ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 2ಎ

ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿ ಏನೆಲ್ಲಾ ಇದೆ?

ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿ ಏನೆಲ್ಲಾ ಇದೆ?

ಭವಿಷ್ಯವಾಣಿ ಅಂದರೇನು?

“ಭವಿಷ್ಯವಾಣಿ” ಅನ್ನೋ ಪದಕ್ಕೆ ಹೀಬ್ರುವಿನಲ್ಲಿ ‘ನವ’ ಅನ್ನೋ ಪದ ಬಳಸಲಾಗಿದೆ. ಅದರ ಅರ್ಥ ದೇವರಿಂದ ಬಂದಿರುವ ಮಾತು, ನ್ಯಾಯತೀರ್ಪು, ನೀತಿಪಾಠ ಅಥವಾ ಆಜ್ಞೆಗಳನ್ನು ಹೇಳೋದು ಎಂದಾಗಿದೆ. ಮುಂದೆ ನಡೆಯಲಿಕ್ಕಿರುವ ವಿಷಯಗಳನ್ನು ಹೇಳುವುದು ಕೂಡ ಇದರಲ್ಲಿ ಸೇರಿದೆ. ಈ ರೀತಿಯ ಅನೇಕ ದೇವರ ಸಂದೇಶಗಳನ್ನು ಯೆಹೆಜ್ಕೇಲನ ಪುಸ್ತಕದಲ್ಲಿ ನೋಡಬಹುದು.—ಯೆಹೆ. 3:10, 11; 11:4-8; 14:6, 7; 37:9, 10; 38:1-4.

ಭವಿಷ್ಯವಾಣಿಗಳನ್ನು ಹೇಗೆಲ್ಲಾ ಹೇಳಲಾಗಿದೆ?

  • ದರ್ಶನಗಳು

  • ಉದಾಹರಣೆಗಳು

  • ಅಭಿನಯಗಳು

ಯೆಹೆಜ್ಕೇಲ ಪುಸ್ತಕದಲ್ಲಿ ಭವಿಷ್ಯವಾಣಿಗಳನ್ನು ದರ್ಶನಗಳು, ಉದಾಹರಣೆಗಳು, ಕಥೆಗಳು ಮತ್ತು ಅಭಿನಯಗಳ ಮೂಲಕ ಹೇಳಲಾಗಿದೆ.

ನೆರವೇರಿಕೆ

ಯೆಹೆಜ್ಕೇಲನ ಭವಿಷ್ಯವಾಣಿಗಳಿಗೆ ಕೆಲವೊಮ್ಮೆ ಒಂದಕ್ಕಿಂತ ಜಾಸ್ತಿ ನೆರವೇರಿಕೆಗಳಿವೆ. ಉದಾಹರಣೆಗೆ, ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲ ಹೇಳಿರುವ ಸಂದೇಶ ತೆಗೆದುಕೊಳ್ಳಿ. ಇದು ಮೊದಲು ನೆರವೇರಿದ್ದು ದೇವಜನರು ವಾಪಸ್‌ ಯೆರೂಸಲೇಮಿಗೆ ಬಂದಾಗ. ಆದರೆ ಇದಕ್ಕೆ ಇನ್ನೂ ಬೇರೆ ನೆರವೇರಿಕೆಗಳಿವೆ. ಈ ಭವಿಷ್ಯವಾಣಿ ನಮ್ಮ ಕಾಲದಲ್ಲಿ ಮತ್ತೆ ಭವಿಷ್ಯದಲ್ಲಿ ಹೇಗೆ ನೆರವೇರುತ್ತೆ ಅಂತ ಈ ಪುಸ್ತಕದ 9 ನೇ ಅಧ್ಯಾಯದಲ್ಲಿ ನೋಡೋಣ.

ಹಿಂದೆ ಯೆಹೆಜ್ಕೇಲನ ಅನೇಕ ಭವಿಷ್ಯವಾಣಿಗಳಿಗೆ ಸೂಚಕ ಮತ್ತು ಸೂಚಕರೂಪಗಳಿವೆ ಅಂತ ನಾವು ಹೇಳುತ್ತಿದ್ದೆವು. ಯಾವುದೇ ವ್ಯಕ್ತಿ, ವಸ್ತು, ಜಾಗ ಅಥವಾ ಘಟನೆಗಳಿಗೆ ಒಂದು ಸೂಚಕ ಅಥ್ವಾ ಸೂಚಕರೂಪ ಇದೆ ಅಂತ ಬೈಬಲಿನಲ್ಲಿ ನೇರವಾಗಿ ತಿಳಿಸಿಲ್ಲವಾದ್ರೆ ನಾವು ಸಹ ಅದನ್ನ ಹೇಳಲ್ಲ. * ಬದಲಿಗೆ ನಾವು ಈ ಪುಸ್ತಕದಲ್ಲಿ ಯೆಹೆಜ್ಕೇಲನ ಭವಿಷ್ಯವಾಣಿಯ ಎರಡನೇ ನೆರವೇರಿಕೆ ಬಗ್ಗೆ ತಿಳಿಸಿದ್ದೇವೆ. ಯೆಹೆಜ್ಕೇಲನ ಸಂದೇಶದಿಂದ ಮತ್ತು ಅದ್ರಲ್ಲಿ ಹೇಳಿರುವ ಜನರು, ಜಾಗ ಮತ್ತು ಘಟನೆಗಳಿಂದ ನಾವು ಯಾವ ಪಾಠಗಳನ್ನು ಕಲಿಬಹುದು ಅಂತ ಸಹ ನೋಡುತ್ತೇವೆ.

^ ಪ್ಯಾರ. 12 ಸೂಚಕ ಮತ್ತು ಸೂಚಕರೂಪಗಳ ಬಗ್ಗೆ ಕಾವಲಿನಬುರುಜು 2015 ಮಾರ್ಚ್‌ 15 ಪುಟ 9-11 ಪ್ಯಾರ 7-12ನ್ನ ಮತ್ತು ಪುಟ 17-18 ರಲ್ಲಿರೋ “ವಾಚಕರಿಂದ ಪ್ರಶ್ನೆಗಳು” ಅನ್ನೋ ಲೇಖನವನ್ನ ನೋಡಿ.