ಎ7-ಎ
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು
ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿರೋ ವಿಷ್ಯಗಳನ್ನ ಕಾಲಾನುಕ್ರಮವಾಗಿ ಕೊಡಲಾಗಿದೆ
ಆಯಾ ಚಾರ್ಟ್‌ಗೆ ಸಂಬಂಧಿಸಿದ ನಕ್ಷೆಗಳನ್ನ ಪಕ್ಕದಲ್ಲಿ ಕೊಡಲಾಗಿದೆ. ಅವು ಯೇಸು ಪ್ರಯಾಣ ಮಾಡಿದ ಮತ್ತು ಸಿಹಿಸುದ್ದಿ ಸಾರಿದ ಪ್ರದೇಶಗಳನ್ನ ತೋರಿಸುತ್ತೆ. ಬಾಣದ ಗುರುತುಗಳು ಯೇಸು ನಿರ್ದಿಷ್ಟವಾಗಿ ಅದೇ ದಾರೀಲಿ ಪ್ರಯಾಣ ಮಾಡಿದನು ಅಂತ ಸೂಚಿಸ್ತಿಲ್ಲ, ಆತನು ಪ್ರಯಾಣಿಸಿದ ದಿಕ್ಕನ್ನ ತೋರಿಸ್ತಿದೆ. “ಸು.” ಅಂದ್ರೆ “ಸುಮಾರು.”
ಯೇಸು ಸೇವೆ ಆರಂಭಿಸೋ ಮೊದ್ಲು
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
ಕ್ರಿ.ಪೂ. 3 |
ಯೆರೂಸಲೇಮ್, ದೇವಾಲಯ |
ಯೋಹಾನ ಹುಟ್ತಾನೆ ಅಂತ ಜಕರೀಯನಿಗೆ ಗಬ್ರಿಯೇಲ ದೇವದೂತ ಹೇಳಿದ |
||||
ಸು. ಕ್ರಿ.ಪೂ. 2 |
ನಜರೇತ್; ಯೂದಾಯ |
ಮರಿಯಗೆ ಯೇಸು ಹುಟ್ತಾನೆ ಅಂತ ಗಬ್ರಿಯೇಲ ದೇವದೂತ ಹೇಳಿದ; ಎಲಿಸಬೆತನ್ನ ಮರಿಯ ಭೇಟಿ ಮಾಡಿದಳು |
||||
ಕ್ರಿ.ಪೂ. 2 |
ಯೂದಾಯದ ಗುಡ್ಡಗಾಡು ಪ್ರದೇಶ |
ಯೋಹಾನ ಹುಟ್ಟಿದ, ನಾಮಕರಣ; ಜಕರೀಯ ಭವಿಷ್ಯವಾಣಿ ಹೇಳಿದ; ಯೋಹಾನ ಕಾಡಲ್ಲಿ ಇರಬೇಕಿತ್ತು |
||||
2 ಕ್ರಿ.ಪೂ., ಸು. ಅಕ್ಟೋ. 1 |
ಬೆತ್ಲೆಹೇಮ್ |
ಯೇಸು ಹುಟ್ಟಿದನು; ‘ವಾಕ್ಯ ಮನುಷ್ಯನಾಗಿ ಹುಟ್ಟಿದನು’ |
||||
ಬೆತ್ಲೆಹೇಮಿನ ಹತ್ರ; ಬೆತ್ಲೆಹೇಮ್ |
ದೇವದೂತ ಕುರುಬರಿಗೆ ಸಿಹಿಸುದ್ದಿ ಹೇಳಿದ; ದೇವದೂತರು ದೇವರನ್ನ ಹೊಗಳಿದ್ರು; ಕುರುಬರು ಮಗು ನೋಡೋಕೆ ಬಂದ್ರು |
|||||
ಬೆತ್ಲೆಹೇಮ್; ಯೆರೂಸಲೇಮ್ |
ಯೇಸುವಿಗೆ ಸುನ್ನತಿ (8ನೇ ದಿನ); ಹೆತ್ತವರು ಆತನನ್ನ ದೇವಾಲಯದಲ್ಲಿ ಸಮರ್ಪಿಸಿದ್ರು (40ನೇ ದಿನ ಆದ್ಮೇಲೆ) |
|||||
ಕ್ರಿ.ಪೂ. 1 ಅಥವಾ ಕ್ರಿ.ಶ. 1 |
ಯೆರೂಸಲೇಮ್; ಬೆತ್ಲೆಹೇಮ್; ಈಜಿಪ್ಟ್; ನಜರೇತ್ |
ಜ್ಯೋತಿಷಿಗಳ ಭೇಟಿ; ಇಡೀ ಕುಟುಂಬ ಈಜಿಪ್ಟಿಗೆ ಪಲಾಯನ; ಹೆರೋದ ಗಂಡು ಕೂಸುಗಳನ್ನ ಕೊಂದ; ಕುಟುಂಬ ಈಜಿಪ್ಟಿಂದ ನಜರೇತಿಗೆ ಬಂದು ವಾಸಿಸ್ತು |
||||
ಕ್ರಿ.ಶ. 12, ಪಸ್ಕ ಹಬ್ಬ |
ಯೆರೂಸಲೇಮ್ |
12 ವರ್ಷದ ಯೇಸು ದೇವಾಲಯದಲ್ಲಿ ಬೋಧಕರನ್ನ ಪ್ರಶ್ನಿಸಿದನು |
||||
ನಜರೇತ್ |
ನಜರೇತಿಗೆ ವಾಪಸ್ ಹೋದನು; ಹೆತ್ತವರಿಗೆ ಅಧೀನನಾಗಿ ಮುಂದುವರಿದನು; ಬಡಗಿ ಕೆಲಸ ಕಲಿತನು; ಮರಿಯಗೆ ಇನ್ನೂ ನಾಲ್ಕು ಗಂಡುಮಕ್ಕಳಲ್ಲದೆ ಹೆಣ್ಣು ಮಕ್ಕಳೂ ಹುಟ್ಟಿದ್ರು (ಮತ್ತಾ 13:55, 56; ಮಾರ್ಕ 6:3) |
|||||
29, ವಸಂತಕಾಲ |
ಕಾಡು, ಯೋರ್ದನ್ ನದಿ |
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸೇವೆ ಶುರುಮಾಡಿದ |