ಬೈಬಲಿನ ಪರಿಚಯ
ಇವತ್ತು ನಮಗೆ ದೇವರು ತಿಳಿಸೋಕೆ ಇಷ್ಟಪಡೋ ಸಂದೇಶ ಬೈಬಲಲ್ಲಿದೆ. ನಾವು ಜೀವನದಲ್ಲಿ ಸಂತೋಷವಾಗಿ ಇರಬೇಕಂದ್ರೆ ಏನು ಮಾಡಬೇಕು, ದೇವರು ನಮ್ಮನ್ನ ನೋಡಿ ಖುಷಿಪಡಬೇಕಂದ್ರೆ ಏನು ಮಾಡಬೇಕು ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ ಕೆಳಗಿರೋ ಪ್ರಶ್ನೆಗಳಿಗೂ ಉತ್ತರ ಕೊಡುತ್ತೆ:
ಬೈಬಲಲ್ಲಿ ವಚನಗಳನ್ನ ಹುಡುಕಿ ತೆಗಿಯೋದು ಹೇಗೆ?
ಬೈಬಲಲ್ಲಿ 66 ಚಿಕ್ಕ ಚಿಕ್ಕ ಪುಸ್ತಕಗಳಿವೆ. ಬೈಬಲಲ್ಲಿ ಎರಡು ಭಾಗಗಳಿವೆ. ಒಂದು, ಹೀಬ್ರು-ಅರಾಮಿಕ್ ಪುಸ್ತಕಗಳು (“ಹಳೇ ಒಡಂಬಡಿಕೆ”). ಇನ್ನೊಂದು, ಗ್ರೀಕ್ ಪುಸ್ತಕಗಳು (“ಹೊಸ ಒಡಂಬಡಿಕೆ”). ಇದ್ರಲ್ಲಿ ಒಂದೊಂದು ಪುಸ್ತಕದಲ್ಲೂ ಅಧ್ಯಾಯಗಳಿವೆ, ಆ ಅಧ್ಯಾಯಗಳಲ್ಲಿ ವಚನಗಳಿವೆ. ಬೈಬಲ್ ವಚನಗಳನ್ನ ಬರೆಯುವಾಗ ಪುಸ್ತಕದ ಹೆಸ್ರಿನ ಪಕ್ಕದಲ್ಲಿ ಸಂಖ್ಯೆಗಳು ಇರುತ್ತೆ. ಮೊದಲ ಸಂಖ್ಯೆ ಅಧ್ಯಾಯವನ್ನ ಸೂಚಿಸುತ್ತೆ. ಅದ್ರ ನಂತ್ರ ಇರೋ ಸಂಖ್ಯೆ ವಚನವನ್ನ ಸೂಚಿಸುತ್ತೆ. ಉದಾಹರಣೆಗೆ, ಆದಿಕಾಂಡ 1:1 ಅಂದ್ರೆ ಆದಿಕಾಂಡ ಪುಸ್ತಕದ ಒಂದನೇ ಅಧ್ಯಾಯದ ಒಂದನೇ ವಚನ ಅಂತ ಅರ್ಥ.