ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣ?

ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣ?

ಕಾಂಗೊ (ಕಿನ್ಷಾಸ)

ರುವಾಂಡ

ಕ್ರಿ.ಶ. ಮೂರು ಅಥವಾ ನಾಲ್ಕನೆಯ ಶತಮಾನದ ಸಿಮಕಸ್‌ ಭಾಷಾಂತರದ ಅವಶೇಷ. ಕೀರ್ತನೆ 69:31⁠ರಲ್ಲಿ ಯೆಹೋವ ಎಂಬ ಹೆಸರು ಇರುವುದನ್ನು ಗಮನಿಸಬಹುದು.

ಯೆಹೋವನ ಸಾಕ್ಷಿಗಳಾದ ನಾವು ಅನೇಕ ವರ್ಷಗಳ ತನಕ ಆಗ ಲಭ್ಯವಿದ್ದ ಬೈಬಲ್‌ಗಳನ್ನು ಉಪಯೋಗಿಸುತ್ತಿದ್ದೆವು, ಮುದ್ರಿಸಿ ವಿತರಿಸುತ್ತಿದ್ದೆವು. ಆದರೆ ಜನರು “ಸತ್ಯದ ನಿಷ್ಕೃಷ್ಟ ಜ್ಞಾನವನ್ನು” ಪಡೆದುಕೊಳ್ಳಬೇಕಾದರೆ ಒಂದು ಹೊಸ ಭಾಷಾಂತರದ ಅವಶ್ಯವಿದೆ ಎನ್ನುವುದನ್ನು ಮನಗಂಡೆವು. ಏಕೆಂದರೆ ಪ್ರತಿಯೊಬ್ಬ ಮಾನವನು ಸತ್ಯದ ನಿಷ್ಕೃಷ್ಟ ಜ್ಞಾನ ಪಡೆಯಬೇಕೆನ್ನುವುದು ದೇವರ ಇಷ್ಟ. (1 ತಿಮೊಥೆಯ 2:3, 4) ಹಾಗಾಗಿ, ಎಲ್ಲ ಜನರಿಗೆ ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ಒಂದು ಬೈಬಲನ್ನು ಹೊರತಂದೆವು. ನೂತನ ಲೋಕ ಭಾಷಾಂತರ ಎಂದು ಕರೆಯಲಾಗುವ ಆ ಬೈಬಲ್‌ 1950⁠ರಿಂದ ಆರಂಭಿಸಿ ಹಲವಾರು ಸಂಪುಟಗಳಾಗಿ ಬಿಡುಗಡೆ ಆಯಿತು. ಅನುವಾದದಲ್ಲಿ ನಿಷ್ಕೃಷ್ಟತೆಯನ್ನು ಕಾಪಾಡಿಕೊಳ್ಳಲಾಗಿದ್ದು ಇಂದು ಈ ಭಾಷಾಂತರ ಕನ್ನಡವನ್ನೂ ಸೇರಿಸಿ 130ಕ್ಕೂ ಅಧಿಕ ಭಾಷೆಯಲ್ಲಿ ಲಭ್ಯ.

ಬೈಬಲ್‌—ಸರಳ ಭಾಷೆಯಲ್ಲಿ ಇರಬೇಕು. ಕಾಲ ಬದಲಾದಂತೆ ಭಾಷೆ ಬದಲಾಗುತ್ತದೆ. ಅನೇಕ ಬೈಬಲ್‌ ಭಾಷಾಂತರಗಳಲ್ಲಿ ಬಳಸಲಾಗಿದ್ದ ಪದಗಳು ಹಳೆಯದ್ದಾಗಿದ್ದವು ಹಾಗೂ ಹೆಚ್ಚಿನವರಿಗೆ ಅರ್ಥವಾಗುತ್ತಿರಲಿಲ್ಲ. ಅಲ್ಲದೆ ಬೈಬಲಿನ ಮೂಲ ಪ್ರತಿಗಳಿಗೆ ನಿಖರವಾಗಿ ಹೋಲುವ ಪ್ರಾಚೀನ ಹಸ್ತಪ್ರತಿಗಳು ದೊರೆತವು. ಇವು ಬೈಬಲ್‌ನಲ್ಲಿ ಉಪಯೋಗಿಸಲಾಗಿರುವ ಹೀಬ್ರು, ಆರಮೇಯಿಕ್‌ ಹಾಗೂ ಗ್ರೀಕ್‌ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕಾರಿಯಾಗಿದ್ದವು.

ಬೈಬಲ್‌—ದೇವರ ವಾಕ್ಯದ ಮೂಲಾರ್ಥವನ್ನು ನಿಖರವಾಗಿ ತಿಳಿಸಬೇಕು. ದೇವರ ವಾಕ್ಯವನ್ನು ತರ್ಜುಮೆ ಮಾಡುವವರು ಅದರ ಮೂಲಾರ್ಥವನ್ನು ಬದಲಾಯಿಸದೆ ನಿಖರವಾಗಿ ತಿಳಿಸಬೇಕು. ಆದರೆ ಅನೇಕ ಬೈಬಲ್‌ ಭಾಷಾಂತರಗಳಲ್ಲಿ ಯೆಹೋವ ದೇವರ ಹೆಸರನ್ನೇ ತೆಗೆದುಬಿಟ್ಟಿದ್ದಾರೆ.

ಬೈಬಲ್‌—ತನ್ನ ಗ್ರಂಥಕರ್ತನಾದ ಯೆಹೋವ ದೇವರಿಗೆ ಮಹಿಮೆ ಕೊಡಬೇಕು. (2 ಸಮುವೇಲ 23:2) ಕೆಳಗಿನ ಚಿತ್ರದಲ್ಲಿರುವಂತೆ ಬೈಬಲಿನ ಪ್ರಾಚೀನ ಹಸ್ತಪ್ರತಿಗಳಲ್ಲಿ ಯೆಹೋವ ದೇವರ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. ನೂತನ ಲೋಕ ಭಾಷಾಂತರ ಬೈಬಲಿನಲ್ಲಿ ದೇವರ ಹೆಸರನ್ನು ಪುನಃಸ್ಥಾಪಿಸಲಾಗಿದೆ. (ಕೀರ್ತನೆ 83:18) ನೂತನ ಲೋಕ ಭಾಷಾಂತರ ಬೈಬಲನ್ನು ಅನುವಾದ ಮಾಡಲು ವರ್ಷಾನುಗಟ್ಟಲೆ ಹಾಕಿದ ಪರಿಶ್ರಮ ವ್ಯರ್ಥವಾಗಲಿಲ್ಲ. ಅದು ಓದಲು ಸುಲಭವಾಗಿದ್ದು ಯೆಹೋವ ದೇವರ ಆಲೋಚನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ನಿಮ್ಮ ಭಾಷೆಯಲ್ಲಿ ನೂತನ ಲೋಕ ಭಾಷಾಂತರ ಬೈಬಲ್‌ ಇರಲಿ ಇಲ್ಲದಿರಲಿ ಪ್ರತಿ ದಿನ ಯೆಹೋವ ದೇವರ ವಾಕ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.—ಯೆಹೋಶುವ 1:8; ಕೀರ್ತನೆ 1:2, 3.

  • ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣವೇನು?

  • ದೇವರ ಇಷ್ಟವನ್ನು ತಿಳಿದುಕೊಳ್ಳಲು ಇಚ್ಛಿಸುವವರು ಪ್ರತಿನಿತ್ಯ ಏನು ಮಾಡಬೇಕು?