ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು

ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು

ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು

ನಿರ್ದಿಷ್ಟ ಪ್ರಶ್ನೆಗಳು ಆಗಿಂದಾಗ್ಗೆ ಇತರವುಗಳಿಗಿಂತ ಹೆಚ್ಚಾಗಿ ಎದ್ದು ಬರುತ್ತವೆ. ಅವುಗಳಲ್ಲಿ ಕೆಲವು ಇಲ್ಲಿ ಪರಿಗಣಿಸಲ್ಪಟ್ಟಿವೆ.

ದೇವರು ಪ್ರೀತಿಯಾಗಿದ್ದರೆ, ಅವನು ದುಷ್ಟತನವನ್ನು ಏಕೆಅನುಮತಿಸುತ್ತಾನೆ?

ದೇವರು ದುಷ್ಟತನಕ್ಕೆ ಅನುಮತಿಯನ್ನೀಯುತ್ತಾನೆ ನಿಜ, ಮತ್ತು ಭೂಮಿಯ ಮೇಲಿನ ಲಕ್ಷಾಂತರ ಮಂದಿ ಅದರ ಹವ್ಯಾಸವನ್ನು ಸ್ವೇಚ್ಛೆಯಿಂದ ಮಾಡುತ್ತಾರೆ. ಉದಾಹರಣೆಗೆ, ಅವರು ಯುದ್ಧಗಳನ್ನು ಘೋಷಿಸುತ್ತಾರೆ, ಮಕ್ಕಳ ಮೇಲೆ ಬಾಂಬ್‌ಗಳನ್ನು ಎಸೆಯುತ್ತಾರೆ, ಭೂಮಿಯನ್ನು ಸುಡುತ್ತಾರೆ, ಮತ್ತು ಕ್ಷಾಮಕ್ಕೆ ಕಾರಣರಾಗುತ್ತಾರೆ. ಲಕ್ಷಾಂತರ ಮಂದಿ ಧೂಮ್ರಪಾನ ಮಾಡುತ್ತಾರೆ ಮತ್ತು ಶ್ವಾಸಕೋಶದ ಕ್ಯಾನ್ಸರನ್ನು ಪಡೆಯುತ್ತಾರೆ, ವ್ಯಭಿಚಾರಗೈಯುತ್ತಾರೆ ಮತ್ತು ರತಿರೋಗಗಳನ್ನು ಪಡೆಯುತ್ತಾರೆ, ಅತಿರೇಕವಾಗಿ ಮದ್ಯಪಾನ ಮಾಡುತ್ತಾರೆ ಮತ್ತು ಯಕೃತ್ತಿನ ಸಿರೋಸಿಸ್‌ ಪಡೆಯುತ್ತಾರೆ, ಮತ್ತು ಹೀಗೆ ಮುಂದುವರಿಯುತ್ತಾ ಇದೆ. ಅಂತಹ ವ್ಯಕ್ತಿಗಳು ಎಲ್ಲಾ ದುಷ್ಟತನವು ನಿಲ್ಲಿಸಲ್ಪಡಬೇಕೆಂದು ನಿಜವಾಗಿಯೂ ಬಯಸುವುದಿಲ್ಲ. ಅದರ ಮೇಲಿನ ದಂಡನೆಗಳು ಮಾತ್ರವೇ ತೆಗೆಯಲ್ಪಡಬೇಕೆಂದು ಅವರು ಬಯಸುತ್ತಾರೆ. ಅವರೇನನ್ನು ಬಿತ್ತುತ್ತಾರೋ ಅದನ್ನವರು ಕೊಯ್ಯುವಾಗ, “ನನಗೆ ಯಾಕೆ?” ಎಂದು ಅವರು ಕೂಗುತ್ತಾರೆ, ಮತ್ತು ಅವರು ಜ್ಞಾನೋಕ್ತಿ 19:3 ರಲ್ಲಿ ಹೇಳಿದಂತೆ, ದೇವರನ್ನು ದೂಷಿಸುತ್ತಾರೆ: “ಒಬ್ಬ ಮನುಷ್ಯನ ಸ್ವಂತ ಮೂರ್ಖತನ ಆತನ ಜೀವವನ್ನು ಧ್ವಂಸಮಾಡುತ್ತದೆ, ಮತ್ತು ಆಗ ಆತನು ಕರ್ತನ ವಿರುದ್ಧ ಅಸೂಯೆಯಿಂದ ನಡೆದುಕೊಳ್ಳುತ್ತಾನೆ.” (ದಿ ನ್ಯೂ ಇಂಗ್ಲಿಷ್‌ ಬೈಬಲ್‌) ಮತ್ತು ದೇವರು ಅವರ ಕೆಟ್ಟತನವನ್ನು ನಿಲ್ಲಿಸಿದರೆ, ಅದನ್ನು ಮಾಡಿದ್ದರಿಂದ ತಮ್ಮ ಸ್ವಾತಂತ್ರ್ಯ ನಷ್ಟಗೊಂಡದ್ದಕ್ಕಾಗಿ ಅವರು ಪ್ರತಿಭಟಿಸುವರು!

ಯೆಹೋವನು ದುಷ್ಟತನಕ್ಕೆ ಅನುಮತಿಯನ್ನಿತ್ತದ್ದರ ಪ್ರಮುಖ ಕಾರಣವು ಸೈತಾನನ ಪಂಥಾಹ್ವಾನಕ್ಕೆ ಉತ್ತರಿಸುವದಾಗಿದೆ. ಶೋಧನೆಯಡಿಯಲ್ಲಿ ತನಗೆ ಯಥಾರ್ಥವಂತನಾಗಿ ನಿಲ್ಲಬಹುದಾದಂತಹ ಮನುಷ್ಯರನ್ನು ದೇವರು ಭೂಮಿಯ ಮೇಲೆ ಇಡಶಕ್ತನಲ್ಲವೆಂದು ಪಿಶಾಚನಾದ ಸೈತಾನನು ಹೇಳಿದನು. (ಯೋಬ 1:6-12; 2:1-10) ಅವನ ಆಹ್ವಾನವನ್ನು ರುಜುಪಡಿಸಲು ಅವಕಾಶವಿರುವಂತೆ ಸೈತಾನನು ಉಳಿಯಲು ಯೆಹೋವನು ಅನುಮತಿಸುತ್ತಾನೆ. (ಹೋಲಿಸಿ ವಿಮೋಚನಕಾಂಡ 9:16.) ತನ್ನ ಆಹ್ವಾನವನ್ನು ರುಜುಪಡಿಸಲು ಅವನು ಪ್ರಯತ್ನಿಸುತ್ತಿರುವಾಗ, ದೇವರ ವಿರುದ್ಧ ಮನುಷ್ಯರನ್ನು ತಿರುಗಿಸಲು, ಈಗ ಸೈತಾನನು ವಿಪತ್ತುಗಳನ್ನು ತರುವುದನ್ನು ಮುಂದರಿಸುತ್ತಾನೆ. (ಪ್ರಕಟನೆ 12:12) ಹಾಗಿದ್ದಾಗ್ಯೂ, ಯೋಬನು ಸಮಗ್ರತೆಯನ್ನು ಕಾಪಾಡಿಕೊಂಡನು. ಅದರಂತೆಯೇ ಯೇಸುವು ಕೂಡ. ಈಗ ನಿಜ ಕ್ರೈಸ್ತರು ಹಾಗೆ ಮಾಡುತ್ತಾರೆ.—ಯೋಬ 27:5; 31:6; ಮತ್ತಾಯ 4:1-11; 1 ಪೇತ್ರ 1:6, 7.

ಜನರು ಸದಾಕಾಲ ಜೀವಿಸುವ ಐಹಿಕ ಪ್ರಮೋದವನವೊಂದರಲ್ಲಿ ನಂಬಿಕೆಯನ್ನಿಡಲು ನಾನು ಆಶಿಸುತ್ತೇನೆ, ಆದರೆ ಅದು ನಂಬಲಾಗದಷ್ಟು ಒಳ್ಳೆಯದಾಗಿದೆ ಅಲ್ಲವೇ?

ಬೈಬಲಿಗನುಸಾರವಾಗಿ ಅಲ್ಲ. ಎಷ್ಟೋ ಶತಕಗಳಿಂದ ಮಾನವ ಕುಲಕ್ಕೆ ದುಷ್ಟತನವು ತಿಳಿದಿರುವುದರಿಂದ ಮಾತ್ರವೇ ಅದು ನಂಬಲಾಗದಷ್ಟು ಒಳ್ಳೆಯದಾಗಿರುವದೆಂದು ತೋಚುತ್ತದೆ. ಯೆಹೋವ ದೇವರು ಭೂಮಿಯನ್ನು ಸೃಷ್ಟಿಸಿ, ಅದರ ಸಸ್ಯ ಮತ್ತು ಪ್ರಾಣಿಜೀವನದ ಜೋಕೆಯನ್ನು ತೆಗೆದುಕೊಳ್ಳುವ ಮತ್ತು ಅದನ್ನು ನಾಶಗೊಳಿಸುವ ಬದಲು ಅದರ ಸೌಂದರ್ಯವನ್ನು ಕಾಪಾಡುವ ನೀತಿಯ ಪುರುಷ ಮತ್ತು ಸ್ತ್ರೀಯರಿಂದ ಅದನ್ನು ತುಂಬಿಸುವಂತೆ ಮಾನವಕುಲಕ್ಕೆ ಹೇಳಿದನು. (ನೋಡಿರಿ ಪುಟಗಳು 12 ಮತ್ತು 17.) ಆ ವಾಗ್ದಾನಿತ ಪ್ರಮೋದವನವು ನಂಬಲಾಗದಷ್ಟು ಒಳ್ಳೆಯದಾಗಿರುವದಕ್ಕಿಂತ, ಸದ್ಯದ ಸಂಕಟಮಯ ಅವಸ್ಥೆಯು ಮುಂದರಿಯಲು ನಂಬಲಾಗದಷ್ಟು ಕೆಟ್ಟದ್ದಾಗಿರುತ್ತದೆ. ಪ್ರಮೋದವನವು ಅದನ್ನು ಸ್ಥಾನಪಲ್ಲಟಮಾಡುವುದು.

ಈ ವಾಗ್ದಾನಗಳಲ್ಲಿ ನಂಬಿಕೆಯು ಅವಿಚಾರಿತ ವಿಶ್ವಾಸದ ಒಂದು ವಿಷಯವಲ್ಲ. “ಸಾರಿದ ವಾರ್ತೆಯು ನಂಬಿಕೆಗೆ ಆಧಾರ.” ದೇವರ ವಾಕ್ಯವನ್ನು ಅಧ್ಯಯನ ಮಾಡುವುದರಿಂದ, ಅದರ ವಿವೇಕವು ಸುವ್ಯಕ್ತವಾಗುತ್ತದೆ ಮತ್ತು ನಂಬಿಕೆಯು ಬೆಳೆಯುತ್ತದೆ.—ರೋಮಾಪುರ 10:17; ಇಬ್ರಿಯ 11:1.

ಬೈಬಲನ್ನು ಹೀಯಾಳಿಸುವವರಿಗೆ ಮತ್ತು ಅದು ಮಿಥ್ಯೆ ಮತ್ತು ಅವೈಜ್ಞಾನಿಕವೆಂದು ಹೇಳುವವರಿಗೆ ನಾನು ಹೇಗೆ ಉತ್ತರಿಸಬಲ್ಲಿ?

ಬೈಬಲಿನ ಪುರಾತನ ವಸ್ತು ಶಾಸ್ತ್ರವು ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆಯಲ್ಲಿ ಹೆಚ್ಚಿನದನ್ನು ಸ್ಥಿರೀಕರಿಸುತ್ತದೆ. ನಿಜ ವಿಜ್ಞಾನವು ಬೈಬಲಿನೊಂದಿಗೆ ಹೊಂದಿಕೆಯಲ್ಲಿದೆ. ಮುಂದಿನ ವಾಸ್ತವಾಂಶಗಳು ಐಹಿಕ ಶಾಸ್ತ್ರಜ್ಞರು ಅನ್ವೇಷಿಸುವುದಕ್ಕಿಂತಲೂ ಮುನ್ನವೇ ಬೈಬಲಿನಲ್ಲಿ ತಿಳಿಸಲ್ಪಟ್ಟದ್ದವು: ತನ್ನ ಬೆಳವಣಿಗೆಯಲ್ಲಿ ಭೂಮಿಯು ದಾಟಿಹೋದ ಹಂತಗಳ ಕ್ರಮ, ಭೂಮಿಯು ಗೋಲಾಕಾರವಾಗಿದೆ, ಅದು ಅಂತರಾಳದಲ್ಲಿ ಶೂನ್ಯದ ಮೇಲೆ ನೇತಾಡುತ್ತಿದೆ, ಮತ್ತು ಪಕ್ಷಿಗಳು ವಲಸೆಹೋಗುತ್ತವೆ.—ಆದಿಕಾಂಡ, ಅಧ್ಯಾಯ 1; ಯೆಶಾಯ 40:22; ಯೋಬ 26:7; ಯೆರೆಮೀಯ 8:7.

ನೆರವೇರಿದ ಪ್ರವಾದನೆಗಳ ಮೂಲಕ ಬೈಬಲಿನ ದೈವ ಪ್ರೇರಣೆಯು ತೋರಿಸಲ್ಪಟ್ಟಿದೆ. ಲೋಕ ಶಕ್ತಿಗಳ ಏಳು-ಬೀಳುಗಳನ್ನು ಹಾಗೂ ಮೆಸ್ಸೀಯನು ಬರುವ ಮತ್ತು ಮರಣಕ್ಕೆ ಒಪ್ಪಿಸಲ್ಪಡುವ ಸಮಯವನ್ನು ದಾನಿಯೇಲನು ಮುನ್ನುಡಿದನು. (ದಾನಿಯೇಲ, ಅಧ್ಯಾಯಗಳು 2, 8; 9:24-27) ಇಂದು, ಇನ್ನೂ ಇತರ ಪ್ರವಾದನೆಗಳು ನೆರವೇರುತ್ತಾ ಇದ್ದು, ಇವುಗಳನ್ನು “ಕಡೇ ದಿವಸ” ಗಳೆಂದು ಗುರುತಿಸುತ್ತವೆ. (2 ತಿಮೊಥೆಯ 3:1-5; ಮತ್ತಾಯ, ಅಧ್ಯಾಯ 24) ಅಂತಹ ಮುನ್ನರಿವು ಮಾನವನ ಶಕ್ತಿಯೊಳಗೆ ಇಲ್ಲ. (ಯೆಶಾಯ 41:23) ಹೆಚ್ಚಿನ ಸ್ಥಿರೀಕರಣಕ್ಕಾಗಿ, ದ ಬೈಬಲ್‌—ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌? ಮತ್ತು ಲೈಫ್‌—ಹೌ ಡಿಡ್‌ ಇಟ್‌ ಗೆಟ್‌ ಹಿಯರ್‌? ಬೈ ಇವೊಲ್ಯೂಷನ್‌ ಆರ್‌ ಬೈ ಕ್ರಿಏಷನ್‌? ಎಂಬ ವಾಚ್‌ಟವರ್‌ ಪುಸ್ತಕಗಳನ್ನು ನೋಡಿರಿ.

ಬೈಬಲಿನ ಕುರಿತ ಪ್ರಶ್ನೆಗಳನ್ನು ಉತ್ತರಿಸಲು ನಾನು ಹೇಗೆ ಶಕ್ತನಾಗಬಲ್ಲೆ?

ಬೈಬಲನ್ನು ನೀವು ಅಧ್ಯಯನಿಸತಕ್ಕದ್ದು ಮತ್ತು ಅದರ ಮೇಲೆ ಮನನ ಮಾಡತಕ್ಕದ್ದು, ಅದೇ ಸಮಯದಲ್ಲಿ ನಿಮ್ಮನ್ನು ಮಾರ್ಗದರ್ಶಿಸಲು ದೇವರಾತ್ಮಕ್ಕಾಗಿ ಕೇಳತಕ್ಕದ್ದು. (ಜ್ಞಾನೋಕ್ತಿ 15:28; ಲೂಕ 11:9-13) “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ,” ಬೈಬಲು ಅನ್ನುವುದು, “ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:5) ಪರಿಶೋಧಿಸಲು ಯೋಗ್ಯವಾಗಿರುವ ಬೈಬಲ್‌ ಅಧ್ಯಯನ ಸಹಾಯಕಗಳು ಕೂಡ ಇವೆ. ಇತಿಯೋಪ್ಯನೊಂದಿಗೆ ಫಿಲಿಪ್ಪನು ಅಧ್ಯಯನ ಮಾಡಿದಂತೆಯೇ, ಸಾಮಾನ್ಯವಾಗಿ ಇತರರಿಂದ ಸಹಾಯವು ಕೂಡ ಬೇಕಾಗಿದೆ. (ಅ. ಕೃತ್ಯಗಳು 8:26-35) ಯೆಹೋವನ ಸಾಕ್ಷಿಗಳು ಆಸಕ್ತ ವ್ಯಕ್ತಿಗಳ ಮನೆಗಳಲ್ಲಿ ಅವರೊಂದಿಗೆ ಉಚಿತ ಬೈಬಲ್‌ ಅಧ್ಯಯನಗಳನ್ನು ನಡಿಸುತ್ತಾರೆ. ಈ ಸೇವೆಯನ್ನು ವಿನಂತಿಸಲು ದಾಕ್ಷಿಣ್ಯಮಾಡಬೇಡಿರಿ.

ಯೆಹೋವನ ಸಾಕ್ಷಿಗಳನ್ನು ಅನೇಕರು ವಿರೋಧಿಸುವುದು ಮತ್ತು ಅವರೊಂದಿಗೆ ಅಧ್ಯಯನ ಮಾಡಕೂಡದು ಎಂದು ನನಗೆ ಹೇಳುವುದು ಏಕೆ?

ಯೇಸುವಿನ ಸಾರುವಿಕೆಗೆ ವಿರೋಧವು ಇತ್ತು, ಮತ್ತು ಅವನ ಹಿಂಬಾಲಕರು ಕೂಡ ವಿರೋಧಿಸಲ್ಪಡುವರು ಎಂದು ಅವನಂದಿದ್ದನು. ಯೇಸುವಿನ ಉಪದೇಶದಿಂದ ಕೆಲವರು ಪ್ರಭಾವಿತರಾದಾಗ, ಧಾರ್ಮಿಕ ವಿರೋಧಿಗಳು ಪ್ರತ್ಯುತ್ತರಿಸಿದ್ದು: “ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ?” (ಯೋಹಾನ 7:46-48; 15:20) ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಬೇಡಿರಿ ಎಂದು ನಿಮಗೆ ಸಲಹೆಕೊಡುವವರಲ್ಲಿ ಅನೇಕರು ಒಂದೇ ತಿಳಿವಳಿಕೆಯಿಲ್ಲದವರು ಯಾ ದುರಭಿಪ್ರಾಯಪೀಡಿತರಾಗಿದ್ದಾರೆ. ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಿ, ನಿಮ್ಮ ಬೈಬಲ್‌ ತಿಳಿವಳಿಕೆ ಹೆಚ್ಚುತ್ತದೋ ಇಲ್ಲವೋ ಎಂದು ನೀವಾಗಿಯೇ ನೋಡಿರಿ.—ಮತ್ತಾಯ 7:17-20.

ತಮ್ಮದೇ ಸ್ವಂತ ಧರ್ಮವಿರುವ ವ್ಯಕ್ತಿಗಳನ್ನು ಸಾಕ್ಷಿಗಳು ಭೇಟಿಯಾಗುವುದು ಏಕೆ?

ಹೀಗೆ ಮಾಡುವುದರಲ್ಲಿ ಅವರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ಅವನು ಯೆಹೂದ್ಯರ ಬಳಿಗೆ ಹೋದನು. ಯೆಹೂದ್ಯರಿಗೆ ಅವರದ್ದೇ ಸ್ವಂತ ಧರ್ಮವಿತ್ತು, ಆದರೆ ಅನೇಕ ವಿಧಗಳಲ್ಲಿ ಅದು ದೇವರ ವಾಕ್ಯದಿಂದ ದೂರ ತೊಲಗಿಹೋಗಿತ್ತು. (ಮತ್ತಾಯ 15:1-9) ಎಲ್ಲಾ ಜನಾಂಗಗಳಲ್ಲಿ, ಅವರು ನಾಮಮಾತ್ರದ ಕ್ರೈಸ್ತರಾಗಿರಲಿ ಯಾ ಕ್ರೈಸ್ತ್ಯೇತರರಾಗಿರಲಿ, ಕೆಲವೊಂದು ವಿಧದ ಧರ್ಮಗಳು ಇವೆ. ದೇವರ ಸ್ವಂತ ವಾಕ್ಯವನ್ನು ದೃಢೀಕರಿಸುವ ನಂಬಿಕೆಗಳಿಗೆ ವ್ಯಕ್ತಿಗಳು ಹೊಂದಿಕೊಂಡಿರುವುದು ಅತ್ಯಾವಶ್ಯಕವಾಗಿದೆ ಮತ್ತು ಇದನ್ನು ಮಾಡುವುದರಲ್ಲಿ ಅವರಿಗೆ ನೆರವಾಗಲು ಸಾಕ್ಷಿಗಳ ಪ್ರಯತ್ನವು ನೆರೆಯವನ ಪ್ರೀತಿಯನ್ನು ತೋರಿಸುವುದರ ಅಂಶವಾಗಿದೆ.

ತಮ್ಮ ಧರ್ಮವೊಂದು ಮಾತ್ರ ಸರಿ ಎಂದು ಸಾಕ್ಷಿಗಳು ನಂಬುತ್ತಾರೋ?

ತನ್ನ ಧರ್ಮದ ಕುರಿತು ಗಂಭೀರವಾಗಿರುವಾತನೊಬ್ಬನು ಅದು ಸರಿಯಾದದ್ದು ಎಂದು ಯೋಚಿಸತಕ್ಕದ್ದು. ಇಲ್ಲದಿದ್ದರೆ, ಅವನಾಗಲಿ, ಯಾ ಅವಳಾಗಲಿ ಅದರಲ್ಲಿ ಯಾಕೆ ಒಳಗೂಡಿರುವರು? ಕ್ರೈಸ್ತರಿಗೆ ಪ್ರಬೋಧನೆಯನ್ನೀಯಲಾಗುವುದು: “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ತನ್ನ ನಂಬಿಕೆಗಳು ಶಾಸ್ತ್ರಗ್ರಂಥದಿಂದ ಬೆಂಬಲಿಸಲ್ಪಡಬಲ್ಲವೆಂದು ವ್ಯಕ್ತಿಯೊಬ್ಬನು ಖಚಿತಪಡಿಸಿಕೊಳ್ಳತಕ್ಕದ್ದು, ಯಾಕಂದರೆ ಕೇವಲ ಏಕಮಾತ್ರ ನಿಜ ನಂಬಿಕೆಯು ಇದೆ. ಎಫೆಸ 4:5 ಇದನ್ನು ದೃಢೀಕರಿಸುತ್ತಾ, ಅನ್ನುವುದು. “ಕರ್ತನು ಒಬ್ಬನೇ, ಭರವಸವು ಒಂದೇ, ಸ್ನಾನದೀಕ್ಷೆ ಒಂದೇ.” ಅನೇಕ ಮಾರ್ಗಗಳು, ಅನೇಕ ಧರ್ಮಗಳು ಇವೆ, ಎಲ್ಲವೂ ರಕ್ಷಣೆಗೆ ನಡಿಸುತ್ತವೆ ಎಂಬ ಆಧುನಿಕ, ಸಡಿಲ ನೋಟವನ್ನು ಯೇಸುವು ಸಮ್ಮತಿಸಲಿಲ್ಲ. ಬದಲಾಗಿ, ಅವನಂದದ್ದು: “ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” ತಾವು ಅದನ್ನು ಕಂಡುಹಿಡಿದಿದ್ದೇವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಇಲ್ಲದಿದ್ದರೆ, ಅವರು ಇನ್ನೊಂದು ಧರ್ಮಕ್ಕಾಗಿ ನೋಡುತ್ತಿದ್ದರು.—ಮತ್ತಾಯ 7:14.

ರಕ್ಷಿಸಲ್ಪಡುವವರು ತಾವು ಮಾತ್ರ ಎಂದು ಅವರು ನಂಬುತ್ತಾರೋ?

ಇಲ್ಲ. ಶತಕಗಳ ಹಿಂದೆ ಜೀವಿಸಿದ್ದ ಅನೇಕ ಲಕ್ಷಾಂತರ ಮಂದಿಗಳು ಮತ್ತು ಯೆಹೋವನ ಸಾಕ್ಷಿಗಳಾಗಿರದವರು ಪುನರುತ್ಥಾನವೊಂದರಲ್ಲಿ ಹಿಂದೆ ಬರುವರು ಮತ್ತು ಜೀವಕ್ಕಾಗಿ ಒಂದು ಸಂದರ್ಭವನ್ನು ಪಡೆಯುವರು. “ಮಹಾ ಸಂಕಟ”ದ ಮೊದಲು ಇಂದು ಜೀವಿಸುತ್ತಿರುವ ಅನೇಕರು ಸತ್ಯ ಮತ್ತು ನೀತಿಗಾಗಿ ಒಂದು ನಿಲುವನ್ನು ಇನ್ನೂ ತೆಗೆದುಕೊಳ್ಳಬಹುದು, ಮತ್ತು ಅವರು ರಕ್ಷಣೆಯನ್ನು ಪಡೆಯುವರು. ಇನ್ನೂ ಹೆಚ್ಚಾಗಿ, ನಾವು ಒಬ್ಬರು ಇನ್ನೊಬ್ಬರ ನ್ಯಾಯತೀರ್ಪು ಮಾಡಕೂಡದು ಎಂದು ಯೇಸುವು ಹೇಳಿದನು. ನಾವು ಹೊರಗಣ ತೋರಿಕೆಯನ್ನು ನೋಡುತ್ತೇವೆ; ದೇವರು ಹೃದಯವನ್ನು ನೋಡುತ್ತಾನೆ. ಅವನು ನಿಷ್ಕೃಷ್ಟವಾಗಿ ನೋಡುತ್ತಾನೆ ಮತ್ತು ಕರುಣಾಭರಿತವಾಗಿ ನ್ಯಾಯತೀರ್ಪು ಮಾಡುತ್ತಾನೆ. ನ್ಯಾಯತೀರ್ಪು ಮಾಡುವುದನ್ನು ಅವನು ನಮ್ಮದರಲ್ಲಿ ಅಲ್ಲ, ಯೇಸುವಿನ ಹಸ್ತಗಳಲ್ಲಿ ಒಪ್ಪಿಸಿದ್ದಾನೆ.—ಮತ್ತಾಯ 7:1-5; 24:21.

ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುವವರಿಂದ ಯಾವ ಆರ್ಥಿಕ ಕಾಣಿಕೆಗಳು ನಿರೀಕ್ಷಿಸಲ್ಪಡುತ್ತವೆ?

ಧನಸಹಾಯಗಳ ಕುರಿತು, ಅಪೊಸ್ತಲ ಪೌಲನು ಹೇಳಿದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಾಗಲಿ ಮತ್ತು ಅಧಿವೇಶನ ಸಭಾಂಗಣಗಳಲಾಗ್ಲಲಿ ಎಂದಿಗೂ ಯಾವುದೇ ಹಣವಸೂಲಿ ಇಲ್ಲ. ಕಾಣಿಕೆ ನೀಡಲು ಬಯಸುವ ಯಾರೇ ಒಬ್ಬನಿಗೆ ಅದನ್ನು ಮಾಡುವಂತೆ ಅನುಕೂಲವಾಗಲು ಪೆಟ್ಟಿಗೆಗಳು ಇಡಲ್ಪಡುತ್ತವೆ. ಇತರರು ಏನು ಕೊಡುತ್ತಾರೋ ಅದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವರು ಇತರರಿಗಿಂತ ಸ್ವಲ್ಪ ಹೆಚ್ಚು ಕೊಡಲು ಶಕ್ತರಾಗಿರುವರು; ಕೆಲವರು ಏನನ್ನೂ ಕೊಡಲು ಶಕ್ತರಾಗದೆ ಇರಲೂಬಹುದು. ಯೆರೂಸಲೇಮಿನ ದೇವಾಲಯದಲ್ಲಿದ್ದ ಬೊಕ್ಕಸಗಳ ಮತ್ತು ಅದರಲ್ಲಿ ಕಾಣಿಕೆ ಹಾಕುವವರ ಕುರಿತು ತಾನು ಹೇಳಿಕೆಯನ್ನಿತ್ತಾಗ, ಯೇಸುವು ಯೋಗ್ಯ ನೋಟವನ್ನು ತೋರಿಸಿದನು: ಒಬ್ಬನಿಗೆ ಕೊಡಲಿರುವ ಸಾಮರ್ಥ್ಯ ಮತ್ತು ಕೊಡುವ ಆತ್ಮವು ತಾನೇ ಗಣನೆಗೆ ಬರುತ್ತದೆಯೇ ಹೊರತು, ಹಣದ ಮೊತ್ತವಲ್ಲ.—ಲೂಕ 21:1-4.

ನಾನು ಯೆಹೋವನ ಸಾಕ್ಷಿಗಳಲ್ಲೊಬ್ಬನಾದರೆ, ಅವರು ಸಾರುವಂತೆ ನನ್ನಿಂದಲೂ ಅಪೇಕ್ಷಿಸಲ್ಪಡುವುದೋ?

ಕ್ರಿಸ್ತನ ರಾಜ್ಯದ ಕೆಳಗೆ ವಾಗ್ದಾನಿತ ಐಹಿಕ ಪ್ರಮೋದವನದ ಜ್ಞಾನದಿಂದ ಒಬ್ಬನು ತುಂಬಿದಾಗ, ಅದನ್ನು ಇತರರೊಂದಿಗೆ ಹಂಚಲು ಅವನು ಬಯಸುತ್ತಾನೆ. ನೀವೂ ಕೂಡ ಬಯಸುವಿರಿ. ಇದು ಸುವಾರ್ತೆಯಾಗಿದೆ!—ಅ. ಕೃತ್ಯಗಳು 5:41, 42.

ನೀವು ಯೇಸು ಕ್ರಿಸ್ತನ ಒಬ್ಬ ಶಿಷ್ಯರಾಗಿದ್ದೀರಿ ಎಂದು ತೋರಿಸುವ ಒಂದು ಪ್ರಾಮುಖ್ಯ ವಿಧಾನ ಇದನ್ನು ಮಾಡುವುದಾಗಿದೆ. ಬೈಬಲಿನಲ್ಲಿ, ಯೇಸು “ನಂಬತಕ್ಕ ಸತ್ಯಸಾಕ್ಷಿ” ಎಂದು ಕರೆಯಲ್ಪಟ್ಟಿದ್ದಾನೆ. ಅವನು ಭೂಮಿಯ ಮೇಲೆ ಸಾರಿದಾಗ, ಅಂದದ್ದು: “ಪರಲೋಕರಾಜ್ಯವು ಸಮೀಪಿಸಿತು,” ಮತ್ತು ಹಾಗೆ ಮಾಡುವಂತೆ ಅವನು ತನ್ನ ಶಿಷ್ಯರನ್ನು ಕಳುಹಿಸಿದನು. (ಪ್ರಕಟನೆ 3:14; ಮತ್ತಾಯ 4:17; 10:7) ತದನಂತರ, ಯೇಸುವು ತನ್ನ ಅನುಯಾಯಿಗಳಿಗೆ ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ಅವರಿಗೆ ಉಪದೇಶಮಾಡಿರಿ.” ಅವನು ಇದನ್ನು ಕೂಡ ಮುಂತಿಳಿಸಿದ್ದಾನೆ, ಅಂತ್ಯದ ಮೊದಲು “ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.”—ಮತ್ತಾಯ 28:19, 20; 24:14.

ಈ ಸುವಾರ್ತೆಯನ್ನು ಸಾರುವ ಅನೇಕ ವಿಧಾನಗಳು ಇವೆ. ಮಿತ್ರರೊಂದಿಗೆ ಮತ್ತು ಪರಿಚಯಸ್ಥರೊಂದಿಗೆ ಸಂಭಾಷಣೆಯು ಆಗಿಂದಾಗ್ಗೆ ಹಾಗೆ ಮಾಡಲು ದಾರಿಯನ್ನು ತೆರೆಯುತ್ತದೆ. ಕೆಲವರು ಪತ್ರಗಳನ್ನು ಬರೆಯುವುದರ ಮೂಲಕ ಯಾ ಟೆಲಿಫೋನ್‌ ಬಳಸಿ ಅದನ್ನು ಮಾಡುತ್ತಾರೆ. ಪರಿಚಯಸ್ಥನೊಬ್ಬನು ವಿಶೇಷವಾಗಿ ಆಸ್ತಕನಾಗಿರುವನು ಎಂದು ತಾವು ಎಣಿಸುವ ಸಮಾಚಾರವು ಇರುವ ಸಾಹಿತ್ಯವನ್ನು ಇತರರು ಅಂಚೆ ಮೂಲಕ ಕಳುಹಿಸುತ್ತಾರೆ. ಯಾರೊಬ್ಬನನ್ನು ತಪ್ಪಿಸಕೂಡದು ಎಂಬ ಆಶೆಯಿಂದ, ಸಾಕ್ಷಿಗಳು ಸಂದೇಶದೊಂದಿಗೆ ದ್ವಾರದಿಂದ ದ್ವಾರಕ್ಕೆ ಹೋಗುತ್ತಾರೆ.

ಬೈಬಲಿನಲ್ಲಿ ಈ ಹಾರ್ದಿಕ ಆಮಂತ್ರಣವಿದೆ: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಪ್ರಮೋದವನವಾದ ಭೂಮಿಯ ಮತ್ತು ಅದರ ಆಶೀರ್ವಾದಗಳ ಕುರಿತು ಇತರರಿಗೆ ಹೇಳುವುದನ್ನು ಸ್ವಇಚ್ಛೆಯಿಂದ, ಈ ಸುವಾರ್ತೆಯಲ್ಲಿ ಪಾಲಿಗರಾಗುವ ಆಶೆಯಿಂದ ತುಂಬಿರುವ ಹೃದಯವೊಂದರಿಂದ ಮಾಡಬೇಕಾಗಿದೆ.

ಯೆಹೋವನ ಸಾಕ್ಷಿಗಳ ಮತ್ತು ಅವರ ನಂಬಿಕೆಗಳ ಕುರಿತು ನಿಮಗೆ ಇತರ ಪ್ರಶ್ನೆಗಳು ಇವೆ ಎಂಬದು ನಮಗೆ ಖಚಿತ. ಅವುಗಳಲ್ಲಿ ಕೆಲವು ಪ್ರಾಯಶಃ ಸ್ವಭಾವತಃ ವಾದಾಸ್ಪದವಾಗಿವೆ. ಅವುಗಳನ್ನು ಉತ್ತರಿಸಲು ನಾವು ಬಯಸುತ್ತೇವೆ. ಈ ಬ್ರೋಷರಿನಲ್ಲಿ ಸ್ಥಳಾವಕಾಶ ಸೀಮಿತವಾಗಿದೆ; ಆದುದರಿಂದ ಸ್ಥಳಿಕವಾಗಿ ಅವರ ರಾಜ್ಯ ಸಭಾಗೃಹಗಳ ಕೂಟಗಳಲ್ಲಿ, ಯಾ ನಿಮ್ಮ ಮನೆಗಳಿಗೆ ಅವರು ಭೇಟಿಯನ್ನಿತ್ತಾಗ ಅವುಗಳನ್ನು ಸಾಕ್ಷಿಗಳೊಂದಿಗೆಕೇಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಯಾ ನಿಮ್ಮ ಪ್ರಶ್ನೆಗಳನ್ನು ವಾಚ್‌ ಟವರ್‌ ಸೊಸೈಟಿಯ ನಿಮ್ಮ ಹತ್ತಿರದ ಶಾಖೆಗೆ ನೀವು ಕಳುಹಿಸಬಹುದು; ಕೆಳಗಿನ ಪಟ್ಟಿಯನ್ನು ನೋಡಿರಿ.