ಅವರ ಆಧುನಿಕ ವಿಕಸನ ಮತ್ತು ಬೆಳವಣಿಗೆ
ಅವರ ಆಧುನಿಕ ವಿಕಸನ ಮತ್ತು ಬೆಳವಣಿಗೆ
ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವು ಒಂದು ನೂರು ವರುಷಗಳಿಗಿಂತ ಸ್ವಲ್ಪ ಹೆಚ್ಚು ಸಮಯದ ಹಿಂದೆ ರೂಪಗೊಂಡಿತು. ಅಮೆರಿಕದ ಪೆನ್ಸಿಲ್ವೇನಿಯದ, ಈಗ ಪಿಟ್ಸ್‌ಬರ್ಗ್‌ನ ಒಂದು ಭಾಗವಾಗಿರುವ ಆ್ಯಲಿಗೆನಿ ಶಹರದಲ್ಲಿ, 1870ರ ದಶಕಗಳ ಆದಿಭಾಗದಲ್ಲಿ, ಗಮನ ಸೆಳೆಯದ ಬೈಬಲ್ ಅಧ್ಯಯನ ಗುಂಪೊಂದು ಆರಂಭಗೊಂಡಿತು. ಚಾರ್ಲ್ಸ್ ಟೇಜ್ ರಸ್ಸೆಲ್ ಆ ಗುಂಪಿನ ಆದ್ಯ ಪ್ರವರ್ತಕರಾಗಿದ್ದರು. ಜುಲೈ 1879 ರಲ್ಲಿ, ಜೈಅನ್ಸ್ ವಾಚ್ ಟವರ್ ಆ್ಯಂಡ್ ಹೆರಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಪತ್ರಿಕೆಯ ಮೊದಲ ಸಂಚಿಕೆಯು ಆರಂಭಗೊಂಡಿತು. ಆ ಚಿಕ್ಕ ಬೈಬಲ್ ಅಧ್ಯಯನದಿಂದ 1880 ರೊಳಗೆ ಹತ್ತಿರದ ಪ್ರಾಂತ್ಯದಲ್ಲಿ ಹಲವು ಸಭೆಗಳು ವಿಸ್ತರಿಸಿಕೊಂಡವು. ಜೈಅನ್ಸ್ ವಾಚ್ ಟವರ್ ಟ್ರ್ಯಾಕ್ಟ್ ಸೊಸೈಟಿಯು 1881 ರಲ್ಲಿ ರಚಿಸಲ್ಪಟ್ಟಿತ್ತು, ಮತ್ತು 1884 ರಲ್ಲಿ ರಸ್ಸೆಲ್ ಅದರ ಅಧ್ಯಕ್ಷರಾಗಿ ಅದು ಸಂಘಟಿತಗೊಂಡಿತು. ಅನಂತರ ಸೊಸೈಟಿಯ ಹೆಸರನ್ನು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯೆಂದು ಬದಲಾಯಿಸಲಾಯಿತು. ಅನೇಕರು ಬೈಬಲ್ ಸಾಹಿತ್ಯಗಳನ್ನು ವಿತರಿಸುತ್ತಾ, ಮನೆಯಿಂದ ಮನೆಗೆ ಸಾಕ್ಷಿಯನ್ನೀಯುತ್ತಿದ್ದರು. ಇದನ್ನು 1888 ರಲ್ಲಿ ಐವತ್ತು ಮಂದಿ ಪೂರ್ಣ ಸಮಯ ಮಾಡುತ್ತಿದ್ದರು—ಈಗ ಲೋಕವ್ಯಾಪಕವಾಗಿ ಸರಾಸರಿ ಸಂಖ್ಯೆಯು 6,20,000 ವನ್ನು ಮೀರಿರುತ್ತದೆ.
ಕಾರ್ಯವು 1909 ರೊಳಗೆ ಅಂತಾರಾಷ್ಟ್ರೀಯವಾಯಿತು, ಮತ್ತು ಸೊಸೈಟಿಯ ಕೇಂದ್ರಾಲಯವು ಅದರ ಇಂದಿನ ಸ್ಥಳವಾದ ಬ್ರೂಕ್ಲಿನ್, ನ್ಯೂ ಯಾರ್ಕ್‌ಗೆ ಸ್ಥಾನಾಂತರಗೊಂಡಿತು. ವಾರ್ತಾಪತ್ರಗಳಲ್ಲಿ ಮುದ್ರಿತ ಪ್ರಸಂಗಗಳು ಏರ್ಪಡಿಸಲ್ಪಟ್ಟವು, ಮತ್ತು 1913 ರೊಳಗೆ ಇವುಗಳು ಅಮೆರಿಕ, ಕೆನಡ, ಮತ್ತು ಯೂರೋಪಿನಲ್ಲಿನ 3,000 ವಾರ್ತಾಪತ್ರಗಳಲ್ಲಿ ನಾಲ್ಕು ಭಾಷೆಗಳಲ್ಲಿ ಪ್ರಸರಿಸಲ್ಪಟ್ಟವು. ನೂರಾರು ಲಕ್ಷಗಟ್ಟಲೆಯಲ್ಲಿ ಪುಸ್ತಕಗಳು, ಪುಸ್ತಿಕೆಗಳು, ಮತ್ತು ಕಿರುಹೊತ್ತಗೆಗಳು ಹಂಚಲ್ಪಟ್ಟವು.
ಫೋಟೊ ಡ್ರಾಮ ಆಫ್ ಕ್ರಿಯೇಶನ್‌ನ ಕಾರ್ಯವು 1912 ರಲ್ಲಿ ಆರಂಭಗೊಂಡಿತು. ಚಿತ್ರಫಲಕ [ಸ್ಲೈಡ್ಸ್] ಮತ್ತು ಧ್ವನಿಸಹಿತವಾದ ಚಲನ ಚಿತ್ರಗಳ ಮೂಲಕ ಅದು, ಭೂಮಿಯ ಸೃಷ್ಟಿಯಿಂದ ಹಿಡಿದು ಕ್ರಿಸ್ತನ ಸಾವಿರ ವರುಷಗಳ ಆಳಿಕ್ವೆಯ ಅಂತ್ಯದ ತನಕ ವಿಷಯವನ್ನು ಆವರಿಸಿತು. ಪ್ರದರ್ಶನಗಳು 1914 ರಲ್ಲಿ ಪ್ರತಿದಿನ 35,000 ಅದನ್ನು ನೋಡುವುದರೊಂದಿಗೆ ಆರಂಭಗೊಂಡವು. ಧ್ವನಿಸಹಿತವಾದ ಚಲನಚಿತ್ರಗಳಲ್ಲಿ ಅದೊಂದು ಆದಿ ಪರಿಶೋಧಕವಾಗಿತ್ತು.
1914 ನೇ ವರ್ಷ
ಒಂದು ನಿರ್ಣಾಯಕ ಸಮಯವು ಸಮೀಪಿಸುತ್ತಾ ಇತ್ತು. ಬೈಬಲ್ ವಿದ್ಯಾರ್ಥಿಯಾಗಿದ್ದ ಚಾರ್ಲ್ಸ್ ಟೇಜ್ ರಸ್ಸೆಲ್ 1876 ರಲ್ಲಿ “ಅನ್ಯಜನಾಂಗಗಳ ಸಮಯಗಳು: ಅವುಗಳು ಎಂದು ಕೊನೆಗೊಳ್ಳುವವು?” ಎಂಬ ಒಂದು ಲೇಖನವನ್ನು ಬ್ರೂಕ್ಲಿನ್, ನ್ಯೂ ಯಾರ್ಕ್‌ನಲ್ಲಿ ಪ್ರಕಟವಾಗುತ್ತಿದ್ದ ಬೈಬಲ್ ಎಕ್ಸ್ಯಾಮಿನರ್‌ಗೆ ನೀಡಿದರು. ಅದರ ಅಕ್ಟೋಬರ ಸಂಚಿಕೆಯ 27 ನೆಯ ಪುಟದಲ್ಲಿ ಅದು ಅಂದದ್ದು: “ಏಳು ಸಮಯಗಳು ಕ್ರಿ.ಶ. 1914 ರಲ್ಲಿ ಕೊನೆಗೊಳ್ಳುವವು.” ಅನ್ಯಜನಾಂಗಗಳ ಸಮಯಗಳು ಯೇಸುವು “ಅನ್ಯದೇಶಗಳವರ ಸಮಯಗಳು” ಎಂದು ಸೂಚಿಸಿದ ಸಮಯಾವಧಿಯಾಗಿದೆ. (ಲೂಕ 21:24) ನಿರೀಕ್ಷಿಸಿದ್ದೆಲ್ಲವೂ 1914 ರಲ್ಲಿ ಸಂಭವಿಸಲಿಲ್ಲ, ಆದರೆ ಅನ್ಯಜನಾಂಗಗಳ ಸಮಯಗಳ ಅಂತ್ಯವನ್ನು ಅದು ಗುರುತಿಸಿತು ಮತ್ತು ಆ ವರುಷವು ಒಂದು ವಿಶೇಷ ವೈಶಿಷ್ಟ್ಯದ ವರ್ಷವಾಗಿತ್ತು. ಅನೇಕ ಇತಿಹಾಸಗಾರರು ಮತ್ತು ವಿಮರ್ಶಕರು ಒಪ್ಪುವುದೇನಂದರೆ 1914 ಮಾನವ ಇತಿಹಾಸದ ಒಂದು ತಿರುಗುಬಿಂದು ಆಗಿತ್ತು. ಈ ಕೆಳಗಿನ ಉದ್ಧರಣೆಗಳು ಅದನ್ನು ತೋರಿಸುತ್ತವೆ:
“ಇತಿಹಾಸದಲ್ಲಿ ಕೊನೆಯ ಸಂಪೂರ್ಣವಾದ ‘ಸಾಮಾನ್ಯ’ ವರುಷವು 1913 ಆಗಿತ್ತು, ಅದು I ನೆಯ ಲೋಕ ಯುದ್ಧವು ಆರಂಭಿಸಿದ ಮುಂಚಿನ ವರುಷವಾಗಿತ್ತು.”—ಟೈಮ್ಸ್-ಹೆರಲ್ಡ್, ವಾಷಿಂಗ್ಟನ್, ಡಿ.ಸಿ; ಮಾರ್ಚ್ 13, 1949ರ ಸಂಪಾದಕೀಯ.
“ಸಾವಿರದ ಒಂಭೈನೂರ ಹದಿನಾಲ್ಕರಿಂದ ಲೋಕದ ಪ್ರವೃತ್ತಿಗಳ ಕುರಿತು ಪ್ರಜ್ಞೆಯುಳ್ಳ ಪ್ರತಿಯೊಬ್ಬನು ಯಾವುದು ಇನ್ನಷ್ಟು ಮಹಾ ವಿಪತ್ತಿಗೆ ನಡಿಸುವ ಒಂದು ವಿಧಿನಿಯತವಾದ ಮತ್ತು ಮೊದಲೇ ನಿರ್ಣಯಮಾಡಲ್ಪಟ್ಟ ನಡಗೆಯಂತೆ ತೋರುತ್ತಿತ್ತೋ ಅದರಿಂದ ಆಳವಾಗಿ ತೊಂದರೆಗೀಡುಮಾಡಲ್ಪಟ್ಟಿದ್ದಾನೆ. ವಿನಾಶದೆಡೆಗಿನ ಧುಮುಕುವಿಕೆಯನ್ನು ತಡೆಯಲು ಏನನ್ನೂ ಮಾಡಸಾಧ್ಯವಿಲ್ಲವೆಂದು ವಿಚಾರಶೀಲ ಜನರು ಎಣಿಸುವಂತೆ ನಡಿಸಲ್ಪಟ್ಟಿದ್ದಾರೆ.”—ಬರ್ಟ್‌ರೆಂಡ್ ರಸ್ಸೆಲ್, ದಿ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಜೀನ್, ಸಪ್ಟಂಬರ 27, 1953.
“ಮೊದಲನೆಯ ಲೋಕ ಯುದ್ಧದಲ್ಲಿ ನಿಜವಾಗಿಯೂ ಇಡೀ ಲೋಕವೇ ಸಿಡಿಯಿತು ಮತ್ತು ಯಾಕೆ ಎಂದು ನಾವು ಇನ್ನೂ ತಿಳಿದಿಲ್ಲ. ಅಷ್ಟರತನಕ ಆದರ್ಶ ರಾಜ್ಯವು ದೃಗ್ಗೋಚರದಲ್ಲಿದೆ ಎಂದು ಜನರು ಎಣಿಸಿದರು. ಶಾಂತಿ ಮತ್ತು ಅಭ್ಯುದಯವು ಇಲ್ಲಿತ್ತು. ಅನಂತರ ಎಲ್ಲವೂ ಸ್ಫೋಟಿಸಿತು. ಅಂದಿನಿಂದ ನಾವು ನಿಶ್ಚೇಷ್ಟ ಸ್ಥಿತಿಯಲ್ಲಿರುವಂತೆ ಇದ್ದೇವೆ . . . ಇತಿಹಾಸದಲ್ಲೆಲ್ಲಕ್ಕಿಂತಲೂ ಅಧಿಕ ಜನರು ಈ ಶತಮಾನದಲ್ಲಿ ಕೊಲ್ಲಲ್ಪಟ್ಟರು.”—ಡಾ. ವಾಕರ್ ಪರ್ಸಿ, ಅಮೆರಿಕನ್ ಮೆಡಿಕಲ್ ನ್ಯೂಜ್, ನವಂಬರ 21, 1977.
ಸಾವಿರದ ಒಂಭೈನೂರ ಹದಿನಾಲ್ಕಕ್ಕೆ 50 ಕ್ಕಿಂತಲೂ ಅಧಿಕ ವರ್ಷಗಳ ಅನಂತರ, ಕಾನ್ರಡ್ ಎಡೆನರ್ ಬರೆದದ್ದು: “ಭದ್ರತೆ ಮತ್ತು ನೆಮ್ಮದಿಯು 1914 ರಿಂದ ಮಾನವರ ಜೀವಿತಗಳಿಂದ ಮಾಯವಾಗಿ ಹೋಗಿದೆ.”—ದಿ ವೆಸ್ಟ್ ಪಾರ್ಕರ್, ಕ್ಲೀವ್‌ಲೆಂಡ್, ಒಹೈಯೋ, ಜನವರಿ 20, 1966.
ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಸಿ. ಟಿ. ರಸ್ಸೆಲ್ 1916 ರಲ್ಲಿ ತೀರಿಹೋದರು, ಮತ್ತು ಮರು ವರ್ಷದಲ್ಲಿ ಜೋಸೆಫ್ ಎಫ್. ರಥರ್‌ಫರ್ಡ್ ಉತ್ತರಾಧಿಕಾರಿಯಾದರು. ಅನೇಕ ಬದಲಾವಣೆಗಳು ಜರುಗಿದವು. ದ ವಾಚ್‌ಟವರ್‌ಗೆ ದ ಗೋಲ್ಡನ್ ಏಜ್ ಎಂದು ಕರೆಯಲ್ಪಡುವ ಸಂಗಾತಿ ಪತ್ರಿಕೆಯು ಆರಂಭಿಸಲ್ಪಟ್ಟಿತ್ತು. (ಈಗ ಅದು ಅವೇಕ್! ಎಂದು ಕರೆಯಲ್ಪಟ್ಟು, 60 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ 12,00,000 ಕ್ಕಿಂತಲೂ ಹೆಚ್ಚಿನ ಯೆಶಾಯ 43:10-12ರ ಮೇಲೆ ಆಧಾರಿತವಾಗಿದೆ.
ಪ್ರಸರಣವಿದೆ.) ಬಾಗಲಿನಿಂದ-ಬಾಗಲಿಗೆ ಹೋಗಿ ಸಾಕ್ಷಿಯನ್ನೀಯುವುದಕ್ಕೆ ಹೆಚ್ಚಿನ ಒತ್ತರವು ದೊರಕಿತು. ಕ್ರೈಸ್ತ ಪ್ರಪಂಚದ ಪಂಗಡಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು, ಈ ಕ್ರೈಸ್ತರು 1931 ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಆದರದಿಂದ ಸ್ವೀಕರಿಸಿದರು. ಈ ಹೆಸರುರೇಡಿಯೊವನ್ನು 1920ರ ದಶಕದಲ್ಲಿ ಮತ್ತು 1930ರ ದಶಕದಲ್ಲಿ ವಿಸ್ತಾರವಾಗಿ ಬಳಸಲಾಯಿತು. ಸೊಸೈಟಿಯು 1933 ರೊಳಗೆ ಬೈಬಲ್ ಭಾಷಣಗಳನ್ನು ಬಿತ್ತರಿಸಲು 403 ರೇಡಿಯೊ ಸ್ಟೇಶನುಗಳನ್ನು ಉಪಯೋಗಿಸುತ್ತಿತ್ತು. ತದನಂತರ, ಸುಲಭವಾಗಿ ಸಾಗಿಸಲಾಗುವ ಫೊನೊಗ್ರಾಫ್‌ಗಳು ಮತ್ತು ಧ್ವನಿಸಂಗ್ರಹಿತ ಬೈಬಲ್ ಭಾಷಣಗಳಿದ್ದ ಸಾಕ್ಷಿಗಳಿಂದ ಮನೆ-ಮನೆಯ ಸಂದರ್ಶನಗಳಿಂದ ರೇಡಿಯೊವಿನ ಬಳಕೆಯು ಬಹುಮಟ್ಟಿಗೆ ಸ್ಥಾನಪಲ್ಲಟಗೊಂಡಿತು. ಎಲ್ಲಿ ಆಸಕ್ತಿ ಇತ್ತೋ ಅಲ್ಲಿ ಮನೆ ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟವು.
ಕೋರ್ಟ್ ವಿಜಯಗಳು
ಇಸವಿ 1930ರ ದಶಕದಲ್ಲಿ ಮತ್ತು 1940ರ ದಶಕದಲ್ಲಿ, ಈ ಕಾರ್ಯವನ್ನು ಮಾಡುತ್ತಿದ್ದುದ್ದಕ್ಕಾಗಿ ಸಾಕ್ಷಿಗಳಲ್ಲಿ ಅನೇಕರನ್ನು ದಸ್ತಗಿರಿಮಾಡಲಾಯಿತು ಮತ್ತು ವಾಕ್, ಪ್ರಕಟನ, ಸಭೆಸೇರುವ, ಮತ್ತು ಆರಾಧನೆಯ ಹಕ್ಕನ್ನು ಸಂರಕ್ಷಿಸುವ ಅಭಿರುಚಿಯಲ್ಲಿ ಕೋರ್ಟ್ ಮೊಕದ್ದಮೆಗಳು ಕಾದಾಡಲ್ಪಟ್ಟವು. ಅಮೆರಿಕದಲ್ಲಿ, ಕೆಳ ಕೋರ್ಟುಗಳ ಅಪ್ಪೀಲ್‌ಗಳ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಯೆಹೋವನ ಸಾಕ್ಷಿಗಳ 43 ಮೊಕದ್ದಮೆಗಳು ವಿಜಯದ ಫಲಿತಾಂಶವನ್ನು ತಂದವು. ತದ್ರೀತಿಯಲ್ಲಿ, ಇತರ ದೇಶಗಳಲ್ಲಿ ಹೈಕೋರ್ಟುಗಳಲ್ಲಿ ಇಷ್ಟಕರವಾದ ನ್ಯಾಯತೀರ್ಪುಗಳು ಪಡೆಯಲ್ಪಟ್ಟಿವೆ. ಈ ಕೋರ್ಟ್ ವಿಜಯಗಳ ಕುರಿತು ಪ್ರೊಫೆಸರ್ ಸಿ. ಎಸ್. ಬ್ರೇಡನ್, ಅವರ ದೀಸ್ ಆಲ್ಸೋ ಬಿಲೀವ್ ಎಂಬ ಪುಸ್ತಕದಲ್ಲಿ ಸಾಕ್ಷಿಗಳ ಕುರಿತು ಹೀಗಂದಿದ್ದಾರೆ: “ತಮ್ಮ ನಾಗರಿಕ ಹಕ್ಕುಗಳನ್ನು ಸಂರಕ್ಷಿಸಲು ಅವರಿಂದ ಮಾಡಲ್ಪಟ್ಟ ಹೋರಾಟದ ಮೂಲಕ ಪ್ರಜಾಪ್ರಭುತ್ವಕ್ಕೆ ಒಂದು ಮಹತ್ವದ ಸೇವೆಯನ್ನು ಅವರು ಗೈದಿರುತ್ತಾರೆ, ಯಾಕಂದರೆ ಅವರ ಹೋರಾಟದ ಮೂಲಕ ಅಮೆರಿಕದಲ್ಲಿ ಪ್ರತಿಯೊಂದು ಅಲ್ಪಸಂಖ್ಯಾತ ಗುಂಪುಗಳಿಗಾಗಿ ಆ ಹಕ್ಕುಗಳನ್ನು ಪಡೆಯಲು ಬಹಳಷ್ಟನ್ನು ಅವರು ಮಾಡಿರುತ್ತಾರೆ.”
ವಿಶೇಷ ತರಬೇತಿಯ ಕಾರ್ಯಕ್ರಮಗಳು
ಜೆ. ಎಫ್. ರಥರ್‌ಫರ್ಡರು 1942 ರಲ್ಲಿ ಮೃತಿಪಟ್ಟರು ಮತ್ತು ಅಧ್ಯಕ್ಷ ಪದವಿಗೆ ಎನ್. ಏಚ್. ನಾರ್ ಉತ್ತರಾಧಿಕಾರಿಯಾದರು. ಯೋಜಿಸಲ್ಪಟ್ಟ ಒಂದು ತರಬೇತಿಯ ಕಾರ್ಯಕ್ರಮವು ಆರಂಭಗೊಂಡಿತು. ಇಸವಿ 1943 ರಲ್ಲಿ, ಮಿಷನೆರಿಗಳಿಗಾಗಿ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಎಂದು ಕರೆಯಲ್ಪಡುವ ಒಂದು ವಿಶೇಷ ತರಬೇತಿ ಶಾಲೆಯನ್ನು ಸ್ಥಾಪಿಸಲಾಯಿತು. ಆ ಸಮಯದಿಂದ, ಭೂಮಿಯ 140 ಕ್ಕಿಂತಲೂ ಹೆಚ್ಚಿನ ದೇಶಗಳಿಗೆ ಈ ಶಾಲೆಯಿಂದ ಪದವೀಧರರನ್ನು ಕಳುಹಿಸಲಾಗಿದೆ.
ಎಲ್ಲಿ ಸಭೆಗಳು ಇರಲಿಲ್ಲವೋ ಆ ದೇಶಗಳಲ್ಲಿ ಹೊಸ ಸಭೆಗಳು ಎದ್ದುಬಂದಿವೆ, ಮತ್ತು ಈಗ ಅಂತಾರಾಷ್ಟ್ರೀಯವಾಗಿ ಸ್ಥಾಪಿಸಲ್ಪಟ್ಟಿರುವ ಶಾಖೆಗಳ ಸಂಖ್ಯೆ 100ಕ್ಕೂ ಹೆಚ್ಚಿದೆ. ಆಗಿಂದಾಗ್ಗೆ, ಸಭೆಯ ಹಿರಿಯರಿಗೆ, ಶಾಖೆಗಳಲ್ಲಿನ ಸ್ವಯಂಸೇವಕರಿಗೆ, ಮತ್ತು ಸಾಕ್ಷಿ ಕಾರ್ಯದಲ್ಲಿ (ಪಯನೀಯರರೋಪಾದಿ) ಪೂರ್ಣ ಸಮಯ ನಿರತರಾಗಿರುವವರಿಗೆ ತರಬೇತಿಗಾಗಿ ವಿಶೇಷ ಪರಂಪರೆಗಳನ್ನು ಸ್ಥಾಪಿಸಲಾಯಿತು.ಎನ್. ಏಚ್. ನಾರ್ 1977 ರಲ್ಲಿ ಮೃತಿಹೊಂದಿದರು. ತಮ್ಮ ಮರಣದ ಮೊದಲು ಅವರು ಭಾಗವಹಿಸಿದ ಕೊನೆಯ ಸಂಘಟನಾ ಪರಿವರ್ತನೆಗಳಲ್ಲೊಂದು, ಬ್ರೂಕ್ಲಿನ್‌ನ ಲೋಕ ಕೇಂದ್ರಾಲಯದಲ್ಲಿರುವ ಆಡಳಿತ ಮಂಡಳಿಯ ವಿಸ್ತೃತಗೊಳಿಸುವಿಕೆಯಾಗಿತ್ತು. ಇಸವಿ 1976 ರಲ್ಲಿ ಕಾರ್ಯನಿರ್ವಾಹಕ ಜವಾಬ್ದಾರಿಗಳು ವಿಂಗಡಿಸಲ್ಪಟ್ಟವು ಮತ್ತು ಆಡಳಿತ ಮಂಡಳಿಯ ಸದಸ್ಯರುಗಳನ್ನೊಳಗೊಂಡಿರುವ ವಿವಿಧ ಸಮಿತಿಗಳಿಗೆ ನೇಮಿಸಲ್ಪಟ್ಟವು. ಅದರ 11 ಸದಸ್ಯರುಗಳು (1993 ರಲ್ಲಿ) ಸಾಕ್ಷಿ ಕಾರ್ಯದಲ್ಲಿ ಸುಮಾರು 50 ಯಾ ಹೆಚ್ಚು ವರುಷಗಳನ್ನು ಪೂರ್ಣ ಸಮಯದಲ್ಲಿ ಪ್ರತಿಯೊಬ್ಬರು ಸಮರ್ಪಿಸಿದವರಾಗಿರುತ್ತಾರೆ.
ಮುದ್ರಣ ಸೌಕರ್ಯಗಳು ವಿಸ್ತರಿಸಲ್ಪಡುತ್ತವೆ
ಆಧುನಿಕ ಸಮಯಗಳ ಯೆಹೋವನ ಸಾಕ್ಷಿಗಳ ಇತಿಹಾಸವು ನಾಟಕೀಯ ಘಟನೆಗಳಿಂದ ತುಂಬಿರುತ್ತದೆ. ಇಸವಿ 1870 ರಲ್ಲಿ ಪೆನ್ಸಿಲ್ವೇನಿಯದಲ್ಲಿ ಒಂದು ಸಣ್ಣ ಬೈಬಲ್ ಅಧ್ಯಯನದಿಂದ, 1993 ನೆಯ ವರ್ಷದೊಳಗೆ ಲೋಕವ್ಯಾಪಕವಾಗಿ 73,000 ಕ್ಕಿಂತಲೂ ಹೆಚ್ಚಿನ ಸಭೆಗಳಾಗಿ ಯೆಹೋವನ ಸಾಕ್ಷಿಗಳು ಬೆಳೆದಿರುತ್ತಾರೆ. ಮೊದಲು ಎಲ್ಲಾ ಸಾಹಿತ್ಯವು ವಾಣಿಜ್ಯ ಕಂಪನಿಗಳಿಂದ ಮುದ್ರಿಸಲ್ಪಡುತ್ತಿತ್ತು; ಅನಂತರ, 1920 ರಲ್ಲಿ ಬಾಡಿಗೆಗೆ ಪಡೆದ ಫ್ಯಾಕ್ಟೊರಿ ಕಟ್ಟಡಗಳಲ್ಲಿ ಕೆಲವೊಂದು ಸಾಹಿತ್ಯ ಸಾಕ್ಷಿಗಳಿಂದ ಉತ್ಪಾದಿಸಲ್ಪಟ್ಟಿತು. ಆದರೆ 1927 ರಿಂದ ಅಧಿಕಾಂಶ ಸಾಹಿತ್ಯವು ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್‌ಕ್. ರವರ ಸ್ವಾಮ್ಯವುಳ್ಳ ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ಎಂಟು ಮಾಳಿಗೆಗಳ ಫ್ಯಾಕ್ಟೊರಿಯಲ್ಲಿ ಉತ್ಪಾದಿಸಲ್ಪಡಲು ಆರಂಭವಾಯಿತು. ಇದೀಗ ಏಳು ಫ್ಯಾಕ್ಟೊರಿ ಕಟ್ಟಡಗಳು ಮತ್ತು ಒಂದು ದೊಡ್ಡ ಆಫೀಸು ಸಂಕೀರ್ಣವಾಗಿ ವಿಸ್ತೃತಗೊಂಡಿದೆ. ಪ್ರಕಾಶನದ ಸೌಕರ್ಯಗಳನ್ನು ನಿಭಾಯಿಸಲು ಆವಶ್ಯಕವಾಗಿರುವ 3,000 ಕ್ಕಿಂತಲೂ ಅಧಿಕ ಕೆಲಸಗಾರರು ಬ್ರೂಕ್ಲಿನ್‌ನ ಹತ್ತಿರದಲ್ಲಿರುವ ಇತರ ಕಟ್ಟಡಗಳಲ್ಲಿ ವಾಸಿಸುತ್ತಾರೆ. ನೂರಾರು ಹೆಚ್ಚಿನವರು ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿನ ಶೈಕ್ಷಣಿಕ ಸೌಕರ್ಯವೊಂದರಲ್ಲಿ ಸೇವೆ ಸಲ್ಲಿಸುತ್ತಾರೆ. ಇದಕ್ಕೆ ಕೂಡಿಸಿ, ನ್ಯೂ ಯಾರ್ಕಿನ ವಾಲ್‌ಕಿಲ್‌ನ ಸಮೀಪ ಸುಮಾರು ಒಂದು ಸಾವಿರ ಸ್ವಯಂಸೇವಕರೊಂದಿಗೆ ಒಂದು ಸಂಯುಕ್ತ ಹೊಲ ಮತ್ತು ಫ್ಯಾಕ್ಟೊರಿ ಕಾವಲಿನಬುರುಜು ಮತ್ತು ಎಚ್ಚರ!ದ ಮುದ್ರಣವನ್ನು ನಿಭಾಯಿಸುತ್ತದೆ ಮತ್ತು ಈ ಸಾವಿರಾರು ಸ್ವಯಂಸೇವಕರಿಗಾಗಿ ಆಹಾರವನ್ನು ಉತ್ಪಾದಿಸುತ್ತದೆ. ಪ್ರತಿಯೊಬ್ಬ ಸ್ವಯಂಸೇವಕನು ವೈಯಕ್ತಿಕ ಆವಶ್ಯಕತೆಗಳಿಗಾಗಿ ಮಿತವಾದ ಹಣಭರ್ತಿಯನ್ನು ಪಡೆಯುತ್ತಾನೆ.
ಅಂತಾರಾಷ್ಟ್ರೀಯ ಅಧಿವೇಶನಗಳು
ಇಸವಿ 1893 ರಲ್ಲಿ, ಅಮೆರಿಕದ ಇಲಿನೊಯಿಸ್‌ನ ಶಿಕಾಗೊವಿನಲ್ಲಿ ಪ್ರಥಮ ಪ್ರಧಾನ ಅಧಿವೇಶನವು ಜರುಗಿಸಲ್ಪಟ್ಟಿತ್ತು. ಅದಕ್ಕೆ 360 ಹಾಜರಾಗಿದ್ದರು, ಮತ್ತು 70 ಹೊಸಬರು ದೀಕ್ಷಾಸ್ನಾನ ಹೊಂದಿದ್ದರು. ಇಸವಿ 1958 ರಲ್ಲಿ ನ್ಯೂ ಯಾರ್ಕ್ ಸಿಟಿಯಲ್ಲಿ ಕೊನೆಯ ಅತಿ ದೊಡ್ಡ ಒಂದೇ ಅಂತಾರಾಷ್ಟ್ರೀಯ ಅಧಿವೇಶನವು ಜರುಗಿತು. ಅದಕ್ಕಾಗಿ ಯಾಂಕೀ ಸ್ಟೇಡಿಯಂ ಮತ್ತು ಆಗ ಅಸ್ತಿತ್ವದಲ್ಲಿದ್ದ ಪೋಲೋ ಗ್ರೌಂಡ್ಸ್ ಎರಡನ್ನೂ ಬಳಸಲಾಯಿತು. ಗರಿಷ್ಠ ಹಾಜರಿಯು 2,53,922 ಆಗಿತ್ತು; ಹೊಸತಾಗಿ ದೀಕ್ಷಾಸ್ನಾನ ಪಡೆದವರ ಸಂಖ್ಯೆಯು 7,136 ಆಗಿತ್ತು. ಅಂದಿನಿಂದ ಅಂತಾರಾಷ್ಟ್ರೀಯ ಅಧಿವೇಶನಗಳು ಅನೇಕ ದೇಶಗಳಲ್ಲಿ ಒಂದು ಸರಣಿಯೋಪಾದಿ ನಡೆಸಲ್ಪಟ್ಟಿವೆ. ಈಗ ಒಂದು ಅಂತಾರಾಷ್ಟ್ರೀಯ ಅಧಿವೇಶನದ ಸರಣಿಯಲ್ಲಿ 100 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ 1,500 ಕ್ಕಿಂತಲೂ ಹೆಚ್ಚು ಸಮ್ಮೇಳನಗಳು ಒಳಗೂಡಿರುತ್ತವೆ.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಧ್ವನಿಯೊಂದಿಗೆ ಆರಂಭದ ಚಲನ ಚಿತ್ರಗಳು
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾನವ ಇತಿಹಾಸದಲ್ಲಿ ಒಂದು ತಿರುಗುಬಿಂದು
[ಪುಟ 9 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾಗರಿಕ ಹಕ್ಕುಗಳ ಪರವಾಗಿ ಒಂದು ಮಹತ್ವದ ಸೇವೆ
[ಪುಟ 7 ರಲ್ಲಿರುವ ಚಿತ್ರ]
“ಕಾವಲಿನಬುರುಜು,” ಒಂದು ಭಾಷೆಯಲ್ಲಿ 6,000 ದಿಂದ 115 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ 1,60,00,000 ಕ್ಕಿಂತಲೂ ಅಧಿಕ ಪ್ರತಿಗಳು
[ಪುಟ 21 ರಲ್ಲಿರುವ ಚಿತ್ರಗಳು]
ನ್ಯೂ ಯಾರ್ಕಿನ ವಾಲ್‌ಕಿಲ್‌ನಲ್ಲಿ ಮುದ್ರಣಾಲಯಗಳು
. . . ಮತ್ತು ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿ