ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1919 ರಲ್ಲಿ ನಡೆದ ಅಧಿವೇಶನ ಐತಿಹಾಸಿಕ ಮೈಲಿಗಲ್ಲಾಗಿತ್ತು. ಇದು ದೇವಜನರು ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆ ಆಗಿದ್ದಾರೆ ಅನ್ನೋದಕ್ಕೆ ಸ್ಪಷ್ಟ ಪುರಾವೆ ಆಗಿತ್ತು

ಚೌಕ 9ಬಿ

1919 ರಲ್ಲೇ ಯಾಕೆ?

1919 ರಲ್ಲೇ ಯಾಕೆ?

ದೇವರ ಜನರು 1919 ರಲ್ಲಿ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆ ಆದ್ರು ಅಂತ ನಾವು ಯಾಕೆ ಹೇಳುತ್ತೇವೆ? ಬೈಬಲಿನ ಭವಿಷ್ಯವಾಣಿ ಮತ್ತು ಇತಿಹಾಸದಲ್ಲಿ ನಡೆದ ಘಟನೆಗಳು ನಮಗೆ ಈ ತೀರ್ಮಾನಕ್ಕೆ ಬರಲು ಸಹಾಯ ಮಾಡುತ್ತವೆ.

ಯೇಸು 1914 ರಲ್ಲಿ ರಾಜನಾದನು ಅಂತ ಬೈಬಲಿನ ಭವಿಷ್ಯವಾಣಿಗಳು ಮತ್ತು ಇತಿಹಾಸದಲ್ಲಿ ನಡೆದ ಘಟನೆಗಳು ತೋರಿಸಿಕೊಡುತ್ತವೆ. ಆಗಿನಿಂದ ಸೈತಾನನ ಲೋಕದ ಕೊನೇ ದಿನಗಳು ಶುರುವಾದವು. ರಾಜನಾದ ಮೇಲೆ ಯೇಸು ಏನು ಮಾಡಿದನು? ತನ್ನ ಜನ್ರನ್ನ ಕೂಡಲೇ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡಿಸಿದ್ನಾ? 1914 ರಲ್ಲೇ ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿ ಸುಗ್ಗಿ ಕೆಲಸವನ್ನ ಶುರು ಮಾಡಿದ್ನಾ?—ಮತ್ತಾ. 24:45.

ಖಂಡಿತ ಇಲ್ಲ. ಇದ್ರ ಬಗ್ಗೆ ಅಪೊಸ್ತಲ ಪೌಲ ಏನು ಹೇಳಿದನು ಅಂತ ನೋಡಿ. ನ್ಯಾಯತೀರ್ಪು “ಮೊದ್ಲು ದೇವರ ಮನೆಯಿಂದಾನೇ ಶುರುವಾಗುತ್ತೆ” ಅಂತ ಅವನು ಹೇಳಿದನು. (1 ಪೇತ್ರ 4:17) ಪ್ರವಾದಿ ಮಲಾಕಿಯ ಸಹ ಯೆಹೋವ ದೇವರು ತನ್ನ ಮಗನಾದ ‘ಒಪ್ಪಂದದ ಸಂದೇಶವಾಹಕನ’ ಜೊತೆ ಆಲಯಕ್ಕೆ ಬರ್ತಾನೆ ಅಂತ ಹೇಳಿದನು. (ಮಲಾ. 3:1-5) ಆ ಸಮಯ ಪರೀಕ್ಷೆಯ, ಶುದ್ಧೀಕರಣದ ಸಮಯವಾಗಿತ್ತು. ಈ ಭವಿಷ್ಯವಾಣಿಗಳೆಲ್ಲಾ ನೆರವೇರಿದವಾ?

ಹೌದು, ಚಾಚೂತಪ್ಪದೆ ನೆರವೇರಿದವು. ಇಸವಿ 1914 ರಿಂದ 1919 ಬೈಬಲ್‌ ವಿದ್ಯಾರ್ಥಿಗಳಿಗೆ (ಯೆಹೋವನ ಸಾಕ್ಷಿಗಳಿಗೆ) ಶುದ್ಧೀಕರಣದ ಮತ್ತು ಪರೀಕ್ಷೆಯ ಸಮಯವಾಗಿತ್ತು. ತಾವು ಅಂದುಕೊಂಡ ಹಾಗೆ 1914 ರಲ್ಲಿ ಅಂತ್ಯ ಬರ್ಲಿಲ್ಲ ಅಂತ ದೇವಜನ್ರಲ್ಲಿ ಅನೇಕರಿಗೆ ತುಂಬ ಬೇಸರ ಮತ್ತು ನಿರಾಶೆ ಆಯಿತು. ಸಂಘಟನೆಯನ್ನ ಅಲ್ಲಿವರೆಗೂ ನಡೆಸ್ತಿದ್ದ ಸಹೋದರ ಚಾರ್ಲ್ಸ್‌ ಟಿ. ರಸಲ್‌ 1916 ರಲ್ಲಿ ತೀರಿಹೋದಾಗಂತೂ ಅವ್ರ ನಿರಾಶೆ ಇನ್ನೂ ಜಾಸ್ತಿ ಆಯ್ತು. ಸಹೋದರ ರಸಲ್‌ ತೀರಿಹೋದ ಮೇಲೆ ಸಹೋದರ ಜೋಸೆಫ್‌ ಎಫ್‌. ರದರ್‌ಫರ್ಡ್‌ ಆ ಸ್ಥಾನಕ್ಕೆ ಬಂದ್ರು. ಆಗ ಸಹೋದರ ರಸಲ್‌ರನ್ನ ಅತಿಯಾಗಿ ಹಚ್ಚಿಕೊಂಡಿದ್ದವರಿಗೆ ಅದು ಸ್ವಲ್ಪನೂ ಇಷ್ಟವಾಗಲಿಲ್ಲ. ಅವ್ರು ಸಹೋದರ ರದರ್‌ಫರ್ಡ್‌ರನ್ನ ತುಂಬ ವಿರೋಧಿಸಿದ್ರು. ಇದರಿಂದ ಸಂಘಟನೆಯಲ್ಲಿ ಬಿರುಕು ಬಂತು. 1917 ರಷ್ಟಕ್ಕೆ ಸಂಘಟನೆ ಇನ್ನೇನು ಎರಡು ಭಾಗ ಆಗೋ ತರ ಆಯ್ತು. 1918 ರಲ್ಲಿ ಇನ್ನೊಂದು ಪರೀಕ್ಷೆ ಬಂತು. ಸಹೋದರ ರದರ್‌ಫರ್ಡ್‌ ಮತ್ತು ಅವರ 7 ಸಂಗಡಿಗರ ಮೇಲೆ ಸುಳ್ಳಾರೋಪಗಳನ್ನ ಹೊರಿಸಿ ಜೈಲಿಗೆ ಹಾಕಿದರು. ಇದಕ್ಕೆ ಪಿತೂರಿ ನಡೆಸಿದವರು ಪಾದ್ರಿಗಳೇ ಆಗಿರಬೇಕು. ಆಗ ಬ್ರೂಕ್ಲಿನ್‌ನ ಮುಖ್ಯ ಕಾರ್ಯಾಲಯ ಮುಚ್ಚಲಾಯಿತು. ಇದ್ರಿಂದ ದೇವಜನ್ರನ್ನ ಬಾಬೆಲಿನಿಂದ ಆಗ್ಲೂ ಬಿಡುಗಡೆ ಮಾಡಿರಲಿಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ.

ಆದ್ರೆ 1919 ರಲ್ಲಿ ಒಂದು ದೊಡ್ಡ ಬದಲಾವಣೆ ಆಯ್ತು. ಆ ವರ್ಷದ ಆರಂಭದಲ್ಲಿ ಸಹೋದರ ರದರ್‌ಫರ್ಡ್‌ ಮತ್ತು ಅವರ ಸಂಗಡಿಗರನ್ನ ಜೈಲಿಂದ ಬಿಡುಗಡೆ ಮಾಡಲಾಯಿತು. ಕೂಡಲೇ ಅವರು ತಮ್ಮ ಕೆಲಸಗಳನ್ನ ಪುನಃ ಶುರುಮಾಡಿದ್ರು. ಒಂದು ಐತಿಹಾಸಿಕ ಅಧಿವೇಶನವನ್ನ ನಡೆಸೋಕಾಗಿ ಸಿದ್ಧತೆಗಳನ್ನ ಮಾಡಿದ್ರು. ಜೊತೆಗೆ ದ ಗೋಲ್ಡನ್‌ ಏಜ್‌ (ಎಚ್ಚರ!) ಅನ್ನೋ ಪತ್ರಿಕೆಯನ್ನ ಬಿಡುಗಡೆ ಮಾಡಲು ಬೇಕಾದ ತಯಾರಿಗಳನ್ನ ಮಾಡಿದ್ರು. ಸಾರ್ವಜನಿಕ ಸಾರೋ ಕೆಲಸಕ್ಕಾಗಿಯೇ ಈ ಪತ್ರಿಕೆಯನ್ನ ತಯಾರಿಸಲಾಯ್ತು. ಸೇವಾ ಏರ್ಪಾಡುಗಳನ್ನ ಸಂಘಟಿಸಲಿಕ್ಕಾಗಿ ಮತ್ತು ಸಹೋದರರನ್ನ ಪ್ರೋತ್ಸಾಹಿಸಲಿಕ್ಕಾಗಿ ಪ್ರತಿಯೊಂದು ಸಭೆಯಲ್ಲೂ ಒಬ್ಬ ಮೇಲ್ವಿಚಾರಕನನ್ನು ನೇಮಿಸಲಾಯಿತು. ಸಾರೋ ಕೆಲಸ ಮಾಡಲು ತರಬೇತಿ ಕೊಡಲಿಕ್ಕಾಗಿ ಅದೇ ವರ್ಷ ಬುಲೆಟಿನ್‌ (ನಮ್ಮ ಕ್ರೈಸ್ತ ಜೀವನ ಮತ್ತು ಸೇವೆಕೂಟದ ಕೈಪಿಡಿ) ಅನ್ನು ಬಿಡುಗಡೆ ಮಾಡಲಾಯ್ತು.

ಇದೆಲ್ಲಾ ಇದ್ದಕ್ಕಿದ್ದಂತೆ ಹೇಗೆ ಸಾಧ್ಯವಾಯ್ತು? 1919 ರಲ್ಲಿ ಯೇಸು ಕ್ರಿಸ್ತನು ತನ್ನ ಜನರನ್ನ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡಿಸಿದನು. ಅದೇ ವರ್ಷದಲ್ಲಿ ನಂಬಿಗಸ್ತ, ವಿವೇಕಿ ಆದ ಆಳನ್ನ ನೇಮಿಸಿದನು. ಸುಗ್ಗಿ ಕೆಲಸ ಈಗಾಗಲೇ ಶುರುವಾಗಿತ್ತು. ಹೀಗೆ 1919 ರಿಂದ ನಮ್ಮ ಕೆಲಸ ಶರವೇಗದಲ್ಲಿ ಸಾಗುತ್ತಿದೆ.