ಚೌಕ 9ಇ
“ಎಲ್ಲವನ್ನ ಸರಿಮಾಡೋ ಸಮಯ”
ಅಪೊಸ್ತಲರ ಕಾರ್ಯ 3:21
ಅಪೊಸ್ತಲ ಪೇತ್ರನು “ಎಲ್ಲವನ್ನ ಸರಿಮಾಡೋ ಸಮಯ” ಅಂತ ಹೇಳಿದಾಗ ಅವನು ಒಂದು ಅಮೋಘ ಸಮಯಾವಧಿ ಬಗ್ಗೆ ತಿಳಿಸ್ತಿದ್ದನು. ಅದು ಯೇಸು ಕ್ರಿಸ್ತನು ರಾಜನಾದಾಗಿಂದ ಸಾವಿರ ವರ್ಷಗಳ ಆಳ್ವಿಕೆಯ ಕೊನೇ ತನಕದ ಸಮಯವನ್ನು ಸೂಚಿಸ್ತಿತ್ತು.
-
1914—ಯೇಸು ಕ್ರಿಸ್ತನು ಸ್ವರ್ಗದಲ್ಲಿ ರಾಜನಾದನು. 1919 ರಿಂದ ಶುದ್ಧ ಆರಾಧನೆ ಪುನಃಸ್ಥಾಪನೆ ಆಗೋಕೆ ಶುರುವಾಯ್ತು
ಕೊನೇ ದಿನಗಳು
-
ಹರ್ಮಗೆದ್ದೋನ್—ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಶುರುವಾಗುತ್ತೆ. “ಎಲ್ಲವನ್ನ ಸರಿಮಾಡೋ ಸಮಯ” ಸಾವಿರ ವರ್ಷದ ಆಳ್ವಿಕೆಯ ಕೊನೇ ವರೆಗೆ ಮುಂದುವರಿಯುತ್ತೆ. ಆಗ ಇಡೀ ಭೂಮಿ ಪರದೈಸಾಗುತ್ತೆ ಮತ್ತು ನಂಬಿಗಸ್ತ ಜನರು ತುಂಬ ಆಶೀರ್ವಾದಗಳನ್ನ ಪಡ್ಕೊಳ್ತಾರೆ
ಸಾವಿರ ವರ್ಷದ ಕೊನೆ
-
ಸಾವಿರ ವರ್ಷದ ಆಳ್ವಿಕೆ—ಯೇಸು ಪುನಃಸ್ಥಾಪನೆಯ ಕೆಲಸವನ್ನ ಸಂಪೂರ್ಣವಾಗಿ ಮಾಡಿ ಮುಗಿಸಿರುತ್ತಾನೆ ಮತ್ತು ಆಳ್ವಿಕೆಯನ್ನು ತನ್ನ ತಂದೆಗೆ ಒಪ್ಪಿಸ್ತಾನೆ
ಭೂಮಿ ಸದಾಕಾಲಕ್ಕೂ ಪರದೈಸಾಗುತ್ತೆ
ಯೇಸುವಿನ ಆಳ್ವಿಕೆ ಏನನ್ನೆಲ್ಲಾ ಪುನಃಸ್ಥಾಪಿಸುತ್ತೆ?
-
ದೇವರ ಹೆಸರಿಗೆ ಮಹಿಮೆ
-
ರೋಗಿಗಳಿಗೆ ಆರೋಗ್ಯ
-
ವೃದ್ಧರಿಗೆ ಯೌವನ
-
ಸತ್ತವರಿಗೆ ಜೀವ
-
ನಂಬಿಗಸ್ತ ಮನುಷ್ಯರಿಗೆ ಪರಿಪೂರ್ಣತೆ
-
ಭೂಮಿಯ ಮೇಲೆ ಪರದೈಸ್