ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 13ಎ

ಎರಡು ಆಲಯಗಳು ಮತ್ತು ಅದರಿಂದ ಕಲಿಯೋ ಪಾಠಗಳು

ಎರಡು ಆಲಯಗಳು ಮತ್ತು ಅದರಿಂದ ಕಲಿಯೋ ಪಾಠಗಳು

ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ಆಲಯ:

  • ಈ ಆಲಯದ ಬಗ್ಗೆ ಯೆಹೆಜ್ಕೇಲನು ಬಾಬೆಲಿನಲ್ಲಿ ಕೈದಿಗಳಾಗಿದ್ದ ಯೆಹೂದ್ಯರಿಗೆ ವಿವರಿಸಿದನು

  • ಇದ್ರಲ್ಲಿ ಒಂದು ಯಜ್ಞವೇದಿ ಇತ್ತು, ಅದರ ಮೇಲೆ ಅನೇಕ ಪ್ರಾಣಿಗಳ ಬಲಿಯನ್ನ ಅರ್ಪಿಸಲಾಯ್ತು

  • ಇದು ಯೆಹೋವನ ಶುದ್ಧ ಆರಾಧನೆಯ ಮಟ್ಟಗಳನ್ನ ಎತ್ತಿ ತೋರಿಸುತ್ತಿತ್ತು

  • ಇದು 1919 ರಲ್ಲಿ ಶುರುವಾಗಿರೋ ಶುದ್ಧ ಆರಾಧನೆಯ ಪುನಃಸ್ಥಾಪನೆಯ ಕಡೆಗೆ ನಮ್ಮ ಗಮನ ಸೆಳೆಯುತ್ತೆ

ಆಧ್ಯಾತ್ಮಿಕ ಆಲಯ:

  • ಈ ಆಲಯದ ಬಗ್ಗೆ ಪೌಲನು ಇಬ್ರಿಯ ಕ್ರೈಸ್ತರಿಗೆ ತಿಳಿಸಿದನು

  • ಇದ್ರಲ್ಲಿ ಒಂದು ಯಜ್ಞವೇದಿ ಇತ್ತು, ಅದರ ಮೇಲೆ “ಎಲ್ಲ ಕಾಲಕ್ಕೂ ಒಂದೇ ಸಲ” ಬಲಿಯನ್ನ ಅರ್ಪಿಸಲಾಯ್ತು (ಇಬ್ರಿ. 10:10)

  • ಯೆಹೋವನು ಶುದ್ಧ ಆರಾಧನೆಗಾಗಿ ಯೇಸು ಕ್ರಿಸ್ತನ ಬಿಡುಗಡೆಯ ಬಲಿಯನ್ನ ಆಧಾರಿಸಿ ಮಾಡಿದ ಏರ್ಪಾಡನ್ನ ಈ ಆಲಯ ಸೂಚಿಸುತ್ತೆ. ಪವಿತ್ರ ಗುಡಾರ ಮತ್ತು ಯೆರೂಸಲೇಮಲ್ಲಿದ್ದ ದೇವಾಲಯ ಸಹ ಈ ಏರ್ಪಾಡನ್ನೇ ಸೂಚಿಸುತ್ತಿತ್ತು

  • ಇದು ಮಹಾ ಪುರೋಹಿತನಾಗಿ ಯೇಸು ಕ್ರಿ.ಶ. 29 ರಿಂದ 33 ರವರೆಗೆ ಮಾಡಿದ ಕೆಲಸಗಳ ಕಡೆಗೆ ನಮ್ಮ ಗಮನ ಸೆಳೆಯುತ್ತೆ