ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ  20ಎ

ದೇಶವನ್ನ ಹಂಚಿ ಕೊಡಲಾಗುತ್ತೆ

ದೇಶವನ್ನ ಹಂಚಿ ಕೊಡಲಾಗುತ್ತೆ

ಗಡಿಗಳ ಅಳತೆಯ ಪಕ್ಕಾ ವಿವರಣೆಯಿಂದ ಕೈದಿಗಳಾಗಿದ್ದ ಯೆಹೂದ್ಯರಿಗೆ ತಮ್ಮ ನೆಚ್ಚಿನ ದೇಶ ಖಂಡಿತ ಪುನಃಸ್ಥಾಪನೆ ಆಗುತ್ತೆ ಅಂತ ಆಶ್ವಾಸನೆ ಸಿಕ್ತು. ಈ ದರ್ಶನದಿಂದ ನಾವೇನು ಕಲಿಬಹುದು? ದರ್ಶನದ ಬಗ್ಗೆ ಇರೋ ಎರಡು ಅಂಶಗಳ ಬಗ್ಗೆ ನೋಡೋಣ:

ಜಾಗ ಮತ್ತು ಅಮೂಲ್ಯ ಕೆಲಸ ಸಿಗುತ್ತೆ

ವಾಪಸ್‌ ಬಂದ ಕೈದಿಗಳಲ್ಲಿ ಪ್ರತಿಯೊಬ್ಬರಿಗೂ ಪುನಃಸ್ಥಾಪನೆಯಾದ ದೇಶದಲ್ಲಿ ಜಾಗ ಸಿಗಲಿತ್ತು. ಅದೇ ತರ, ಇವತ್ತು ಆಧ್ಯಾತ್ಮಿಕ ಪರದೈಸಲ್ಲೂ ಯೆಹೋವನ ಎಲ್ಲಾ ಸೇವಕರಿಗೆ ಜಾಗ ಇದೆ. ಸಂಘಟನೆಯಲ್ಲಿ ನಮಗಿರೋ ನೇಮಕ ಎಷ್ಟೇ ಚಿಕ್ಕದಾಗಿದ್ರೂ ನಮಗೆಲ್ಲರಿಗೂ ಆಧ್ಯಾತ್ಮಿಕ ದೇಶದಲ್ಲಿ ಜಾಗ ಮತ್ತು ಅಮೂಲ್ಯ ಕೆಲಸ ಇದೆ. ಯೆಹೋವನಿಗೆ ತನ್ನ ಎಲ್ಲಾ ಸೇವಕರೂ ಅಮೂಲ್ಯರು.

ಸರಿಸಮಾನವಾಗಿ ಹಂಚಲಾಗುತ್ತೆ

ಪುನಃಸ್ಥಾಪನೆಯಾದ ದೇಶದಲ್ಲಿ ಎಲ್ಲರಿಗೂ ಸರಿಸಮಾನವಾಗಿ ಬೆಳೆ, ನೀರು ಸಿಗೋ ರೀತಿಯಲ್ಲಿ ಜಾಗವನ್ನ ಹಂಚಲಾಯ್ತು. ಅದೇ ತರ ಇವತ್ತು ಯೆಹೋವನು, ಆಧ್ಯಾತ್ಮಿಕ ಪರದೈಸಿನ ಆಶೀರ್ವಾದಗಳು ತನ್ನ ಎಲ್ಲಾ ಸೇವಕರಿಗೂ ಸಮವಾಗಿ ಸಿಗೋ ತರ ಮಾಡಿದ್ದಾನೆ.