ಪ್ರಶ್ನೆ 2
ದೇವರ ಬಗ್ಗೆ ತಿಳ್ಕೊಳ್ಳೋದು ಹೇಗೆ?
“ನೀನು ಈ ನಿಯಮ ಪುಸ್ತಕದಲ್ಲಿ ಇರೋ ವಿಷ್ಯಗಳ ಬಗ್ಗೆ ಮಾತಾಡ್ತಾ ಇರಬೇಕು. ಅದ್ರಲ್ಲಿ ಇರೋದನ್ನೆಲ್ಲ ತಪ್ಪದೆ ಪಾಲಿಸೋಕೆ ಅದನ್ನ ಹಗಲುರಾತ್ರಿ ಓದಿ ಧ್ಯಾನಿಸು. ಆಗ ನೀನು ವಿವೇಕದಿಂದ ನಡ್ಕೊಳ್ತೀಯ, ಒಳ್ಳೇ ತೀರ್ಮಾನಗಳನ್ನ ಮಾಡ್ತೀಯ.”
“ಸತ್ಯ ದೇವರ ನಿಯಮ ಪುಸ್ತಕವನ್ನ ಗಟ್ಟಿಯಾಗಿ ಓದ್ತಾ, ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾ ಹೋದ್ರು. ಹೀಗೆ ಓದಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಜನ್ರಿಗೆ ಸಹಾಯ ಮಾಡಿದ್ರು.”
“ಕೆಟ್ಟವನ ಮಾತು ಕೇಳದೆ, ಪಾಪಿಗಳ ದಾರಿಯಲ್ಲಿ ಹೋಗದೆ, . . . ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ, ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ. . . . ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.”
“ಫಿಲಿಪ್ಪ ರಥದ ಹತ್ರ ಹೋಗಿ ಅದ್ರ ಪಕ್ಕದಲ್ಲೇ ಓಡೋಕೆ ಶುರುಮಾಡಿದ. ಆ ಅಧಿಕಾರಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದೋದು ಅವನಿಗೆ ಕೇಳಿಸ್ತು. ಆಗ ಫಿಲಿಪ್ಪ ‘ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?’ ಅಂತ ಕೇಳಿದ.”
“ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ. ಆತನಿಗೆ ಶಾಶ್ವತ ಶಕ್ತಿಯಿದೆ, ಆತನೇ ನಿಜವಾದ ದೇವರು ಅನ್ನೋದಕ್ಕೆ ಸೃಷ್ಟಿನೇ ಸಾಕ್ಷಿ. ಹಾಗಾಗಿ ದೇವರಲ್ಲಿ ನಂಬಿಕೆ ಇಡದೆ ಇರೋಕೆ ಅವರು ಯಾವ ನೆಪವನ್ನೂ ಕೊಡಕ್ಕಾಗಲ್ಲ.”
“ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು. ಅದ್ರಲ್ಲೇ ಮುಳುಗಿರು. ಆಗ ನಿನ್ನ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ.”
“ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ.”
“ನಿಮ್ಮಲ್ಲಿ ಯಾರಿಗಾದ್ರೂ ವಿವೇಕ ಕಮ್ಮಿ ಇದೆ ಅಂತ ಅನಿಸಿದ್ರೆ ಅವನು ದೇವರ ಹತ್ರ ಕೇಳ್ತಾ ಇರಲಿ, ಅವನಿಗೆ ಸಿಗುತ್ತೆ. ಯಾಕಂದ್ರೆ ದೇವರು ಬೇಜಾರು ಮಾಡ್ಕೊಳ್ಳದೆ ಎಲ್ರಿಗೂ ಉದಾರವಾಗಿ ವಿವೇಕ ಕೊಡ್ತಾನೆ.”