ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 19

ಬೈಬಲಲ್ಲಿ ಏನೆಲ್ಲ ಮಾಹಿತಿ ಇದೆ?

ಹೀಬ್ರು ಪವಿತ್ರ ಗ್ರಂಥ (“ಹಳೇ ಒಡಂಬಡಿಕೆ”)

ಪಂಚ ಪುಸ್ತಕಗಳು (5 ಪುಸ್ತಕಗಳು):

ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ

ಸೃಷ್ಟಿಯಿಂದ ಪುರಾತನ ಇಸ್ರಾಯೇಲ್‌ ಜನಾಂಗದ ಸ್ಥಾಪನೆಯ ತನಕ

ಚಾರಿತ್ರಿಕ ಪುಸ್ತಕಗಳು (12 ಪುಸ್ತಕಗಳು):

ಯೆಹೋಶುವ, ನ್ಯಾಯಸ್ಥಾಪಕರು, ರೂತ್‌

ಇಸ್ರಾಯೇಲ್‌ ಜನಾಂಗ, ದೇವರು ಮಾತು ಕೊಟ್ಟ ದೇಶವನ್ನ ಪ್ರವೇಶಿಸೋದು ಮತ್ತು ಅದಾದ್ಮೇಲೆ ನಡಿಯೋ ಘಟನೆಗಳು

1 ಮತ್ತು 2 ಸಮುವೇಲ, 1 ಮತ್ತು 2 ಅರಸು, 1 ಮತ್ತು 2 ಪೂರ್ವಕಾಲವೃತ್ತಾಂತ

ಯೆರೂಸಲೇಮ್‌ ನಾಶ ಆಗೋ ತನಕ ಇಸ್ರಾಯೇಲ್‌ ಜನಾಂಗದ ಇತಿಹಾಸ

ಎಜ್ರ, ನೆಹೆಮೀಯ, ಎಸ್ತೇರ್‌

ಬಾಬೆಲಿನ ಸೆರೆವಾಸದಿಂದ ಬಿಡುಗಡೆಯಾಗಿ ಬಂದ ನಂತ್ರದ ಯೆಹೂದ್ಯರ ಇತಿಹಾಸ

ಕಾವ್ಯಾತ್ಮಕ ಪುಸ್ತಕಗಳು (5 ಪುಸ್ತಕಗಳು):

ಯೋಬ, ಕೀರ್ತನೆ, ಜ್ಞಾನೋಕ್ತಿ, ಪ್ರಸಂಗಿ, ಪರಮಗೀತ

ವಿವೇಕದ ನುಡಿಗಳ ಮತ್ತು ಗೀತೆಗಳ ಭಂಡಾರ

ಭವಿಷ್ಯವಾಣಿಯ ಪುಸ್ತಕಗಳು (17 ಪುಸ್ತಕಗಳು):

ಯೆಶಾಯ, ಯೆರೆಮೀಯ, ಪ್ರಲಾಪ, ಯೆಹೆಜ್ಕೇಲ, ದಾನಿಯೇಲ, ಹೋಶೇಯ, ಯೋವೇಲ, ಆಮೋಸ, ಓಬದ್ಯ, ಯೋನ, ಮೀಕ, ನಹೂಮ, ಹಬಕ್ಕೂಕ, ಚೆಫನ್ಯ, ಹಗ್ಗಾಯ, ಜೆಕರ್ಯ, ಮಲಾಕಿ

ದೇವಜನ್ರ ಬಗ್ಗೆ ಪ್ರವಾದನೆಗಳು ಅಥವಾ ಭವಿಷ್ಯವಾಣಿಗಳು

ಕ್ರೈಸ್ತ ಗ್ರೀಕ್‌ ಪವಿತ್ರ ಗ್ರಂಥ (“ಹೊಸ ಒಡಂಬಡಿಕೆ”)

ಸುವಾರ್ತಾ ಪುಸ್ತಕಗಳು (4 ಪುಸ್ತಕಗಳು):

ಮತ್ತಾಯ, ಮಾರ್ಕ, ಲೂಕ, ಯೋಹಾನ

ಯೇಸುವಿನ ಜೀವನ ಮತ್ತು ಸೇವೆಯ ಚರಿತ್ರೆ

ಅಪೊಸ್ತಲರ ಕಾರ್ಯ (1 ಪುಸ್ತಕ):

ಕ್ರೈಸ್ತ ಸಭೆ ಶುರುವಾದ ಇತಿಹಾಸ ಮತ್ತು ಮಿಷನರಿ ಕೆಲಸದ ಇತಿಹಾಸ

ಪತ್ರಗಳು (21 ಪುಸ್ತಕಗಳು):

ರೋಮನ್ನರಿಗೆ, 1 ಮತ್ತು 2 ಕೊರಿಂಥ, ಗಲಾತ್ಯ, ಎಫೆಸ, ಫಿಲಿಪ್ಪಿ, ಕೊಲೊಸ್ಸೆ, 1 ಮತ್ತು 2 ಥೆಸಲೊನೀಕ

ಬೇರೆಬೇರೆ ಕ್ರೈಸ್ತ ಸಭೆಗಳಿಗೆ ಪತ್ರಗಳು

1 ಮತ್ತು 2 ತಿಮೊತಿ, ತೀತ, ಫಿಲೆಮೋನ

ಬೇರೆಬೇರೆ ಕ್ರೈಸ್ತರಿಗೆ ವೈಯಕ್ತಿಕ ಪತ್ರಗಳು

ಇಬ್ರಿಯ, ಯಾಕೋಬ, 1 ಮತ್ತು 2 ಪೇತ್ರ, 1, 2 ಮತ್ತು 3 ಯೋಹಾನ, ಯೂದ

ಎಲ್ಲ ಕ್ರೈಸ್ತರಿಗೆ ಬರೆದ ಪತ್ರಗಳು

ಪ್ರಕಟನೆ (1 ಪುಸ್ತಕ):

ಅಪೊಸ್ತಲ ಯೋಹಾನನಿಗಾದ ಭವಿಷ್ಯವಾಣಿಗಳಿದ್ದ ದರ್ಶನಗಳ ಸರಣಿ