ಪ್ರಶ್ನೆ 6
ಮೆಸ್ಸೀಯನ ಬಗ್ಗೆ ಬೈಬಲ್ ಮುಂಚೆನೇ ಏನು ಹೇಳಿತ್ತು?
ಭವಿಷ್ಯವಾಣಿ
“ಬೆತ್ಲೆಹೇಮ್ ಎಫ್ರಾತವೇ. . . ನನಗಾಗಿ ಇಸ್ರಾಯೇಲನ್ನ ಆಳೋ ರಾಜ ನಿನ್ನಿಂದಾನೇ ಬರ್ತಾನೆ.”
ನೆರವೇರಿಕೆ
“ಯೇಸು ಯೂದಾಯದ ಬೆತ್ಲೆಹೇಮಲ್ಲಿ ಹುಟ್ಟಿದನು. ಆಗ ಹೆರೋದ ರಾಜನಾಗಿದ್ದ. ಯೇಸು ಹುಟ್ಟಿದ ಮೇಲೆ ಪೂರ್ವ ದಿಕ್ಕಿಂದ ಜ್ಯೋತಿಷಿಗಳು ಯೆರೂಸಲೇಮಿಗೆ ಬಂದ್ರು.”
ಭವಿಷ್ಯವಾಣಿ
“ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ, ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ.”
ನೆರವೇರಿಕೆ
“ಸೈನಿಕರು ಯೇಸುವನ್ನ ಕಂಬಕ್ಕೆ ಜಡಿದ ಮೇಲೆ ಆತನ ಬಟ್ಟೆ ತಗೊಂಡು ಒಬ್ಬೊಬ್ರಿಗೆ ಒಂದೊಂದು ಪಾಲು ಬರೋ ತರ ನಾಲ್ಕು ಪಾಲು ಮಾಡಿ ಹಂಚ್ಕೊಂಡ್ರು. . . ಆದ್ರೆ ಆ ಬಟ್ಟೆ ಮೇಲಿಂದ ಕೆಳಗಿನ ತನಕ ನೆಯ್ದಿತ್ತು, ಹೊಲಿಗೆನೇ ಇರಲಿಲ್ಲ. ಹಾಗಾಗಿ ‘ಇದನ್ನ ಹರಿಯೋದು ಬೇಡ. ಚೀಟಿಹಾಕಿ ಯಾರಿಗೆ ಬರುತ್ತೋ ನೋಡೋಣ’ ಅಂತ ಮಾತಾಡ್ಕೊಂಡ್ರು.”
ಭವಿಷ್ಯವಾಣಿ
“ಅವನ ಎಲ್ಲ ಮೂಳೆಗಳನ್ನ ಆತನು ಕಾಪಾಡ್ತಿದ್ದಾನೆ, ಅದ್ರಲ್ಲಿ ಒಂದೂ ಮುರಿದು ಹೋಗಲಿಲ್ಲ.”
ನೆರವೇರಿಕೆ
“ಸೈನಿಕರು ಯೇಸು ಹತ್ರ ಬಂದಾಗ ಆತನ ಜೀವ ಹೋಗಿರೋದನ್ನ ನೋಡಿ ಆತನ ಕಾಲುಗಳನ್ನ ಮುರಿಲಿಲ್ಲ.”
ಭವಿಷ್ಯವಾಣಿ
“ನಮ್ಮ ಅಪರಾಧಗಳಿಗಾಗಿ ಅವನನ್ನ ಚುಚ್ಚಲಾಯ್ತು.”
ನೆರವೇರಿಕೆ
“ಸೈನಿಕರಲ್ಲಿ ಒಬ್ಬ ಈಟಿಯಿಂದ ಯೇಸುವಿನ ಪಕ್ಕೆಲುಬುಗಳ ಮಧ್ಯ ಚುಚ್ಚಿದ. ತಕ್ಷಣ ರಕ್ತ ಮತ್ತು ನೀರು ಬಂತು.”
ಭವಿಷ್ಯವಾಣಿ
“ಅವರು ನನಗೆ 30 ಬೆಳ್ಳಿ ಶೆಕೆಲ್‌ಗಳನ್ನ ಸಂಬಳವಾಗಿ ಕೊಟ್ರು.”
ನೆರವೇರಿಕೆ
“ಆಮೇಲೆ 12 ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೂತ ಯೂದ ಮುಖ್ಯ ಪುರೋಹಿತರ ಹತ್ರ ಹೋಗಿ ‘ನಾನು ಅವನನ್ನ ಹಿಡುಕೊಟ್ರೆ ನಂಗೇನು ಕೊಡ್ತೀರಾ?’ ಅಂತ ಕೇಳಿದ. ಅವರು ಅವನಿಗೆ 30 ಬೆಳ್ಳಿ ನಾಣ್ಯ ಕೊಡ್ತೀವಿ ಅಂದ್ರು.”