ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇನ್ನಾವ ಗ್ರಂಥವು

ಇನ್ನಾವ ಗ್ರಂಥವು

ಇನ್ನಾವ ಗ್ರಂಥವು

ಜಗತ್ತಿನ ಅತ್ಯಂತ ಮಹಾ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಕೆಲವನ್ನು ಪ್ರಭಾವಿಸಿ, ಅದೇ ಸಮಯದಲ್ಲಿ ನಿಯಮದ ಮೇಲೆಯೂ ಗಾಢವಾದ ಪರಿಣಾಮವನ್ನು ಬೀರಿದೆ?

• ಮಾನವ ಹಸ್ತದಿಂದ ಪುನರ್ನಕಲು ಮಾಡಲ್ಪಟ್ಟು, ಸಾವಿರಾರು ವರ್ಷಗಳಾದ ಬಳಿಕವೂ, ಮೂಲತಃ ಬರೆಯಲ್ಪಟ್ಟಿದ್ದಂತೆಯೇ ನಮಗೆ ದೊರೆತಿದೆ?

• ಅದನ್ನು ಭಾಷಾಂತರಿಸಲಿಕ್ಕಾಗಿ ಕೆಲವರು ಕಷ್ಟಗಳನ್ನು ಅನುಭವಿಸಿ, ಸಾಯುವ ಅಪಾಯಕ್ಕೂ ಸಿದ್ಧರಾಗಿರುವಷ್ಟು ನಿಸ್ವಾರ್ಥತೆಯನ್ನು ಪ್ರೇರಿಸಿದೆ?

• 2,100ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಲ್ಪಟ್ಟು ಮಾನವ ಕುಟುಂಬದ 90ಕ್ಕೂ ಹೆಚ್ಚಿನ ಪ್ರತಿಶತ ಜನರಿಗೆ ಲಭ್ಯವಿದೆ?

• ಶತಮಾನಗಳು ಕಳೆಯುವ ವರೆಗೆ ಶೋಧವಾಗಿರದ ವೈಜ್ಞಾನಿಕ ಸತ್ಯಗಳನ್ನು ತಿಳಿಸುತ್ತದೆ?

• ಎಲ್ಲ ಜಾತೀಯ, ಕುಲಸಂಬಂಧವಾದ, ಮತ್ತು ರಾಷ್ಟ್ರೀಯ ಹಿನ್ನೆಲೆಗಳ ಜನರು ತಮ್ಮ ಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡಸಾಧ್ಯವಿರುವ ಅನಂತಕಾಲಿಕ ಮೂಲತತ್ತ್ವಗಳನ್ನು ಒಳಗೊಂಡಿದೆ?

• ಐತಿಹಾಸಿಕ ನಿಜತ್ವಗಳು ರುಜುಪಡಿಸಿರುವಂತಹ, ನೆರವೇರಿರುವ ಅನಿಶ್ಚಯಾರ್ಥವಿಲ್ಲದ ಭವಿಷ್ಯನುಡಿಗಳನ್ನು ಒಳಗೊಂಡಿದೆ?

ಅಂತಹ ಗ್ರಂಥವೊಂದನ್ನು ಪರೀಕ್ಷಿಸುವುದು ಯೋಗ್ಯವಾಗಿರಲಿಕ್ಕಿಲ್ಲವೊ?