ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುನ್ನುಡಿ

ಮುನ್ನುಡಿ

ಈವಿರೋಧೋಕ್ತಿಯನ್ನು ಪರಿಗಣಿಸಿರಿ: ಒಂದು ಔದ್ಯೋಗೀಕೃತ ದೇಶದಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಜನರು, ತಾವು ಒಂದೇ ತುಂಬ ಸಂತೋಷದಿಂದಿದ್ದೇವೆ ಇಲ್ಲವೆ ಸ್ವಲ್ಪ ಮಟ್ಟಿಗೆ ಸಂತೋಷದಿಂದಿದ್ದೇವೆ ಎಂದೆಣಿಸುತ್ತಾರೆ. ಆದರೆ ಆ ದೇಶದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತಿರುವ 10 ಔಷಧಗಳಲ್ಲಿ 3 ಔಷಧಗಳು ಖಿನ್ನತೆಗಾಗಿ ಕೊಡಲ್ಪಡುವಂಥವುಗಳಾಗಿವೆ. ಅದೇ ದೇಶದಲ್ಲಿ, 91 ಪ್ರತಿಶತ ಜನರು ತಮ್ಮ ಕುಟುಂಬ ಜೀವನವು ತೃಪ್ತಿಕರವಾಗಿದೆಯೆಂದು ನೆನಸುತ್ತಾರೆ. ಆದರೆ ಅಲ್ಲಿನ ವಿವಾಹಗಳಲ್ಲಿ ಸುಮಾರು ಅರ್ಧಾಂಶ ವಿಚ್ಛೇದನೆಯಲ್ಲಿ ಅಂತ್ಯಗೊಳ್ಳುತ್ತವೆ!

ವಾಸ್ತವದಲ್ಲಿ, ಜಗತ್ತಿನ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧಾಂಶವನ್ನು ಪ್ರತಿನಿಧೀಕರಿಸುವ 18 ದೇಶಗಳಲ್ಲಿರುವ ಜನರ ಒಂದು ಸಮೀಕ್ಷೆಯು, “ಭವಿಷ್ಯದ ಬಗ್ಗೆ ನಿರಾಶಾಜನಕ ದೃಷ್ಟಿಕೋನವು ಜಗತ್ತಿನ ಹೆಚ್ಚಿನ ಭಾಗವನ್ನು ಕವಿದಿದೆ” ಎಂಬುದನ್ನು ಸೂಚಿಸುತ್ತದೆ. ಆದಕಾರಣ, ಅನೇಕರು ಪೂರ್ಣವಾಗಿ ಸಂತೃಪ್ತಿಕರವಾದ ಜೀವನವನ್ನು ನಡೆಸುತ್ತಿಲ್ಲವೆಂಬುದು ವ್ಯಕ್ತವಾಗುತ್ತದೆ. ನಿಮ್ಮ ವಿಷಯದಲ್ಲೇನು? ಈ ಬ್ರೋಷರನ್ನು, ನೀವು ನಿಮ್ಮ ಜೀವನವನ್ನು ನಿಜವಾಗಿಯೂ ಸಂತೃಪ್ತಿಕರವಾದದ್ದಾಗಿ ಮಾಡಲು ಸಹಾಯಮಾಡಲಿಕ್ಕಾಗಿಯೇ ತಯಾರಿಸಲಾಗಿದೆ.