ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಗ್ರಂಥದಲ್ಲಿ ಅಡಕವಾಗಿರುವ ವಿಷಯಗಳು

ಈ ಗ್ರಂಥದಲ್ಲಿ ಅಡಕವಾಗಿರುವ ವಿಷಯಗಳು

ಈ ಗ್ರಂಥದಲ್ಲಿ ಅಡಕವಾಗಿರುವ ವಿಷಯಗಳು

ಒಂದು ಗ್ರಂಥಾಲಯವನ್ನು ಪ್ರಥಮ ಬಾರಿ ಪ್ರವೇಶಿಸುವ ವ್ಯಕ್ತಿಯೊಬ್ಬನು, ಪುಸ್ತಕಗಳ ಸಾಲುಗಳನ್ನು ಕಂಡು ದಿಗ್ಭ್ರಮೆಗೊಳ್ಳಬಹುದು. ಆದರೆ ಪುಸ್ತಕಗಳು ಜೋಡಿಸಲ್ಪಟ್ಟಿರುವ ವಿಧದ ಕುರಿತಾದ ತುಸು ವಿವರಣೆಯಿಂದ, ಅವನು ಪುಸ್ತಕಗಳನ್ನು ಕಂಡುಹಿಡಿಯಲು ಬೇಗನೆ ಕಲಿಯುತ್ತಾನೆ. ತದ್ರೀತಿ, ಬೈಬಲಿನಲ್ಲಿ ಯಾವುದನ್ನಾದರೂ ಹುಡುಕುವುದು, ಅದರ ಒಳವಿಷಯಗಳು ಹೇಗೆ ಜೋಡಿಸಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿರುವಾಗ ಹೆಚ್ಚು ಸುಲಭವಾಗಿರುತ್ತದೆ.

“ಬೈಬಲ್‌” ಎಂಬ ಪದವು, “ಪಪೈರಸ್‌ ಸುರುಳಿಗಳು” ಅಥವಾ “ಪುಸ್ತಕಗಳು” ಎಂಬ ಅರ್ಥವನ್ನು ಕೊಡುವ ಬಿಬ್ಲಿಯ ಎಂಬ ಗ್ರೀಕ್‌ ಪದದಿಂದ ಬಂದಿರುತ್ತದೆ.1 ಬೈಬಲು ವಾಸ್ತವವಾಗಿ, 66 ಪ್ರತ್ಯೇಕ ಪುಸ್ತಕಗಳ ಒಂದು ಸಂಗ್ರಹ, ಒಂದು ಗ್ರಂಥಾಲಯವಾಗಿದೆ. ಅದರ ಬರವಣಿಗೆಗೆ, ಸಾ.ಶ.ಪೂ. 1513ರಿಂದ ಸುಮಾರು ಸಾ.ಶ. 98ರ ವರೆಗೆ, ಸುಮಾರು 1,600 ವರ್ಷಗಳಷ್ಟು ಸಮಯ ಹಿಡಿಯಿತು.

ಬೈಬಲಿನ ಒಳವಿಷಯಗಳಲ್ಲಿ ಸುಮಾರು ಮುಕ್ಕಾಲು ಭಾಗವಾಗಿರುವ ಪ್ರಥಮ 39 ಪುಸ್ತಕಗಳು, ಹೆಚ್ಚಾಗಿ ಹೀಬ್ರು ಭಾಷೆಯಲ್ಲಿ ಬರೆಯಲ್ಪಟ್ಟಿರುವುದರಿಂದ, ಹೀಬ್ರು ಶಾಸ್ತ್ರಗಳೆಂದು ಜ್ಞಾತವಾಗಿವೆ. ಈ ಪುಸ್ತಕಗಳನ್ನು ಸಾಮಾನ್ಯವಾಗಿ ಮೂರು ಗುಂಪುಗಳಾಗಿ ವಿಭಾಗಿಸಬಹುದು: (1) ಐತಿಹಾಸಿಕ, ಆದಿಕಾಂಡದಿಂದ ಎಸ್ತೇರಳು, 17 ಪುಸ್ತಕಗಳು; (2) ಪದ್ಯಾತ್ಮಕ, ಯೋಬನಿಂದ ಪರಮಗೀತಗಳು, 5 ಪುಸ್ತಕಗಳು; ಮತ್ತು (3) ಪ್ರವಾದನಾತ್ಮಕ, ಯೆಶಾಯನಿಂದ ಮಲಾಕಿಯ, 17 ಪುಸ್ತಕಗಳು. ಹೀಬ್ರು ಶಾಸ್ತ್ರಗಳು ಭೂಮಿಯ ಮತ್ತು ಮಾನವಕುಲದ ಆದಿ ಇತಿಹಾಸವನ್ನು ಹಾಗೂ ಪುರಾತನ ಇಸ್ರಾಯೇಲ್‌ ಜನಾಂಗದ ಪ್ರಾರಂಭದಿಂದ ಸಾ.ಶ.ಪೂ. ಐದನೆಯ ಶತಮಾನದ ವರೆಗಿನ ಅದರ ಇತಿಹಾಸವನ್ನೂ ಆವರಿಸುತ್ತವೆ.

ಉಳಿದ 27 ಪುಸ್ತಕಗಳು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳೆಂದು ಜ್ಞಾತವಾಗಿವೆ. ಏಕೆಂದರೆ ಅವನ್ನು ಆ ಸಮಯದ ಅಂತಾರಾಷ್ಟ್ರೀಯ ಭಾಷೆಯಾದ ಗ್ರೀಕ್‌ನಲ್ಲಿ ಬರೆಯಲಾಯಿತು. ಅವನ್ನು ಮೂಲತಃ ವಿಷಯಾನುಸಾರವಾಗಿ ಜೋಡಿಸಲಾಗಿದೆ: (1) 5 ಐತಿಹಾಸಿಕ ಪುಸ್ತಕಗಳು—ಸುವಾರ್ತೆಗಳು ಮತ್ತು ಅಪೊಸ್ತಲರ ಕೃತ್ಯಗಳು, (2) 21 ಪತ್ರಗಳು, ಮತ್ತು (3) ಪ್ರಕಟನೆ. ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು, ಸಾ.ಶ. ಒಂದನೆಯ ಶತಮಾನದಲ್ಲಿದ್ದ, ಯೇಸು ಕ್ರಿಸ್ತನ ಮತ್ತು ಅವನ ಶಿಷ್ಯರ ಬೋಧನೆಗಳ ಮತ್ತು ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತವೆ.