ಶೈಕ್ಷಣಿಕ ಕಾರ್ಯಕ್ರಮಗಳು
ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್ ಶಿಕ್ಷಣದ ಕೆಲಸಕ್ಕಾಗಿ ಲೋಕದ ಸುತ್ತಲೂ ಪ್ರಸಿದ್ಧರಾಗಿದ್ದಾರೆ.
ಸಾಕ್ಷಿಗಳು ಬೈಬಲ್ ಶಿಕ್ಷಣದ ಕೆಲಸಕ್ಕೆ ತುಂಬ ಮಹತ್ವವನ್ನು ಕೊಡುವುದರಿಂದ, ಅವರಿಗೆ ಬೇರಾವುದೇ ರೀತಿಯ ಐಹಿಕ ಶಿಕ್ಷಣದಲ್ಲಿ ಆಸಕ್ತಿಯಿಲ್ಲವೆಂದು ಕೆಲವರು ನೆನಸಬಹುದು. ಆದರೆ ಇದು ಸತ್ಯಸಂಗತಿಯಲ್ಲ. ಒಬ್ಬ ಶಿಕ್ಷಕನು ಬೇರೆಯವರಿಗೆ ಕಲಿಸಬೇಕಾದರೆ, ಮೊದಲು ಅವನೇ ಕಲಿಯಬೇಕು. ಮತ್ತು ಇದಕ್ಕಾಗಿ ಯೋಗ್ಯ ತರಬೇತಿ ಹಾಗೂ ಉಪದೇಶವು ಆವಶ್ಯಕ. ಆದುದರಿಂದ ಐಹಿಕ ಶಾಲಾ ಶಿಕ್ಷಣದ ಸದುಪಯೋಗವನ್ನು ಮಾಡುವುದರೊಂದಿಗೆ ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ
ವಾಚ್ ಟವರ್ ಸೊಸೈಟಿಯು ನಡೆಸಿರುವ ವಿಭಿನ್ನ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಶಾಲೆಗಳಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇವುಗಳಿಂದ ಸಾಕ್ಷಿಗಳಿಗೆ ಮತ್ತು ಇತರರಿಗೆ ಮಾನಸಿಕವಾಗಿ, ನೈತಿಕವಾಗಿ ಹಾಗೂ ಆತ್ಮಿಕವಾಗಿ ಅಭಿವೃದ್ಧಿಮಾಡಲು ಸಹಾಯಸಿಕ್ಕಿದೆ.ಉದಾಹರಣೆಗಾಗಿ, ಅನೇಕ ದೇಶಗಳಲ್ಲಿ ಸಾಕ್ಷಿಗಳು ಒಂದು ವಿಶೇಷ ಪಂಥಾಹ್ವಾನವನ್ನು ಎದುರಿಸಿದ್ದಾರೆ. ಅದೇನೆಂದರೆ, ಸ್ವಲ್ಪವೇ ಶಾಲಾ ಶಿಕ್ಷಣವನ್ನು ಪಡೆಯಲು ಅವಕಾಶವಿದ್ದ, ಇಲ್ಲವೇ ಅವಕಾಶವೇ ಸಿಗದಿದ್ದ ಮತ್ತು ಈ ಕಾರಣದಿಂದ ಓದುಬರಹ ಬಾರದ ಜನರಿಗೆ ಬೈಬಲಿನ ಕುರಿತು ಕಲಿಸುವುದು ಹೇಗೆ ಎಂಬುದೇ. ಈ ಅಗತ್ಯವನ್ನು ಪೂರೈಸಲು ವಾಚ್‌ಟವರ್ ಸೊಸೈಟಿಯು ಸಾಕ್ಷರತೆಯ ಕಾರ್ಯಕ್ರಮಗಳನ್ನು ಸಂಘಟಿಸಿದೆ.
ಉದಾಹರಣೆಗಾಗಿ ನೈಜಿರೀಯದಲ್ಲಿ, ಯೆಹೋವನ ಸಾಕ್ಷಿಗಳು 1949 ರಂದಿನಿಂದ ಸಾಕ್ಷರತೆಯ ತರಗತಿಗಳನ್ನು ನಡೆಸಿದ್ದಾರೆ. 1961 ರೊಳಗೆ, ನೈಜಿರೀಯದಲ್ಲಿ ಸಾವಿರಾರು ಮಂದಿ ಓದಲು ಕಲಿತುಕೊಂಡರು. ಮತ್ತು ಲಭ್ಯವಿರುವ ದಾಖಲೆಗಳು ತೋರಿಸುವುದೇನೆಂದರೆ, 1962 ರಿಂದ 1994 ರ ವರೆಗೆ, ಒಟ್ಟು 25,599 ಅಧಿಕ ವ್ಯಕ್ತಿಗಳಿಗೆ ಈ ತರಗತಿಗಳಲ್ಲಿ ಓದುಬರಹವನ್ನು ಕಲಿಸಲಾಯಿತು. ನೈಜಿರೀಯದ ಜನಸಂಖ್ಯೆಯಲ್ಲಿ 50 ಪ್ರತಿಶತಕ್ಕಿಂತಲೂ ಕಡಿಮೆ ಜನರು ಓದುಬರಹ ಬಲ್ಲವರಾಗಿದ್ದಾರೆ, ಆದರೆ ಅಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಓದುಬರಹ ಬಲ್ಲವರಾಗಿದ್ದಾರೆಂದು ಇತ್ತೀಚಿನ ಒಂದು ಸಮೀಕ್ಷೆಯು ತೋರಿಸಿತು. ಮೆಕ್ಸಿಕೊ ದೇಶದಲ್ಲಿ, ವಾಚ್‌ಟವರ್ ಸೊಸೈಟಿಯು 1946 ರಿಂದ ಸಾಕ್ಷರತೆಯ ತರಗತಿಗಳನ್ನು ನಡೆಸಿದೆ. 1994 ರಲ್ಲಿ 6,500 ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಓದುಬರಹವನ್ನು ಕಲಿಸಲಾಯಿತು. 1946 ಮತ್ತು 1994 ರ ನಡುವಿನ ವರ್ಷಗಳಲ್ಲಿ 1,27,000 ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಅಕ್ಷರಜ್ಞಾನವನ್ನು ಕೊಡಲಾಯಿತು. ಬೊಲಿವಿಯ, ಕ್ಯಾಮರೂನ್, ಹೊಂಡುರಾಸ್, ಮತ್ತು ಸಾಂಬಿಯದಂತಹ ಇತರ ಅನೇಕ ದೇಶಗಳಲ್ಲೂ ಸಾಕ್ಷರತೆಯ ತರಗತಿಗಳನ್ನು ಸಂಘಟಿಸಲಾಗಿದೆ.
ಅಂತಹ ಸಾಕ್ಷರತೆಯ ಕಾರ್ಯಕ್ರಮಗಳನ್ನು ನಡೆಸಲಾಗುವ ದೇಶಗಳಲ್ಲಿ ಅನೇಕವೇಳೆ ಶಿಕ್ಷಣ ಅಧಿಕಾರಿಗಳು ಅವುಗಳಿಗೆ ಮಾನ್ಯತೆಯನ್ನು ನೀಡಿದ್ದಾರೆ. ಉದಾಹರಣೆಗಾಗಿ, ಮೆಕ್ಸಿಕೊ ದೇಶದ ಒಬ್ಬ ಸರಕಾರಿ ಅಧಿಕಾರಿಯು ಬರೆದುದು: “ನಿಮ್ಮ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಮತ್ತು ಅನಕ್ಷರಸ್ಥರಿಗೆ ಜ್ಞಾನದ ಬೆಳಕನ್ನು ಪಸರಿಸುವ ಮೂಲಕ ಜನರ ಪ್ರಯೋಜನಕ್ಕಾಗಿ ನೀವು ನಡೆಸುತ್ತಿರುವ ಉದಾತ್ತವಾದ ಪ್ರಗತಿಪರ ಕೆಲಸಕ್ಕಾಗಿ ರಾಜ್ಯ ಸರಕಾರದ ಪರವಾಗಿ ನಾನು ನಿಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. . . . ನಿಮ್ಮ ಶೈಕ್ಷಣಿಕ ಕೆಲಸವು ಸಫಲವಾಗಲಿ ಎಂದು ಹಾರೈಸುತ್ತೇನೆ.”
ದೇವಪ್ರಭುತ್ವ ಶುಶ್ರೂಷಾ ಶಾಲೆ
ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್ ಶಿಕ್ಷಣದ ಕೆಲಸಕ್ಕೆ ತುಂಬ ಮಹತ್ವವನ್ನು ಕೊಡುವುದರಿಂದ, ಇತರರಿಗೆ ಬೈಬಲ್ ಬೋಧನೆಗಳನ್ನು ವಿವರಿಸುವ ತಮ್ಮ ಸಾಮರ್ಥ್ಯವನ್ನು ಅವರು ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ. ಈ ರೀತಿಯ ಸಹಾಯವನ್ನು ಒದಗಿಸಲು, ಲೋಕವ್ಯಾಪಕವಾಗಿ ಇರುವ 75,000 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ, ಪ್ರತಿ ವಾರ ದೇವಪ್ರಭುತ್ವ ಶುಶ್ರೂಷಾ ಶಾಲೆ ಎಂದು ಕರೆಯಲ್ಪಡುವ ಒಂದು ಕೂಟವು ನಡೆಸಲ್ಪಡುತ್ತದೆ. ಈ ಶಾಲೆಯಲ್ಲಿ ಭಾಗವಹಿಸುವವರು ಸಾಕ್ಷಿಗಳಾಗಿರಲಿ ಯಾ ಇಲ್ಲದಿರಲಿ, ಅವರೆಲ್ಲರೂ ತಮ್ಮ ಸರದಿಗನುಸಾರ, ಮುಂಚಿತವಾಗಿ ಆಯ್ಕೆಮಾಡಲ್ಪಟ್ಟಿರುವ ಒಂದು ವಿಷಯದ ಮೇಲೆ ಸಭಿಕರ ಮುಂದೆ ಒಂದು ಚಿಕ್ಕ ಭಾಷಣವನ್ನು ಕೊಡುತ್ತಾರೆ. ವಿದ್ಯಾರ್ಥಿಗಳ ವಯಸ್ಸು ಏನೇ ಆಗಿರಲಿ, ಅವರಿಗೆ ಒಬ್ಬ ಉಪದೇಶಕನಿಂದ ಸಲಹೆ ಸಿಗುತ್ತದೆ. ಸಾರ್ವಜನಿಕ ವಾಚನ ಮತ್ತು ಭಾಷಣವನ್ನು ಕೊಡುವ ಕಲೆಗಳಲ್ಲಿ ಅವರಿಗೆ ತರಬೇತಿಯನ್ನು ಕೊಡುವ ಉದ್ದೇಶದಿಂದ ಈ ಸಲಹೆಯನ್ನು ಕೊಡಲಾಗುತ್ತದೆ. ತುಂಬ ಎಳೆಯ ಪ್ರಾಯದವರು ಸಹ, ಓದಲು ಸಾಧ್ಯವಾಗುವ ಕೂಡಲೇ ತಮ್ಮ ಹೆಸರನ್ನು ಕೊಟ್ಟು ಈ ತರಬೇತಿಯನ್ನು
ಪಡೆಯಸಾಧ್ಯವಿದೆ. ಇಂತಹ ತರಬೇತಿಯು ಅವರಿಗೆ ಬೇರೆ ಕ್ಷೇತ್ರಗಳಲ್ಲೂ, ಅವರ ಐಹಿಕ ಶಾಲಾ ಶಿಕ್ಷಣದಲ್ಲೂ ಉಪಯುಕ್ತವಾಗಿರುತ್ತದೆ. ಸಾಕ್ಷಿಗಳಾಗಿರುವ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ತುಂಬ ಚೆನ್ನಾಗಿ ವ್ಯಕ್ತಪಡಿಸುತ್ತಾರೆಂದು ಅನೇಕ ಶಿಕ್ಷಕರು ಹೇಳಿದ್ದಾರೆ.ಇದರ ಜೊತೆಗೆ, ಯೆಹೋವನ ಸಾಕ್ಷಿಗಳ ಪ್ರತಿಯೊಂದು ಸಭೆಗೆ, ಅದರ ರಾಜ್ಯ ಸಭಾಗೃಹ ಅಥವಾ ಕೂಟದ ಸ್ಥಳದಲ್ಲಿ ಒಂದು ಲೈಬ್ರರಿಯನ್ನಿಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಲೈಬ್ರರಿಯಲ್ಲಿ ಬೈಬಲ್ ಅಭ್ಯಾಸ ಸಹಾಯಕಗಳು, ಶಬ್ದಕೋಶಗಳು ಮತ್ತು ಇತರ ಅವಲೋಕನ ಗ್ರಂಥಗಳಿರುತ್ತವೆ. ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವವರೆಲ್ಲರೂ ಈ ಲೈಬ್ರರಿಯನ್ನು ಬಳಸಬಹುದು. ಈ ಸಭೆಗಳಲ್ಲಿ ಓದುವಿಕೆಗೆ ತುಂಬ ಉತ್ತೇಜನವನ್ನು ಕೊಡಲಾಗುತ್ತದೆ ಮತ್ತು ಅಂತೆಯೇ ಪ್ರತಿಯೊಂದು
ಕುಟುಂಬವು, ಮಕ್ಕಳು ಹಾಗೂ ವಯಸ್ಕರ ಅಗತ್ಯಗಳನ್ನು ಪೂರೈಸುವ ವಿವಿಧ ರೀತಿಯ ಪ್ರಕಾಶನಗಳುಳ್ಳ ತಮ್ಮ ಸ್ವಂತ ಲೈಬ್ರರಿಯನ್ನು ಇಟ್ಟುಕೊಳ್ಳುವಂತೆ ಉತ್ತೇಜಿಸಲಾಗುತ್ತದೆ.ಬೇರೆ ಶಾಲೆಗಳು
ಮಿಷನೆರಿಗಳಾಗುವಂತೆ ಸ್ತ್ರೀಪುರುಷರನ್ನು ತರಬೇತಿಮಾಡಲಿಕ್ಕಾಗಿ ಹಾಗೂ ಸ್ಥಳಿಕ ಸಭೆಗಳಲ್ಲಿ ಸೇವಾ ಜವಾಬ್ದಾರಿಗಳುಳ್ಳ ಪುರುಷರನ್ನು ತರಬೇತಿಗೊಳಿಸಲಿಕ್ಕಾಗಿಯೂ ವಾಚ್‌ಟವರ್ ಸೊಸೈಟಿಯು ಶಾಲೆಗಳನ್ನು ನಡೆಸುತ್ತದೆ. ಈ ಎಲ್ಲ ಶಾಲೆಗಳು, ಯೆಹೋವನ ಸಾಕ್ಷಿಗಳು ಶಿಕ್ಷಣಕ್ಕೆ ತುಂಬ ಮಹತ್ವವನ್ನು ಕೊಡುತ್ತಾರೆಂಬುದಕ್ಕೆ ಹೆಚ್ಚಿನ ಪುರಾವೆಯಾಗಿವೆ.