ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 2ಬಿ

ಯೆಹೆಜ್ಕೇಲನ ಜೀವನ ಮತ್ತು ಕಾಲ

ಯೆಹೆಜ್ಕೇಲನ ಜೀವನ ಮತ್ತು ಕಾಲ

ಯೆಹೆಜ್ಕೇಲ ಅನ್ನೋ ಹೆಸ್ರಿನ ಅರ್ಥ “ದೇವರು ಬಲಪಡಿಸ್ತಾನೆ.” ಯೆಹೆಜ್ಕೇಲ ಹೇಳಿದ ಭವಿಷ್ಯವಾಣಿಗಳಲ್ಲಿ ಅನೇಕ ಎಚ್ಚರಿಕೆಗಳಿವೆ. ಅದ್ರಲ್ಲಿರೋ ಸಂದೇಶ ಅವನ ಹೆಸ್ರಿನ ಅರ್ಥಕ್ಕೆ ತಕ್ಕಂತೆ ಇದೆ. ಅದು ಯೆಹೋವನಿಗೆ ಶುದ್ಧ ಆರಾಧನೆ ಮಾಡಬೇಕು ಅಂತ ಹಂಬಲಿಸುವವರ ನಂಬಿಕೆ ಬಲಪಡಿಸುತ್ತೆ.

ಯೆಹೆಜ್ಕೇಲನ ಕಾಲದಲ್ಲಿದ್ದ ಬೇರೆ ಪ್ರವಾದಿಗಳು

  • ಯೆರೆಮೀಯ,

    ಪುರೋಹಿತ ಕುಟುಂಬಕ್ಕೆ ಸೇರಿದವನಾಗಿದ್ದ, ಹೆಚ್ಚಾಗಿ ಯೆರೂಸಲೇಮಿನಲ್ಲೇ ಸೇವೆಮಾಡಿದ್ದ (ಕ್ರಿ.ಪೂ. 647-580)

  • ಹುಲ್ದ

    ಸುಮಾರು ಕ್ರಿ.ಪೂ. 642 ರಲ್ಲಿ ದೇವಾಲಯದಲ್ಲಿ ನಿಯಮ ಪುಸ್ತಕ ಸಿಕ್ಕಿದ ಸಮಯದಲ್ಲಿ ಸೇವೆ ಮಾಡುತ್ತಿದ್ದಳು.

  • ದಾನಿಯೇಲ,

    ರಾಜವಂಶವಾದ ಯೆಹೂದ ಕುಲದವನು. ಇವನನ್ನ ಕ್ರಿ.ಪೂ. 617 ರಲ್ಲಿ ಬಾಬೆಲಿಗೆ ಸೆರೆಯಾಗಿ ಕರೆದುಕೊಂಡು ಹೋಗಲಾಯ್ತು.

  • ಹಬಕ್ಕೂಕ

    ಯೆಹೋಯಾಕೀಮನ ಸಮಯದಲ್ಲಿ ಯೂದಾಯದಲ್ಲಿ ಪ್ರವಾದಿಯಾಗಿ ಸೇವೆ ಮಾಡುತ್ತಿದ್ದ

  • ಓಬದ್ಯ

    ಬಹುಶಃ ಯೆರೂಸಲೇಮಿನ ನಾಶನದ ಸಮಯದಲ್ಲಿ ಏದೋಮಿನ ವಿರುದ್ಧ ಭವಿಷ್ಯವಾಣಿ ತಿಳಿಸಿದವನು

ಇವರು ಯಾವಾಗ ಪ್ರವಾದಿಸಿದ್ರು? (ಎಲ್ಲಾ ಇಸವಿಗಳು ಕ್ರಿಸ್ತ ಪೂರ್ವದ್ದು)

ಯೆಹೆಜ್ಕೇಲನ ಸಮಯದಲ್ಲಿ ನಡೆದ ಪ್ರಾಮುಖ್ಯ ಘಟನೆಗಳು (ಎಲ್ಲಾ ಇಸವಿಗಳು ಕ್ರಿಸ್ತ ಪೂರ್ವದ್ದು)

  1. ಸುಮಾರು 643: ಜನನ

  2. 617: ಬಾಬೆಲಿಗೆ ಕೈದಿಯಾಗಿ ಹೋದ

  3. 613: ಭವಿಷ್ಯವಾಣಿ ತಿಳಿಸೋಕೆ ಶುರುಮಾಡಿದ. ಯೆಹೋವ ದೇವರ ದರ್ಶನ ನೋಡಿದ

  4. 612: ದೇವಾಲಯದಲ್ಲಿ ಸುಳ್ಳು ಆರಾಧನೆ ನಡೀತಿರೋ ದರ್ಶನ ನೋಡಿದ

  5. 611: ಯೆರೂಸಲೇಮಿನ ಬಗ್ಗೆ ನ್ಯಾಯತೀರ್ಪನ್ನ ಹೇಳೋಕೆ ಶುರು ಮಾಡಿದ

  6. 609: ಯೆಹೆಜ್ಕೇಲನ ಹೆಂಡತಿ ತೀರಿಹೋದಳು, ಯೆರೂಸಲೇಮನ್ನು ಕೊನೇದಾಗಿ ಮುತ್ತಿಗೆ ಹಾಕಲಾಯ್ತು

  7. 607: ಯೆರೂಸಲೇಮ್‌ ನಾಶವಾಯ್ತು ಅನ್ನೋ ಸುದ್ದಿ ಸಿಕ್ತು

  8. 593: ಆಲಯದ ದರ್ಶನ ನೋಡಿದ

  9. 591: ನೆಬೂಕದ್ನೆಚ್ಚರ ಈಜಿಪ್ಟನ್ನು ಆಕ್ರಮಣ ಮಾಡುವನೆಂದು ಮುಂತಿಳಿಸಿದ; ತನ್ನ ಪುಸ್ತಕವನ್ನು ಬರೆದು ಮುಗಿಸಿದ

ಯೆಹೂದ ಮತ್ತು ಬಾಬೆಲನ್ನು ಆಳಿದ ರಾಜರು

  1. 659-629: ಯೋಷೀಯ ಶುದ್ಧ ಆರಾಧನೆಯನ್ನು ಬೆಂಬಲಿಸಿದ. ಆದರೆ ಫರೋಹ ನೆಕೋವಿನ ವಿರುದ್ಧ ಯುದ್ಧದಲ್ಲಿ ತೀರಿಹೋದ

  2. 628: ಯೆಹೋವಾಹಾಜನು ಮೂರು ತಿಂಗಳು ಯೆರೂಸಲೇಮಿನ ಮೇಲೆ ರಾಜನಾಗಿ ದಬ್ಬಾಳಿಕೆ ಮಾಡಿದ. ಇವನನ್ನ ಫರೋಹ ನೆಕೋ ಕೈದಿಯಾಗಿ ಹಿಡಿದ

  3. 628-618: ಯೆಹೋಯಾಕೀಮನು ಫರೋಹ ನೆಕೋವಿನ ಕೈಗೊಂಬೆಯಾಗಿದ್ದ, ಇವನು ಕ್ರೂರವಾಗಿ ಆಳ್ವಿಕೆ ಮಾಡಿದ

  4. 625: ನೆಬೂಕದ್ನೆಚ್ಚರ ಈಜಿಪ್ಟಿನ ಸೈನ್ಯವನ್ನು ಸೋಲಿಸಿದ

  5. 620: ನೆಬೂಕದ್ನೆಚ್ಚರ ಯೆಹೂದದ ಮೇಲೆ ಮೊದಲ ಸಲ ಆಕ್ರಮಣ ಮಾಡಿದ. ತನ್ನ ನಿಯಂತ್ರಣದಲ್ಲಿ (ಸಾಮಂತ ರಾಜನಾಗಿ) ಯೆರೂಸಲೇಮನ್ನ ಆಳಲಿಕ್ಕಾಗಿ ಯೆಹೋಯಾಕೀಮನನ್ನು ನೇಮಿಸಿದ

  6. 618: ಯೆಹೋಯಾಕೀಮ ನೆಬೂಕದ್ನೆಚ್ಚರನ ವಿರುದ್ಧ ದಂಗೆಯೆದ್ದ, ಆದರೆ ಬಾಬೆಲಿನವರು ಎರಡನೇ ಸಲ ಯೆರೂಸಲೇಮಿನ ಮೇಲೆ ದಾಳಿ ಮಾಡಿದಾಗ ಸತ್ತುಹೋದ

  7. 617: ಯೆಹೋಯಾಖೀನ (ಯೆಕೊನ್ಯ) ಕೆಟ್ಟರಾಜ. ಮೂರು ತಿಂಗಳು ಯೆರೂಸಲೇಮನ್ನು ಆಳಿದ. ನಂತರ ನೆಬೂಕದ್ನೆಚ್ಚರನಿಗೆ ಶರಣಾದ

  8. 617-607: ಚಿದ್ಕೀಯ ದುಷ್ಟ, ಹೆದರುಪುಕ್ಕಲ ರಾಜನಾಗಿದ್ದ. ನೆಬೂಕದ್ನೆಚ್ಚರ ಇವನನ್ನು ಸಾಮಂತ ರಾಜನನ್ನಾಗಿ ನೇಮಿಸಿದ

  9. 609: ಚಿದ್ಕೀಯ ನೆಬೂಕದ್ನೆಚ್ಚರನ ವಿರುದ್ಧ ದಂಗೆಯೆದ್ದ. ಆಮೇಲೆ ನೆಬೂಕದ್ನೆಚ್ಚರ ಯೆಹೂದದ ಮೇಲೆ ಮೂರನೇ ಸಲ ಆಕ್ರಮಣ ಮಾಡಿದ

  10. 607: ನೆಬೂಕದ್ನೆಚ್ಚರ ಯೆರೂಸಲೇಮನ್ನು ನಾಶಮಾಡಿ ಚಿದ್ಕೀಯನ ಕಣ್ಣುಗಳನ್ನು ಕಿತ್ತು ಬಾಬೆಲಿಗೆ ಕೈದಿಯಾಗಿ ಕರೆದುಕೊಂಡು ಹೋದ