ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 10

ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”

ಕೀರ್ತನೆ 37:29

“ಭೂಮಿ ಶಾಶ್ವತವಾಗಿ ಇರುತ್ತೆ.”

ಪ್ರಸಂಗಿ 1:4

“ಆತನು ಮರಣವನ್ನ ಶಾಶ್ವತವಾಗಿ ನುಂಗಿಹಾಕ್ತಾನೆ, ವಿಶ್ವದ ರಾಜ ಯೆಹೋವ ಪ್ರತಿಯೊಬ್ಬರ ಕಣ್ಣೀರನ್ನ ಒರಸಿಬಿಡ್ತಾನೆ.”

ಯೆಶಾಯ 25:8

“ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ, ಕಿವುಡನಿಗೆ ಕಿವಿ ಕೇಳಿಸುತ್ತೆ. ಆ ಸಮಯದಲ್ಲಿ ಕುಂಟ ಜಿಂಕೆ ತರ ಜಿಗಿತಾನೆ, ಮೂಕ ಖುಷಿಯಿಂದ ಕೂಗ್ತಾನೆ. ಮರುಭೂಮಿಯಲ್ಲಿ ನೀರು ಉಕ್ಕಿ ಬರುತ್ತೆ, ಬಯಲು ಪ್ರದೇಶದಲ್ಲಿ ತೊರೆಗಳು ಹರಿಯುತ್ತೆ.”

ಯೆಶಾಯ 35:​5, 6

“ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”

ಪ್ರಕಟನೆ 21:4

“ಅವರು ಮನೆ ಕಟ್ಕೊಂಡು ವಾಸ ಮಾಡ್ತಾರೆ, ದ್ರಾಕ್ಷಿತೋಟ ಮಾಡಿ ಅದ್ರ ಫಲ ತಿಂತಾರೆ. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ, ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ. ಯಾಕಂದ್ರೆ ನನ್ನ ಜನ್ರ ಆಯಸ್ಸು ಮರದ ಆಯಸ್ಸಿನ ತರ ಇರುತ್ತೆ. ನಾನು ಆರಿಸ್ಕೊಂಡಿರೋ ಜನ್ರು ಚೆನ್ನಾಗಿ ದುಡಿದು ಖುಷಿಖುಷಿಯಾಗಿ ಇರ್ತಾರೆ.”

ಯೆಶಾಯ 65:​21, 22