ನೀವು ಆಲಿಸಬೇಕೆಂದು ಅವರು ಬಯಸುವ ಸುವಾರ್ತೆ
ನೀವು ಆಲಿಸಬೇಕೆಂದು ಅವರು ಬಯಸುವ ಸುವಾರ್ತೆ
ಯೇಸುವು ಭೂಮಿಯಲ್ಲಿದ್ದಾಗ, ಅವನ ಶಿಷ್ಯರು ಅವನ ಬಳಿಗೆ ಬಂದು, ವಿಚಾರಿಸಿದ್ದು: “ನಿನ್ನ ಸಾನ್ನಿಧ್ಯಕ್ಕೂ, ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನಾಗಿರುವುದು?” ಅನೇಕ ಜನಾಂಗಗಳು ಸೇರಿರುವ ಯುದ್ಧಗಳು, ಬರಗಳು, ಅಂಟುರೋಗಗಳು, ಭೂಕಂಪಗಳು, ನಿಯಮರಾಹಿತ್ಯದ ವೃದ್ಧಿ, ಅನೇಕರನ್ನು ಮತ್ತಾಯ 24:3-14.
ಮೋಸಕರವಾಗಿ ನಡಿಸುವ ಸುಳ್ಳು ಧಾರ್ಮಿಕ ಬೋಧಕರು, ತನ್ನ ನಿಜ ಹಿಂಬಾಲಕರನ್ನು ದ್ವೇಷಿಸುವುದು ಮತ್ತು ಹಿಂಸಿಸುವುದು, ಮತ್ತು ಅನೇಕ ವ್ಯಕ್ತಿಗಳಲ್ಲಿ ನೀತಿಯ ಪ್ರೀತಿಯು ತಣ್ಣಗಾಗುವುದು ಎಂದು ಅವನು ಉತ್ತರಿಸಿದನು. ಈ ಸಂಗತಿಗಳು ಸಂಭವಿಸಲು ಆರಂಭಿಸುವಾಗ, ಕ್ರಿಸ್ತನ ಅದೃಶ್ಯ ಸಾನಿಧ್ಯವು ಮತ್ತು ಪರಲೋಕದ ರಾಜ್ಯವು ಸನ್ನಿಹಿತವಾಗಿರುವುದು ಎಂದು ಅದು ಸೂಚಿಸಲಿರುವುದು. ಇದು ವಾರ್ತೆಯಾಗುವುದು—ಸುವಾರ್ತೆ! ಆದುದರಿಂದ, ತನ್ನ ಸೂಚನೆಯ ಒಂದು ಭಾಗವಾಗಿ ಯೇಸುವು ಇದನ್ನು ಕೂಡಿಸಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವದು.”—ಇತ್ತೀಚೆಗಿನ ಲೋಕ ಸಂಭವಗಳು ಸ್ವತಃ ಕೆಟ್ಟದ್ದಾಗಿವೆ, ಆದರೆ ಅವು ಏನನ್ನು ಸೂಚಿಸುತ್ತದೋ ಅದು, ಅಂದರೆ ಕ್ರಿಸ್ತನ ಸಾನ್ನಿಧ್ಯತೆಯು ಒಳ್ಳೆಯದಾಗಿದೆ. ಆದಕಾರಣ, ಯೇಸು ಅಂದದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.” (ಲೂಕ 21:28) ಈ ಸಂಗತಿಗಳು ವಿಸ್ತಾರವಾಗಿ ಘೋಷಿಸಲ್ಪಟ್ಟ ವರುಷವಾದ 1914 ರಿಂದ ಸಂಭವಿಸಲು ತೊಡಗಿದವು! ಅದು ಅನ್ಯಜನಾಂಗಗಳ ಸಮಯದ ಅಂತ್ಯವನ್ನು ಮತ್ತು ಮಾನವ ಆಳಿಕೆಯಿಂದ ಕ್ರಿಸ್ತನ ಸಾವಿರ ವರುಷದ (ಮಿಲೆನಿಯಲ್) ಆಳಿಕೆಗೆ ಬದಲಾವಣೆಯ ಸಮಯಾವಧಿಯ ಆರಂಭವನ್ನು ಗುರುತಿಸಿತು.
ಒಂದು ಬದಲಾವಣೆಯ ಸಮಯಾವಧಿಯು ಅಲ್ಲಿರುವುದು ಎಂದು 110 ನೆಯ ಕೀರ್ತನೆ, ವಚನಗಳು 1 ಮತ್ತು 2 ರಲ್ಲಿ ಮತ್ತು ಪ್ರಕಟನೆ 12:7-12 ರಲ್ಲಿ ಸೂಚಿಸಲ್ಪಟ್ಟಿದೆ. ಆತನ ಎರಡನೆಯ ಬರೋಣದ ಸಮಯದ ತನಕ ದೇವರ ಬಲಗಡೆಯಲ್ಲಿ ಕ್ರಿಸ್ತನು ಕುಳಿತುಕೊಳ್ಳಲಿರುವನು ಎಂದು ಅಲ್ಲಿ ತೋರಿಸಲ್ಪಟ್ಟಿದೆ. ತದನಂತರ ಪರಲೋಕದಲ್ಲಿ ನಡೆಯುವ ಯುದ್ಧವು ಸೈತಾನನನ್ನು ಭೂಮಿಗೆ ದೊಬ್ಬಲ್ಪಡುವುದರಲ್ಲಿ, ಭೂಮಿಗೆ ವಿಪತ್ತನ್ನು ತರುವುದರಲ್ಲಿ, ಮತ್ತು ಕ್ರಿಸ್ತನು ಒಂದು ಸಂತತಿಗಿಂತಲೂ ಹೆಚ್ಚಾಗಿರದ ಸಮಯಾವಧಿಯ ತನಕ ಆತನ ಶತ್ರುಗಳ ನಡುವೆ ಆಳಿಕೆ ನಡಿಸುವುದರಲ್ಲಿ ಫಲಿಸುವುದು. ದುಷ್ಟತನದ ಸಂಪೂರ್ಣ ಅಂತ್ಯವು ಒಂದು “ಮಹಾ ಸಂಕಟ”ದ ಮೂಲಕ ಬರಲಿರುವುದು, ಇದರ ಪರಾಕಾಷ್ಠೆಯು ಹರ್ಮಗೆದ್ದೋನ್ ಯುದ್ಧದಲ್ಲಿ ಆಗಲಿರುವುದು ಮತ್ತು ಇದನ್ನು ಹಿಂಬಾಲಿಸಿ ಕ್ರಿಸ್ತನ ಶಾಂತಿಯ ಸಾವಿರ ವರುಷಗಳ ಆಳಿಕೆಯು ಬರಲಿರುವುದು.—ಮತ್ತಾಯ 24:21, 33, 34; ಪ್ರಕಟನೆ 16:14-16.
ಬೈಬಲು ಹೇಳುವುದು, “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು [ವ್ಯವಹರಿಸಲು ಕಠಿಣವಾದ ವಿಷಮ ಕಾಲಗಳು, NW] ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.” (2 ತಿಮೊಥೆಯ 3:1-5) ಈಗ, ಅಂತಹ ಸಂಗತಿಗಳು ಮಾನವ ಇತಿಹಾಸದಲ್ಲಿ ಮೊದಲು ಕೂಡ ಸಂಭವಿಸಿವೆ ಎಂದು ಕೆಲವರು ವಾದಿಸಬಹುದು.
ಆದಾಗ್ಯೂ, ಇತಿಹಾಸಗಾರರು ಮತ್ತು ಟೀಕಾಕಾರರು ಹೇಳುವಂತೆ, 1914 ರಿಂದ ಭೂಮಿಯ ಮೇಲೆ ಅನುಭವಿಸಲ್ಪಟ್ಟ ಸಮಯವು ಇದರ ಮೊದಲು ಎಂದಿಗೂ ಇರಲಿಲ್ಲ. ಹಿಂದೆಂದಿಗಿಂತಲೂ ಎಷ್ಟೋ ಹೆಚ್ಚು ವಿಸ್ತಾರವಾದ ರೀತಿಯಲ್ಲಿ ವಿಪತ್ತುಗಳು ಇವೆ. ಇನ್ನೂ ಹೆಚ್ಚಾಗಿ, ಕಡೇ ದಿವಸಗಳ ಕ್ರಿಸ್ತನ ಸೂಚನೆಯ ಇತರ ಲಕ್ಷಣಗಳ ಕುರಿತಾಗಿ, ಈ ವಾಸ್ತವಾಂಶಗಳನ್ನು ಗಮನಿಸತಕ್ಕದ್ದು: ಕ್ರಿಸ್ತನ ಸಾನಿಧ್ಯ ಮತ್ತು ರಾಜ್ಯದ ಭೂವ್ಯಾಪಕ ಘೋಷಣೆಯು ಇತಿಹಾಸದಲ್ಲಿ ಹಿಂದೆಂದೂ ಕಂಡಿಲ್ಲದ ಪ್ರಮಾಣದಲ್ಲಿ ಆಗಿದೆ. ಸಾರುವಿಕೆಗಾಗಿ ಯೆಹೋವನ ಸಾಕ್ಷಿಗಳು ಅನುಭವಿಸಿದಂತಹ ಹಿಂಸೆಗೆ ಸಮಾನವಾದದ್ದು ಎಂದೂ ಇದ್ದಿರಲಿಲ್ಲ. ಹಿಟ್ಲರನ ಸೆರೆಶಿಬಿರಗಳಲ್ಲಿ ಅವರಲ್ಲಿ ನೂರಾರು ಮಂದಿ ಹತಿಸಲ್ಪಟ್ಟರು. ಈ ದಿನದ ತನಕವೂ ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ ನಿಷೇಧಕ್ಕೊಳಗಾಗಿದ್ದಾರೆ, ಮತ್ತು ಇತರೆಡೆಗಳಲ್ಲಿ ಅವರು ಕೈದುಗೊಳಿಸಲ್ಪಡುತ್ತಾರೆ, ಸೆರೆಮನೆಗೆ ದೊಬ್ಬಲ್ಪಡುತ್ತಾರೆ, ಹಿಂಸಿಸಲ್ಪಡುತ್ತಾರೆ, ಮತ್ತು ಕೊಲ್ಲಲ್ಪಡುತ್ತಾರೆ. ಇದೆಲ್ಲವೂ ಯೇಸು ಕೊಟ್ಟ ಸೂಚನೆಯ ಭಾಗವಾಗಿದೆ.
ಪ್ರಕಟನೆ 11:18 ರಲ್ಲಿ ಮುಂತಿಳಿಸಿದಂತೆ, ಯೆಹೋವನ ನಂಬಿಗಸ್ತ ಸಾಕ್ಷಿಗಳ ವಿರುದ್ಧ ‘ಜನಾಂಗಗಳು ಕೋಪಿಸಿಕೊಂಡವು,’ ಮತ್ತು ಈ ಜನಾಂಗಗಳ ವಿರುದ್ಧವಾಗಿ ಯೆಹೋವನ “ಕೋಪವೂ” ವ್ಯಕ್ತಪಡಿಸಲ್ಪಡಲಿದೆ ಎಂದು ಇದು ಸೂಚಿಸುತ್ತದೆ. “ಲೋಕನಾಶಕರನ್ನು” ದೇವರು “ನಾಶಮಾಡು” ವನೆಂದು ಅದೇ ಶಾಸ್ತ್ರವಚನವು ಹೇಳುತ್ತದೆ. ಜೀವಿತವನ್ನು ಪೋಷಿಸುವ ಭೂಮಿಯ ಸಾಮರ್ಥ್ಯಕ್ಕೆ ಬೆದರಿಕೆಯನ್ನೊಡ್ಡಿದ ಸಮಯವು ಮಾನವ ಇತಿಹಾಸದಲ್ಲಿ ಹಿಂದೆಂದೂ ಇದ್ದದ್ದಿಲ್ಲ. ಆದಾಗ್ಯೂ, ಇಂದು ಅದು ಭಿನ್ನವಾಗಿದೆ! ಭೂಮಿಯನ್ನು ಮಾನವನು ಮಾಲಿನ್ಯಗೊಳಿಸುವುದನ್ನು ಮುಂದುವರಿಸಿದರೆ, ಅದು ನಿವಾಸಿಸಲು ಅಸಾಧ್ಯವಾಗಿ ಪರಿಣಮಿಸುವದೆಂದು ಅನೇಕ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ ಯೆಹೋವನು ಅದನ್ನು “ಜನನಿವಾಸಕ್ಕಾಗಿಯೇ ರೂಪಿಸಿದನು,” ಮತ್ತು ಭೂಮಿಯ ವಿನಾಶಗೊಳಿಸುವಿಕೆಯನ್ನು ಅವರು ಪೂರ್ಣಗೊಳಿಸುವ ಮೊದಲು ಈ ಮಲಿನಗೊಳಿಸುವವರನ್ನು ಅವನು ನಿರ್ಮೂಲಗೊಳಿಸಲಿರುವನು.—ಯೆಶಾಯ 45:18.
ರಾಜ್ಯದ ಕೆಳಗೆ ಐಹಿಕ ಆಶೀರ್ವಾದಗಳು
ದೇವರ ರಾಜ್ಯದ ಪ್ರಜೆಗಳಾಗಿ ಭೂಮಿಯ ಮೇಲೆ ಜನರು ಜೀವಿಸುವರು ಎಂಬ ಯೋಚನೆಯು, ರಕ್ಷಿಸಲ್ಪಟ್ಟವರೆಲ್ಲರೂ ಪರಲೋಕದಲ್ಲಿರುವರು ಎಂದು ಯೋಚಿಸುವ ಅನೇಕ ಬೈಬಲ್ ವಿಶ್ವಾಸಿಗಳಿಗೆ ವಿಚಿತ್ರವಾಗಿ ಭಾಸವಾಗಬಹುದು. ಕೇವಲ ಸೀಮಿತ ಸಂಖ್ಯೆಯವರು ಪರಲೋಕಕ್ಕೆ ಹೋಗುವರು ಮತ್ತು ಭೂಮಿಯ ಮೇಲೆ ಸದಾಕಾಲ ಜೀವಿಸುವವರು ಅಮಿತ ಸಂಖ್ಯೆಯ ಮಹಾ ಸಮೂಹದವರಾಗಿರುವರು ಎಂದು ಬೈಬಲು ತೋರಿಸುತ್ತದೆ. (ಪ್ರಕಟನೆ 14:1-5; 7:9; ಕೀರ್ತನೆ 37:11, 29) ಕ್ರಿಸ್ತನ ಕೈ ಕೆಳಗಿರುವ ದೇವರ ರಾಜ್ಯವು, ಭೂಮಿಯನ್ನು ತುಂಬಿಕೊಳ್ಳುವುದು ಮತ್ತು ಅದರ ಮೇಲೆ ಆಳಿಕೆ ನಡಿಸುವುದೆಂದು ಬೈಬಲಿನ ದಾನಿಯೇಲ ಪುಸ್ತಕದ ಪ್ರವಾದನೆಯೊಂದರಿಂದ ತೋರಿಸಲ್ಪಟ್ಟಿದೆ.
ಅಲ್ಲಿ ಕ್ರಿಸ್ತನ ರಾಜ್ಯವನ್ನು ಯೆಹೋವನ ಪರ್ವತದಂತಹ ಸಾರ್ವಭೌಮತೆಯಿಂದ ಕಡಿಯಲ್ಪಟ್ಟ ಒಂದು ಗುಂಡುಬಂಡೆಯೋಪಾದಿ ಪ್ರತಿನಿಧಿಸಲಾಗಿದೆ. ಅದು ಭೂಮಿಯ ಬಲಾಢ್ಯ ಜನಾಂಗಗಳನ್ನು ಪ್ರತಿನಿಧಿಸುವ ಒಂದು ಪ್ರತಿಮೆಗೆ ಬಡಿದು, ಅದನ್ನು ನಾಶಮಾಡುತ್ತದೆ, ಮತ್ತು “ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.” ಪ್ರವಾದನೆಯು ಮುಂದುವರಿಯುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ಈ ರಾಜ್ಯದ ಮತ್ತು ಶುದ್ಧೀಕರಿಸಲ್ಪಟ್ಟ ಮತ್ತು ಅಂದಗೊಳಿಸಲ್ಪಟ್ಟ ಒಂದು ಭೂಮಿಯ ಮೇಲಿನ ನಿತ್ಯ ಜೀವದ ಶಾಸ್ತ್ರೀಯವಾಗಿ ಸಮರ್ಥಿಸಲ್ಪಟ್ಟ ನಿರೀಕ್ಷೆಯ ಕುರಿತು ಯೆಹೋವನ ಸಾಕ್ಷಿಗಳು ನಿಮಗೆ ತಿಳಿಸಲು ಬಯಸುತ್ತಾರೆ. ಇಂದು ಜೀವಿಸುವ ಲಕ್ಷಾಂತರ ಜನರಿಗೆ ಮತ್ತು ಈಗ ಸಮಾಧಿಗಳಲ್ಲಿರುವ ಅನೇಕಾನೇಕ ಲಕ್ಷಾಂತರ ಮಂದಿಗಳಿಗೆ ಅಲ್ಲಿ ಸದಾಕಾಲಕ್ಕೂ ನಿವಾಸಿಸುವ ಸಂದರ್ಭವಿರುವುದು. ಅನಂತರ, ಕ್ರಿಸ್ತ ಯೇಸುವಿನ ಸಾವಿರ ವರುಷದ ಆಳಿಕೆಯ ಕೆಳಗೆ, ಭೂಮಿಯನ್ನು ಸೃಪ್ಟಿಸುವ ಮತ್ತು ಅದರ ಮೇಲೆ ಮೊದಲ ಮಾನವ ಜೋಡಿಯನ್ನು ಇಡುವ ಯೆಹೋವನ ಮೂಲ ಉದ್ದೇಶವು ಪೂರೈಸಲ್ಪಡುವುದು. ಈ ಐಹಿಕ ಪ್ರಮೋದವನವು ಎಂದಿಗೂ ಬೇಸರ ತರಿಸುವಂಥದ್ದಾಗಿರಲಾರದು. ಆದಾಮನಿಗೆ ಏದೆನ್ ತೋಟದಲ್ಲಿ ಕೆಲಸವು ನೇಮಿಸಲ್ಪಟ್ಟಂತೆ, ಭೂಮಿಯ ಮತ್ತು ಅದರ ಮೇಲೆ ಸಸ್ಯ ಮತ್ತು ಪ್ರಾಣಿ ಜೀವನಗಳ ಪರಾಂಬರಿಕೆ ಮಾಡುವ ಸವಾಲಾಗಿರುವ ಯೋಜನೆಗಳು ಮಾನವಕುಲಕ್ಕೆ ಇರುವುವು. ಅವರು “ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:22, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್; ಆದಿಕಾಂಡ 2:15.
“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸುವು ನಮಗೆ ಕಲಿಸಿದ ಪ್ರಾರ್ಥನೆಯು ಉತ್ತರಿಸಲ್ಪಟ್ಟಾಗ, ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ತೋರಿಸಲು ಅನೇಕ ಶಾಸ್ತ್ರವಚನಗಳನ್ನು ನೀಡಸಾಧ್ಯವಿದೆ. (ಮತ್ತಾಯ 6:10) ಆದಾಗ್ಯೂ, ಸದ್ಯಕ್ಕೆ ಇದೊಂದು ಸಾಕು: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:3-5.
[ಪುಟ 26 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ವ್ಯವಹರಿಸಲು ಕಠಿನವಾದ ವಿಷಮ ಕಾಲಗಳು,” ಆದರೆ “ನಿಮ್ಮ ಬಿಡುಗಡೆಯು ಸಮೀಪವಾಗಿದೆ”