ಪ್ರಶ್ನೆ 17
ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ದೇವರು ಏನು ಹೇಳ್ತಾನೆ?
ಗಂಡನಿಗೆ ಅಥವಾ ತಂದೆಗೆ
“ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು. ಹೆಂಡತಿಯನ್ನ ಪ್ರೀತಿಸೋ ಗಂಡ ಅವನನ್ನೇ ಪ್ರೀತಿಸ್ತಾನೆ. ಯಾವನೂ ತನ್ನ ದೇಹವನ್ನ ದ್ವೇಷಿಸಲ್ಲ, ಅದನ್ನ ಪೋಷಿಸಿ ಪ್ರೀತಿಸಿ ಅಮೂಲ್ಯವಾಗಿ ನೋಡ್ತಾನೆ . . . ನಿಮ್ಮಲ್ಲಿ ಪ್ರತಿಯೊಬ್ಬನು ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು.”
“ಅಪ್ಪಂದಿರೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಮಾಡಬೇಡಿ. ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ ಕೊಡ್ತಾ ಬೆಳೆಸಿ.”
ಹೆಂಡತಿಗೆ
“ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು.”
“ಹೆಂಡತಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿ. ಒಡೆಯ ನಿಮ್ಮಿಂದ ಇದನ್ನೇ ಕೇಳೋದು.”
ಮಕ್ಕಳಿಗೆ
“ಮಕ್ಕಳೇ, ನೀವು ನಿಮ್ಮ ಅಪ್ಪಅಮ್ಮನ ಮಾತು ಕೇಳಿ. ಇದು ದೇವರಿಗೆ ತುಂಬ ಇಷ್ಟ. ಯಾಕಂದ್ರೆ ದೇವರ ದೃಷ್ಟಿಯಲ್ಲಿ ಇದೇ ಸರಿ. ‘ನಿಮ್ಮ ಅಪ್ಪಅಮ್ಮಗೆ ಗೌರವ ಕೊಡಿ.’ ಈ ಮೊದಲ್ನೇ ಆಜ್ಞೆಯನ್ನ ಪಾಲಿಸಿದ್ರೆ ಈ ಆಶೀರ್ವಾದ ಸಿಗುತ್ತೆ: ‘ಆಗ ನಿಮಗೆ ಒಳ್ಳೇದಾಗುತ್ತೆ ಮತ್ತು ಭೂಮಿ ಮೇಲೆ ತುಂಬ ವರ್ಷ ಬದುಕ್ತೀರ.’”
“ಮಕ್ಕಳೇ, ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ. ನೀವು ಹೀಗೆ ಮಾಡಿದ್ರೆ ಒಡೆಯನಿಗೆ ಖುಷಿ ಆಗುತ್ತೆ.”