-14.

ಇತ್ತೀಚಿನ ಲೋಕ ಸಂಭವಗಳು ಕೆಟ್ಟವುಗಳೆಂಬುದು ನಿಜವಾದರೂ, ಅವು ಏನನ್ನು ಸೂಚಿಸುತ್ತವೊ ಅದು, ಅಂದರೆ ಕ್ರಿಸ್ತನ ಸಾನ್ನಿಧ್ಯವು ಒಳ್ಳೇದಾಗಿದೆ. ಮೇಲೆ ತಿಳಿಸಲ್ಪಟ್ಟ ಘಟನೆಗಳು, ವಿಸ್ತಾರವಾಗಿ ಮುನ್‌ಸೂಚಿಸಲ್ಪಟ್ಟಿದ್ದ ಆ 1914ನೇ ವರ್ಷದಲ್ಲಿ ಸುವ್ಯಕ್ತವಾಗತೊಡಗಿದವು! ಅದು ಅನ್ಯಜನಾಂಗಗಳ ಕಾಲಗಳ ಅಂತ್ಯವನ್ನು ಮತ್ತು ಮಾನವ ಆಳಿಕೆಯಿಂದ ಕ್ರಿಸ್ತನ ಸಹಸ್ರ ವರ್ಷದಾಳಿಕೆಗೆ ನಡಿಸುವ ಬದಲಾವಣೆಯ ಅವಧಿಯ ಆರಂಭವನ್ನು ಗುರುತಿಸಿತು.

ಒಂದು ಬದಲಾವಣೆಯ ಅವಧಿಯು ಇರುವುದೆಂಬದನ್ನು, 110ನೇ ಕೀರ್ತನೆಯ, 1 ಮತ್ತು 2ನೆಯ ವಚನಗಳಲ್ಲಿ ಮತ್ತು ಪ್ರಕಟನೆ 12:​7-12ರಲ್ಲಿ ಸೂಚಿಸಲಾಗಿದೆ. ಕ್ರಿಸ್ತನು ಅರಸನಾಗುವ ಕಾಲವು ಬರುವ ತನಕ ಅವನು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಕುಳಿತುಕೊಳ್ಳುವನೆಂದು ಅಲ್ಲಿ ತೋರಿಸಲಾಗಿದೆ. ಅನಂತರ ಸ್ವರ್ಗದಲ್ಲಿ ಯುದ್ಧವು ನಡೆಯುವುದರ ಫಲಿತಾಂಶವಾಗಿ ಸೈತಾನನು ಭೂಮಿಗೆ ದೊಬ್ಬಲ್ಪಡುವನು ಮತ್ತು ಇದು ಭೂಮಿಗೆ ದುರ್ಗತಿಯನ್ನು ತರುವುದು, ಹಾಗೂ ಕ್ರಿಸ್ತನು ತನ್ನ ಶತ್ರುಗಳ ಮಧ್ಯದಲ್ಲಿ ದೊರೆತನಮಾಡುವನು. ದುಷ್ಟತನದ ಸಂಪೂರ್ಣ ಅಂತ್ಯವು “ಮಹಾ ಸಂಕಟ”ದ ಮೂಲಕ ಬಂದು, ಹರ್ಮಗೆದೋನ್‌ ಯುದ್ಧದಲ್ಲಿ ಕೊನೆಗೊಳ್ಳುವುದು. ಅದನ್ನು ಹಿಂಬಾಲಿಸಿ ಕ್ರಿಸ್ತನ ಸಹಸ್ರ ವರ್ಷದ ಶಾಂತಿಯ ಆಳಿಕೆಯು ಬರುವುದು.​—⁠ಮತ್ತಾಯ 24:​20, 21, 33, 34; ಪ್ರಕಟಣೆ 16:​14-16.

“ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು” ಎಂದು ಬೈಬಲ್‌ ಹೇಳುತ್ತದೆ.​—⁠2 ತಿಮೊಥೆಯ 3:​1-5.

ಈ ಎಲ್ಲ ಸಂಗತಿಗಳು ಮಾನವ ಇತಿಹಾಸದಲ್ಲಿ ಈ ಮುಂಚೆಯೂ ಸಂಭವಿಸಿವೆಯೆಂದು ಕೆಲವರು ವಾದಿಸಾರು. ಆದರೆ ಇಷ್ಟು ವಿಸ್ತಾರವಾದ ಮಟ್ಟದಲ್ಲಿ ಅವೆಂದೂ ಸಂಭವಿಸಿಲ್ಲವೆಂಬುದು ನೈಜ ಸಂಗತಿಯಾಗಿದೆ. ಇತಿಹಾಸಗಾರರು ಮತ್ತು ವ್ಯಾಖ್ಯಾನಗಾರರು ಹೇಳುವಂತೆ, 1914ರಿಂದ ಭೂಮಿಯು ಅನುಭವಿಸಿದಂಥ ಕಾಲವು ಹಿಂದೆಂದೂ ಇದ್ದಿರಲಿಲ್ಲ. (ಪುಟ 7ನ್ನು ನೋಡಿ.) ಹಿಂದೆಂದಿಗಿಂತಲೂ ಎಷ್ಟೋ ಹೆಚ್ಚು ವ್ಯಾಪಕವಾದ ವಿಪತ್ತುಗಳು ಸಂಭವಿಸಿವೆ. ಅಷ್ಟುಮಾತ್ರವಲ್ಲದೆ, ಕಡೇ ದಿವಸಗಳ ಕುರಿತಾದ ಕ್ರಿಸ್ತನ ಸೂಚನೆಯ ಇತರ ವೈಶಿಷ್ಟ್ಯಗಳ ಸಂಬಂಧದಲ್ಲಿ, ಈ ನಿಜತ್ವಗಳನ್ನು ಪರಿಗಣಿಸತಕ್ಕದ್ದು: ಕ್ರಿಸ್ತನ ಸಾನ್ನಿಧ್ಯ ಮತ್ತು ರಾಜ್ಯದ ಕುರಿತಾದ ಭೂವ್ಯಾಪಕ ಘೋಷಣೆಯು ಇತಿಹಾಸದಲ್ಲಿ ಹಿಂದೆಂದೂ ಮಾಡಲ್ಪಟ್ಟಿರದ ಪರಿಮಾಣದಲ್ಲಿ ಮಾಡಲ್ಪಟ್ಟಿದೆ. ಸುವಾರ್ತೆಯನ್ನು ಸಾರಿದ್ದಕ್ಕಾಗಿ ಯೆಹೋವನ ಸಾಕ್ಷಿಗಳ ಮೇಲೆ ಬಂದ ಹಿಂಸೆಯು ಸರಿಸಾಟಿಯಿಲ್ಲದ್ದು. ನಾಸಿ ಸೆರೆಶಿಬಿರಗಳಲ್ಲಿ ನೂರಾರು ಮಂದಿ ಕೊಲ್ಲಲ್ಪಟ್ಟರು. ಈ ದಿನಗಳ ತನಕವೂ ಯೆಹೋವನ ಸಾಕ್ಷಿಗಳು ಕೆಲವು ಸ್ಥಳಗಳಲ್ಲಿ ನಿಷೇಧದ ಕೆಳಗಿದ್ದಾರೆ ಮತ್ತು ಇತರ ಕಡೆಗಳಲ್ಲಿ ಅವರು ಕೈದುಮಾಡಲ್ಪಟ್ಟಿದ್ದಾರೆ, ಸೆರೆಯಲ್ಲಿ ಹಾಕಲ್ಪಟ್ಟಿದ್ದಾರೆ, ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ ಮತ್ತು ಮರಣಕ್ಕೂ ಗುರಿಯಾಗಿದ್ದಾರೆ. ಇದೆಲ್ಲವೂ ಯೇಸು ಕೊಟ್ಟ ಸೂಚನೆಯ ಭಾಗವಾಗಿದೆ.

ಪ್ರಕಟನೆ 11:18ರಲ್ಲಿ ಮುಂತಿಳಿಸಲ್ಪಟ್ಟ ಪ್ರಕಾರ, ಯೆಹೋವನ ನಂಬಿಗಸ್ತ ಸಾಕ್ಷಿಗಳ ವಿರುದ್ಧ “ಜನಾಂಗಗಳು ಕೋಪಿಸಿಕೊಂಡವು” ಮತ್ತು ಇದು ಸೂಚಿಸುವುದೇನಂದರೆ, ಆ ಜನಾಂಗಗಳ ವಿರುದ್ಧ ಯೆಹೋವನ ಸ್ವಂತ “ಕೋಪವೂ” ಬೇಗನೆ ಪ್ರಕಟವಾಗಲಿರುವುದು. ದೇವರು “ಲೋಕನಾಶಕರನ್ನು ನಾಶಮಾಡು”ವನೆಂದೂ ಇದೇ ವಚನವು ತಿಳಿಸುತ್ತದೆ. ಮಾನವ ಇತಿಹಾಸದಲ್ಲಿ ಹಿಂದೆಂದೂ ಭೂಮಿಯ ಜೀವಪೋಷಕ ಸಾಮರ್ಥ್ಯವು ಈ ರೀತಿಯ ಅಪಾಯಕ್ಕೆ ಒಳಪಟ್ಟ ಸಮಯವಿರಲಿಲ್ಲ. ಆದರೆ ಈಗ ಸನ್ನಿವೇಶವು ಭಿನ್ನವಾಗಿದೆ! ಮನುಷ್ಯನು ಇದೇ ರೀತಿಯಲ್ಲಿ ಭೂಮಿಯನ್ನು ಮಲಿನಗೊಳಿಸುತ್ತಾ ಮುಂದುವರಿಯುವಲ್ಲಿ, ಅದು ವಾಸಿಸಲು ಅಶಕ್ಯವಾದ ಸ್ಥಳವಾಗುವುದೆಂದು ಅನೇಕ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ ಯೆಹೋವನು ಅದನ್ನು “ಜನನಿವಾಸಕ್ಕಾಗಿಯೇ ರೂಪಿಸಿದನು,” ಮತ್ತು ಮಲಿನಗೊಳಿಸುವವರು ಅದನ್ನು ಪೂರ್ಣವಾಗಿ ಧ್ವಂಸಗೊಳಿಸುವ ಮುಂಚೆ ಅವರನ್ನೇ ಆತನು ನಾಶಮಾಡುವನು.​—ಯೆಶಾಯ 45:⁠18.

ರಾಜ್ಯದ ಕೆಳಗಿನ ಭೂಆಶೀರ್ವಾದಗಳು 

ಜನರು ದೇವರ ರಾಜ್ಯದ ಪ್ರಜೆಗಳೋಪಾದಿ ಭೂಮಿಯ ಮೇಲೆ ಜೀವಿಸುವ ವಿಚಾರವು ಅನೇಕ ಬೈಬಲ್‌ ವಿಶ್ವಾಸಿಗಳಿಗೆ ವಿಚಿತ್ರವಾಗಿ ಕಂಡೀತು. ಏಕೆಂದರೆ ರಕ್ಷಣೆ ಹೊಂದುವವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆಂದು ಅವರ ನೆನಸುತ್ತಾರೆ. ಕೇವಲ ಸೀಮಿತ ಸಂಖ್ಯೆಯ ಜನರು ಮಾತ್ರವೇ ಸ್ವರ್ಗಕ್ಕೆ ಹೋಗುತ್ತಾರೆಂದೂ ಅಪಾರ ಸಂಖ್ಯೆಯಲ್ಲಿರುವ ಮಹಾ ಸಮೂಹದವರು ಈ ಭೂಮಿಯ ಮೇಲೆ ಸದಾಕಾಲ ಜೀವಿಸುವರೆಂದೂ ಬೈಬಲು ತೋರಿಸುತ್ತದೆ. (ಕೀರ್ತನೆ 37:​11, 29; ಪ್ರಕಟನೆ 7:9; 14:​1-5) ಕ್ರಿಸ್ತನ ಕೈಕೆಳಗಿನ ದೇವರ ರಾಜ್ಯವು ಭೂಮಿಯನ್ನಾವರಿಸಿ ಅದನ್ನಾಳುವುದೆಂದು ಬೈಬಲಿನ ದಾನಿಯೇಲ ಪುಸ್ತಕದ ಒಂದು ಪ್ರವಾದನೆಯು ತೋರಿಸುತ್ತದೆ.

ಅಲ್ಲಿ ಕ್ರಿಸ್ತನ ರಾಜ್ಯವು, ಯೆಹೋವನ ಬೆಟ್ಟದಂಥ ಪರಮಾಧಿಕಾರದಿಂದ ಒಡೆಯಲ್ಪಟ್ಟಿರುವ ಒಂದು ಗುಂಡು ಬಂಡೆಯೋಪಾದಿ ಪ್ರತಿನಿಧಿಸಲ್ಪಟ್ಟಿದೆ. ಅದು ಭೂಮಿಯ ಪ್ರಬಲ ರಾಷ್ಟ್ರಗಳನ್ನು ಪ್ರತಿನಿಧಿಸುವಂಥ ಒಂದು ಪ್ರತಿಮೆಗೆ ಬಡಿದು, ಅದನ್ನು ನಾಶಗೊಳಿಸುತ್ತದೆ. ಮತ್ತು ಆ “ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.” ಆ ಪ್ರವಾದನೆಯು ಮುಂದುವರಿಸುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು; ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”​—⁠ದಾನಿಯೇಲ 2:​34, 35, 44.

ಈ ರಾಜ್ಯದ ಕುರಿತು ಮತ್ತು ಶುದ್ಧೀಕರಿಸಲ್ಪಟ್ಟ ಸುಂದರವಾದ ಭೂಮಿಯ ಮೇಲೆ ನಿತ್ಯ ಜೀವದ ಶಾಸ್ತ್ರಾಧಾರಿತ ನಿರೀಕ್ಷೆಯ ಕುರಿತಾಗಿಯೇ ಯೆಹೋವನ ಸಾಕ್ಷಿಗಳು ನಿಮಗೆ ತಿಳಿಸಲು ಬಯಸುತ್ತಾರೆ. ಈಗ ಜೀವಿಸುತ್ತಿರುವ ಕೋಟ್ಯಂತರ ಜನರಿಗೆ ಮತ್ತು ಸಮಾಧಿಗಳಲ್ಲಿರುವ ಅನೇಕಾನೇಕ ಕೋಟಿ ಜನರಿಗೆ ಅಲ್ಲಿ ಸದಾಕಾಲ ಜೀವಿಸುವ ಸಂದರ್ಭವು ದೊರಕುವುದು. ಅನಂತರ, ಕ್ರಿಸ್ತ ಯೇಸುವಿನ ಸಹಸ್ರ ವರ್ಷದಾಳಿಕೆಯ ಕೆಳಗೆ, ಈ ಭೂಮಿಯನ್ನು ಸೃಷ್ಟಿಸಿ ಅದರಲ್ಲಿ ಪ್ರಥಮ ಮಾನವ ಜೋಡಿಯನ್ನು ಇಟ್ಟ ಯೆಹೋವನ ಮೂಲ ಉದ್ದೇಶವು ನೆರವೇರುವುದು. ಈ ಭೂಪರದೈಸವು ಎಂದಿಗೂ ಬೇಸರತರಿಸದು. ಆದಾಮನು ಹೇಗೆ ಏದೆನ್‌ ತೋಟದಲ್ಲಿ ಕೆಲಸಕ್ಕೆ ನೇಮಿಸಲ್ಪಟ್ಟನೊ ಹಾಗೆಯೇ ಮಾನವ ಕುಲಕ್ಕೆ, ಭೂಮಿಯ ಮತ್ತು ಅದರಲ್ಲಿರುವ ಸಸ್ಯ ಹಾಗೂ ಪ್ರಾಣಿ ಜೀವಿಗಳನ್ನು ನೋಡಿಕೊಳ್ಳುವ ಪಂಥಾಹ್ವಾನದಾಯಕ ಕಾರ್ಯಯೋಜನೆಗಳು ನೇಮಿಸಲ್ಪಡುವವು. ಅವರು “ತಮ್ಮ ಕೈಕೆಲಸಗಳ ಫಲಗಳಲ್ಲಿ ದೀರ್ಘಕಾಲ ಆನಂದಿಸುವರು.”​—ಯೆಶಾಯ 65:​22, ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಶನ್‌; ಆದಿಕಾಂಡ 2:15.

ಯೇಸು ನಮಗೆ ಕಲಿಸಿದಂಥ “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಪ್ರಾರ್ಥನೆಯು ಉತ್ತರಿಸಲ್ಪಡುವಾಗ, ಭೂಮಿಯಲ್ಲಿರುವ ಪರಿಸ್ಥಿತಿಗಳನ್ನು ತೋರಿಸಲು ಅನೇಕ ಶಾಸ್ತ್ರವಚನಗಳನ್ನು ಸಾದರಪಡಿಸಸಾಧ್ಯವಿದೆ. (ಮತ್ತಾಯ 6:10) ಆದರೆ ಸದ್ಯಕ್ಕೆ ಇದೊಂದು ವಚನವು ಸಾಲುವುದು: “ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು​—⁠ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು​—⁠ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ​—⁠ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”​—⁠ಪ್ರಕಟನೆ 21:​3-5.

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು”

ಆದರೆ “ಆಗ ಅಂತ್ಯವು ಬರುವದು”

[ಪುಟ 18ರಲ್ಲಿರುವ ಚಿತ್ರ]

ನೆದರ್‌ಲೆಂಡ್ಸ್‌

[ಪುಟ 18ರಲ್ಲಿರುವ ಚಿತ್ರ]

ನೈಜೀರಿಯ