ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಓದಬೇಕಾಗಿರುವ ಒಂದು ಗ್ರಂಥ

ಓದಬೇಕಾಗಿರುವ ಒಂದು ಗ್ರಂಥ

ಓದಬೇಕಾಗಿರುವ ಒಂದು ಗ್ರಂಥ

“ಬೈಬಲನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು.” ವಿಶ್ವವಿದ್ಯಾನಿಲಯದ ಪ್ರೊಫೆಸರರೊಬ್ಬರು, ಮರೆಮಾಚದೆ ಸ್ಪಷ್ಟವಾಗಿ ಮಾತನಾಡುವ ಒಬ್ಬ ಯುವತಿಗೆ ಹಾಗೆಂದರು.

“ನೀವು ಎಂದಾದರೂ ಬೈಬಲನ್ನು ಓದಿದ್ದೀರೊ?” ಎಂದು ಆಕೆ ಕೇಳಿದಳು.

ಬೆಚ್ಚಿ ಬಿದ್ದ ಪ್ರೊಫೆಸರರಿಗೆ ತಾನು ಓದಿಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕಾಯಿತು.

“ನೀವೆಂದೂ ಓದಿರದ ಒಂದು ಗ್ರಂಥದ ಕುರಿತು ನೀವು ಹೇಗೆ ತಾನೆ ಒಂದು ಬಲವತ್ತಾದ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಬಲ್ಲಿರಿ?”

ಅವಳು ಹೇಳಿದುದರಲ್ಲಿ ಅರ್ಥವು ಅಡಕವಾಗಿತ್ತು. ಅವರು ಬೈಬಲನ್ನು ಓದಿ, ಆ ಬಳಿಕ ಅದರ ಕುರಿತಾದ ಅಭಿಪ್ರಾಯವನ್ನು ರೂಪಿಸಲು ನಿರ್ಣಯಿಸಿದರು.

ಅರುವತ್ತಾರು ಬರವಣಿಗೆಗಳಿಂದ ರಚಿತವಾಗಿರುವ ಬೈಬಲನ್ನು, “ಮಾನವ ಇತಿಹಾಸದಲ್ಲಿಯೇ ಪ್ರಾಯಶಃ ಅತಿ ಪ್ರಭಾವಕಾರಿ ಪುಸ್ತಕಗಳ ಸಂಗ್ರಹ” ಎಂದು ವರ್ಣಿಸಲಾಗಿದೆ.1 ಅದು ನಿಶ್ಚಯವಾಗಿಯೂ ಜಗತ್ತಿನ ಅತಿ ಮಹತ್ತಾದ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಕೆಲವನ್ನು ಪ್ರಭಾವಿಸಿದೆ. ನ್ಯಾಯಶಾಸ್ತ್ರದ ಮೇಲಿನ ಅದರ ಪ್ರಭಾವವು ಬಹಳ ಗಮನಾರ್ಹವಾಗಿತ್ತು. ಸಾಹಿತ್ಯಾತ್ಮಕ ಶೈಲಿಗಾಗಿ ಅದು ಹೊಗಳಲ್ಪಟ್ಟಿದೆ ಮತ್ತು ಅನೇಕ ಸುಶಿಕ್ಷಿತ ವ್ಯಕ್ತಿಗಳು ಅದನ್ನು ಅತಿ ಗೌರವದಿಂದ ಕಂಡಿದ್ದಾರೆ. ಸಮಾಜದ ಎಲ್ಲಾ ದರ್ಜೆಯ ಜನರ ಜೀವಿತಗಳ ಮೇಲಿನ ಅದರ ಪರಿಣಾಮವು ವಿಶೇಷವಾಗಿ ಅಗಾಧವಾದುದಾಗಿದೆ. ಅದು ತನ್ನ ಅನೇಕ ಓದುಗರಲ್ಲಿ ನಿಷ್ಠೆಯ ಗಮನಾರ್ಹವಾದ ಮಟ್ಟವನ್ನು ಪ್ರೇರಿಸಿದೆ. ಕೇವಲ ಅದನ್ನು ಓದಲಿಕ್ಕಾಗಿ ಕೆಲವರು ಮರಣಾಪಾಯವನ್ನೂ ಎದುರಿಸಿದ್ದಾರೆ.

ಅದೇ ಸಮಯದಲ್ಲಿ, ಬೈಬಲಿನ ಕುರಿತು ಸಂದೇಹವಾದವಿದೆ. ತಾವು ಸ್ವತಃ ಅದನ್ನು ಎಂದಿಗೂ ಓದಿಲ್ಲವಾದರೂ ಅದರ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯಗಳಿರುವ ಜನರಿದ್ದಾರೆ. ಅದರ ಸಾಹಿತ್ಯಾತ್ಮಕ ಅಥವಾ ಐತಿಹಾಸಿಕ ಮೌಲ್ಯವನ್ನು ಅವರು ಒಪ್ಪಬಹುದಾದರೂ ಅವರು ಈ ವಿಷಯದಲ್ಲಿ ಕುತೂಹಲಪಡುತ್ತಾರೆ: ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಟ್ಟ ಒಂದು ಗ್ರಂಥವು ಈ ಆಧುನಿಕ ಲೋಕದಲ್ಲಿ ಹೇಗೆ ಕಾರ್ಯೋಚಿತವಾಗಿರಬಲ್ಲದು? ನಾವು “ಮಾಹಿತಿಯ ಯುಗ”ದಲ್ಲಿ ಜೀವಿಸುತ್ತಿದ್ದೇವೆ. ಪ್ರಸ್ತುತ ಆಗುಹೋಗುಗಳ ಮತ್ತು ಯಂತ್ರಕಲಾ ಸಂಬಂಧದ ನಿಮಿಷನಿಮಿಷೋಚಿತ ಮಾಹಿತಿಯು ನಮಗೆ ತತ್‌ಕ್ಷಣವೇ ಲಭ್ಯವಿದೆ. ಆಧುನಿಕ ಜೀವನದ ಕಾರ್ಯತಃ ಸಕಲ ಪಂಥಾಹ್ವಾನಗಳ ಮೇಲೆ “ಪರಿಣತ” ಸಲಹೆಯು ನಮಗೆ ಸುಲಭವಾಗಿ ದೊರೆಯುತ್ತದೆ. ಬೈಬಲಿನಲ್ಲಿ, ಇಂದು ಪ್ರಾಯೋಗಿಕವಾಗಿರುವ ಮಾಹಿತಿಯು ನಿಜವಾಗಿಯೂ ಅಡಕವಾಗಿರಸಾಧ್ಯವೊ?

ಈ ಬ್ರೋಷರ್‌ ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತದೆ. ಧಾರ್ಮಿಕ ದೃಷ್ಟಿಕೋನಗಳು ಅಥವಾ ನಂಬಿಕೆಗಳನ್ನು ನಿಮ್ಮ ಮೇಲೆ ಹೊರಿಸುವುದಕ್ಕೋಸ್ಕರ ಇದು ವಿನ್ಯಾಸಿಸಲ್ಪಟ್ಟಿಲ್ಲ. ಬದಲಿಗೆ, ಐತಿಹಾಸಿಕವಾಗಿ ಪ್ರಭಾವ ಬೀರಿರುವ ಗ್ರಂಥವಾದ ಈ ಬೈಬಲು ನಿಮ್ಮ ಪರಿಗಣನೆಗೆ ಅರ್ಹವಾಗಿದೆಯೆಂದು ತೋರಿಸುವ ಉದ್ದೇಶವು ಇದರದ್ದಾಗಿದೆ. 1994ರಲ್ಲಿ ಪ್ರಕಟವಾದ ಒಂದು ವರದಿಯು ದಾಖಲಿಸಿದ್ದೇನೆಂದರೆ, ಬೈಬಲು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎಷ್ಟೊಂದು ಸ್ಥಿರವಾಗಿ ನಾಟಿಕೊಂಡಿದೆಯೆಂದರೆ, “ವಿಶ್ವಾಸಿಯೇ ಆಗಲಿ, ಅವಿಶ್ವಾಸಿಯೇ ಆಗಲಿ, ಅವನು ಬೈಬಲ್‌ ಬೋಧನೆಗಳ ಮತ್ತು ವೃತ್ತಾಂತಗಳ ವಿಷಯದಲ್ಲಿ ಪರಿಚಿತನಲ್ಲದಿದ್ದರೆ, ಸಾಂಸ್ಕೃತಿಕವಾಗಿ ಅನಕ್ಷರಸ್ಥನಾಗಿರುವನು,” ಎಂಬುದು ಕೆಲವು ಮಂದಿ ಶಿಕ್ಷಕರ ಬಲವಾದ ಅನಿಸಿಕೆಯಾಗಿದೆ.2

ಪ್ರಾಯಶಃ, ಇಲ್ಲಿ ಪ್ರಕಟವಾಗಿರುವ ವಿಷಯವನ್ನು ಓದಿದ ಬಳಿಕ ನೀವು, ಒಬ್ಬ ಧಾರ್ಮಿಕ ವ್ಯಕ್ತಿಯಾಗಿರಲಿ, ಇಲ್ಲದಿರಲಿ, ಬೈಬಲು, ಕನಿಷ್ಠ ಪಕ್ಷ, ಓದಬೇಕಾಗಿರುವ ಗ್ರಂಥವಾಗಿದೆಯೆಂಬುದನ್ನು ಒಪ್ಪುವಿರಿ.

[ಪುಟ 3 ರಲ್ಲಿರುವ ಚಿತ್ರ/ಚೌಕ]

“ನನ್ನ ಜ್ಞಾನೋದಯಕ್ಕಾಗಿ ನಾನು ನಿಜವಾಗಿಯೂ ಒಂದು ಗ್ರಂಥ ವಾಚನಕ್ಕೆ ಋಣಿಯಾಗಿದ್ದೇನೆ.—ಒಂದು ಗ್ರಂಥವೊ? ಹೌದು, ಅದೊಂದು ಹಳೆಯ, ಸರಳ ಗ್ರಂಥ, ಪ್ರಕೃತಿಯಷ್ಟೆ ನಿರಭಿಮಾನದ, ಅಷ್ಟೇ ಪ್ರಾಕೃತಿಕವಾದ ಗ್ರಂಥ . . . ಮತ್ತು ಈ ಗ್ರಂಥದ ಹೆಸರು ತೀರ ಸರಳವಾಗಿ, ಗ್ರಂಥವಾದ ಬೈಬಲು ಎಂದಾಗಿದೆ.”—ಹೈನ್ರಿಕ್‌ ಹೈನ್‌, 19ನೆಯ ಶತಮಾನದ ಜರ್ಮನ್‌ ಲೇಖಕ.3