ಎ5
ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು
ದೇವರ ಹೆಸ್ರು (ಚತುರಕ್ಷರಿ, יהוה) ಹೀಬ್ರು ಪವಿತ್ರ ಗ್ರಂಥದ ಮೂಲ ಬರಹದಲ್ಲಿ ಸುಮಾರು 7,000 ಸಲ ಇದೆ ಅಂತ ಬೈಬಲ್ ವಿದ್ವಾಂಸರು ಒಪ್ಪಿಕೊಳ್ತಾರೆ. ಆದ್ರೆ ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದ ಮೂಲ ಬರಹದಲ್ಲಿ ದೇವರ ಹೆಸ್ರು ಇರಲಿಲ್ಲ ಅಂತ ತುಂಬ ಜನರ ಅನಿಸಿಕೆ. ಹಾಗಾಗಿ ಆಧುನಿಕ ಭಾಷೆಗೆ ಅನುವಾದ ಆಗಿರೋ ಹೆಚ್ಚಿನ ಬೈಬಲ್‌ಗಳಲ್ಲಿ ಹೊಸ ಒಡಂಬಡಿಕೆ ಅಂತ ಕರೆಯೋ ಗ್ರೀಕ್ ಪುಸ್ತಕಗಳಲ್ಲಿ ಯೆಹೋವ ಅನ್ನೋ ಹೆಸ್ರು ಇಲ್ಲ. ಹೀಬ್ರು ಪವಿತ್ರ ಗ್ರಂಥದ ಉಲ್ಲೇಖಗಳಿರೋ ವಚನಗಳಲ್ಲೂ ಹೆಚ್ಚಿನ ಭಾಷಾಂತರಕಾರರು ದೇವರ ಹೆಸ್ರಿನ ಬದಲು “ಕರ್ತನು” ಅನ್ನೋ ಬಿರುದನ್ನ ಬಳಸಿದ್ದಾರೆ.
ಆದ್ರೆ ಹೊಸ ಲೋಕ ಭಾಷಾಂತರ ಬೈಬಲಿನಲ್ಲಿ ಹಾಗೆ ಮಾಡಿಲ್ಲ. ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ಯೆಹೋವ ಅನ್ನೋ ಹೆಸರು ಒಟ್ಟು 237 ಸಲ ಇದೆ. ಯಾಕಂದ್ರೆ ಇದರ ಭಾಷಾಂತರಕಾರರು ಎರಡು ಮುಖ್ಯ ಅಂಶಗಳನ್ನ ಗಣನೆಗೆ ತೆಗೆದುಕೊಂಡಿದ್ದಾರೆ. (1) ಈಗ ಲಭ್ಯ ಇರೋ ಸಾವಿರಾರು ಗ್ರೀಕ್ ಹಸ್ತಪ್ರತಿಗಳು ಮೂಲ ಹಸ್ತಪ್ರತಿಗಳಲ್ಲ. ಅದ್ರಲ್ಲಿರೋ ಹೆಚ್ಚಿನ ಮೂಲಬರಹಗಳು ಬರೆದು ಕಮ್ಮಿಪಕ್ಷ ಇನ್ನೂರು ವರ್ಷಗಳು ಆದಮೇಲೆ ಅವನ್ನ ನಕಲು ಮಾಡಿದ್ದಾಗಿವೆ. (2) ಆ ಸಮಯದಷ್ಟಕ್ಕೆ ನಕಲುಗಾರರು ಚತುರಕ್ಷರಿಗೆ ಬದಲು ಕಿರೀಯಾಸ್ ಅನ್ನೋ ಪದವನ್ನ (“ಕರ್ತನು” ಅನ್ನೋದಕ್ಕಿರೋ ಗ್ರೀಕ್ ಪದ) ಬಳಸಿದ್ರು ಅಥವಾ ಈಗಾಗಲೇ ದೇವರ ಹೆಸ್ರನ್ನ ತೆಗೆದುಹಾಕಿದ್ದ ಹಸ್ತಪ್ರತಿಗಳಿಂದ ನಕಲು ಮಾಡಿದ್ರು.
ಮೂಲ ಗ್ರೀಕ್ ಹಸ್ತಪ್ರತಿಗಳಲ್ಲಿ ಚತುರಕ್ಷರಿ ಖಂಡಿತ ಇತ್ತು ಅನ್ನೋದಕ್ಕೆ ದೃಢವಾದ ಆಧಾರ ಇದೆ ಅಂತ ಹೊಸ ಲೋಕ ಭಾಷಾಂತರ ಸಮಿತಿ ನಿರ್ಧಾರಕ್ಕೆ ಬಂತು. ಈ ಕೆಳಗಿನ ಪುರಾವೆಗಳ ಆಧಾರದ ಮೇಲೆ ಆ ನಿರ್ಧಾರಕ್ಕೆ ಬರಲಾಯ್ತು:
-
ಯೇಸು ಮತ್ತು ಅಪೊಸ್ತಲರ ಕಾಲದಲ್ಲಿ ಬಳಸ್ತಿದ್ದ ಹೀಬ್ರು ಪವಿತ್ರ ಗ್ರಂಥದ ಪ್ರತಿಗಳಲ್ಲಿ ಎಲ್ಲ ಕಡೆ ಚತುರಕ್ಷರಿ ಇತ್ತು. ಈ ಹಿಂದೆ ಸ್ವಲ್ಪ ಜನ ಇದನ್ನ ಒಪ್ಪಲಿಲ್ಲ. ಆದ್ರೆ ಕುಮ್ರಾನ್‌ನಲ್ಲಿ ಹೀಬ್ರು ಪವಿತ್ರ ಗ್ರಂಥದ ಸುರುಳಿಗಳು ಸಿಕ್ಕಾಗ ಅವರ ಸಂದೇಹಕ್ಕೆ ಸರಿಯಾದ ಉತ್ತರ ಸಿಕ್ತು. ಈ ಸುರುಳಿಗಳು ಒಂದನೇ ಶತಮಾನಕ್ಕೆ ಸೇರಿದ್ದಾಗಿದ್ವು ಅಂತ ಗುರುತಿಸಲಾಯ್ತು. ಆ ಪ್ರತಿಗಳಲ್ಲಿ ಎಲ್ಲ ಕಡೆ ದೇವರ ಹೆಸರಿತ್ತು.
-
ಯೇಸು ಮತ್ತು ಆತನ ಅಪೊಸ್ತಲರ ದಿನಗಳಲ್ಲಿ ಬಳಸ್ತಿದ್ದ ಸೆಪ್ಟೂಅಜಂಟ್‌ನಲ್ಲೂ (ಅಂದ್ರೆ ಹೀಬ್ರು ಪವಿತ್ರ ಗ್ರಂಥದ ಗ್ರೀಕ್ ಭಾಷಾಂತರ) ಚತುರಕ್ಷರಿ ಇತ್ತು. ಸೆಪ್ಟೂಅಜಂಟ್ ಭಾಷಾಂತರದ ಹಸ್ತಪ್ರತಿಗಳಲ್ಲಿ ಚತುರಕ್ಷರಿ ಇರಲಿಲ್ಲ ಅಂತ ವಿದ್ವಾಂಸರು ತುಂಬ ಶತಮಾನಗಳಿಂದ ನೆನಸ್ತಿದ್ರು. ಆದ್ರೆ ಇಸವಿ 1940ರಿಂದ 1950ರಲ್ಲಿ ವಿದ್ವಾಂಸರು ಯೇಸುವಿನ ದಿನಗಳಲ್ಲಿದ್ದ ಗ್ರೀಕ್ ಸೆಪ್ಟೂಅಜಂಟ್ ಭಾಷಾಂತರದ ಕೆಲವು ಹಳೇ ಅವಶೇಷಗಳನ್ನ ಅಧ್ಯಯನ ಮಾಡಿದ್ರು. ಅವುಗಳಲ್ಲಿ ದೇವರ ಹೆಸ್ರು ಹೀಬ್ರು ಅಕ್ಷರಗಳಲ್ಲಿ ಇತ್ತು. ಹೀಗೆ, ಯೇಸುವಿನ ದಿನಗಳಲ್ಲಿ ಬಳಕೆಯಲ್ಲಿದ್ದ ಸೆಪ್ಟೂಅಜಂಟ್‌ನಲ್ಲಿ ದೇವರ ಹೆಸ್ರು ಇತ್ತು ಅಂತ ರುಜು ಆಯ್ತು. ಆದ್ರೆ ಕ್ರಿ.ಶ. ನಾಲ್ಕನೇ ಶತಮಾನದಷ್ಟಕ್ಕೆ ಗ್ರೀಕ್ ಸೆಪ್ಟೂಅಜಂಟ್‌ನ ಮುಖ್ಯ ಹಸ್ತಪ್ರತಿಗಳಿಂದ ದೇವರ ಹೆಸ್ರನ್ನ
ತೆಗೆದುಹಾಕಲಾಗಿತ್ತು. ಉದಾಹರಣೆಗೆ, ಕೋಡೆಕ್ಸ್ ವ್ಯಾಟಿಕೇನಸ್ ಮತ್ತು ಕೋಡೆಕ್ಸ್ ಸೈನೈಟಿಕಸ್‌ಗಳಲ್ಲಿ ಆದಿಕಾಂಡ ಪುಸ್ತಕದಿಂದ ಮಲಾಕಿಯ ಪುಸ್ತಕದ ತನಕ ದೇವರ ಹೆಸ್ರು ಇರಲಿಲ್ಲ. ಹಾಗಿರುವಾಗ ಆ ಸಮಯದಿಂದ ಇಟ್ಟಿರೋ ಬೈಬಲಿನ ಗ್ರೀಕ್ ಪುಸ್ತಕಗಳಲ್ಲಿ (ಹೊಸ ಒಡಂಬಡಿಕೆ) ದೇವರ ಹೆಸ್ರು ಇಲ್ಲದೆ ಇರೋದ್ರಲ್ಲಿ ಆಶ್ಚರ್ಯ ಏನಿಲ್ಲ.ಯೇಸು ಎಲ್ಲವನ್ನ “ಅಪ್ಪನ ಹೆಸ್ರಲ್ಲಿ” ಮಾಡಿದೆ ಅಂತ ಹೇಳಿದನು. ಅಷ್ಟೇ ಅಲ್ಲ, “ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ” ಅಂದನು
-
ಯೇಸು ತುಂಬ ಸಲ ದೇವರ ಹೆಸ್ರನ್ನ ಬಳಸಿದನು, ಅದನ್ನ ಬೇರೆವರಿಗೂ ಹೇಳಿದನು ಅಂತ ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲೇ ಇದೆ. (ಯೋಹಾನ 17:6, 11, 12, 26) ಯೇಸು ಎಲ್ಲವನ್ನ “ಅಪ್ಪನ ಹೆಸ್ರಲ್ಲಿ” ಮಾಡಿದೆ ಅಂತ ಹೇಳಿದನು. ಅಷ್ಟೇ ಅಲ್ಲ, “ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ” ಅಂದನು.—ಯೋಹಾನ 10:25; 12:28.
-
ಪವಿತ್ರ ಗ್ರಂಥದ ಹೀಬ್ರು ಪುಸ್ತಕಗಳ ತರ ಗ್ರೀಕ್ ಪುಸ್ತಕಗಳೂ ದೇವಪ್ರೇರಿತವಾಗಿವೆ. ಹಾಗಿರುವಾಗ ಗ್ರೀಕ್ ಪವಿತ್ರ ಗ್ರಂಥದಲ್ಲಿ ಯೆಹೋವನ ಹೆಸ್ರು ಇದ್ದಕ್ಕಿದ್ದಂತೆ ಕಣ್ಮರೆ ಆಗಿರೋದಕ್ಕೆ ಯಾವುದೇ ಅರ್ಥ ಇಲ್ಲ. ಕ್ರಿ.ಶ. ಒಂದನೇ ಶತಮಾನದ ಮಧ್ಯಭಾಗದ ಸುಮಾರಿಗೆ ಶಿಷ್ಯ ಯಾಕೋಬನು ಸಿಮೆಯೋನನ ಮಾತುಗಳಿಗೆ ಸೂಚಿಸ್ತಾ ಯೆರೂಸಲೇಮಿನ ಹಿರಿಯರಿಗೆ ಹೀಗಂದ: ‘ಯೆಹೂದ್ಯರಲ್ಲದ ಜನ್ರಲ್ಲೂ ದೇವ್ರ ಹೆಸ್ರನ್ನ ಗೌರವಿಸೋ ಜನ್ರಿದ್ದಾರೆ. ದೇವರು ಅವ್ರ ಕಡೆ ಗಮನಕೊಟ್ಟು ಅವ್ರನ್ನ ಆರಿಸ್ಕೊಂಡಿದ್ದಾನೆ.’ (ಅಪೊಸ್ತಲ ಕಾರ್ಯ 15:14) ಒಂದನೇ ಶತಮಾನದಲ್ಲಿ ಯಾರಿಗೂ ದೇವರ ಹೆಸ್ರು ಗೊತ್ತಿರಲಿಲ್ಲ ಅಂದ್ರೆ ಅಥವಾ ಆ ಹೆಸ್ರನ್ನ ಯಾರೂ ಬಳಸ್ತಾ ಇರ್ಲಿಲ್ಲ ಅಂದ್ರೆ ಯಾಕೋಬ ಹಾಗೆ ಹೇಳಿದ್ರಲ್ಲಿ ಅರ್ಥ ಇರ್ತಿರಲಿಲ್ಲ.
-
ದೇವರ ಹೆಸ್ರಿನ ಸಂಕ್ಷಿಪ್ತರೂಪ ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿದೆ. ಪ್ರಕಟನೆ 19:1, 3, 4, 6ರಲ್ಲಿರೋ “ಯಾಹುವನ್ನ ಸ್ತುತಿಸಿ” ಅನ್ನೋ ವಾಕ್ಯ “ಹಲ್ಲೆಲೂಯ” ಅನ್ನೋ ಹೀಬ್ರು ಪದದಿಂದ ಬಂದಿದೆ. “ಯಾಹು” ಅನ್ನೋದು “ಯೆಹೋವ” ಹೆಸ್ರಿನ ಸಂಕ್ಷಿಪ್ತ ರೂಪ. ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿರೋ ತುಂಬ ಹೆಸರುಗಳ ಅರ್ಥದಲ್ಲಿ ಸಹ ದೇವರ ಹೆಸ್ರು ಬರುತ್ತೆ. ಅಷ್ಟೇ ಯಾಕೆ, ಯೇಸು ಹೆಸ್ರಿನ ಅರ್ಥ ಕೂಡ “ಯೆಹೋವ ರಕ್ಷಣೆಯಾಗಿದ್ದಾನೆ” ಅಂತ ಹೆಚ್ಚಿನ ಗ್ರಂಥಗಳು ವಿವರಿಸುತ್ತವೆ.
-
ಯೆಹೂದಿ ಹಿನ್ನೆಲೆಯ ಕ್ರೈಸ್ತರು ತಮ್ಮ ಬರಹಗಳಲ್ಲಿ ದೇವರ ಹೆಸ್ರನ್ನ ಬಳಸಿದ್ರು ಅಂತ ಆರಂಭದ ಯೆಹೂದಿ ಬರಹಗಳು ಸೂಚಿಸುತ್ತವೆ. ‘ಟೊಸೆಫ್ಟ’ ಪುಸ್ತಕ ಬಾಯಿಮಾತಲ್ಲಿ ಹೇಳಿದ ನಿಯಮಗಳ ಲಿಖಿತ ಸಂಗ್ರಹವಾಗಿದೆ. ಇದು ಕ್ರಿ.ಶ. 4ನೇ ಶತಮಾನದ ಆರಂಭದಲ್ಲಿ ಹೊರಬಂತು. ಕ್ರೈಸ್ತರು ಯೇಸುವಿನ ಬಗ್ಗೆ ಬರೆದ ಪುಸ್ತಕಗಳನ್ನ ಮತ್ತು ಕ್ರೈಸ್ತರಾದ ಯೆಹೂದಿಗಳು ಬರೆದ ಪುಸ್ತಕಗಳನ್ನ ಸಬ್ಬತ್ ದಿನದಲ್ಲಿ ಬೆಂಕಿಯಲ್ಲಿ ಹಾಕಿ ಸುಡ್ತಿದ್ದ ಬಗ್ಗೆ ಟೊಸೆಫ್ಟದಲ್ಲಿ ಹೇಳಲಾಗಿದೆ. ಅಂಥ ಪುಸ್ತಕಗಳನ್ನ ಕಂಡಲ್ಲೆಲ್ಲ ಸುಡೋಕೆ ಮತ್ತು ಅದ್ರಲ್ಲಿರೋ ದೇವರ ಹೆಸ್ರನ್ನ ಸಹ ಸುಟ್ಟುಬಿಡೋಕೆ ಅನುಮತಿ ಇತ್ತು ಅಂತ ಟೊಸೆಫ್ಟ ಹೇಳುತ್ತೆ. ಇದು ಯೆಹೂದಿ ಹಿನ್ನೆಲೆಯ ಕ್ರೈಸ್ತರ ಬರಹಗಳಲ್ಲಿ ದೇವರ ಹೆಸ್ರು ಇತ್ತು ಅಂತ ಸ್ಪಷ್ಟಪಡಿಸುತ್ತೆ.
-
-
ಮಾನ್ಯತೆ ಪಡೆದ ಬೈಬಲ್ ಅನುವಾದಕರು ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರನ್ನ ಬಳಸಿದ್ದಾರೆ. ಈ ಅನುವಾದಕರಲ್ಲಿ ಕೆಲವರು ಹೊಸ ಲೋಕ ಭಾಷಾಂತರ ಹೊರಗೆ ಬರೋದಕ್ಕಿಂತ ಎಷ್ಟೋ ವರ್ಷಗಳ ಮುಂಚೆನೇ ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರನ್ನ ಬಳಸಿದ್ರು. ಅವ್ರಲ್ಲಿ ಕೆಲವರ ಹೆಸರು ಮತ್ತು ಕೃತಿಗಳು ಇಲ್ಲಿವೆ: ಹರ್ಮನ್ ಹೇಯನ್ ಫೆಟರ್‌ರಿಂದ ಎ ಲಿಟ್ರಲ್ ಟ್ರಾನ್ಸ್‌ಲೇಶನ್ ಆಫ್ ದ ನ್ಯೂ ಲೂಕ 2:15 ಮತ್ತು ಯೂದ 14ನೇ ವಚನದಲ್ಲಿ “ಜೆಹೋವ” ಅನ್ನೋ ಹೆಸ್ರನ್ನ ಬಳಸಿದ್ದಾರೆ ಮತ್ತು 100ಕ್ಕಿಂತ ಹೆಚ್ಚು ಕಡೆಗಳಲ್ಲಿ ಪಾದಟಿಪ್ಪಣಿಯನ್ನ ಕೊಟ್ಟು ಆ ಸ್ಥಳದಲ್ಲಿ ದೇವರ ಹೆಸ್ರು ಇದ್ದಿರಬೇಕು ಅಂತ ಸೂಚಿಸಿದ್ದಾರೆ. ಈ ಎಲ್ಲ ಭಾಷಾಂತರಗಳು ಹೊರಗೆ ಬರೋದಕ್ಕಿಂತ ಎಷ್ಟೋ ವರ್ಷಗಳ ಮುಂಚೆನೇ ಅಂದ್ರೆ 16ನೇ ಶತಮಾನದಿಂದಾನೇ ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದ ಹೀಬ್ರು ಭಾಷಾಂತರಗಳ ಅನೇಕ ಭಾಗಗಳಲ್ಲಿ ಚತುರಕ್ಷರಿಯನ್ನ ಬಳಸಲಾಗಿದೆ. ಜರ್ಮನ್ ಭಾಷೆ ಒಂದರಲ್ಲೇ ನೋಡೋದಾದ್ರೆ ಕಮ್ಮಿಪಕ್ಷ 11 ಜರ್ಮನ್ ಭಾಷಾಂತರಗಳು ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ “ಜೆಹೋವ” (ಯಾಹ್ವೆ) ಅಂತ ಬಳಸಿವೆ. ಅಷ್ಟೇ ಅಲ್ಲ, ನಾಲ್ಕು ಜರ್ಮನ್ ಅನುವಾದಕರು “ಕರ್ತನು” ಅನ್ನೋ ಪದದ ನಂತ್ರ ದೇವರ ಹೆಸ್ರನ್ನ ಆವರಣದೊಳಗೆ ಕೊಟ್ಟಿದ್ದಾರೆ. 70ಕ್ಕೂ ಹೆಚ್ಚು ಜರ್ಮನ್ ಭಾಷಾಂತರಗಳಲ್ಲಿ ದೇವರ ಹೆಸ್ರನ್ನ ಪಾದಟಿಪ್ಪಣಿಗಳಲ್ಲಿ ಇಲ್ಲವೆ ಅರ್ಥ ನಿರೂಪಣೆಗಳಲ್ಲಿ ಕೊಟ್ಟಿದ್ದಾರೆ.
ಟೆಸ್ಟಮೆಂಟ್ . . . ಫ್ರಮ್ ದ ಟೆಕ್ಸ್ಟ್ ಆಫ್ ದ ವ್ಯಾಟಿಕನ್ ಮ್ಯಾನುಸ್ಕ್ರಿಪ್ಟ್ (1863); ಬೆಂಜಮಿನ್ ವಿಲ್ಸನ್‌ರಿಂದ ದಿ ಎಂಫಾಟಿಕ್ ಡಾಯಗ್ಲಾಟ್ (1864); ಜಾರ್ಜ್ ಬಾರ್ಕರ್ ಸ್ಟೀವನ್ಸ್‌ರಿಂದ ದಿ ಎಪಿಸ್ಟಲ್ಸ್ ಆಫ್ ಪೌಲ್ ಇನ್ ಮಾಡರ್ನ್ ಇಂಗ್ಲಿಷ್ (1898); ಡಬ್ಲ್ಯು. ಜಿ. ರಧರ್‌ಫರ್ಡ್‌ರಿಂದ ಸೇಂಟ್ ಪೌಲ್ಸ್ ಎಪಿಸ್ಟಲ್ ಟು ದ ರೋಮನ್ಸ್ (1900); ಲಂಡನ್‌ನ ಬಿಶಪ್ ಜೆ. ಡಬ್ಲ್ಯು. ಸಿ. ವ್ಯಾಂಡ್‌ರಿಂದ ದ ನ್ಯೂ ಟೆಸ್ಟಮೆಂಟ್ ಲೆಟರ್ಸ್ (1946). ಪ್ಯಾಬ್ಲೋ ಬೆಸ್ಸನ್ ಅನ್ನೋರು ಸಹ 1919ರಲ್ಲಿ ತಮ್ಮ ಸ್ಪ್ಯಾನಿಷ್ ಭಾಷಾಂತರದ -
ಪುಟ 2702 ಮತ್ತು 2703ರಲ್ಲಿರೋ ಪಟ್ಟಿ ನೋಡಿ.) ಈ ಆವೃತ್ತಿಗಳ ಅನುವಾದಕರು ದೇವರ ಹೆಸ್ರನ್ನ ತಮ್ಮ ಭಾಷಾಂತರದಲ್ಲಿ ಬಳಸೋಕೆ ಈ ಹಿಂದೆ ಹೇಳಿರುವಂಥ ಅದೇ ಕಾರಣಗಳನ್ನ ಆಧಾರವಾಗಿ ಇಟ್ಕೊಂಡಿದ್ದಾರೆ. ಈ ಭಾಷಾಂತರಗಳಲ್ಲಿ ಕೆಲವು ಇತ್ತೀಚೆಗೆ ಬಂದದ್ದಾಗಿವೆ. ಉದಾಹರಣೆಗೆ, ರೋಟುಮನ್ ಬೈಬಲಿನ (1999) 48 ವಚನಗಳಲ್ಲಿ “ಜಿಹೋವ” ಅನ್ನೋ ಹೆಸ್ರು 51 ಸಲ ಇದೆ. ಇಂಡೋನೇಶಿಯದ ಬಾಟಕ್ (ಟೋಬ) ಭಾಷಾಂತರದಲ್ಲಿ (1989) “ಜಹೋವ” ಅನ್ನೋ ಹೆಸ್ರನ್ನ 110 ಸಲ ಬಳಸಲಾಗಿದೆ.
ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದ ನೂರಕ್ಕೂ ಹೆಚ್ಚು ವಿಭಿನ್ನ ಭಾಷೆಗಳ ಭಾಷಾಂತರಗಳಲ್ಲಿ ದೇವರ ಹೆಸ್ರಿದೆ. ಆಫ್ರಿಕ, ಏಷ್ಯಾ, ಯೂರೋಪ್, ಪೆಸಿಫಿಕ್ ದ್ವೀಪದ ಅನೇಕ ಭಾಷೆಗಳ ಮತ್ತು ಅಮೆರಿಕದ ದೇಶೀಯ ಭಾಷೆಗಳ ಗ್ರೀಕ್ ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರನ್ನ ಧಾರಾಳವಾಗಿ ಬಳಸಲಾಗಿದೆ. (
ಹಾಗಾಗಿ ಯೆಹೋವ ಅನ್ನೋ ದೇವರ ಹೆಸ್ರನ್ನ ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ಬಳಸೋಕೆ ನಿಸ್ಸಂಶಯವಾಗಿ ದೃಢ ಆಧಾರವಿದೆ. ಹೊಸ ಲೋಕ ಭಾಷಾಂತರ ಬೈಬಲಿನ ಅನುವಾದಕರು ಇದನ್ನೇ ಮಾಡಿದ್ದಾರೆ. ದೇವರ ಹೆಸ್ರಿನ ಮೇಲೆ ಅವ್ರಿಗೆ ಆಳವಾದ ಗೌರವ ಇದೆ. ಅಷ್ಟೇ ಅಲ್ಲ ಮೂಲ ಬರಹದಲ್ಲಿರೋ ಯಾವುದನ್ನೂ ತೆಗೆಯಬಾರದು ಅನ್ನೋ ಯೋಗ್ಯ ಭಯನೂ ಇದೆ.—ಪ್ರಕಟನೆ 22:18, 19.