ಪ್ರಶ್ನೆ 5
ಬೈಬಲಲ್ಲಿರೋ ಮುಖ್ಯ ಸಂದೇಶ ಏನು?
“ನಿನ್ನ ಮತ್ತು ಸ್ತ್ರೀಯ ಮಧ್ಯ, ನಿನ್ನ ಸಂತಾನ ಮತ್ತು ಸ್ತ್ರೀಯ ಸಂತಾನದ ಮಧ್ಯ ದ್ವೇಷ ಇರೋ ಹಾಗೆ ಮಾಡ್ತೀನಿ. ಅವನು ನಿನ್ನ ತಲೆ ಜಜ್ಜುತ್ತಾನೆ, ನೀನು ಅವನ ಹಿಮ್ಮಡಿಗೆ ಗಾಯ ಮಾಡ್ತಿಯ.”
“ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.”
“ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ.”
“ಶಾಂತಿಯನ್ನ ಕೊಡೋ ದೇವರು ಬೇಗ ಸೈತಾನನನ್ನ ನಿಮ್ಮ ಕಾಲ ಕೆಳಗೆ ಹಾಕಿ ಜಜ್ಜಿಬಿಡ್ತಾನೆ.”
“ಎಲ್ಲ ಮಗನ ಅಧೀನದ ಕೆಳಗೆ ಬಂದ ಮೇಲೆ, ಮಗನು ತನಗೆ ಎಲ್ಲವನ್ನ ಅಧೀನ ಮಾಡಿದ ದೇವರಿಗೆ ತನ್ನನ್ನೇ ಅಧೀನ ಮಾಡ್ಕೊಳ್ತಾನೆ. ಆಗ ದೇವರೊಬ್ಬನೇ ಎಲ್ಲದ್ರ ಮೇಲೆ ರಾಜನಾಗಿ ಆಳ್ತಾನೆ.”
“ಅಬ್ರಹಾಮ ಮತ್ತು ಅವನ ಸಂತಾನಕ್ಕೆ ದೇವರು ಮಾತು ಕೊಟ್ಟನು . . . ಆ ಸಂತಾನ ಕ್ರಿಸ್ತನೇ. ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ.”
“ನಮ್ಮ ದೇವರು ಮತ್ತು ಆತನ ಕ್ರಿಸ್ತ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”
“ಈ ದೊಡ್ಡ ಘಟಸರ್ಪವನ್ನ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ, ಸೈತಾನ, ಹಳೇ ಹಾವು ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ. ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.”
“ಅವನು ಪಿಶಾಚ, ಸೈತಾನ, ಹಳೇ ಹಾವು ಅಂತ ಹೆಸ್ರಿದ್ದ ಘಟಸರ್ಪವನ್ನ ಹಿಡಿದು 1,000 ವರ್ಷ ಬಂಧನದಲ್ಲಿಟ್ಟ.”