ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಮುದಾಯಕ್ಕೆ ಸುವಾರ್ತೆಯ ವ್ಯಾವಹಾರಿಕ ಉಪಯುಕ್ತತೆ

ನಿಮ್ಮ ಸಮುದಾಯಕ್ಕೆ ಸುವಾರ್ತೆಯ ವ್ಯಾವಹಾರಿಕ ಉಪಯುಕ್ತತೆ

ನಿಮ್ಮ ಸಮುದಾಯಕ್ಕೆ ಸುವಾರ್ತೆಯ ವ್ಯಾವಹಾರಿಕ ಉಪಯುಕ್ತತೆ

ಇಂದಿನ ಲೋಕದಲ್ಲಿ ಒಂದು ಅಭಿಪ್ರಾಯವು ಹೇಳಲ್ಪಡುವುದನ್ನು ನಾವು ಆಗಿಂದಾಗ್ಗೆ ಆಲಿಸುತ್ತೇವೆ: “ಕ್ರೈಸ್ತತ್ವದ ಸೂತ್ರಗಳು ವ್ಯಾವಹಾರಿಕವಲ್ಲ. ಇಂದಿನ ಜಟಿಲ ಸಮಾಜದಲ್ಲಿ ಅವು ಕಾರ್ಯಸಾಧಕವೇ ಅಲ್ಲ.” ಆದಾಗ್ಯೂ, ಹಿಂದು ನೇತಾರ ಮೋಹನ್‌ದಾಸ್‌ ಕೆ. ಗಾಂಧಿ ಮತ್ತು ಭಾರತದ ಬ್ರಿಟಿಷ್‌ ವೈಸರಾಯ್‌ ಲಾರ್ಡ್‌ ಇರ್ವಿನ್‌ರ ನಡುವಣ ವರದಿಸಲ್ಪಟ್ಟ ಸಂಭಾಷಣೆಯಲ್ಲಿ ಒಂದು ಅತಿ ಭಿನ್ನವಾದ ಅಭಿಪ್ರಾಯವು ವ್ಯಕ್ತಪಡಿಸಲ್ಪಟ್ಟಿತು. ಗ್ರೇಟ್‌ ಬ್ರಿಟನ್‌ ಮತ್ತು ಭಾರತದ ನಡುವಣ ಸಮಸ್ಯೆಗಳನ್ನು ಯಾವುದು ಪರಿಹರಿಸಬಲ್ಲದೆಂದು ಗಾಂಧಿಯವರು ಎಣಿಸುತ್ತಾರೆಂದು ಲಾರ್ಡ್‌ ಇರ್ವಿನ್‌ ಅವರನ್ನು ವಿಚಾರಿಸಿದರು. ಗಾಂಧಿಯವರು ಒಂದು ಬೈಬಲನ್ನು ಎತ್ತಿಕೊಂಡು, ಅದರಲ್ಲಿನ ಮತ್ತಾಯನ ಐದನೆಯ ಅಧ್ಯಾಯವನ್ನು ತೆರೆದು, ಅಂದದ್ದು: “ಪರ್ವತಪ್ರಸಂಗದಲ್ಲಿ ಕ್ರಿಸ್ತನಿಂದ ನೀಡಲ್ಪಟ್ಟ ಬೋಧನೆಗಳ ಮೇಲೆ ನಿಮ್ಮ ದೇಶವೂ ನನ್ನದೂ ಸೇರಿಬರುವುದಾದರೆ ನಮ್ಮ ದೇಶಗಳ ಸಮಸ್ಯೆಗಳನ್ನು ಮಾತ್ರವಲ್ಲ, ಇಡೀ ಲೋಕದವುಗಳನ್ನೂ ನಾವು ಪರಿಹರಿಸುತ್ತದ್ದೆವು.”

ಆ ಪ್ರಸಂಗವು ಆತ್ಮಿಕತೆಯನ್ನು ಹುಡುಕುವುದರ ಮತ್ತು ಶಾಂತಭಾವದವರೂ, ಸಮಾಧಾನಪ್ರದರೂ, ಕರುಣಾಮಯಿಗಳೂ, ನೀತಿಯನ್ನು ಪ್ರೀತಿಸುವವರೂ ಆಗಿರುವುದರ ಕುರಿತು ಮಾತಾಡುತ್ತದೆ. ನರಹತ್ಯೆ ಮಾಡುವುದನ್ನು ಮಾತ್ರವಲ್ಲ, ಇತರರೊಂದಿಗೆ ಕೋಷ್ಠಿರಾಗಿರುವುದನ್ನೂ, ಮತ್ತು ಕೇವಲ ವ್ಯಭಿಚಾರವನ್ನು ಮಾತ್ರವಲ್ಲ, ವಿಷಯಾಭಿಲಾಷೆಯ ವರ್ತನೆಗಳನ್ನೂ ಕೂಡ ಅದು ಖಂಡಿಸುತ್ತದೆ. ಮನೆಗಳನ್ನು ಒಡೆಯುವ ಮತ್ತು ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡುವ ಬೇಜವಾಬ್ದಾರಿಯ ವಿಚ್ಛೇದನೆಯ ಕ್ರಿಯೆಗಳ ವಿರುದ್ಧ ಅದು ಮಾತಾಡುತ್ತದೆ. ಅದು ನಮಗನ್ನುವುದು: ‘ನಿಮ್ಮನ್ನು ಮೆಚ್ಚದಿರುವವರನ್ನು ಕೂಡ ಪ್ರೀತಿಸಿರಿ, ಜರೂರಿಯಿದ್ದವರಿಗೆ ಕೊಡಿರಿ, ನಿರ್ದಯೆಯಿಂದ ಇತರರಿಗೆ ನ್ಯಾಯತೀರ್ಪು ಮಾಡುವುದನ್ನು ನಿಲ್ಲಿಸಿರಿ, ಇತರರು ನಿಮ್ಮನ್ನು ಹೇಗೆ ಉಪಚರಿಸಬೇಕೆಂದು ನೀವು ಬಯಸುತ್ತೀರೋ ಹಾಗೆಯೇ ಇತರರನ್ನು ನೀವು ಉಪಚರಿಸಿರಿ.’ ಈ ಹಿತೋಪದೇಶವೆಲ್ಲಾ ಅನ್ವಯಿಸಲ್ಪಟ್ಟರೆ, ಉತ್ಕೃಷ್ಟವಾದ ಪ್ರಯೋಜನಗಳನ್ನು ನೀಡುತ್ತದೆ. ಎಷ್ಟು ಹೆಚ್ಚು ಜನರು ಇವುಗಳನ್ನು ಆಚರಿಸುತ್ತಾರೋ, ನಿಮ್ಮ ಸಮುದಾಯವು ಅಷ್ಟು ಹೆಚ್ಚು ಉತ್ತಮಗೊಳ್ಳುತ್ತದೆ!

ಈ ದಿಶೆಯಲ್ಲಿ ಯೆಹೋವನ ಸಾಕ್ಷಿಗಳು ಒಂದು ಪ್ರಭಾವವಾಗಿದ್ದಾರೆ. ವಿವಾಹವನ್ನು ಗೌರವಿಸುವಂತೆ ಬೈಬಲು ಅವರಿಗೆ ಕಲಿಸುತ್ತದೆ. ಅವರ ಮಕ್ಕಳು ಯೋಗ್ಯ ಸೂತ್ರಗಳಲ್ಲಿ ತರಬೇತಿಗೊಳಿಸಲ್ಪಡುತ್ತಾರೆ. ಕುಟುಂಬದ ಪ್ರಮುಖತೆಯನ್ನು ಒತ್ತಿಹೇಳಲಾಗುತ್ತದೆ. ಐಕ್ಯ ಕುಟುಂಬಗಳು ನಿಮ್ಮ ಸಮುದಾಯಕ್ಕೆ, ನಿಮ್ಮ ರಾಷ್ಟ್ರಕ್ಕೂ ಕೂಡ ಒಂದು ವರದಾನವಾಗಿವೆ. ಕುಟುಂಬ ಸಂಬಂಧಗಳು ಶಿಥಿಲಗೊಂಡಾಗ ಮತ್ತು ಅನೈತಿಕತೆಯು ಏರಿದಾಗ, ಲೋಕ ಶಕ್ತಿಗಳು ಪತನಗೊಳ್ಳುವುದರ ಉದಾಹರಣೆಗಳಿಂದ ಇತಿಹಾಸವು ತುಂಬಿರುತ್ತದೆ. ಕ್ರೈಸ್ತ ಸೂತ್ರಗಳಿಗನುಸಾರ ಜೀವಿಸುವಂತೆ ಯೆಹೋವನ ಸಾಕ್ಷಿಗಳು ಎಷ್ಟು ಹೆಚ್ಚು ವ್ಯಕ್ತಿಗಳನ್ನೂ, ಕುಟುಂಬಗಳನ್ನೂ ಪ್ರಭಾವಿಸುತ್ತಾರೋ, ನಿಮ್ಮ ಸಮುದಾಯದಲ್ಲಿ ಅಷ್ಟು ಕಡಿಮೆ ಬಾಲಾಪರಾಧ, ಅನೈತಿಕತೆ, ಮತ್ತು ಪಾತಕಗಳು ನಿಮಗಿರುವುವು.

ಸಮುದಾಯಗಳನ್ನು ಮತ್ತು ರಾಷ್ಟ್ರಗಳನ್ನು ಬಾಧಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲೊಂದು ಕುಲವರ್ಣೀಯ ದುರಭಿಪ್ರಾಯವಾಗಿದೆ. ವ್ಯತಿರಿಕ್ತವಾಗಿ, ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಕೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” ಮತ್ತು ಪೌಲನು ಬರೆದದ್ದು: “ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.” (ಅ. ಕೃತ್ಯಗಳು 10:34, 35; ಗಲಾತ್ಯ 3:28) ಯೆಹೋವನ ಸಾಕ್ಷಿಗಳು ಇದನ್ನು ಅಂಗೀಕರಿಸುತ್ತಾರೆ. ಅವರ ಲೋಕ ಕೇಂದ್ರಾಲಯದಲ್ಲಿ, ಶಾಖೆಗಳಲ್ಲಿ, ಮತ್ತು ಸಭೆಗಳಲ್ಲಿ ಎಲ್ಲಾ ಕುಲದವರು ಮತ್ತು ವರ್ಣೀಯರು ಒಟ್ಟಿಗೆ ಜೀವಿಸುತ್ತಾರೆ ಮತ್ತು ಕೆಲಸಮಾಡುತ್ತಾರೆ.

ಆಫ್ರಿಕದಲ್ಲಿ ನಿರ್ದಿಷ್ಟ ಕುಲಗಳು ಸಂಘರ್ಷಣೆಗಳಿಲ್ಲದೇ ಒಟ್ಟಿಗೆ ಬೆರೆಯಲಾರರು. ಆದಾಗ್ಯೂ, ಅಲ್ಲಿನ ಯೆಹೋವನ ಸಾಕ್ಷಿಗಳ ಸಮ್ಮೇಳನಗಳಲ್ಲಿ, ಅನೇಕ ಭಿನ್ನ ಕುಲಗಳ ಜನರು ಸಂಪೂರ್ಣ ಹೊಂದಿಕೆಯೊಂದಿಗೆ ಮತ್ತು ಬೆಚ್ಚಗೆನ ಸಾಹಚರ್ಯದೊಂದಿಗೆ ಒಟ್ಟಿಗೆ ಉಣ್ಣುತ್ತಾರೆ, ಮಲಗುತ್ತಾರೆ, ಮತ್ತು ಆರಾಧಿಸುತ್ತಾರೆ. ಸರಕಾರಿ ಅಧಿಕಾರಿಗಳು ಇದನ್ನು ಕಾಣುವಾಗ ಅಚ್ಚರಿಗೊಳ್ಳುತ್ತಾರೆ. ನಿಜ ಕ್ರೈಸ್ತತ್ವದ ಏಕೀಕೃತಗೊಳಿಸುವ ಪ್ರಭಾವದ ಒಂದು ದೃಷ್ಟಾಂತದ ಮೇಲೆ ನ್ಯೂ ಯಾರ್ಕಿನ ಆಗಸ್ಟ್‌ 2, 1958ರ ಆ್ಯಮ್‌ಸ್ಟರ್‌ಡಾಮ್‌ ನ್ಯೂಸ್‌ ಹೇಳಿಕೆಯನ್ನಿತ್ತಿತ್ತು. ನ್ಯೂ ಯಾರ್ಕ್‌ ಸಿಟಿಯಲ್ಲಿ ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು ಒಟ್ಟುಗೂಡಿದ, ಈ ಮುಂಚೆ ತಿಳಿಸಲ್ಪಟ್ಟ ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ಒಟ್ಟುಗೂಡಿದವರನ್ನು ಅವಲೋಕಿಸಿದರ್ದಿಂದ ಈ ಹೇಳಿಕೆಯು ಪ್ರೇರೇಪಿಸಲ್ಪಟ್ಟಿತ್ತು.

“ಜೀವನದ ಎಲ್ಲಾ ಸರ್ತಗಳಿಂದ ಮತ್ತು ಲೋಕದ ಎಲ್ಲಾ ಭಾಗಗಳಿಂದ ಬಂದ ನೀಗ್ರೋಗಳು, ಬಿಳಿಯರು ಮತ್ತು ಪೂರ್ವದೇಶದವರು ಎಲ್ಲಾ ಕಡೆಗಳಲ್ಲಿ ಸಂತೋಷಭರಿತರಾಗಿ ಮತ್ತು ಸ್ವಚ್ಛಂದವಾಗಿ ಬೆರೆತರು. . . . ನೂರಿಪ್ಪತ್ತು ದೇಶಗಳಿಂದ ಬಂದ ಆರಾಧಿಸುವ ಸಾಕ್ಷಿಗಳು ಶಾಂತಿಯಿಂದ ಒಟ್ಟಿಗೆ ಜೀವಿಸಿ ಮತ್ತು ಆರಾಧಿಸಿ, ಇದನ್ನು ಎಷ್ಟು ಸುಲಭವಾಗಿ ಮಾಡಸಾಧ್ಯವಿದೆ ಎಂದು ಅಮೆರಿಕನರಿಗೆ ತೋರಿಸಿದರು. . . . ಜನರು ಹೇಗೆ ಒಟ್ಟಿಗೆ ಕಾರ್ಯಮಾಡಶಕ್ತರು ಮತ್ತು ಜೀವಿಸಶಕ್ತರು ಎಂಬುದರ ಒಂದು ಶ್ಲಾಘನೀಯ ಉದಾಹರಣೆಯಾಗಿ ಸಮ್ಮೇಳನವು ಇದೆ.”

ಇಂದಿನ ಆಧುನಿಕ ಲೋಕಕ್ಕೆ ಕ್ರೈಸ್ತತ್ವದ ಸೂತ್ರಗಳು ವ್ಯಾವಹಾರಿಕವಲ್ಲವೆಂದು ಅನೇಕರು ಹೇಳಬಹುದು. ಆದಾಗ್ಯೂ, ಇನ್ಯಾವುದು ಕಾರ್ಯಸಾಧಿಸಿದೆ ಯಾ ಕಾರ್ಯಸಾಧಿಸಲಿದೆ? ನಿಮ್ಮ ಸಮುದಾಯಕ್ಕೆ ಈಗ ಅನ್ವಯಿಸಿದ್ದಲ್ಲಿ ಕ್ರೈಸ್ತ ಸೂತ್ರಗಳು ನಿಜ ಉಪಯುಕ್ತತೆಯದ್ದಾಗಿರಬಲ್ಲವು, ಮತ್ತು ಮಾನವ ಕುಲದ ಮೇಲಿನ ದೇವರ ರಾಜ್ಯದ ಕೆಳಗೆ ಭೂವ್ಯಾಪಕವಾಗಿ ಎಲ್ಲಾ ‘ಜನಾಂಗಗಳನ್ನು, ಕುಲಗಳನ್ನು, ಮತ್ತು ಜನರನ್ನು’ ಐಕ್ಯಗೊಳಿಸುವದಕ್ಕೆ ಒಂದು ಆಧಾರವಾಗಿ ಅವು ಇರುವುವು.—ಪ್ರಕಟನೆ 7:9, 10.

[ಪುಟ 35 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಎಲ್ಲಾ ಕುಲಗಳು ಮತ್ತು ವರ್ಣೀಯರು ಒಟ್ಟಿಗೆ ಕೆಲಸಮಾಡುತ್ತಾರೆ

[ಪುಟ 35 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕ್ರೈಸ್ತತ್ವವು ವ್ಯಾವಹಾರಿಕವಾಗಿದೆ. ಇನ್ಯಾವುದು ಕಾರ್ಯಸಾಧಿಸಿದೆ?