ಪ್ರಶ್ನೆ 16
ಚಿಂತೆಯಿಂದ ಹೊರಗೆ ಬರೋದು ಹೇಗೆ?
“ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ. ನೀತಿವಂತ ಬಿದ್ದುಹೋಗೋಕೆ ಆತನು ಯಾವತ್ತೂ ಬಿಡಲ್ಲ.”
“ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ, ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.”
“ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ. ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು. ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ, ನಾನು ನಿನ್ನನ್ನ ನನ್ನ ಬಲಗೈಯಿಂದ ಗಟ್ಟಿಯಾಗಿ ಹಿಡ್ಕೊಳ್ತೀನಿ.”
“ಚಿಂತೆಮಾಡಿ ನಿಮ್ಮಲ್ಲಿ ಯಾರಾದ್ರೂ ವಯಸ್ಸನ್ನ ಸ್ವಲ್ಪ ಆದ್ರೂ ಹೆಚ್ಚಿಸ್ಕೊಂಡಿದ್ದೀರಾ?”
“ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”
“ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”
“ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ. ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.”