ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಮಾದರಿಯನ್ನ ಅನುಕರಿಸಿ . . .

ಯೇಸುವಿನ ಮಾದರಿಯನ್ನ ಅನುಕರಿಸಿ . . .

ಕನಿಕರ ತೋರಿಸಿ

ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದನು. ಜನರಿಗೆ ಸಾಮಾನ್ಯವಾಗಿ ಇದ್ದ ಕಷ್ಟ ಸಂಕಟಗಳು ಅವನಿಗೆ ಇರಲಿಲ್ಲ. ಆದ್ರೂ ಜನರ ಕಷ್ಟಗಳನ್ನು ನೋಡಿದಾಗ ಅವನಿಗೆ ತುಂಬ ಬೇಜಾರಾಯ್ತು. ಅವನು ಕನಿಕರ ತೋರಿಸಿದನು. ಅಷ್ಟೇ ಅಲ್ಲ ಜನರು ನೆನಸದ ರೀತಿಯಲ್ಲೂ ಅವರಿಗೆ ಸಹಾಯ ಮಾಡಿದನು. ಇದೆಲ್ಲ ಮಾಡೋಕೆ ಯೇಸುವನ್ನ ಪ್ರೇರೇಪಿಸಿದ್ದು ಕನಿಕರ ಅನ್ನೋ ಗುಣ.

ಜನರ ಜೊತೆ ಬೆರೆಯಿರಿ

ದೊಡ್ಡವರು ಚಿಕ್ಕವರು ಹೀಗೆ ಎಲ್ಲರೂ ಯೇಸು ಜೊತೆ ಬೆರೆಯುತ್ತಿದ್ರು. ಯಾಕಂದ್ರೆ ಯೇಸು ತಾನೊಬ್ಬ ದೊಡ್ಡ ವ್ಯಕ್ತಿ ಅಂತ ತೋರಿಸಿಕೊಳ್ಳುತ್ತಿರಲಿಲ್ಲ. ಯೇಸು ಎಲ್ಲರ ಕಾಳಜಿ ವಹಿಸುತ್ತಿದ್ದ. ಅದಕ್ಕೆ ಜನರೆಲ್ಲ ಅವನ ಜೊತೆ ಇರೋಕೆ ಖುಷಿಪಡುತ್ತಿದ್ದರು.

ಯಾವಾಗಲೂ ಪ್ರಾರ್ಥನೆ ಮಾಡಿ

ಯೇಸು ಒಬ್ಬನೇ ಇದ್ದಾಗ ಮಾತ್ರ ಅಲ್ಲ, ಜನರ ಜೊತೆ ಇದ್ದಾಗಲೂ ಪ್ರಾರ್ಥನೆ ಮಾಡುತ್ತಿದ್ದ. ಅವನು ಊಟದ ಸಮಯದಲ್ಲಿ ಮಾತ್ರ ಅಲ್ಲ, ಬೇರೆ ಅನೇಕ ಸಂದರ್ಭದಲ್ಲೂ ಪ್ರಾರ್ಥನೆ ಮಾಡುತ್ತಿದ್ದ. ತಂದೆಗೆ ಕೃತಜ್ಞತೆ ಹೇಳೋಕೆ, ಆತನನ್ನ ಸ್ತುತಿಸೋಕೆ ಮತ್ತು ಕೆಲವು ನಿರ್ಣಯಗಳನ್ನ ಮಾಡೋ ಮುಂಚೆ ಮಾರ್ಗದರ್ಶನೆಗಾಗಿ ಪ್ರಾರ್ಥಿಸುತ್ತಿದ್ದ.

ಸ್ವಾರ್ಥಿಗಳಾಗಿರಬೇಡಿ

ಯೇಸುವಿಗೆ ವಿಶ್ರಾಂತಿ ಅಗತ್ಯವಿದ್ದಾಗಲೂ ಬೇರೆಯವರಿಗೆ ಸಹಾಯ ಮಾಡೋಕೆ ಮುಂದೆ ಬಂದ. ಯಾವಾಗಲೂ ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿದ್ದ. ಯೇಸುವಿನ ಈ ಗುಣವನ್ನು ನಾವು ಅನುಕರಿಸೋಣ.

ಕ್ಷಮಿಸಿ

ಕ್ಷಮಿಸಬೇಕು ಅಂತ ಯೇಸು ಕಲಿಸಿದ್ದಷ್ಟೇ ಅಲ್ಲ. ಶಿಷ್ಯರು ಮತ್ತು ಬೇರೆಯವರು ತಪ್ಪು ಮಾಡಿದಾಗ ಅವನು ಅದನ್ನ ಕ್ಷಮಿಸಿದನು.

ಹುರುಪಿನಿಂದ ಸೇವೆ ಮಾಡಿ

ಯೇಸುಗೆ ತನ್ನನ್ನ ಮೆಸ್ಸೀಯ ಅಂತ ಹೆಚ್ಚಿನ ಯೆಹೂದ್ಯರು ಒಪ್ಪಲ್ಲ ಮತ್ತು ತನ್ನನ್ನ ಕೊಲ್ಲುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಿತ್ತು. ಆದ್ರೂ ಜನರಿಗೆ ಸಹಾಯ ಮಾಡೋಕೆ ಅವನಿಂದ ಏನೆಲ್ಲ ಮಾಡಕ್ಕಾಗುತ್ತೋ ಅದನ್ನೆಲ್ಲ ಮಾಡಿದ. ಸತ್ಯವನ್ನು ಹುರುಪಿನಿಂದ ಕಲಿಸಿದ. ವಿರೋಧವನ್ನ ಎದುರಿಸುತ್ತಿರೋ ತನ್ನ ಶಿಷ್ಯರಿಗೆ ಯೇಸು ಒಂದು ಒಳ್ಳೆ ಮಾದರಿಯನ್ನ ಇಟ್ಟಿದ್ದಾನೆ.

ದೀನತೆ ತೋರಿಸಿ

ಯೇಸು ಪರಿಪೂರ್ಣ ವ್ಯಕ್ತಿಯಾಗಿರುವುದರಿಂದ ಒಳ್ಳೆ ಆರೋಗ್ಯ, ಜ್ಞಾನ, ವಿವೇಕ ಇತ್ತು. ಆದರೂ ಅವನು ಬೇರೆಯವರ ಸೇವೆ ಮಾಡೋಕೆ ಮುಂದೆ ಬಂದ.

ತಾಳ್ಮೆ ತೋರಿಸಿ

ಕೆಲವೊಮ್ಮೆ ಅಪೊಸ್ತಲರು ಯೇಸುವಿನ ಮಾದರಿಯನ್ನ ಅನುಕರಿಸುತ್ತಿರಲಿಲ್ಲ, ಅವನು ಹೇಳಿದ್ದನ್ನ ಮಾಡುತ್ತಿರಲಿಲ್ಲ. ಆಗಲೂ ಅವನು ತಾಳ್ಮೆ ಕಳೆದುಕೊಳ್ಳಲಿಲ್ಲ. ಯೆಹೋವ ದೇವರಿಗೆ ಹತ್ತಿರ ಆಗೋಕೆ ತಾಳ್ಮೆಯಿಂದ ಪದೇಪದೇ ಕಲಿಸಿದ.