ಅವರು ಏನನ್ನು ನಂಬುತ್ತಾರೆ?
ಅವರು ಏನನ್ನು ನಂಬುತ್ತಾರೆ?
ಯೆಹೋವನ ಸಾಕ್ಷಿಗಳು ಭೂಮ್ಯಾಕಾಶಗಳ ನಿರ್ಮಾಣಿಕನೂ, ಸರ್ವಶಕ್ತ ದೇವರೂ ಆದ ಯೆಹೋವನನ್ನು ನಂಬುತ್ತಾರೆ. ನಮ್ಮನ್ನಾವರಿಸಿರುವ ವಿಶ್ವದಲ್ಲಿರುವ ಜಟಿಲವಾಗಿ ರೂಪಿಸಲ್ಪಟ್ಟಿರುವ ಸೋಜಿಗಗಳ ಅಸ್ತಿತ್ವವು ತಾನೇ ಒಬ್ಬ ಶ್ರೇಷ್ಠ ವಿವೇಕಿಯೂ, ಬಲಾಢ್ಯನೂ ಆದ ನಿರ್ಮಾಣಿಕನು ಅವೆಲ್ಲವುಗಳನ್ನು ಉತ್ಪಾದಿಸಿದ್ದಾನೆ ಎಂದು ಸಮಂಜಸವಾಗಿ ವಾದಿಸುತ್ತವೆ. ಪುರುಷರ ಮತ್ತು ಸ್ತ್ರೀಯರ ಕಾರ್ಯಗಳು ಅವರ ಗುಣಗಳನ್ನು ಪ್ರತಿಬಿಂಬಿಸುತ್ತಿರುವಂತೆಯೇ, ಯೆಹೋವ ದೇವರದ್ದು ಸಹ ಪ್ರತಿಬಿಂಬಿತವಾಗುತ್ತದೆ. “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ” ಎಂದು ಬೈಬಲು ನಮಗೆ ಹೇಳುತ್ತದೆ. ಯಾವುದೇ ಶಬ್ದ ಯಾ ಮಾತುಗಳಿಲ್ಲದೇ ಸಹ, “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ.”—ರೋಮಾಪುರ 1:20; ಕೀರ್ತನೆ 19:1-4.
ಒಂದು ಉದ್ದೇಶವಿಲ್ಲದೇ ಜನರು ಆವೆಮಣ್ಣಿನ ಮಡಿಕೆಗಳನ್ನು ರೂಪಿಸುವದಿಲ್ಲ ಯಾ ಟೆಲಿವಿಷನ್ ಸೆಟ್ಟುಗಳನ್ನು ಯಾ ಕಂಪ್ಯೂಟರುಗಳನ್ನು ಮಾಡುವುದಿಲ್ಲ. ಭೂಮಿಯೂ, ಅದರ ಸಸ್ಯ ಮತ್ತು ಪ್ರಾಣಿ ಜೀವಗಳ ಸೃಷ್ಟಿಗಳು ಅದೆಷ್ಟೋ ಹೆಚ್ಚು ಅದ್ಭುತಕರವಾಗಿವೆ. ಲಕ್ಷೋಪಲಕ್ಷ ಕಣಗಳೊಂದಿಗೆ ಮಾನವ ಶರೀರದ ರಚನೆಯು ನಮ್ಮ ತಿಳಿವಳಿಕೆಗೆ ಮೀರಿರುತ್ತದೆ—ನಾವು ಯೋಚಿಸುವ ಮಿದುಳು ಕೂಡ ತಿಳಿದುಕೊಳ್ಳಲಾಗದಷ್ಟು ಆಶ್ಚರ್ಯಕರದ್ದಾಗಿದೆ! ತುಲನಾತ್ಮಕವಾಗಿ ತಮ್ಮ ಅಲ್ಪವಾದ ಅನ್ವೇಷಣೆಗಳನ್ನು ಮುಂತರುವುದರಲ್ಲಿ ಮಾನವರಿಗೆ ಒಂದು ಉದ್ದೇಶವಿರುವುದಾದರೆ, ತನ್ನ ಬೆರಗುಗೊಳಿಸುವ ಸೃಷ್ಟಿಗಳನ್ನು ತರುವುದರಲ್ಲಿ ಯೆಹೋವ ದೇವರಿಗೆ ಖಂಡಿತವಾಗಿಯೂ ಒಂದು ಉದ್ದೇಶವಿದಿರ್ದಲೇ ಬೇಕು! ಅವನಿಗೆ ಉದ್ದೇಶವಿದೆ ಎಂದು ಜ್ಞಾನೋಕ್ತಿ 16:4 ಹೇಳುತ್ತದೆ: “ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ.”
ಮೊದಲನೆಯ ಮಾನವ ಜೋಡಿಗೆ ಅವನು ತಿಳಿಸಿದಂತೆ, ಒಂದು ಉದ್ದೇಶಕ್ಕಾಗಿ ಯೆಹೋವ ದೇವರು ಭೂಮಿಯನ್ನು ಉಂಟುಮಾಡಿದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; . . . ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಅವರು ಅವಿಧೇಯರಾದುದರಿಂದ, ಈ ಜೋಡಿಯು ಭೂಮಿಯನ್ನು ಮತ್ತು ಅದರ ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ಪ್ರೀತಿಯುಕ್ತವಾಗಿ ಪರಾಮರಿಸುವ ನೀತಿಯ ಕುಟುಂಬಗಳೊಂದಿಗೆ ಭೂಮಿಯನ್ನು ತುಂಬಿಸಲು ತಪ್ಪಿಹೋಯಿತು. ಆದರೆ ಅವರ ತಪ್ಪಿಹೋಗುವಿಕೆಯು ಯೆಹೋವನ ಉದ್ದೇಶವನ್ನು ಪರಾಜಯಗೊಳಿಸುವುದಿಲ್ಲ. ಸಾವಿರಾರು ವರ್ಷಗಳ ಅನಂತರ ಹೀಗೆ ಬರೆಯಲ್ಪಟ್ಟಿತ್ತು: “ದೇವರು, ಭೂಲೋಕದ ರಚಕನು . . . ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸಲಿಲ್ಲ.” ಅವನು ಅದನ್ನು “ಜನನಿವಾಸಕ್ಕಾಗಿಯೇ ರೂಪಿಸಿದನು.” ಅದನ್ನು ನಾಶಮಾಡಲಿಕ್ಕಲ್ಲ, ಬದಲಾಗಿ “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.” (ಯೆಶಾಯ 45:18, NW; ಪ್ರಸಂಗಿ 1:4, ದ ನ್ಯೂ ಇಂಗ್ಲಿಷ್ ಬೈಬಲ್) ಭೂಮಿಯ ಕಡೆಗಿನ ಯೆಹೋವನ ಉದ್ದೇಶಗಳು ನೆರವೇರಲ್ಪಡುವುವು: “ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.”—ಯೆಶಾಯ 46:10.
ಆದಕಾರಣ, ಭೂಮಿಯು ಸದಾಕಾಲ ಉಳಿಯುವುದೆಂದೂ, ಮತ್ತು ಸುಂದರಗೊಳಿಸಲ್ಪಟ್ಟ, ನಿವಾಸಿಸಲ್ಪಟ್ಟ ಭೂಮಿಗಾಗಿರುವ ಯೆಹೋವನ ಉದ್ದೇಶದೊಂದಿಗೆ ಯಾರು ಹೊಂದಿಕೆಯಾಗುವರೋ ಆ ಎಲ್ಲಾ ವ್ಯಕ್ತಿಗಳು—ಜೀವಿತರು ಮತ್ತು ಮೃತರು—ಅದರ ಮೇಲೆ ಸದಾಕಾಲ ವಾಸಿಸಬಹುದೆಂದೂ ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದಾಮ, ಹವ್ವರಿಂದ ಎಲ್ಲಾ ಮಾನವಕುಲವು ಬಾಧ್ಯತೆಯಾಗಿ ಅಪರಿಪೂರ್ಣತೆಯನ್ನು ಪಡೆಯಿತು ಮತ್ತು, ಹೀಗೆ ಅವರು ಪಾಪಿಗಳಾಗಿದ್ದಾರೆ. (ರೋಮಾಪುರ 5:12) ಬೈಬಲು ನಮಗೆ ಹೇಳುವುದು: “ಪಾಪವು ಕೊಡುವ ಸಂಬಳ ಮರಣ.” “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” “ಪಾಪಮಾಡುವ ಪ್ರಾಣಿಯೇ ಸಾಯುವನು.” (ರೋಮಾಪುರ 6:23; ಪ್ರಸಂಗಿ 9:5; ಯೆಹೆಜ್ಕೇಲ 18:4, 20) ಹಾಗಾದರೆ ಐಹಿಕ ಆಶೀರ್ವಾದಗಳಲ್ಲಿ ಪಾಲಿಗರಾಗಲು ಅವರು ಪುನಃ ಹೇಗೆ ಜೀವಿಸಬಲ್ಲರು? ಕ್ರಿಸ್ತ ಯೇಸುವಿನ ವಿಮೋಚನಾ ಯಜ್ಞದ ಮೂಲಕ ಮಾತ್ರವೇ, ಯಾಕಂದರೆ ಅವನಂದದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ”ರು.—ಯೋಹಾನ 11:25; 5:28, 29; ಮತ್ತಾಯ 20:28.
ಇದು ಹೇಗೆ ಬರಲಿರುವುದು? ಭೂಮಿಯಲ್ಲಿರುವಾಗ ಯೇಸುವು ಘೋಷಿಸಲು ಆರಂಭಿಸಿದ “ರಾಜ್ಯದ ಸುವಾರ್ತೆ” ಯಲ್ಲಿ ಅದು ವಿವರಿಸಲ್ಪಟ್ಟಿದೆ. (ಮತ್ತಾಯ 4:17-23) ಆದರೆ ಇಂದು ಯೆಹೋವನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಒಂದು ಅತಿ ವಿಶೇಷ ರೀತಿಯಲ್ಲಿ ಸಾರುತ್ತಿದ್ದಾರೆ.
[ಪುಟ 24 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ನಂಬುವ ವಿಷಯಗಳು
ನಂಬಿಕೆ ಶಾಸ್ತ್ರೀಯ ಸಮರ್ಥನೆ
ಬೈಬಲು ದೇವರ ವಾಕ್ಯ 2 ತಿಮೊ. 3:16, 17;
ಮತ್ತು ಸತ್ಯವಾಗಿದೆ 2 ಪೇತ್ರ 1:20, 21; ಯೋಹಾ. 17:17
ಸಂಪ್ರದಾಯಕ್ಕಿಂತ ಬೈಬಲು ಮತ್ತಾ. 15:3;
ಹೆಚ್ಚು ವಿಶ್ವಾಸಾರ್ಹವಾಗಿದೆ ಕೊಲೊ. 2:8
ದೇವರ ಹೆಸರು ಕೀರ್ತ. 83:18; ಯೆಶಾ. 26:4; 42:8, AS;
ಯೆಹೋವ ಆಗಿದೆ ವಿಮೋ. 6:3
ಕ್ರಿಸ್ತನು ದೇವರ ಮಗನಾಗಿದ್ದಾನೆ ಮತ್ತಾ. 3:17; ಯೋಹಾ. 8:42;
ಮತ್ತು ಅವನಿಗಿಂತ 14:28; 20:17;
ಕೆಳಮಟ್ಟದಲ್ಲಿದ್ದಾನೆ 1 ಕೊರಿಂ. 11:3; 15:28
ದೇವರ ಸೃಷ್ಟಿಗಳಲ್ಲಿ ಕೊಲೊ. 1:15;
ಕ್ರಿಸ್ತನು ಪ್ರಥಮನಾಗಿದ್ದನು ಪ್ರಕ. 3:14
ಕ್ರಿಸ್ತನು ಒಂದು ಕಂಭದ ಗಲಾ. 3:13;
ಮೇಲೆ ಸತ್ತನು, ಅ. ಕೃತ್ಯಗಳು 5:30
ಕ್ರೂಜೆಯೊಂದರ ಮೇಲಲ್ಲ
ವಿಧೇಯ ಮಾನವರಿಗೆ ಮತ್ತಾ. 20:28;
ವಿಮೋಚನೆಯಾಗಿ ಕ್ರಿಸ್ತನ 1 ತಿಮೊ. 2:5, 6; ತೀತ 2:14;
ಮಾನವ ದೇಹವು ನೀಡಲ್ಪಟ್ಟಿತು 1 ಪೇತ್ರ 2:24
ಕ್ರಿಸ್ತನ ಒಂದು ರೋಮಾ. 6:10;
ಯಜ್ಞವು ಸಾಕಾಗಿತ್ತು ಇಬ್ರಿ. 9:25-28
ಒಬ್ಬ ಅಮರ ಆತ್ಮ 1 ಪೇತ್ರ 3:18;
ವ್ಯಕ್ತಿಯಾಗಿ ಕ್ರಿಸ್ತನು ರೋಮಾ. 6:9;
ಸತ್ತವರಿಂದ ಎಬ್ಬಿಸಲ್ಪಟನ್ಟು ಪ್ರಕ. 1:17, 18
ಕ್ರಿಸ್ತನ ಸಾನ್ನಿಧ್ಯವು ಯೋಹಾ. 14:19; ಮತ್ತಾ. 24:3;
ಆತ್ಮದಲ್ಲಾಗಿದೆ 2 ಕೊರಿಂ. 5:16; ಕೀರ್ತ. 110:1, 2
ಕ್ರಿಸ್ತನ ಅಡಿಯಲ್ಲಿರುವ ಯೆಶಾ. 9:6, 7; 11:1-5;
ರಾಜ್ಯವು ನೀತಿ ಮತ್ತು ದಾನಿ. 7:13, 14;
ಶಾಂತಿಯಿಂದ ಭೂಮಿಯನ್ನು ಮತ್ತಾ. 6:10
ಆಳುವುದು
ರಾಜ್ಯವು ಭೂಮಿಯ ಕೀರ್ತ. 72:1-4;
ಮೇಲೆ ಆದರ್ಶಪ್ರಾಯ ಪ್ರಕ. 7:9, 10,
ಜೀವಿತದ ಪರಿಸ್ಥಿತಿಗಳನ್ನು 13-17;
ತರುವುದು 21:3, 4
ಭೂಮಿಯು ಎಂದಿಗೂ ನಾಶಮಾಡಲ್ಪಡುವುದಿಲ್ಲ ಪ್ರಸಂ. 1:4; ಯೆಶಾ. 45:18;
ಯಾ ಜನಶೂನ್ಯವಾಗುವುದಿಲ್ಲ ಕೀರ್ತ. 78:69
ದೇವರು ಅರ್ಮಗೆದೋನ್ ಪ್ರಕ. 16:14, 16;
ಯುದ್ಧದಲ್ಲಿ ಸದ್ಯದ ಚೆಫ. 3:8;
ವಿಷಯಗಳ ವ್ಯವಸ್ಥೆಯನ್ನು ದಾನಿ. 2:44;
ನಾಶಮಾಡುವನು ಯೆಶಾ. 34:2
ದುಷ್ಟರು ನಿತ್ಯಕ್ಕೂ ಮತ್ತಾ. 25:41-46;
ನಾಶಮಾಡಲ್ಪಡುವರು 2 ಥೆಸ. 1:6-9
ದೇವರು ಮೆಚ್ಚುವ ಯೋಹಾ. 3:16; 10:27, 28; 17:3;
ಜನರು ನಿತ್ಯ ಜೀವವನ್ನು ಪಡೆಯುವರು ಮಾರ್ಕ 10:29, 30
ಜೀವಕ್ಕೆ ಕೇವಲ ಒಂದೇ ಒಂದು ಮತ್ತಾ. 7:13, 14;
ಮಾರ್ಗ ಇದೆ ಎಫೆ. 4:4, 5.
ನಾವು ಈಗ ‘ಅಂತ್ಯದ ಮತ್ತಾ. 24:3-14; 2 ತಿಮೊ. 3:1-5;
ಸಮಯ’ ದಲ್ಲಿದ್ದೇವೆ ಲೂಕ 17:26-30
ಮಾನವ ಮರಣವು ರೋಮಾ. 5:12; 6:23
ಆದಾಮನ ಪಾಪದಿಂದಾಗಿದೆ
ಮರಣದಲ್ಲಿ ಮಾನವಾತ್ಮವು ಯೆಹೆ. 18:4; ಪ್ರಸಂ. 9:10;
ಅಸ್ತಿತ್ವವನ್ನು ಕೊನೆಗಾಣಿಸುತ್ತದೆ ಕೀರ್ತ. 6:5; 146:4; ಯೋಹಾ. 11:11-14
ನರಕವು ಮಾನವ ಯೋಬ 14:13, Dy;
ಕುಲದ ಸಾಮಾನ್ಯ ಸಮಾಧಿಯಾಗಿದೆ ಪ್ರಕ. 20:13, 14, AV (ಪಕ್ಕಟಿಪ್ಪಣಿ)
ಮೃತರಿಗೆ ನಿರೀಕ್ಷೆ 1 ಕೊರಿಂ. 15:20-22;
ಪುನರುತ್ಥಾನವಾಗಿದೆ ಯೋಹಾ. 5:28, 29; 11: 25, 26
ಆದಾಮನಿಂದಾದ ಮರಣವು 1 ಕೊರಿಂ. 15:26; ಪ್ರಕ. 21:4;
ಇಲ್ಲವಾಗುವುದು ಯೆಶಾ. 25:8; 1 ಕೊರಿಂ. 15:54
ಕೇವಲ 1,44,000 ಮಂದಿಗಳ ಲೂಕ 12:32; ಪ್ರಕ. 14:1, 3;
ಒಂದು ಚಿಕ್ಕ ಹಿಂಡು ಪರಲೋಕಕ್ಕೆ 1 ಕೊರಿಂ. 15:40-53;
ಹೋಗುವುದು ಮತ್ತು ಪ್ರಕ. 5:9, 10
ಕ್ರಿಸ್ತನೊಂದಿಗೆ ಆಳಲಿರುವುದು
ದೇವರ ಆತ್ಮಿಕ ಪುತ್ರರಾಗಿ 1,44,000 1 ಪೇತ್ರ 1:23; ಯೋಹಾ. 3:3;
ಮಂದಿಗಳು ಪುನಃ ಹುಟ್ಟುವರು ಪ್ರಕ. 7:3, 4
ಆತ್ಮಿಕ ಇಸ್ರಾಯೇಲಿನೊಂದಿಗೆ ಯೆರೆ. 31:31; ಇಬ್ರಿ. 8:10-13
ಹೊಸ ಒಡಂಬಡಿಕೆಯು ಮಾಡಲ್ಪಟ್ಟಿದೆ
ಕ್ರಿಸ್ತನ ಸಭೆಯು ಆತನ ಎಫೆ. 2:20; ಯೆಶಾ. 28:16;
ಮೇಲೆಯೇ ಕಟ್ಚಲ್ಪಟ್ಟಿದೆ ಮತ್ತಾ. 21:42
ಪ್ರಾರ್ಥನೆಗಳು ಯೆಹೋವನೊಬ್ಬನಿಗೆ ಯೋಹಾ. 14:6, 13, 14;
ಮಾತ್ರ ಕ್ರಿಸ್ತನ ಮೂಲಕ ನಿರ್ದೇಶಿಸಲ್ಪಡಬೇಕು 1 ತಿಮೊ. 2:5
ವಿಗ್ರಹಗಳನ್ನು ಆರಾಧನೆಯಲ್ಲಿ ವಿಮೋ. 20:4, 5; ಯಾಜ. 26:1;
ಉಪಯೋಗಿಸಕೂಡದು 1 ಕೊರಿಂ. 10:14; ಕೀರ್ತ. 115:4-8
ಪ್ರೇತವ್ಯವಹಾರವನ್ನು ಧರ್ಮೋ. 18:10-12; ಗಲಾ. 5:19-21;
ತ್ಯಜಿಸತಕ್ಕದ್ದು ಯಾಜ. 19:31
ಸೈತಾನನು ಲೋಕದ 1 ಯೋಹಾ. 5:19; 2 ಕೊರಿಂ. 4:4;
ಅದೃಶ್ಯ ಅಧಿಪತಿಯಾಗಿದ್ದಾನೆ ಯೋಹಾ. 12:31
ಮಧ್ಯನಂಬಿಕೆಯ ಚಳುವಳಿಯಲ್ಲಿ 2 ಕೊರಿಂ. 6:14-17; 11:13-15;
ಕ್ರೈಸ್ತನಿಗೆ ಯಾವುದೇ ಪಾಲು ಇರಕೂಡದು ಗಲಾ. 5:9; ಧರ್ಮೋ. 7:1-5
ಕ್ರೈಸ್ತನು ಲೋಕದಿಂದ ಯಾಕೋ. 4:4; 1 ಯೋಹಾ. 2:15;
ತನ್ನನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕು ಯೋಹಾ. 15:19; 17:16
ದೇವರ ನಿಯಮಗಳೊಂದಿಗೆ ಮತ್ತಾ. 22:20, 21;
ಸಂಘರ್ಷಣೆಯಾಗದ ಎಲ್ಲಾ 1 ಪೇತ್ರ 2:12; 4:15
ಮಾನವ ನಿಯಮಗಳಿಗೆ ವಿಧೇಯರಾಗತಕ್ಕದ್ದು
ಬಾಯಿಯ ಮೂಲಕ ಯಾ ನರಗಳ ಮೂಲಕ ಆದಿ. 9:3, 4; ಯಾಜ. 17:14;
ರಕ್ತವನ್ನು ದೇಹದೊಳಗೆ ಅ. ಕೃತ್ಯಗಳು 15:28, 29
ತೆಗೆದುಕೊಳ್ಳುವುದು ದೇವರ ನಿಯಮಗಳ ಉಲ್ಲಂಘನೆಯಾಗಿದೆ
ನೈತಿಕತೆಯ ಮೇಲಿನ ಬೈಬಲಿನ 1 ಕೊರಿಂ. 6:9, 10; ಇಬ್ರಿ. 13:4;
ನಿಯಮಗಳಿಗೆ ವಿಧೇಯರಾಗತಕ್ಕದ್ದು. 1 ತಿಮೊ. 3:2; ಜ್ಞಾನೋ. 5:1-23
ಸಬ್ಬತ್ ಆಚರಣೆಯು ಯೆಹೂದ್ಯರಿಗೆ ಧರ್ಮೋ. 5:15; ವಿಮೋ. 31:13;
ಮಾತ್ರವೇ ಕೊಡಲ್ಪಟ್ಟಿತ್ತು ಮತ್ತು ರೋಮಾ. 10:4; ಗಲಾ. 4:9, 10;
ಮೋಶೆಯ ನಿಯಮದೊಂದಿಗೆ ಕೊನೆಗೊಂಡಿತು ಕೊಲೊ. 2:16, 17
ಒಂದು ವೈದಿಕ ವರ್ಗ ಮತ್ತು ವಿಶೇಷ ಮತ್ತಾ. 23:8-12; 20:25-27;
ಬಿರುದುಗಳು ಅಯೋಗ್ಯವಾಗಿವೆ ಯೋಬ 32:21, 22
ಮನುಷ್ಯನು ವಿಕಾಸದಿಂದ ಬರಲಿಲ್ಲ, ಯೆಶಾ. 45:12; ಆದಿ. 1:27
ಬದಲಾಗಿ ಸೃಷ್ಟಿಸಲ್ಪಟ್ಟನು
ದೇವರನ್ನು ಸೇವಿಸುವುದರಲ್ಲಿ 1 ಪೇತ್ರ 2:21; ಇಬ್ರಿ. 10:7;
ಅನುಸರಿಸಲೇಬೇಕಾದ ಒಂದು ಯೋಹಾ. 4:34; 6:38
ಮಾದರಿಯನ್ನು ಕ್ರಿಸ್ತನು ಇಟ್ಟನು
ಪೂರ್ಣ ಮುಳುಗಿಸುವಿಕೆಯಿಂದ ಆಗುವ ಮಾರ್ಕ 1:9, 10; ಯೋಹಾ. 3:23;
ದೀಕ್ಷಾಸ್ನಾನವು ಸಮರ್ಪಣೆಯನ್ನು ಅ. ಕೃತ್ಯಗಳು 19:4, 5
ಸಂಕೇತಿಸುತ್ತದೆ
ಶಾಸ್ತ್ರೀಯ ಸತ್ಯಕ್ಕೆ ಬಹಿರಂಗ ರೋಮಾ. 10:10; ಇಬ್ರಿ. 13:15;
ಸಾಕ್ಷ್ಯವನ್ನು ಕ್ರೈಸ್ತರು ಕೊಡತಕ್ಕದ್ದು ಯೆಶಾ. 43:10-12
[ಪುಟ 23 ರಲ್ಲಿರುವ ಚಿತ್ರ]
ಭೂಮಿಯು . . . ಯೆಹೋವನಿಂದ ಸೃಷ್ಟಿಸಲ್ಪಟ್ಟಿದ್ದು . . . ಮನುಷ್ಯರಿಂದ ಪರಾಮರಿಸಲ್ಪಟ್ಟು . . . ಸದಾಕಾಲಕ್ಕೂ ವಾಸಿಸಲ್ಪಡುವುದು
[Credit Line]
NASA photo