ಪ್ರಶ್ನೆ 15
ಸಂತೋಷ ಎಲ್ಲಿ ಸಿಗುತ್ತೆ?
“ದ್ವೇಷ ಇರೋ ಮನೇಲಿ ಮಾಂಸದೂಟ ಮಾಡೋದಕ್ಕಿಂತ, ಪ್ರೀತಿ ಇರೋ ಮನೇಲಿ ತರಕಾರಿ ಊಟ ಮಾಡೋದೇ ಒಳ್ಳೇದು.”
“ಯೆಹೋವನಾದ ನಾನೇ ನಿನ್ನ ದೇವರು. ನಿನ್ನ ಒಳಿತಿಗಾಗಿ ನಿನಗೆ ಬೋಧಿಸುವವನು ನಾನೇ, ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ.”
“ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.”
“ನೀನು ನಿನ್ನನ್ನ ಪ್ರೀತಿಸೋ ತರ ನಿನ್ನ ನೆರೆಯವನನ್ನ ಪ್ರೀತಿಸಬೇಕು.”
“ಜನ ನಿಮಗೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”
“ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ.”
“ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ.”
“ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.”
“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”