ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ  18ಎ

ಬರಲಿರೋ ಮಹಾ ಯುದ್ಧದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ

ಬರಲಿರೋ ಮಹಾ ಯುದ್ಧದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ

ಯೆಹೋವ ದೇವರನ್ನ ಮತ್ತು ಆತನ ಜನರನ್ನ ವಿರೋಧಿಸೋ ಎಲ್ಲರನ್ನ ನಾಶಮಾಡೋ ಒಂದು ಕೊನೆ ಯುದ್ಧದ ಬಗ್ಗೆ ಬೈಬಲಿನಲ್ಲಿರೋ ತುಂಬ ಭವಿಷ್ಯವಾಣಿಗಳು ತಿಳಿಸುತ್ತವೆ. ಅವುಗಳಲ್ಲಿ ಕೆಲವನ್ನ ಇಲ್ಲಿ ಕೊಡಲಾಗಿದೆ. ಈ ಭವಿಷ್ಯವಾಣಿಗಳಲ್ಲಿ ಯಾವ ಹೋಲಿಕೆಗಳಿವೆ? ತನ್ನ ಎಚ್ಚರಿಕೆಯನ್ನ ಕೇಳಿ ತಿದ್ದಿಕೊಳ್ಳೋ ಜನರನ್ನ ಯೆಹೋವನು ಹೇಗೆ ಕಾಪಾಡ್ತಾನೆ ಅನ್ನೋದನ್ನು ಗಮನಿಸಿ.

ಇಸ್ರಾಯೇಲ್ಯರ ದಿನಗಳಲ್ಲಿ

ಯೆಹೆಜ್ಕೇಲ: “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಎಲ್ಲ ಬೆಟ್ಟಗಳ ಮೇಲೆ ಗೋಗನ ವಿರುದ್ಧ ನಾನು ಒಂದು ಕತ್ತಿ ಕಳಿಸ್ತೀನಿ.”—ಯೆಹೆ. 38:18-23.

ಯೆರೆಮೀಯ: “[ಯೆಹೋವನೇ] ಖುದ್ದಾಗಿ ಎಲ್ಲ ಮಾನವರಿಗೆ ತೀರ್ಪು ಮಾಡ್ತಾನೆ. ಆತನು ಕೆಟ್ಟವರನ್ನ ಕತ್ತಿಯಿಂದ ಕೊಲ್ತಾನೆ.”—ಯೆರೆ. 25:31-33.

ದಾನಿಯೇಲ: “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ . . . ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ.”—ದಾನಿ. 2:44.

ಕ್ರಿ.ಶ. ಮೊದಲನೇ ಶತಮಾನದಲ್ಲಿ

ಯೇಸು: “ಆಗ ಮಹಾ ಸಂಕಟ ಇರುತ್ತೆ. ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ.”—ಮತ್ತಾ. 24:21, 22.

ಪೌಲ: ‘ಯೇಸು ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ ದೇವರನ್ನ ತಿಳ್ಕೊಳ್ಳದವ್ರಿಗೆ ಶಿಕ್ಷೆ ಕೊಡ್ತಾನೆ.’—2 ಥೆಸ. 1:6-9.

ಪೇತ್ರ: “ಯೆಹೋವನ ದಿನ ಕಳ್ಳನ ತರ ಬರುತ್ತೆ . . . ಭೂಮಿ ಮತ್ತು ಅದ್ರಲ್ಲಿ ನಡಿಯೋ ಕೆಲಸಗಳೆಲ್ಲ ಬಟ್ಟ ಬಯಲಾಗುತ್ತೆ.”—2 ಪೇತ್ರ 3:10.

ಯೋಹಾನ: “[ಯೇಸುವಿನ] ಬಾಯಿಂದ ಒಂದು ದೊಡ್ಡ ಕತ್ತಿ ಹೊರಗೆ ಬರ್ತಾ ಇತ್ತು. ಅದು ತುಂಬಾ ಉದ್ದ ಇತ್ತು, ಚೂಪಾಗಿತ್ತು. ಆತನು ಅದನ್ನ ದೇಶಗಳನ್ನ ನಾಶಮಾಡೋಕೆ ಬಳಸ್ತಾನೆ.”—ಪ್ರಕ. 19:11-18.

ಈಗಿನ ಕಾಲ

ಬೈಬಲಷ್ಟು ಹೆಚ್ಚು ಭಾಷೆಯಲ್ಲಿ ಭಾಷಾಂತರವಾಗಿ ವಿತರಿಸಲ್ಪಟ್ಟಿರೋ ಪುಸ್ತಕ ಮತ್ತೊಂದಿಲ್ಲ

ಯೆಹೋವನ ಈಗಿನ ಸೇವಕರು

  • ಬೈಬಲ್‌ ಪ್ರಕಾಶನಗಳನ್ನ ನೂರಾರು ಭಾಷೆಗಳಲ್ಲಿ ಪ್ರಕಾಶಿಸುತ್ತಿದ್ದಾರೆ ಮತ್ತು ವಿತರಣೆ ಮಾಡ್ತಿದ್ದಾರೆ

  • ಸಿಹಿಸುದ್ದಿಯನ್ನ ಸಾರೋಕೆ ಪ್ರತಿ ವರ್ಷ ಕೋಟ್ಯಾಂತರ ತಾಸುಗಳನ್ನ ವ್ಯಯಿಸುತ್ತಿದ್ದಾರೆ