ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ  16ಬಿ

ದುಃಖದ ನಿಟ್ಟುಸಿರು ಬಿಡ್ತಾ ನರಳಾಡೋದು, ಗುರುತು ಹಾಕೋದು, ಜಜ್ಜಿ ಹಾಕೋದು—ಯಾವಾಗ ಮತ್ತು ಹೇಗೆ?

ದುಃಖದ ನಿಟ್ಟುಸಿರು ಬಿಡ್ತಾ ನರಳಾಡೋದು, ಗುರುತು ಹಾಕೋದು, ಜಜ್ಜಿ ಹಾಕೋದು—ಯಾವಾಗ ಮತ್ತು ಹೇಗೆ?

ಯೆಹೆಜ್ಕೇಲ 9 ನೇ ಅಧ್ಯಾಯದಲ್ಲಿರೋ ದರ್ಶನ ನಮ್ಮ ಕಾಲದಲ್ಲೂ ನೆರವೇರಲಿದೆ. ಅದರ ಬಗ್ಗೆ ತಿಳುಕೊಂಡ್ರೆ ನಾವು ಈ ಲೋಕದ ಅಂತ್ಯ ಬಂದಾಗ ಧೈರ್ಯದಿಂದ ಇರುತ್ತೇವೆ

‘ದುಃಖದ ನಿಟ್ಟುಸಿರು ಬಿಡ್ತಾ ನರಳಾಡೋದು’

ಯಾವಾಗ: ಕೊನೇ ದಿನಗಳಲ್ಲಿ ಅಂದ್ರೆ ಮಹಾ ಸಂಕಟಕ್ಕೂ ಮುಂಚೆ

ಹೇಗೆ: ಈ ಲೋಕದಲ್ಲಿರೋ ಕೆಟ್ಟ ವಿಷಯಗಳ ಬಗ್ಗೆ ಅಸಹ್ಯಪಡ್ತಿದ್ದೇವೆ ಅಂತ ಒಳ್ಳೇ ಜನರು ತಮ್ಮ ಮಾತು ಮತ್ತು ನಡತೆ ಮೂಲಕ ತೋರಿಸಿಕೊಡ್ತಾರೆ. ಇಂಥವ್ರು ಸಿಹಿಸುದ್ದಿಗೆ ಕಿವಿಗೊಡ್ತಾರೆ, ಯೇಸುವಿನ ಗುಣಗಳನ್ನ ಬೆಳೆಸಿಕೊಳ್ಳೋಕೆ ಪ್ರಯತ್ನಿಸ್ತಾ ಇರುತ್ತಾರೆ, ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೀತಾರೆ ಮತ್ತು ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ಕೊಡ್ತಾರೆ

‘ಗುರುತು ಹಾಕೋದು’

ಯಾವಾಗ: ಮಹಾ ಸಂಕಟದ ಸಮಯದಲ್ಲಿ

ಹೇಗೆ: ಕಾರ್ಯದರ್ಶಿಯ ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಎಲ್ಲಾ ದೇಶಗಳಿಗೆ ನ್ಯಾಯತೀರಿಸೋಕೆ ಬರೋ ಯೇಸು ಕ್ರಿಸ್ತನನ್ನು ಸೂಚಿಸುತ್ತಾನೆ. ಅವನು ದೊಡ್ಡ ಗುಂಪಿನವ್ರ ಪರವಾಗಿ ನ್ಯಾಯತೀರಿಸ್ತಾನೆ ಅಥವಾ ಕುರಿಗಳಿಗೆ ಗುರುತು ಹಾಕ್ತಾನೆ. ಅವರು ಹರ್ಮಗೆದ್ದೋನನ್ನ ಪಾರಾಗ್ತಾರೆ ಅಂತ ಇದು ಸೂಚಿಸುತ್ತೆ

‘ಜಜ್ಜಿ ಹಾಕೋದು’

ಯಾವಾಗ: ಹರ್ಮಗೆದ್ದೋನಿನಲ್ಲಿ

ಹೇಗೆ: ಯೇಸು ಮತ್ತು ಅವನ ಸ್ವರ್ಗೀಯ ಸೈನ್ಯ ದುಷ್ಟ ಲೋಕವನ್ನ ನಾಶ ಮಾಡುತ್ತೆ ಮತ್ತು ಶುದ್ಧ ಆರಾಧಕರನ್ನ ನೀತಿಯ ಹೊಸ ಲೋಕಕ್ಕೆ ನಡೆಸುತ್ತೆ. ಈ ಸೈನ್ಯದಲ್ಲಿ ದೇವದೂತರು ಮತ್ತು 1,44,000 ಜೊತೆ ರಾಜರು ಇರುತ್ತಾರೆ