ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಆರಿಸಿ ಕೊಳ್ಳುವ ಹಕ್ಕಿದೆ

ನಿಮಗೆ ಆರಿಸಿ ಕೊಳ್ಳುವ ಹಕ್ಕಿದೆ

ನಿಮಗೆ ಆರಿಸಿ ಕೊಳ್ಳುವ ಹಕ್ಕಿದೆ

ಪ್ರಚಲಿತ ವೈದ್ಯಕೀಯ ಮಾರ್ಗವೊಂದು (ರಿಸ್ಕ್‌⁄ಬೆನೆಫಿಟ್‌ ಎನಾಲಿಸಿಸ್‌ ಎಂದು ಕರೆಯಲ್ಪಡುತ್ತದೆ) ರಕ್ತ ಚಿಕಿತ್ಸೆಯ ವಿಸರ್ಜನೆಯಲ್ಲಿ ವೈದ್ಯರೂ ರೋಗಿಗಳೂ ಸಹಕರಿಸುವುದನ್ನು ಹೆಚ್ಚು ಸುಲಭ ಮಾಡುತ್ತದೆ. ಒಂದು ನಿರ್ದಿಷ್ಟ ಔಷಧದಿಂದ ಅಥವಾ ಶಸ್ತ್ರಚಿಕಿತ್ಸೆಯಿಂದ ಬರಬಹುದಾದ ಅಪಾಯ ಮತ್ತು ಪ್ರಯೋಜನಗಳನ್ನು ವೈದ್ಯರು ತೂಗಿ ನೋಡುತ್ತಾರೆ. ಇಂಥ ವಿಶ್ಲೇಷಣೆಯಲ್ಲಿ ರೋಗಿಗಳೂ ಭಾಗವಹಿಸಬಹುದು.

ಅನೇಕ ಸ್ಥಳಗಳಲ್ಲಿ ಜನರು ಅನುಭವಿಸುವ ಒಂದು ರೋಗವನ್ನು—ಕ್ರಾನಿಕ್‌ ಟಾನ್ಸಿಲೈಟಿಸ್‌ ಎಂಬ ಗಲಗ್ರಂಥಿಯ ರೋಗ—ಮಾದರಿಯಾಗಿ ಪರಿಗಣಿಸೋಣ. ನಿಮಗೆ ಈ ಸಮಸ್ಯೆ ಇರುವಲ್ಲಿ ನೀವು ವೈದ್ಯರ ಬಳಿಗೆ ಹೋದೀರಿ. ಮತ್ತು ಆರೋಗ್ಯ ಪರಿಣತರು ಎರಡು ಅಭಿಪ್ರಾಂಯಗಳನ್ನು ಶಿಫಾರಸು ಮಾಡುವುದರಿಂದ ನೀವು ಇಬ್ಬರು ವೈದ್ಯರ ಬಳಿಗೆ ಹೋದೀರಿ. ಇವರಲ್ಲಿ ಒಬ್ಬನು ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾನೆ. ಅದನ್ನು ಅವನು ಹೀಗೆ ವಿವರಿಸುತ್ತಾನೆ: ಆಸ್ಪತ್ರೆಯಲ್ಲಿ ಇರಬೇಕಾದ ಸಮಯ, ವೇದನೆ ಎಷ್ಟಿರಬಹುದು ಮತ್ತು ಖರ್ಚು. ಅಪಾಯದ ಕುರಿತು ಮಾತಾಡುತ್ತಾ, ಇದರಲ್ಲಿ ಜಾಸ್ತಿ ರಕ್ತ ಸುರಿತ ಸಾಮಾನ್ಯವಲ್ಲವೆಂದೂ, ಈ ಶಸ್ತ್ರಚಿಕಿತ್ಸೆಯಿಂದಾಗಿ ಸಾಯುವುದು ಅತಿ ವಿರಳ ಎಂದೂ ಅವನು ಹೇಳುತ್ತಾನೆ. ಆದರೆ ಎರಡನೆಯ ಅಭಿಪ್ರಾಯದ ವೈದ್ಯನು ನೀವು ಪ್ರತಿಜೈವಿಕ (ಆ್ಯಂಟಿಬಯಾಟಿಕ್‌) ಚಿಕಿತ್ಸೆಯನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತಾನೆ. ಔಷಧ ಯಾವುದು, ಹೊಂದಬಹುದಾದ ಸಾಫಲ್ಯ ಮತ್ತು ಖರ್ಚನ್ನು ಅವನು ವಿವರಿಸುತ್ತಾನೆ. ಅಪಾಯದ ವಿಷಯದಲ್ಲಿ ಔಷಧದಿಂದ ಜೀವಾಪಾಯ ಪ್ರತಿಕ್ರಿಯೆಗಳಾಗುವ ರೋಗಿಗಳು ಕೇವಲ ಕೊಂಚವೆಂದು ಅವನು ಹೇಳುತ್ತಾನೆ.

ಪ್ರತಿಯೊಬ್ಬ ಸಮರ್ಥ ವೈದ್ಯನು ಅಪಾಯ ಮತ್ತು ಪ್ರಯೋಜನಗಳನ್ನು ತೂಗಿ ನೋಡುವ ಸಂಭವವಿದೆ. ಆದರೆ ಈಗ ನೀವು ಅಪಾಯ ಮತ್ತು ಪ್ರಯೋಜನ ಹಾಗೂ ನಿಮಗೆ ಮಾತ್ರ ಚೆನ್ನಾಗಿ ತಿಳಿದಿರುವ ಸಂಗತಿಗಳನ್ನು ತೂಗಿ ನೋಡಬೇಕು. (ನಿಮ್ಮ ಭಾವಾವೇಶ ಅಥವಾ ಆತ್ಮಿಕ ಶಕ್ತಿ, ಕುಟುಂಬದ ಆರ್ಥಿಕ ಸ್ಥಿತಿ, ಕುಟುಂಬದ ಮೇಲೆ ಇದರ ಪರಿಣಾಮ ಮತ್ತು ನಿಮ್ಮ ಸ್ವಂತ ನೈತಿಕತೆ-ಇವುಗಳನ್ನು ಪರಿಗಣಿಸಲು ನೀವು ಅತ್ಯುತ್ತಮ ಸ್ಥಾನದಲ್ಲಿದ್ದೀರಿ.) ಆ ಬಳಿಕ ನೀವು ಆಯ್ಕೆ ಮಾಡುತ್ತೀರಿ. ನೀವು ಪ್ರಾಯಶಃ, ಒಂದು ಚಿಕಿತ್ಸೆಗೆ ಒಪ್ಪಿಗೆ ಕೊಟ್ಟು ಇನ್ನೊಂದನ್ನು ನಿರಾಕರಿಸುವಿರಿ.

ನಿಮ್ಮ ಮಗುವಿಗೆ ಕ್ರಾನಿಕ್‌ ಟಾನ್ಸಿಲೈಟಿಸ್‌ ಇರುವಲ್ಲಿ ಸಹ ಆರಿಸಿ ಕೊಳ್ಳುವವರು ನೀವೇ. ಅಪಾಯ, ಪ್ರಯೋಜನ ಮತ್ತು ಚಿಕಿತ್ಸೆಗಳು ಅತಿ ಪ್ರತ್ಯಕ್ಷವಾಗಿ ಪ್ರಭಾವಿತರಾಗುವ ಪ್ರೀತಿಯ ಹೆತ್ತವರಾದ ನಿಮಗೆ ತಿಳಿಸಲ್ಪಡುವುವು ಮತ್ತು ಆಗುವ ಪರಿಣಾಮಕ್ಕೆ ನೀವು ಜವಾಬ್ದಾರರು. ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ಮೇಲೆ, ನಿಮ್ಮ ಮಗುವಿನ ಆರೋಗ್ಯ ಮತ್ತು ಅವನ ಅಥವಾ ಅವಳ ಜೀವವನ್ನು ಒಳಗೊಂಡಿರುವ ವಿಷಯದಲ್ಲಿ ನೀವು ತಿಳುವಳಿಕೆಯ ಆಯ್ಕೆಯನ್ನು ಮಾಡಬಲ್ಲಿರಿ. ನೀವು ಪ್ರಾಯಶಃ, ಅಪಾಯಗಳೊಂದಿಗೆ ಶಸ್ತ್ರಚಿಕಿತ್ಸೆಗೆ ಒಪ್ಪಬಹುದು. ಇತರ ರೋಗಿಗಳು, ಅಪಾಯಗಳೊಂದಿಗೆ ಆ್ಯಂಟಿಬಯೋಟಿಕ್‌ ಚಿಕಿತ್ಸೆಯನ್ನು ಆರಿಸಿ ಕೊಳ್ಳಬಹುದು. ವೈದ್ಯರು ವಿಭಿನ್ನ ಸಲಹೆಗಳನ್ನು ಕೊಡುವಂತೆಯೇ ರೋಗಿಗಳು ಅಥವಾ ಹೆತ್ತವರು ತಮಗೆ ಉತ್ತಮವೆಂದು ತೋರುವ ಚಿಕಿತ್ಸೆಯಲ್ಲಿ ವಿಭಿನ್ನತೆಯನ್ನು ತೋರಿಸುತ್ತಾರೆ. ತಿಳುವಳಿಕೆಯ (ರಿಸ್ಕ್‌⁄ಬೆನೆಫಿಟ್‌) ಆಯ್ಕೆಗಳನ್ನು ಮಾಡುವುದರಲ್ಲಿ ಈ ಸಂಗತಿ ಸೇರಿದೆ ಎಂಬುದು ಒಪ್ಪಲ್ಪಟ್ಟಿರುವ ವಿಷಯ.

ರಕ್ತೋಪಯೋಗದ ವಿಷಯವೇನು? ನಿಜತ್ವವನ್ನು ವಿಷಯನಿಷ್ಠೆಯಿಂದ ಪರೀಕ್ಷಿಸುವ ಯಾವನೂ ರಕ್ತ ಪೂರಣದಲ್ಲಿ ಮಹಾ ಅಪಾಯಗಳಿವೆ ಎಂಬುದನ್ನು ಅಲ್ಲಗಳೆಯನು. ದೊಡ್ಡದಾದ ಮ್ಯಾಸಚೂಸೆಟ್ಸ್‌ ಜನರಲ್‌ ಹಾಸ್ಪಿಟಲಿನಲ್ಲಿ ರಕ್ತ ಪೂರಣ ಸೇವೆಯ ಡೈರೆಕ್ಟರ್‌ ಡಾ. ಚಾರ್ಲ್ಸ್‌ ಹಗಿನ್ಸ್‌ ಇದನ್ನು ಅತಿ ಸ್ಪಷ್ಟವಾಗಿ ಹೇಳಿದರು: “ರಕ್ತವು ಹಿಂದೆಂದೂ ಇಂದಿನಷ್ಟು ಅಪಾಯ ರಹಿತವಾಗಿ ಇದ್ದದ್ದಿಲ್ಲ. ಆದರೆ ಅದನ್ನು ಅನಿವಾರ್ಯವಾಗಿ ಅನಪಾಯರಹಿತವೆಂದೆಣಿಸತಕ್ಕದ್ದು. ಅದು ವೈದ್ಯಕೀಯ ಶಾಸ್ತ್ರದಲ್ಲಿ ನಾವು ಉಪಯೋಗಿಸುವ ಅತ್ಯಂತ ಅಪಾಯಕಾರಿಯಾದ ವಸ್ತು.”—ದ ಬಾಸ್ಟನ್‌ ಗ್ಲೋಬ್‌ ಮ್ಯಾಗಜಿನ್‌, ಫೆಬ್ರವರಿ 4, 1990.

ವೈದ್ಯಕೀಯ ಸಿಬ್ಬಂದಿಗಳಿಗೆ ಸಕಾರಣವಿದ್ದೇ ಹೀಗೆ ಸಲಹೆ ನೀಡಲ್ಪಟ್ಟಿದೆ: “ರಕ್ತ ಪೂರಣದ ಪ್ರಯೋಜನ⁄ಅಪಾಯದ ಸಂಬಂಧದಲ್ಲಿ ಅಪಾಯದ ಭಾಗಕ್ಕೆ ಪುನಃ ಬೆಲೆ ಕಟ್ಟಿ ಅನ್ಯ ಮಾರ್ಗಗಳನ್ನು ಹುಡುಕುವುದು ಅಗತ್ಯ.” (ಒತ್ತು ನಮ್ಮದು.)—ಪೆರಿಒಪರೆಟಿವ್‌ ರೆಡ್‌ ಸೆಲ್‌ ಟ್ರಾನ್ಸ್‌ಫ್ಯೂನ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಕಾನ್‌ಫರೆನ್ಸ್‌, ಜೂನ್‌ 27-29, 1988.

ರಕ್ತವನ್ನು ಉಪಯೋಗಿಸುವುದರಲ್ಲಿರುವ ಪ್ರಯೋಜನ ಅಥವಾ ಅಪಾಯದ ಕುರಿತು ವೈದ್ಯರು ಸಮ್ಮತಿ ಸೂಚಿಸಲಿಕ್ಕಿಲ್ಲ. ಒಬ್ಬನು ಅನೇಕ ರಕ್ತ ಪೂರಣಗಳನ್ನು ಕೊಟ್ಟು ಅವುಗಳಲ್ಲಿ ಅಪಾಯವಿದ್ದರೂ ಪ್ರಯೋಜನವಿದೆಂದು ದೃಢವಾಗಿ ನಂಬಬಹುದು. ಇನ್ನೊಬ್ಬನು ಅರಕ್ತ ದ್ರವ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಪಡೆದಿರುವ ಕಾರಣ ಅಪಾಯವು ನ್ಯಾಯಸಮ್ಮತವಲ್ಲವೆಂದು ಅಭಿಪ್ರಯಿಸಬಹುದು. ಆದರೆ ಅಂತಿಮವಾಗಿ, ರೋಗಿಗಳು ಅಥವಾ ಹೆತ್ತವರಾಗಿರುವ ನೀವೇ ನಿರ್ಣಯಿಸತಕ್ಕವರು. ನೀವೇ ಏಕೆ? ಏಕಂದರೆ ನಿಮ್ಮ (ಯಾ ನಿಮ್ಮ ಮಗುವಿನ) ದೇಹ, ಜೀವ, ನೈತಿಕತೆ ಮತ್ತು ದೇವರೊಂದಿಗೆ ಪರಮ ಪ್ರಾಮುಖ್ಯವಾದ ನಿಮ್ಮ ಸಂಬಂಧ ಇದರಲ್ಲಿ ಸೇರಿದೆ.

ನಿಮ್ಮ ಹಕ್ಕಿಗೆ ಮಾನ್ಯತೆಯಿದೆ

ಇಂದು ಅನೇಕ ಸ್ಥಳಗಳಲ್ಲಿ ರೋಗಿಗೆ, ಅವನು ಯಾವ ಚಿಕಿತ್ಸೆಗೆ ಒಪ್ಪಬಹುದೆಂದು ನಿರ್ಣಯಿಸುವ ವಿಷಯದಲ್ಲಿ ಅಲಂಘ್ಯವಾದ ಹಕ್ಕಿದೆ. “ತಿಳುವಳಿಕೆಯ ಸಮ್ಮತಿಯ ನಿಯಮವು ಎರಡು ಹೇತುಗಳ ಮೇಲೆ ಆಧಾರಿತವಾಗಿದೆ: ಶಿಫಾರಸು ಮಾಡಲ್ಪಟ್ಟ ಚಿಕಿತ್ಸೆಯ ಕುರಿತು ತಿಳುವಳಿಕೆಯ ಆಯ್ಕೆ ಮಾಡುವಂತೆ ಸಾಕಷ್ಟು ಮಾಹಿತಿಯನ್ನು ಪಡೆಯುವ ಹಕ್ಕು ರೋಗಿಗಿದೆ ಎಂಬುದು ಒಂದನೆಯದು; ಮತ್ತು ವೈದ್ಯನ ಶಿಫಾರಸನ್ನು ರೋಗಿ ಅಂಗೀಕರಿಸಬಹುದು ಇಲ್ಲವೇ ನಿರಾಕರಿಸಬಹುದು ಎಂಬುದು ಎರಡನೆಯದು. . . . ಬೇಡ, ಬೇಕು ಮತ್ತು ಈ ಷರತ್ತುಗಳ ಮೇಲೆ ಬೇಕು ಎಂದು ಹೇಳುವ ಹಕ್ಕು ರೋಗಿಗಿಲ್ಲದಿದ್ದರೆ ತಿಳುವಳಿಕೆಯ ಸಮ್ಮತಿಯ ಹೆಚ್ಚಿನ ನ್ಯಾಯಾಧಾರ ಆರಿ ಹೋಗುತ್ತದೆ.”—ಇನ್‌ಫಾರ್ಮ್ಡ್‌ ಕನ್ಸೆಂಟ್‌—ಲೀಗಲ್‌ ಥಿಯರಿ ಆ್ಯಂಡ್‌ ಕಿನ್ಲಿಕಲ್‌ ಪ್ರ್ಯಾಕ್ಟಿಸ್‌, 1987. *

ಕೆಲವು ರೋಗಿಗಳಿಗೆ, ಅವರು ತಮ್ಮ ಹಕ್ಕನ್ನು ಸಾಧಿಸ ಪ್ರಯತ್ನಿಸಿದಾಗ ವಿರೋಧಗಳು ಬಂದಿವೆ. ಟಾನ್ಸಿಲೆಕೊಮ್ಟಿ ಅಥವಾ ಆ್ಯಂಟಿಬಯಾಟಿಕ್ಸ್‌ನ ವಿಷಯದಲ್ಲಿ ಪ್ರಬಲವಾದ ಅನಿಸಿಕೆಗಳಿರುವ ನಿಮ್ಮ ಮಿತ್ರನಿಂದ ಇದು ಬರಬಹುದು. ಅಥವಾ ಒಬ್ಬ ವೈದ್ಯನು ತನ್ನ ಸಲಹೆಯ ಸಮರ್ಪಕತೆಯನ್ನು ದೃಢವಾಗಿ ನಂಬುವುದರಿಂದ ಇದು ಬರಬಹುದು. ಶಾಸನಬದ್ಧವಾದ ಅಥವಾ ಹಣ ಕಾಸಿನ ಕಾರಣದಿಂದ ಆಸ್ಪತ್ರೆಯ ಅಧಿಕಾರಿ ಒಪ್ಪದೆ ಇರುವುದರ ಮೂಲಕವೂ ಇದು ಬರಬಹುದು.

“ಅನೇಕ ಆರ್ತೊಪೀಡಿಕ್‌ ವೈದ್ಯರು [ಸಾಕ್ಷಿ] ರೋಗಿಗಳ ಶಸ್ತ್ರಚಿಕಿತ್ಸೆ ಮಾಡದಿರಲು ನಿರ್ಧರಿಸುತ್ತಾರೆ” ಎನ್ನುತ್ತಾರೆ ಡಾ. ಕಾರ್ಲ್‌ ಎಲ್‌. ನೆಲ್ಸನ್‌. “ಯಾವ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನೂ ನಿರಾಕರಿಸಲು ರೋಗಿಗೆ ಹಕ್ಕಿದೆ ಎಂಬುದು ನಮ್ಮ ನಂಬಿಕೆ. ಪೂರಣದಂಥ ನಿರ್ದಿಷ್ಟ ಚಿಕಿತ್ಸೆಯನ್ನು ಬಿಟ್ಟು, ಸುರಕ್ಷಯ ಶಸ್ತ್ರಚಿಕಿತ್ಸೆಯನ್ನು ಒದಗಿಸುವುದು ಔದ್ಯೋಗಿಕವಾಗಿ ಸಾಧ್ಯವಿರುವಲ್ಲಿ, ಅದು ಆಯ್ಕೆಯಾಗಿರಬೇಕು.”—ದ ಜರ್ನಲ್‌ ಆಫ್‌ ಬೋನ್‌ ಆ್ಯಂಡ್‌ ಜಾಯಿಂಟ್‌ ಸರ್ಜರಿ, ಮಾರ್ಚ್‌ 1986.

ಒಬ್ಬ ವಿಚಾರಪರ ರೋಗಿಯು ವೈದ್ಯನು ಪರಿಣತನಲ್ಲದ ಒಂದು ಚಿಕಿತ್ಸೆಯನ್ನು ಕೊಡುವಂತೆ ಒತ್ತಾಯ ಪಡಿಸನು. ಆದರೆ ಡಾ. ನೆಲ್ಸನ್‌ ಗಮನಿಸಿದಂತೆ, ಅನೇಕ ಕಾರ್ಯನಿಷ್ಠರಾದ ವೈದ್ಯರು ರೋಗಿಯ ನಂಬಿಕೆಗೆ ಹೊಂದಿಕೊಂಡು ಹೋಗಬಲ್ಲರು. ಒಬ್ಬ ಜರ್ಮನ್‌ ಅಧಿಕಾರಿ ಸಲಹೆ ನೀಡಿದ್ದು: “ಒಬ್ಬ ಯೆಹೋವನ ಸಾಕ್ಷಿಯ ಸಂಬಂಧದಲ್ಲಿ, ವೈದ್ಯನು ಎಲ್ಲ ಅನ್ಯ ಮಾರ್ಗಗಳು ತನ್ನ ವಶದಲ್ಲಿಲ್ಲವೆಂದು ತರ್ಕಿಸುತ್ತಾ . . . ಸಹಾಯ ನೀಡದಿರಲು ಸಾಧ್ಯವಿಲ್ಲ. ತನಗಿರುವ ಮಾರ್ಗಗಳು ಕಡಿಮೆಯಾದರೂ ಸಹಾಯ ನೀಡುವ ಕರ್ತವ್ಯ ಅವನಿಗಿನ್ನೂ ಇದೆ.” (ಡೆರ್‌ ಫ್ರಾನಾರ್ಟ್ಸ್‌, ಮೇ-ಜೂನ್‌ 1983) ಇದೇ ರೀತಿ, ಆಸ್ಪತ್ರೆಗಳು ಹಣ ಮಾಡಲು ಮಾತ್ರವಲ್ಲ, ಭೇದ ಮಾಡದೆ ಎಲ್ಲರ ಸೇವೆ ಮಾಡಲಿಕ್ಕಾಗಿ ಇವೆ. ಕ್ಯಾಥಲಿಕ್‌ ದೇವಶಾಸ್ತ್ರಜ್ಞ ರಿಚರ್ಡ್‌ ಜೆ. ಡಿವೈನ್‌ ಹೇಳುವುದು: “ಆಸ್ಪತ್ರೆಯು ರೋಗಿಯ ಜೀವ ಮತ್ತು ಆರೋಗ್ಯವನ್ನುಳಿಸಲು ಸಕಲ ವೈದ್ಯಕೀಯ ಪ್ರಯತ್ನಗಳನ್ನು ಮಾಡಬೇಕಾದರೂ, ಆ ವೈದ್ಯಕೀಯ ಆರೈಕೆ [ಅವನ] ಮನಸ್ಸಾಕ್ಷಿಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳತಕ್ಕದ್ದು. ಇದಲ್ಲದೆ, ಅದು ಎಲ್ಲಾ ರೀತಿಯ ಬಲಾತ್ಕಾರದಿಂದ, ರಕ್ತ ಪೂರಣ ಮಾಡಲು ಕೋರ್ಟ್‌ ಆರ್ಡರ್‌ ಪಡೆಯುವ ವರೆಗೆ ಇರುವ ಬಲಾತ್ಕಾರದಿಂದ ದೂರವಿರಬೇಕು.” ಹೆಲ್ತ್‌ ಪ್ರೋಗ್ರೆಸ್‌, ಜೂನ್‌ 1989.

ಕೋರ್ಟುಗಳ ಬದಲಿಗೆ

ವೈಯಕ್ತಿಕ ವೈದ್ಯಕೀಯ ವಿವಾದಗಳಿಗೆ ಕೋರ್ಟು ನಿಜವಾದ ಸ್ಥಳವಲ್ಲವೆಂದು ಅನೇಕ ಜನರು ಒಪ್ಪುತ್ತಾರೆ. ನೀವು ಆ್ಯಂಟಿಬಯೋಟಿಕ್‌ ಚಿಕಿತ್ಸೆಯನ್ನು ಆರಿಸಿಕೊಂಡಿರುವಾಗ ಯಾವನೋ ಒಬ್ಬನು ಕೋರ್ಟಿಗೆ ಹೋಗಿ ನಿಮ್ಮ ಮೇಲೆ ಟಾನ್ಸಿಲೆಕೊಮ್ಟಿಯನ್ನು ಬಲಾತ್ಕರಿಸಿದರೆ ನಿಮಗೆ ಹೇಗೇನಿಸಿತು? ಒಬ್ಬ ವೈದ್ಯನು ತನ್ನ ಯೋಚನೆಗನುಸಾರವಾಗಿ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಅಪೇಕ್ಷಿಸಬಹುದು. ಆದರೆ ನಿಮ್ಮ ಮೂಲಭೂತ ಹಕ್ಕುಗಳನ್ನು ತುಳಿಯುವರೆ ಶಾಸನಬದ್ಧ ಸಮರ್ಥನೆಯನ್ನು ಹುಡುಕುವ ಕರ್ತವ್ಯ ಅವನಿಗಿಲ್ಲ. ಮತ್ತು ಬೈಬಲು ರಕ್ತ ವಿಸರ್ಜನೆಯನ್ನು ಜಾರತ್ವ ವಿಸರ್ಜನೆಯ ನೈತಿಕ ಮಟ್ಟದಲ್ಲೀ ಇಡುವುದರಿಂದ ಕ್ರೈಸ್ತನ ಮೇಲೆ ರಕ್ತದ ಬಲಾತ್ಕಾರವನ್ನು ಮಾಡುವುದು ಬಲಾತ್ಕಾರ ಸಂಭೋಗಕ್ಕೆ ಸಮಾನ.—ಅಪೊಸ್ತಲರ ಕೃತ್ಯಗಳು 15:28, 29.

ಆದರೂ ಇನ್‌ಫಾರ್ಮ್ಡ್‌ ಕನ್ಸೆಂಟ್‌ ಫಾರ್‌ ಬ್ಲಡ್‌ ಟ್ರಾನ್ಸ್‌ಫ್ಯೂನ್‌ (1989) ವರದಿ ಮಾಡುವುದೇನಂದರೆ ರೋಗಿಯು ತನ್ನ ಧಾರ್ಮಿಕ ಹಕ್ಕಿನ ಕಾರಣ ಒಂದು ನಿರ್ದಿಷ್ಟ ಅಪಾಯವನ್ನು ಎದುರಿಸಲು ಅಪೇಕ್ಷಿಸುವಲ್ಲಿ ಕೋರ್ಟುಗಳು ಎಷ್ಟು ಸಂಕಟ ಪಡುತ್ತವೆಂದರೆ “ಅವು ರಕ್ತ ಪೂರಣಕ್ಕೆ ಅನುಮತಿ ನೀಡಲಿಕ್ಕಾಗಿ ಕೆಲವು ಶಾಸನಬದ್ಧ ವಿನಾಯಿತಿಗಳನ್ನು—ಶಾಸನ ಬದ್ಧ ಕಲ್ಪನೆಗಳನ್ನು—ರಚಿಸುತ್ತವೆ.” ಒಂದು ಗರ್ಭಧಾರಣೆ ಇದರಲ್ಲಿ ಸೇರಿದೆ ಅಥವಾ ಮಕ್ಕಳನ್ನು ಪೋಷಿಸುವ ವಿಷಯ ಇದರಲ್ಲಿ ಸೇರಿದೆ ಎಂಬ ನೆವವನ್ನು ಅವು ಕೊಡಬಹುದು. ಆದರೆ ಈ ಪುಸ್ತಕ ಹೇಳುವುದು: “ಇವೆಲ್ಲಾ ಶಾಸನಬದ್ಧ ಕಲ್ಪನಾ ಕಥೆಗಳು. ಯೋಗ್ಯತೆಯುಳ್ಳ ವಯಸ್ಕರಿಗೆ ಆ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕಿದೆ.”

ರಕ್ತ ಪೂರಣ ಮಾಡಲೇ ಬೇಕೆಂದು ಪಟ್ಟು ಹಿಡಿಯುವ ಇನ್ನು ಕೆಲವರು, ಸಾಕ್ಷಿಗಳು ಎಲ್ಲಾ ಚಿಕಿತ್ಸೆಗಳನ್ನು ನಿರಾಕರಿಸದಿರುವ ನಿಜತ್ವವನ್ನು ಅಲಕ್ಷ್ಯಿಸುತ್ತಾರೆ. ಅವರು ಒಂದು ಚಿಕಿತ್ಸೆಯನ್ನು ಮಾತ್ರ ನಿರಾಕರಿಸುತ್ತಾರೆ. ಸಾಧಾರಣವಾಗಿ ಒಂದು ವೈದ್ಯಕೀಯ ಸಮಸ್ಯೆಯನ್ನು ಬಗೆಹರಿಸಲು ಅನೇಕ ವಿಧಗಳಿರುತ್ತವೆ. ಒಂದರಲ್ಲಿ ಒಂದು, ಇನ್ನೊಂದರಲ್ಲಿ ಇನ್ನೊಂದು ಅಪಾಯವಿರುತ್ತದೆ. ಹಾಗಾದರೆ ಒಂದು ಕೋರ್ಟಿಗೆ ಅಥವಾ ವೈದ್ಯನಿಗೆ, ಯಾವ ಅಪಾಯ “ನಿಮ್ಮ ಅತ್ಯುತ್ತಮ ಹಿತ”ಕ್ಕಾಗಿದೆ ಎಂದು ಪಿತೃಪ್ರಾಯ ಸರಕಾರದೋಪಾದಿ ತಿಳಿಯ ಸಾಧ್ಯವಿದೆಯೋ? ಅದನ್ನು ನಿರ್ಣಯಿಸುವವರು ನೀವೇ. ಇನ್ನೊಬ್ಬರು ಅವರ ಪರವಾಗಿ ನಿರ್ಣಯಿಸ ಬಾರದೆಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಸ್ಥಿರತೆಯಿಂದ ಇದ್ದಾರೆ. ಅದು ದೇವರ ಮುಂದೆ ಅವರ ವೈಯಕ್ತಿಕ ಜವಾಬ್ದಾರಿ.

ಒಂದು ಕೋರ್ಟು ಅಸಹ್ಯ ಚಿಕಿತ್ಸೆಯನ್ನು ನಿಮ್ಮ ಮೇಲೆ ಬಲಾತ್ಕರಿಸುವಲ್ಲಿ ಅದು ನಿಮ್ಮ ಮನಸ್ಸಾಕ್ಷಿಯ ಮೇಲೆ ಮತ್ತು ಆ ಮಹತ್ವದ ಜೀವಿಸುವ ಸಂಕಲ್ಪದ ಮೇಲೆ ಹೇಗೆ ಪರಿಣಾಮ ಬೀರೀತು? ಡ. ಕಾನ್ರಡ್‌ ಡ್ರೀಬಿಂಜರ್‌ ಬರೆದುದು: “ಒಬ್ಬ ರೋಗಿಯ ಮನಸ್ಸಾಕ್ಷಿಯನ್ನು ತಳ್ಳಿ ಹಾಕಿ, ಅವನ ಶರೀರಕ್ಕೆ ಚಿಕಿತ್ಸೆ ಕೊಟ್ಟರೂ ಜೀವತತ್ವಕ್ಕೆ ಮಾರಕ ಪೆಟ್ಟನ್ನು ಹೊಡೆಯುತ್ತಾ ಚಿಕಿತ್ಸೆಯನ್ನು ಒಪ್ಪುವಂತೆ ನಿರ್ಬಂಧ ಪಡಿಸುವುದು ವೈದ್ಯಕೀಯ ಹೆಬ್ಬಯಕೆಯ ತಪ್ಪಾದ ವಿಧವೆಂಬುದು ನಿಶ್ಚಯ.”—ಡೆರ್‌ ಪ್ರ್ಯಾಕ್ಟಿಷ್‌ ಆರ್ಸ್ಟ್‌, ಜುಲೈ 1978.

ಮಕ್ಕಳಿಗೆ ಪ್ರೀತಿಯ ಆರೈಕೆ

ರಕ್ತದ ಸಂಬಂಧದಲ್ಲಿ ಏಳುವ ಕೋರ್ಟ್‌ ಕೇಸುಗಳಲ್ಲಿ ಮುಖ್ಯವಾಗಿ ಮಕ್ಕಳು ಸೇರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಪ್ರೀತಿಸುವ ಹೆತ್ತವರು ಅರಕ್ತ ಚಿಕಿತ್ಸೆಯನ್ನು ಕೊಡಬೇಕೆಂದು ಗೌರವಪೂರ್ವಕವಾಗಿ ಕೇಳಿಕೊಂಡಾಗ ಕೆಲವು ವೈದ್ಯಕೀಯ ಸಿಬ್ಬಂಧಿಗಳು ರಕ್ತ ಕೊಡಲು ಕೋರ್ಟಿನ ಬೆಂಬಲ ಪಡೆದಿದ್ದಾರೆ. ಹೌದು, ಮಗುವಿನ ದುರುಪಯೋಗ ಯಾ ಅಸಡ್ಡೆಯನ್ನು ತಡೆಯಲು ಇರುವ ನಿಯಮಗಳನ್ನು ಅಥವಾ ಕೋರ್ಟಿನ ಕ್ರಮಗಳನ್ನು ಕ್ರೈಸ್ತರು ಒಪ್ಪುತ್ತಾರೆ. ಪ್ರಾಯಶಃ, ಹೆತ್ತವರು ಮಗುವನ್ನು ಕ್ರೂರತ್ವಕ್ಕೊಳಪಡಿಸಿದ ಅಥವಾ ವೈದ್ಯಕೀಯ ಆರೈಕೆಗಳನ್ನೆಲ್ಲಾ ಅಲ್ಲಗಳೆದ ಕೇಸುಗಳನ್ನು ನೀವು ಓದಿದ್ದೀರಿ. ಅದೆಷ್ಟು ದುಃಖಕರ! ಅಸಡ್ಡೆಗೊಳಗಾಗಿರುವ ಮಗುವನ್ನು ರಕ್ಷಿಸಲು ಸರಕಾರಕ್ಕೆ ಹಕ್ಕಿದೆ ಮತ್ತು ಅದು ಕ್ರಮ ಕೈಗೊಳ್ಳಬೇಕೆಂಬುದು ಸ್ಪಷ್ಟ. ಆದರೆ ಪಾಲನೆ ಮಾಡುವ ಹೆತ್ತವರು, ಶ್ರೇಷ್ಠ ಗುಣಮಟ್ಟದ ಅರಕ್ತ ವೈದ್ಯಕೀಯ ಚಿಕಿತ್ಸೆಯನ್ನು ಕೇಳಿಕೊಳ್ಳುವುದು ಎಷ್ಟೊಂದು ಭಿನ್ನವಾದ ವಿಷಯವೆಂದು ನೋಡುವುದು ಸುಲಭ.

ಈ ಕೋರ್ಟು ಕೇಸುಗಳು ಸಾಧಾರಣವಾಗಿ, ಆಸ್ಪತ್ರೆಯಲ್ಲಿರುವ ಮಗುವನ್ನು ಕೇಂದ್ರವಾಗಿಟ್ಟು ಕೊಳ್ಳುತ್ತವೆ. ಆ ಮಗು ಅಲ್ಲಿಗೆ ಹೋದದ್ದು ಹೇಗೆ ಮತ್ತು ಏಕೆ? ಚಿಂತಿತರಾದ ಹೆತ್ತವರೇ, ಹೆಚ್ಚು ಕಡಿಮೆ ಯಾವಾಗಲೂ, ಗುಣಮಟ್ಟದ ಆರೈಕೆಗಾಗಿ ಅಲ್ಲಿಗೆ ತಂದಿರುತ್ತಾರೆ. ಯೇಸು ಮಕ್ಕಳಲ್ಲಿ ಅಭಿರುಚಿ ತೋರಿಸಿದಂತೆಯೇ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಪಾಲಿಸುತ್ತಾರೆ. ‘ತಾಯಿ ತನ್ನ ಮಕ್ಕಳನ್ನು ಪೋಷಿಸುವ’ ಕುರಿತು ಬೈಬಲು ಮಾತಾಡುತ್ತದೆ. ಯೆಹೋವನ ಸಾಕ್ಷಿಗಳಿಗೆ ತಮ್ಮ ಮಕ್ಕಳ ಮೇಲೆ ಅಷ್ಟು ಆಳವಾದ ಪ್ರೀತಿಯಿದೆ.—1 ಥೆಸಲೋನಿಕ 2:7; ಮತ್ತಾಯ 7:11; 19:13-15.

ಸ್ವಾಭಾವಿಕವಾಗಿ, ತಮ್ಮ ಮಕ್ಕಳ ಸುರಕ್ಷೆ ಮತ್ತು ಜೀವವನ್ನು ಬಾಧಿಸುವ ನಿರ್ಣಯಗಳನ್ನು ಎಲ್ಲಾ ಹೆತ್ತವರು ಮಾಡುತ್ತಾರೆ: ಮನೆ ಕಾಯಿಸಲು ಕುಟುಂಬ ಗ್ಯಾಸನ್ನು ಉಪಯೋಗಿಸಬೇಕೋ, ತೈಲವನ್ನೋ? ದೂರ ಪ್ರಯಾಣಕ್ಕೆ ಹೋಗುವಾಗ ಮಗುವನ್ನು ತೆಗೆದು ಕೊಂಡ ಹೋಗ ಬೇಕೋ, ಬಾರದೋ? ಮಗನು ಈಜಾಡಲು ಹೋಗಬಹುದೋ? ಇಂಥ ಸಂಗತಿಗಳಲ್ಲಿ ಅಪಾಯಗಳು, ಸಾವು ಬದುಕಿನ ವಿಷಯಗಳು ಸಹ ಸೇರಿವೆ. ಆದರೆ ಸಮಾಜ ಈ ವಿಷಯಗಳಲ್ಲಿ ಹೆತ್ತವರಿಗಿರುವ ಸ್ವಂತ ವಿವೇಚನೆಯನ್ನು ಒಪ್ಪುತ್ತದೆ ಮತ್ತು ಮಕ್ಕಳಿಗೆ ತಟ್ಟುವ ಹೆಚ್ಚುಕಡಿಮೆ ಸಕಲ ವಿಷಯಗಳಲ್ಲಿ ದೊಡ್ಡ ಹಕ್ಕು ಹೆತ್ತವರಿಗೆ ಕೊಡಲ್ಪಟ್ಟಿದೆ.

1979 ರಲ್ಲಿ ಯು. ಎನ್‌. ಸುಪ್ರೀಮ್‌ ಕೋರ್ಟು ಸ್ಪಷ್ಟವಾಗಿ ಹೀಗೆಂದಿತು: “ಕುಟುಂಬ ವಿಷಯದಲ್ಲಿ ನಿಯಮಕ್ಕಿರುವ ಸಾಮಾನ್ಯ ಜ್ಞಾನವು, ಮಗುವಿಗೆ ಜೀವನದ ಕಷ್ಟ ನಿರ್ಣಯಗಳನ್ನು ಮಾಡಲು ಇರುವ ಪಕ್ವತೆ, ಅನುಭವ, ಮತ್ತು ತೀರ್ಮಾನ ಸಾಮರ್ಥ್ಯದ ಕೊರತೆಯು ಹೆತ್ತವರಲ್ಲಿದೆ ಎಂಬ ಪೂರ್ವಭಾವನೆಯ ಮೇಲೆ ಹೊಂದಿಕೊಂಡಿದೆ. . . . [ವೈದ್ಯಕೀಯ ವಿಷಯದಲ್ಲಿ] ಹೆತ್ತವರ ನಿರ್ಣಯದಲ್ಲಿ ಅಪಾಯ ಸೇರಿದೆ ಎಂಬ ಮಾತ್ರಕ್ಕೆ ಆ ನಿರ್ಣಯ ಮಾಡುವ ಶಕ್ತಿ ಸ್ವಯಂಚಾಲಿತವಾಗಿ ಹೆತ್ತವರಿಂದ ಸರಕಾರದ ನಿಯೋಗಕ್ಕೆ ಅಥವಾ ಒಬ್ಬ ಅಧಿಕಾರಿಗೆ ಸ್ಥಾನಾಂತರಿತವಾಗುವುದಿಲ್ಲ.” ಪಾರ್ಹಮ್‌ ವಿ. ಜೆ, ಆರ್‌.

ಅದೇ ವರ್ಷ, ನ್ಯೂ ಯೋರ್ಕ್‌ ಅಪೀಲ್‌ ಕೋರ್ಟು ತೀರ್ಮಾನಿಸಿದ್ದು: “ಒಂದು ಮಗು ಯೋಗ್ಯ ವೈದ್ಯಕೀಯ ಆರೈಕೆಯನ್ನು ಕಳೆದು ಕೊಂಡಿದೆಯೋ ಎಂದು ನಿರ್ಣಯಿಸುವ ಅತಿ ಗಮನಾರ್ಹ ಸಂಗತಿಯು. . . . ಸುತ್ತಲಿನ ಎಲ್ಲಾ ಸಂದರ್ಭಗಳ ಬೆಳಕಿನಲ್ಲಿ ಹೆತ್ತವರು ಮಗುವಿಗೆ ಅಂಗೀಕಾರ ಯೋಗ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಿದ್ದಾರೋ ಎಂಬುದಾಗಿದೆ. ಹೆತ್ತವರು ‘ಸರಿ’ ಅಥವಾ ‘ತಪ್ಪು’ ತೀರ್ಮಾನವನ್ನು ಮಾಡಿದ್ದಾರೆ ಎಂಬುದರ ಮೇಲೆ ಈ ಪ್ರಶ್ನೆಯನ್ನೆತ್ತಸಾಧ್ಯವಿಲ್ಲ. ಏಕಂದರೆ ವೈದ್ಯಕೀಯ ಆಚಾರದ ಇಂದಿನ ಸ್ಥಿತಿ, ವಿಸ್ತಾರವಾದ ಪ್ರಗತಿಯನ್ನು ಮಾಡಿರುವುದಾದರೂ, ಇಂಥ ನಿರ್ಣಾಯಕ ತೀರ್ಮಾನಗಳನ್ನು ಅತಿ ವಿರಳವಾಗಿ ಅನುಮತಿಸುತ್ತದೆ. ಕೋರ್ಟು, ಬದಲಿ ಹೆತ್ತವರ ಪಾತ್ರವನ್ನು ವಹಿಸಸಾಧ್ಯವಿಲ್ಲ.”—ಇನ್‌ ದಿ ಹಾಪ್‌ಬಾರ್‌.

ಶಸ್ತ್ರಚಿಕಿತ್ಸೆ ಮತ್ತು ಆ್ಯಂಟಿಬಯೊಟಿಕ್‌ನ ಮಧ್ಯೆ ಒಂದನ್ನು ಆಯ್ದುಕೊಳ್ಳಲಿದ್ದ ಹೆತ್ತವರ ಮಾದರಿಯನ್ನು ಜ್ಞಾಪಿಸಿಕೊಳ್ಳಿರಿ. ಪ್ರತಿ ಚಿಕಿತ್ಸೆಗೆ ಅದರದ್ದೇ ಆದ ಅಪಾಯಗಳಿವೆ. ಅಪಾಯ, ಪ್ರಯೋಜನ ಮತಿತ್ತರ ವಿಷಯಗಳನ್ನು ತೂಗಿ ನೋಡಿ ಒಂದು ಆಯ್ಕೆ ಮಾಡಲು ಪ್ರೀತಿಸುವ ಹೆತ್ತವರೇ ಜವಾಬ್ದಾರರು. ಈ ಸಂಬಂಧದಲ್ಲಿ, ಡಾ. ಜಾನ್‌ ಸ್ಯಾಮುವೆಲ್ಸ್‌ (ಆ್ಯನಿಸ್ತಿಯಾಲಾಜಿ ನ್ಯೂಸ್‌, ಅಕ್ಟೋಬರ 1989), ಗೈಡ್ಸ್‌ ಟು ದ ಜಡ್ಜ್‌ ಇನ್‌ ಮೆಡಿಕಲ್‌ ಆರ್ಡರ್ಸ್‌ ಎಫೆಕ್ಟಿಂಗ್‌ ಚಿಲ್ಡ್ರನ್‌ ತಕ್ಕೊಂಡಿದ್ದ ಈ ಸ್ಥಾನದಲ್ಲಿ ಪುನರ್ವಿಮರ್ಶೆಯನ್ನು ಸೂಚಿಸಿದರು:

“ಒಬ್ಬ ವೈದ್ಯನು ತನ್ನ ರೋಗಿ ಬದುಕುವನೋ ಸಾಯುವನೋ ಎಂದು ನ್ಯಾಯಸಮ್ಮತವಾದ ನಿಶ್ಚಯತೆಯಿಂದ ಮುಂತಿಳಿಸುವಷ್ಟು ಪ್ರಗತಿಯನ್ನು ವೈದ್ಯಕೀಯ ಜ್ಞಾನವು ಹೊಂದಿರುವುದಿಲ್ಲ. . . . ವಿಧಾನಗಳಲ್ಲಿ ಆಯ್ಕೆ ಇರುವುದಾದರೆ, ಅಂದರೆ, ಉದಾಹರಣೆಗೆ, 80 ಪ್ರತಿಶತ ಯಶಸ್ವಿಯಾಗುವ ಸಂದರ್ಭವಿರುವ ಒಂದು ವಿಧಾನವನ್ನು ವೈದ್ಯರು ಶಿಫಾರಸು ಮಾಡುವಾಗ ಹೆತ್ತವರು ಅದಕ್ಕೊಪ್ಪದೆ ಇದ್ದು, 40 ಪ್ರತಿಶತ ಮಾತ್ರ ಯಶಸ್ವಿಯಾಗುವ ಸಂದರ್ಭವಿರುವ ಇನ್ನೊಂದು ವಿಧಾನಕ್ಕೆ ಹೆತ್ತವರು ಆಕ್ಷೇಪಿಸದಿರುವಲ್ಲಿ, ವೈದ್ಯನು ವೈದ್ಯಕೀಯವಾಗಿ ಅಪಾಯವಿದ್ದರೂ ಹೆತ್ತವರ ಆ ಅನಾಕ್ಷೇಪಣೀಯ ಮಾರ್ಗವನ್ನು ತೆಗೆದುಕೊಳ್ಳ ತಕ್ಕದ್ದು.”

ರಕ್ತದ ವೈದ್ಯಕೀಯ ಉಪಯೋಗದಲ್ಲಿ ಅನೇಕ ಮಾರಕ ಹಾನಿಗಳು ಎದ್ದು ಬಂದಿರುವ ಈ ವೀಕ್ಷಣದಲ್ಲಿ ಮತ್ತು ಕಾರ್ಯಸಾಧಕವಾದ ಅನ್ಯ ಚಿಕಿತ್ಸಾ ಮಾರ್ಗಗಳಿರುವುದರಿಂದ, ರಕ್ತವನ್ನು ಉಪಯೋಗಿಸದಿರುವುದು ಕಡಿಮೆ ಅಪಾಯದ್ದೂ ಆಗಿರಲಿಕ್ಕಿಲ್ಲವೇ?

ತಮ್ಮ ಮಗುವಿಗೆ ಶಸ್ತ್ರಚಿಕಿತ್ಸೆ ಬೇಕಾಗಿರುವಲ್ಲಿ, ಕ್ರೈಸ್ತರು ಅನೇಕ ಸಂಗತಿಗಳನ್ನು ತೂಗಿ ನೋಡುವುದು ಸ್ವಾಭಾವಿಕ. ಪ್ರತಿಯೊಂದು ಶಸ್ತ್ರಚಿಕಿತ್ಸೆ, ಅದು ರಕ್ತವನ್ನು ಉಪಯೋಗಿಸಲಿ, ಉಪಯೋಗಿಸದಿರಲಿ, ಹಾನಿಗಳಿಂದ ತುಂಬಿದೆ. ಯಾವ ಸರ್ಜನನು ಖಾತರಿ ಕೊಡುತ್ತಾನೆ? ನುರಿತ ವೈದ್ಯರು ಸಾಕ್ಷಿಮಕ್ಕಳಿಗೆ ರಕ್ತ ರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಿ ಉತ್ತಮ ಸಾಫಲ್ಯ ಪಡೆದಿದ್ದಾರೆ ಎಂದು ಹೆತ್ತವರಿಗೆ ಗೊತ್ತಿರಬಹುದು. ಹೀಗಿರುವಾಗ, ಒಬ್ಬ ವೈದ್ಯನಿಗೆ ಅಥವಾ ಆಸ್ಪತ್ರೆಯ ಅಧಿಕಾರಿಗೆ ಇನ್ನೊಂದು ಮಾರ್ಗ ಇಷ್ಟವಿರುವುದಾದರೂ ಒತ್ತಡದಿಂದ ತುಂಬಿದ ಮತ್ತು ಸಮಯ ನಷ್ಟವಾಗುವ ನ್ಯಾಯಯುದ್ಧಕ್ಕೆ ತೊಡಗುವ ಬದಲು ಪ್ರೀತಿಸುವ ಹೆತ್ತವರೊಂದಿಗೆ ಅವರು ಸಹಕರಿಸುವುದು ನ್ಯಾಯಸಮ್ಮತವಲ್ಲವೇ? ಇಲ್ಲವೇ, ಹೆತ್ತವರು ತಮ್ಮ ಮಗುವನ್ನು, ಇಂಥ ಕೇಸುಗಳಲ್ಲಿ ಅನುಭವಶಾಲಿಗಳಾದ ಮತ್ತು ಅದಕ್ಕೆ ಒಪ್ಪುವ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸಬಹುದು. ವಾಸ್ತವವಾಗಿ, ಅರಕ್ತ ಚಿಕಿತ್ಸೆ ಗುಣಮಟ್ಟದ ಆರೈಕೆಯಾಗಿರುವುದು ಹೆಚ್ಚು ಸಂಭವನೀಯ. ಏಕಂದರೆ, ನಾವು ಮೊದಲೇ ಗಮನಿಸಿರುವಂತೆ, ಅದು ಕುಟುಂಬಕ್ಕೆ, “ನ್ಯಾಯಬದ್ಧವಾದ ವೈದ್ಯಕೀಯ ಹಾಗೂ ಅವೈದ್ಯಕೀಯ ಗುರಿಗಳನ್ನು ಸಾಧಿಸಲು” ಸಹಾಯ ಮಾಡಬಲ್ಲದು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 10 ಪರಿಶಿಷ್ಟದ 30-1ನೇ ಪುಟಗಳಲ್ಲಿ ಪುನರ್ಮುದ್ರಿಸಿರುವ “ರಕ್ತ: ಯಾರ ಆಯ್ಕೆ ಮತ್ತು ಯಾರ ಮನಸ್ಸಾಕ್ಷಿ?”ಎಂಬ ವೈದ್ಯಕೀಯ ಲೇಖನ ನೋಡಿ.

[ಪುಟ 29 ರಲ್ಲಿರುವ ಚೌಕ]

ಶಾಸನಬದ್ಧ ಚಿಂತೆಗಳನ್ನು ಪರಿಹರಿಸುವುದು

‘ಕೆಲವು ವೈದ್ಯರು ಮತ್ತು ಆಸ್ಪತ್ರೆಗಳು ರಕ್ತ ಕೊಡಲು ಒಡನೆ ಕೋರ್ಟ್‌ ಆರ್ಡರನ್ನು ಪಡೆಯುವುದೇಕೆ?’ ಎಂದು ನೀವು ಪ್ರಶ್ನಿಸಬಹುದು. ಕೆಲವು ಸ್ಥಳಗಳಲ್ಲಿ ಇದಕ್ಕಿರುವ ಒಂದು ಸಾಮಾನ್ಯ ಕಾರಣ ಕಾನೂನುಬದ್ಧತೆಯ ಭಯವೇ.

ಆದರೆ ಯೆಹೋವನ ಸಾಕ್ಷಿಗಳು ಅರಕ್ತ ಚಿಕಿತ್ಸೆಯನ್ನು ಆರಿಸಿಕೊಳ್ಳುವಾಗ ಇಂಥ ಚಿಂತೆಗೆ ಆಧಾರವಿಲ್ಲ. ಆಲ್ಬರ್ಟ್‌ ಐನ್‌ಸ್ಟೈನ್‌ ಕಾಲೇಜ್‌ ಆಫ್‌ ಮೆಡಿಸಿನ್‌ (ಯು.ಎಸ್‌.ಎ.)ನ ಒಬ್ಬ ಡಾಕ್ಟರರು ಬರೆಯುವುದು: “ಹೆಚ್ಚಿನ [ಸಾಕ್ಷಿಗಳು], ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ಕಾನೂನುಬದ್ಧತೆಯಿಂದ ಸ್ವತಂತ್ರಿಸಲು ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಷನ್‌ನ ಫಾರ್ಮಿಗೆ ಸಹಿ ಹಾಕಲು ಸಿದ್ಧರಾಗಿರುತ್ತಾರೆ ಮತ್ತು ಅನೇಕರಲ್ಲಿ ಮೆಡಿಕಲ್‌ ಎಲರ್ಟ್‌ [ಕಾರ್ಡು] ಇದೆ. ‘ರಿಫ್ಯೂಸಲ್‌ ಟು ಆ್ಯಕ್ಸೆಪ್ಟ್‌ ಬ್ಲಡ್‌ ಪ್ರಾಡಕ್ಟ್ಸ್‌’ ಎಂಬ ಯೋಗ್ಯ ರೀತಿಯ ಸಹಿ ಮತ್ತು ತಾರೀಕು ಇರುವ ರಕ್ತ ನಿರಾಕರಣ ಫಾರ್ಮ್‌ ಒಂದು ಕರಾರಾಗಿದ್ದು ಅದು ಶಾಸನಬದ್ಧವಾಗಿದೆ.—ಅನೆಸ್ತೇಸಿಯಾಲಜಿ ನ್ಯೂಸ್‌, ಅಕ್ಟೋಬರ್‌ 1989.

ಹೌದು, ಯೆಹೋವನ ಸಾಕ್ಷಿಗಳು, ಕೇಳಿಕೊಳ್ಳಲ್ಪಟ್ಟ ಅರಕ್ತ ಚಿಕಿತ್ಸೆಯನ್ನು ಕೊಡುವುದರಿಂದ ವೈದ್ಯ ಅಥವಾ ಆಸ್ಪತ್ರೆ ಕಾನೂನುಬದ್ಧತೆಗೊಳಗಾಗುವುದಿಲ್ಲ ಎಂಬ ಶಾಸನಬದ್ಧ ಆಶ್ವಾಸನೆ ನೀಡುವುದರಲ್ಲಿ ಸಹಕರಿಸುತ್ತಾರೆ. ವೈದ್ಯಕೀಯ ಪರಿಣತರು ಶಿಫಾರಸು ಮಾಡಿರುವಂತೆ, ಪ್ರತಿಯೊಬ್ಬ ಸಾಕ್ಷಿಯೊಡನೆ ಒಂದು ಮೆಡಿಕಲ್‌ ಡೊಕ್ಯುಮೆಂಟ್‌ ಕಾರ್ಡ್‌ ಇದೆ. ಇದು ವಾರ್ಷಿಕವಾಗಿ ನವೀಕಲಿಸಲ್ಪಟ್ಟು ಆ ವ್ಯಕ್ತಿಯಿಂದ ಮತ್ತು ಅನೇಕ ವೇಳೆ, ಸಂಬಂಧಿಗಳಾದ ಸಾಕ್ಷಿಗಳಿಂದ ಹಸ್ತಾಕ್ಷರಿಸಲ್ಪಡುತ್ತದೆ.

ಮಾರ್ಚ್‌ 1990 ರಲ್ಲಿ, ಒಂಟೇರಿಯೊ, ಕೆನಡಾದ ಸುಪ್ರೀಮ್‌ ಕೋರ್ಟ್‌, ಇಂಥ ಡೊಕ್ಯುಮೆಂಟ್‌ನ್ನು ಅನುಮೋದಿಸಿ ಮಾತಾಡಿದ ಒಂದು ನಿರ್ಣಯವನ್ನು ಸಮರ್ಥಿಸಿತು: “ಈ ಕಾರ್ಡು, ವೈದ್ಯನೊಂದಿಗೆ ಮಾಡಿದ ಕರಾರಿಗೆ ಲಿಖಿತ ನಿರ್ಬಂಧವನ್ನು ಹಾಕಲು ಆ ಕಾರ್ಡು ಇರುವವನು ನ್ಯಾಯವಾಗಿ ತೆಗೆದು ಕೊಳ್ಳಬಹುದಾದ ಶಾಸನಬದ್ಧ ನೆಲೆಯ ಲಿಖಿತ ಘೋಷಣೆಯಾಗಿದೆ.” ಮೆಡಿಸಿನ್‌ಸ್ಕ್‌ ಎಟಿಕ್‌ (1985) ನಲ್ಲಿ ಫ್ರೊಫೆಸರ್‌ ಡ್ಯಾನಿಯೆಲ್‌ ಆ್ಯಂಡರ್‌ಸನ್‌ ಬರೆದುದು: “ಒಬ್ಬ ರೋಗಿ, ತಾನು ಯೆಹೋವನ ಸಾಕ್ಷಿ ಮತ್ತು ಸಂದರ್ಭ ಯಾವುದೇ ಆಗಿರಲಿ, ತನಗೆ ರಕ್ತ ಬೇಡವೆಂದು ಹೇಳುವ, ನಿಶ್ಚಯಾರ್ಥದ ಲಿಖಿತ ಹೇಳಿಕೆಯಿರುವಲ್ಲಿ ಆ ರೋಗಿಯ ಸ್ವಾಯತ್ತೆಗೆ ಗೌರವವು, ಅವನ ಅಪೇಕ್ಷೆಯನ್ನು ಅದು ಬಾಯಿಮಾತಿನಲ್ಲಿ ಹೇಳಲ್ಪಟ್ಟಿರುವಂತೆಯೇ ಗೌರವಿಸಬೇಕೆಂದು ಕೇಳಿಕೊಳ್ಳುತ್ತದೆ.”

ಸಾಕ್ಷಿಗಳು ಆಸ್ಪತ್ರೆಯ ಕನ್ಸೆಂಟ್‌ ಫಾರ್ಮುಗಳಿಗೂ ಸಹಿ ಹಾಕುತ್ತಾರೆ. ಜರ್ಮನಿಯ ಫ್ರೀಬರ್ಗ್‌ ಆಸ್ಪತ್ರೆಯಲ್ಲಿ ಉಪಯೋಗಿಸಲ್ಪಡುವ ಫಾರ್ಮಿನಲ್ಲಿ ವೈದ್ಯನು ರೋಗಿಗೆ ಕೊಡುವ ಚಿಕಿತ್ಸೆಯನ್ನು ವರ್ಣಿಸಲು ಸ್ಥಳವಿದೆ. ಬಳಿಕ, ವೈದ್ಯ ಮತ್ತು ರೋಗಿಯ ಹಸ್ತಾಕ್ಷರಗಳ ಮೇಲೆ ಆ ಫಾರ್ಮು ಹೀಗೆನ್ನುತ್ತದೆ: “ಯೆಹೋವನ ಸಾಕ್ಷಿಗಳ ಧಾರ್ಮಿಕ ಗುಂಪಿನ ಸದಸ್ಯನಾಗಿ ನಾನು, ನನ್ನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪರ ರಕ್ತ ಅಥವಾ ರಕ್ತದ ಘಟಕಾಂಶಗಳನ್ನು ಉಪಯೋಗಿಸಲು ನಿರಪೇಕ್ಷವಾಗಿ ನಿರಾಕರಿಸುತ್ತೇನೆ. ರಕ್ತ ಸುರಿತದ ಜಟಿಲತೆಯ ಕಾರಣ, ಯೋಜಿಸಲ್ಪಟ್ಟ ಮತ್ತು ಅವಶ್ಯವಿರುವ ಈ ವಿಧಾನದಲ್ಲಿ ಹೆಚ್ಚು ಅಪಾಯವಿದೆಯೆಂದು ನನಗೆ ತಿಳಿದದೆ. ವಿಶೇಷವಾಗಿ, ಈ ವಿಷಯದಲ್ಲಿ ಪೂರ್ತಿ ವಿವರಣೆ ಪಡೆದಿರುವ ನಾನು, ಪರ ರಕ್ತ ಅಥವಾ ರಕ್ತ ಘಟಕಾಂಶಗಳನ್ನು ಉಪಯೋಗಿಸದೆ ಆವಶ್ಯವಿರುವ ಶಸ್ತ್ರಚಿಕಿತ್ಸೆಯನ್ನು ಮಾಡಬೇಕೆಂದು ವಿನಂತಿಸುತ್ತೇನೆ.”—ಹರ್ಸ್‌ ಕ್ರೈಸ್‌ಲಾಫ್‌, ಆಗಸ್ಟ್‌ 1987.

ಕಾರ್ಯತಃ, ಅರಕ್ತ ಚಿಕಿತ್ಸೆಯಲ್ಲಿ ಕಡಿಮೆ ಅಪಾಯವಿದ್ದೀತು. ಆದರೆ ಇಲ್ಲಿರುವ ಮುಖ್ಯಾಂಶವೇನಂದರೆ, ವೈದ್ಯಕೀಯ ಸಿಬ್ಬಂದಿಗಳು, ತಾವು ಮಾಡಲು ಬದ್ಧರಾಗಿರುವುದನ್ನು ಅಂದರೆ ಜನರಿಗೆ ಸ್ವಸ್ಥವಾಗುವಂತೆ ಸಹಾಯ ಮಾಡುವುದನ್ನು ನೆರವೇರಿಸುತ್ತಾ ಮುಂದುವರಿಯುವುದರಲ್ಲಿ ಅವರಲ್ಲಿರಬಹುದಾದ ಅನವಶ್ಯವಾದ ಚಿಂತೆಗಳನ್ನು ಸಾಕ್ಷಿ ರೋಗಿಗಳು ಸಂತೋಷದಿಂದ ಪರಿಹರಿಸುವುದೇ. ಈ ಸಹಕಾರ, ಡಾ. ಏಂಜಲೋಸ್‌ ಎ. ಕ್ಯಾಂಬೂರಿಸ್‌, “ಮೇಜರ್‌ ಎಬ್ಡೋಮಿನಲ್‌ ಆಪರೇಷನ್ಸ್‌ ಆನ್‌ ಜೆಹೋವಸ್‌ ವಿಟ್ನೆಸೆಸ್‌” (ಯೆಹೋವನ ಸಾಕ್ಷಿಗಳ ಪ್ರಧಾನ ಉದರದ ಶಸ್ತ್ರಕ್ರಿಯೆಗಳು) ರಲ್ಲಿ ತೋರಿಸಿರುವಂತೆ ಸರ್ವರಿಗೂ ಪ್ರಯೋಜನ ತರುತ್ತದೆ:

ಶಸ್ತ್ರಕ್ರಿಯೆಗೆ ಪೂರ್ವ ಮಾಡಿದ ಕರಾರು ತನಗೆ ಬದ್ಧವೆಂಬಂತೆ ಸರ್ಜನನು ವೀಕ್ಷಿಸಬೇಕು. ಮತ್ತು ಶಸ್ತ್ರಕ್ರಿಯೆಯ ಸಮಯದಲ್ಲಿ ಮತ್ತು ಆ ಬಳಿಕ ಯಾವ ಸಂದರ್ಭವೇ ಬರಲಿ, ಅದಕ್ಕೆ ಅಂಟಿ ಕೊಳ್ಳಬೇಕು. [ಇದು] ರೋಗಿಗಳನ್ನು ಶಸ್ತ್ರಚಿಕಿತ್ಸೆಯ ಕಡೆಗೆ ಸಕಾರಾತ್ಮಕವಾಗಿ ತಿರುಗಿಸುವುದು ಮಾತ್ರವಲ್ಲ ಸರ್ಜನನು ಶಾಸನಬದ್ಧತೆ ಮತ್ತು ತಾತ್ವಿಕತೆಯ ಬದಲು ಶಸ್ತ್ರಚಿಕಿತ್ಸೆಯ ಮತ್ತು ಯಾಂತ್ರಿಕತೆಯ (ಟೆಕ್ನಿಕಲ್‌) ವಿಷಯಗಳನ್ನು ಚಿಂತಿಸುವಂತೆ ಮಾಡಿ ಚಿಕಿತ್ಸೆ ನೀಡಿ ರೋಗಿಯ ಸುಹಿತವನ್ನು ಬಯಸುವಂತೆ ಅನುಮತಿಸುತ್ತದೆ.”—ದಿ ಅಮೆರಿಕನ್‌ ಸರ್ಜನ್‌, ಜೂನ್‌ 1987.

[ಪುಟ 20 ರಲ್ಲಿರುವ ಚೌಕ]

“ವೈದ್ಯಕೀಯ ವಿಜ್ಞಾನದ ಮಿತಿಮೀರಿದ ಉಪಯೋಗ, ಈಗಿನ ಆರೋಗ್ಯಾರೈಕೆಯ ಖರ್ಚಿನ ವರ್ಧನದಲ್ಲಿ ಮುಖ್ಯ ಸಂಗತಿಯಾಗಿದೆ. . . . ರಕ್ತ ಪೂರಣವು, ಅದರ ಖರ್ಚು ಮತ್ತು ಹೆಚ್ಚಿನ ಅಪಾಯ ಸಂಭವದ ಕಾರಣ ವಿಶೇಷ ಪ್ರಾಮುಖ್ಯತೆಯದ್ದಾಗಿದೆ. ಇದಕ್ಕನುಸಾರವಾಗಿ, ಆಸ್ಪತ್ರೆಗಳಿಗೆ ಯೋಗ್ಯತಾ ಪತ್ರ ನೀಡುವ ಅಮೆರಿಕನ್‌ ಜಾಯಿಂಟ್‌ ಕಮಿಷನ್‌ ರಕ್ತ ಪೂರಣವನ್ನು, “ಉನ್ನತ ಗಾತ್ರದ್ದು, ಹೆಚ್ಚು ಅಪಾಯವುಳ್ಳದ್ದು ಮತ್ತು ತಪ್ಪಿಗೆ ಎಡೆಕೊಡುವ ಪ್ರವೃತ್ತಿಯದ್ದು,’ ಎಂದು ವರ್ಗೀಕರಿಸಿತು.”—“ಟ್ರಾನ್ಸ್‌ಫ್ಯೂಷನ್‌,” ಜುಲೈ-ಆಗಸ್ಟ್‌ 1989.

[ಪುಟ 31 ರಲ್ಲಿರುವ ಚೌಕ]

ಯುನೊಯಿಟೆಡ್‌ ಸ್ಟೇಟ್ಸ್‌: “ರೋಗಿಯ ಸಮ್ಮತಿಯ ಆವಶ್ಯಕತೆಯ ಕೆಳಗೆ, ಒಬ್ಬನ ಅದೃಷ್ಟದ ನಿರ್ಣಯಗಳನ್ನು ಆ ವ್ಯಕ್ತಿಯೇ ಮಾಡಬೇಕೆಂಬ ವೈಯಕ್ತಿಕ ಸ್ವಾಯತತ್ತೆಯ ನೈತಿಕ ಕಲ್ಪನೆ ಇದೆ. ಈ ಸಮ್ಮತಿಯನ್ನು ಅಪೇಕ್ಷಿಸಲು ಶಾಸನಬದ್ಧವಾದ ಆಧಾರವು, ರೋಗಿಯ ಸಮ್ಮತಿಯಿಲ್ಲದೆ ಮಾಡುವ ವೈದ್ಯಕೀಯ ಕೃತ್ಯವು ಹೊಡೆತ (battery) ದ ಅಪರಾಧವಾಗಿರುವುದರಿಂದಲೇ.”—“ಇನ್‌ಫಾರ್ಮ್ಡ್‌ ಕನ್ಸೆಂಟ್‌ ಫಾರ್‌ ಬ್ಲಡ್‌ ಟ್ರಾನ್ಸ್‌ಫ್ಯೂಷನ್‌,” 1989.

ಜರ್ಮನಿ: “ರೋಗಿಗಿರುವ ಆತ್ಮನಿರ್ಣಯದ ಹಕ್ಕು ನೆರವು ನೀಡುವ ಮತ್ತು ಜೀವರಕ್ಷಣೆಯ ಸೂತ್ರವನ್ನು ರದ್ದು ಪಡಿಸುತ್ತದೆ. ಇದರ ಪರಿಣಾಮ: ರೋಗಿಗೆ ಇಷ್ಟವಿಲ್ಲದಿದ್ದರೆ ರಕ್ತ ಪೂರಣವಿಲ್ಲ.”—“ಹೆರ್ಸ್‌ ಕ್ರೈಸಾಫ್ಲ್‌,” ಆಗಸ್ಟ್‌ 1987.

ಜಪಾನ್‌: “ವೈದ್ಯಕೀಯ ಲೋಕದಲ್ಲಿ ‘ನಿರಂಕುಶತೆ’ಯೆಂಬುದಿಲ್ಲ. ಆಧುನಿಕ ಔಷಧ ವಿದ್ಯೆ ಅತ್ಯಂತ ಉತ್ತಮವೆಂದು ವೈದ್ಯರು ನಂಬಿ ಅದನ್ನು ಅನುಸರಿಸುತ್ತಾರೆ. ಆದರೆ ಅದರ ಪ್ರತಿಯೊಂದು ವಿವರಣೆಯನ್ನು, ಅದು ‘ನಿರಂಕುಶ’ವೆಂದು ರೋಗಿಗಳ ಮೇಲೆ ಹೊರಿಸಬಾರದು. ರೋಗಿಗಳಿಗೂ ಆಯ್ಕೆಯ ಸ್ವಾತಂತ್ರವಿರತಕ್ಕದ್ದು.”—“ಮಿನಾಮಿ ನಿಹೋನ್‌ ಶಿಂಬುನ್‌,” ಜೂನ್‌ 28, 1985.

[ಪುಟ 32 ರಲ್ಲಿರುವ ಚೌಕ]

ನಾನು [ಯೆಹೋವನ ಸಾಕ್ಷಿಗಳ] ಕುಟುಂಬಗಳು ನಿಕಟ ಸಂಬಂಧ ಮತ್ತು ಪ್ರೀತಿಯವುಗಳೆಂದು ಕಂಡುಕೊಂಡಿದ್ದೇನೆ” ಎನ್ನುತ್ತಾರೆ ಡಾ. ಲಾರೆನ್ಸ್‌ ಎಸ್‌. ಫ್ರಾಂಕೆಲ್‌. “ಅವರ ಮಕ್ಕಳು ವಿದ್ಯಾವಂತರು, ಶೃದ್ಧೆಯುಳ್ಳವರು ಮತ್ತು ಗೌರವ ನೀಡುವವರು. . . . ವೈದ್ಯಕೀಯ ಆಜ್ಞೆಗಳಿಗೆ ಹೆಚ್ಚಿನ ಅನುಸರಣೆಯೂ ಇರುವಂತೆ ಕಂಡು ಬರುತ್ತದೆ ಮತ್ತು ಇದು, ಅವರ ನಂಬಿಕೆಗಳು ಅನುಮತಿಸುವಷ್ಟರ ಮಟ್ಟಿಗೆ, ವೈದ್ಯಕೀಯ ಮಧ್ಯಸ್ಥಿಕೆಯನ್ನು ಅಂಗೀಕರಿಸುವ ಅವರ ಪ್ರಯತ್ನದ ಪ್ರದರ್ಶನವನ್ನು ಪ್ರತಿನಿಧೀಕರಿಸಬಹುದು.”—ಡಿಪಾರ್ಟ್‌ಮೆಂಟ್‌ ಆಫ್‌ ಪೀಡಿಯಾಟ್ರಿಕ್ಸ್‌, ಎಮ್‌.ಡಿ. ಆ್ಯಂಡರ್‌ಸನ್‌ ಹಾಸ್ಪಿಟಲ್‌ ಆ್ಯಂಡ್‌ ಟ್ಯೂಮರ್‌ ಇನ್‌ಸ್ಟಿಟ್ಯೂಟ್‌, ಹ್ಯೂಸ್ಟನ್‌, ಯು.ಎಸ್‌.ಎ., 1985.

[ಪುಟ 33 ರಲ್ಲಿರುವ ಚೌಕ]

ಡಾ. ಜೇಮ್ಸ್‌ ಎಲ್‌. ಫೆಚ್ಲರ್‌ ಹೇಳುವುದು: “ಸ್ವಸ್ಥ ವೈದ್ಯಕೀಯ ತೀರ್ಮಾನವನ್ನು ಔದ್ಯೋಗಿಕ ದುರಹಂಕಾರ ದುರಾಕ್ರಮಿಸುವ ವಿಷಯ ಅಸಾಮಾನ್ಯವಲ್ಲವೆಂದು ನಾನು ಭಯ ಪಡುತ್ತೇನೆ. ‘ಇಂದು ಅತ್ಯುತ್ತಮ’ ವೆನ್ನಲಾಗುವ ಚಿಕಿತ್ಸೆಗಳು ನಾಳೆ ನವೀಕರಿಸಲ್ಪಡುತ್ತವೆ ಅಥವಾ ತ್ಯಜಿಸಲ್ಪಡುತ್ತವೆ. ಇವರಲ್ಲಿ ಯಾರು ಹೆಚ್ಚು ಅಪಾಯಕಾರಿ, ‘ಧಾರ್ಮಿಕ ಹೆತ್ತವರೊ ಅಥವಾ ಅವನ ಅಥವಾ ಅವಳ ಚಿಕಿತ್ಸೆ ಖಂಡಿತವಾಗಿಯೂ ಜೀವದಾಯಕವೆಂದು ದೃಢೀಕರಿಸಿರುವ ದುರಹಂಕಾರದ ವೈದ್ಯನೋ?”—“ಪೀಡಿಯಾಟ್ರಿಕ್ಸ್‌,” ಅಕ್ಟೋಬರ್‌ 1988.